Gemology: ಈ ರತ್ನವನ್ನು ಧರಿಸುವುದರಿಂದ ಅದೃಷ್ಟದ ಜೊತೆಗೆ ಧನಲಾಭ ಗ್ಯಾರಂಟಿ!

ಅದೃಷ್ಟ ಮತ್ತು ಹಣದ ರತ್ನ: ರತ್ನ ಶಾಸ್ತ್ರದ ಪ್ರಕಾರ ವ್ಯಕ್ತಿಯ ಜೀವನದಲ್ಲಿ ಬರುವ ಸಮಸ್ಯೆಗಳನ್ನು ನಿವಾರಿಸಲು ರತ್ನವನ್ನು ಧರಿಸಲಾಗುತ್ತದೆ. ಅದೃಷ್ಟವು  ಬೆಳಗಲು ಯಾವ ರತ್ನಗಳನ್ನು ಧರಿಸಬಹುದು ಎಂಬುದನ್ನು ತಿಳಿದುಕೊಳ್ಳಿರಿ.

Written by - Puttaraj K Alur | Last Updated : May 15, 2022, 11:52 AM IST
  • ತಾಯಿ ಲಕ್ಷ್ಮಿದೇವಿಯ ಕೃಪೆಗೆ ಚಿನ್ನದ ರತ್ನವನ್ನು ಧರಿಸಲಾಗುತ್ತದೆ
  • ಜೇಡ್ ಸ್ಟೋನ್ ಅನ್ನು ಡ್ರೀಮ್ ಸ್ಟೋನ್ ಎಂದು ಕರೆಯಲಾಗುತ್ತದೆ
  • ಟೈಗರ್ ಸ್ಟೋನ್ ಧರಿಸಿದರೆ ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ಸಿಗುತ್ತದೆ
Gemology: ಈ ರತ್ನವನ್ನು ಧರಿಸುವುದರಿಂದ ಅದೃಷ್ಟದ ಜೊತೆಗೆ ಧನಲಾಭ ಗ್ಯಾರಂಟಿ! title=
ಅದೃಷ್ಟದ ರತ್ನಗಳು

ನವದೆಹಲಿ: ಜ್ಯೋತಿಷ್ಯದಲ್ಲಿ ಯಾವುದೇ ವ್ಯಕ್ತಿಯ ಜಾತಕದಲ್ಲಿ ಅಶುಭ ಗ್ರಹಗಳ ಪ್ರಭಾವವನ್ನು ಕಡಿಮೆ ಮಾಡಲು ಮತ್ತು ಶುಭ ಪರಿಣಾಮಗಳನ್ನು ಹೆಚ್ಚಿಸಲು ರತ್ನಗಳನ್ನು ಧರಿಸಲು ಸಲಹೆ ನೀಡಲಾಗುತ್ತದೆ. ಜ್ಯೋತಿಷ್ಯದಲ್ಲಿ ರತ್ನದ ಕಲ್ಲುಗಳನ್ನು ಬಹಳ ಪರಿಣಾಮಕಾರಿ ಎಂದು ಪರಿಗಣಿಸಲಾಗುತ್ತದೆ. ರತ್ನಗಳನ್ನು ಧರಿಸುವುದರಿಂದ ವ್ಯಕ್ತಿಯ ಅದೃಷ್ಟವೇ ಬದಲಾಗುತ್ತದೆ. ಅಶುಭ ಗ್ರಹಗಳಿಂದ ನೀವು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದರೆ ಅಥವಾ ಕಠಿಣ ಪರಿಶ್ರಮದ ನಂತರವೂ ನಿಮಗೆ ಫಲಿತಾಂಶ ಸಿಗದಿದ್ದರೆ ರತ್ನ ಶಾಸ್ತ್ರದಲ್ಲಿ ಹೇಳಲಾಗಿರುವ 4 ರತ್ನಗಳನ್ನು ಧರಿಸಬೇಕು. ಇವುಗಳನ್ನು ಧರಿಸುವುದರಿಂದ ವ್ಯಕ್ತಿಯ ಭಾಗ್ಯವೂ ಜಾಗೃತವಾಗುತ್ತದೆ. ಈ ರತ್ನಗಳ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.

ಈ ರತ್ನ ಧರಿಸುವುದರಿಂದ ವ್ಯಕ್ತಿಗೆ ಅದೃಷ್ಟ

ಚಿನ್ನದ ರತ್ನ: ಮನೆಯಲ್ಲಿ ತಾಯಿ ಲಕ್ಷ್ಮಿದೇವಿಯ ಕೃಪೆಯನ್ನು ಕಾಪಾಡಿಕೊಳ್ಳಲು ಮತ್ತು ನಿರಂತರವಾಗಿ ಹಣವು ಬರಲು ಚಿನ್ನದ ರತ್ನವನ್ನು ಧರಿಸಲು ಸಲಹೆ ನೀಡಲಾಗುತ್ತದೆ. ಗುರು ಬೃಹಸ್ಪತಿ ಚಿನ್ನದ ರತ್ನದ ಒಡೆಯ. ಅಲ್ಲದೆ ಇದು ಪುಖರಾಜನ ಉರರತ್ನ. ಆದುದರಿಂದ ಈ ರತ್ನವನ್ನು ಧರಿಸುವುದರಿಂದ ಸಂಪತ್ತು ಮತ್ತು ಧಾನ್ಯ ವೃದ್ಧಿಯಾಗುತ್ತದೆ ಮತ್ತು ವ್ಯಕ್ತಿಯ ಭವಿಷ್ಯವು ಕ್ರಮೇಣ ಉತ್ತಮವಾಗುತ್ತದೆ ಎಂದು ನಂಬಲಾಗಿದೆ.  

ಇದನ್ನೂ ಓದಿ: Chandra Grahan 2022 : ಚಂದ್ರಗ್ರಹಣ ಈ 5 ರಾಶಿಯವರ ಮೇಲೆ ಬೀರಲಿದೆ ಅದೃಷ್ಟ ಪರಿಣಾಮ!

ಜೇಡ್ ಸ್ಟೋನ್: ರತ್ನಶಾಸ್ತ್ರದಲ್ಲಿ ಮತ್ತೊಂದು ಕಲ್ಲು ಜೇಡ್ ಸ್ಟೋನ್ ಅನ್ನು ಡ್ರೀಮ್ ಸ್ಟೋನ್ ಎಂದು ಕರೆಯಲಾಗುತ್ತದೆ. ಜೇಡ್ ಸ್ಟೋನ್ ಮನುಷ್ಯನ ಕನಸುಗಳನ್ನು ನನಸಾಗಿಸುವ ಶಕ್ತಿ ಹೊಂದಿದೆ ಎಂದು ನಂಬಲಾಗಿದೆ. ಇದನ್ನು ಧರಿಸುವುದರಿಂದ ವ್ಯಕ್ತಿ ಸ್ವಾವಲಂಬಿ, ಧೈರ್ಯವಂತನಾಗುತ್ತಾನೆ. ಅಲ್ಲದೆ ಅದೃಷ್ಟವನ್ನು ಬೆಳಗಿಸಲು ಇದು ಸಹಕಾರಿಯಾಗಿದೆ. ಇದನ್ನು ಧರಿಸುವುದರಿಂದ ಒಬ್ಬ ವ್ಯಕ್ತಿಯು ಎಂದಿಗೂ ಹಣದ ಕೊರತೆಯನ್ನು ಎದುರಿಸುವುದಿಲ್ಲವೆಂದು ನಂಬಲಾಗಿದೆ.  

ಮಾಕ್ಷಿಕ್ ರತ್ನ: ಮಾಕ್ಷಿಕ್ ರತ್ನವು ಹಣದ ಲಾಭಕ್ಕಾಗಿ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದನ್ನು ಒಂದು ರೀತಿಯ ಖನಿಜ ಅಂಶವೆಂದು ಪರಿಗಣಿಸಲಾಗುತ್ತದೆ, ಇದನ್ನು ಗಂಧಕದಿಂದ ಪಡೆಯಲಾಗುತ್ತದೆ. ರತ್ನ ಶಾಸ್ತ್ರದ ಪ್ರಕಾರ ಇದನ್ನು ಧರಿಸುವುದರಿಂದ ವ್ಯಕ್ತಿಯ ಬೌದ್ಧಿಕ ಸಾಮರ್ಥ್ಯವು ಬೆಳೆಯುತ್ತದೆ. ಅಲ್ಲದೆ ವ್ಯಕ್ತಿಗೆ ಆತ್ಮವಿಶ್ವಾಸದ ಕೊರತೆಯಿದ್ದರೆ ಅದು ಕೂಡ ಈಡೇರುತ್ತದೆ. ಶುಕ್ರವಾರದಂದು ಈ ರತ್ನವನ್ನು ಧರಿಸುವುದರಿಂದ ವ್ಯಕ್ತಿಗೆ ಸಂಪತ್ತು ಹರಿದುಬರುತ್ತದೆ.

ಇದನ್ನೂ ಓದಿ: Lucky Girls: ಪತಿ ಹಾಗೂ ಕುಟುಂಬದ ಪಾಲಿಗೆ ಲಕ್ಕಿ ಸಾಬೀತಾಗುತ್ತಾರೆ ಈ ಯುವತಿಯರು

ಟೈಗರ್ ಸ್ಟೋನ್: ಜ್ಯೋತಿಷ್ಯದ ಪ್ರಕಾರ ಧೈರ್ಯ ಮತ್ತು ಆತ್ಮವಿಶ್ವಾಸವು ಈ ರತ್ನದಿಂದ ಬರುತ್ತದೆ. ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ಸಿಗುತ್ತದೆ. ಈ ರತ್ನವನ್ನು ಧರಿಸುವುದರಿಂದ ವ್ಯಕ್ತಿಯ ಅದೃಷ್ಟವನ್ನು ಜಾಗೃತಗೊಳಿಸುತ್ತದೆ ಎಂದು ನಂಬಲಾಗಿದೆ. ಇದರಿಂದ ವ್ಯಕ್ತಿಯು ಪ್ರಗತಿಯ ಮೆಟ್ಟಿಲುಗಳನ್ನು ಏರುತ್ತಾನೆ. ಟೈಗರ್ ಸ್ಟೋನ್ ಧರಿಸುವುದರಿಂದ ವ್ಯಕ್ತಿಯ ಜಾತಕದಲ್ಲಿ ಸೂರ್ಯ ಮತ್ತು ಚಂದ್ರ ಬಲಗೊಳ್ಳುತ್ತದೆ. ಇದನ್ನು ಸೋಮವಾರದಂದು ಧರಿಸಬೇಕು ಎಂದು ಹೇಳಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News