ಈ ನಾಲ್ಕು ರಾಶಿಯ ಹೆಣ್ಣು ಮಕ್ಕಳದ್ದು ಹೆಚ್ಚಾಗಿ ಲವ್ ಮ್ಯಾರೇಜ್ ಆಗುತ್ತದೆಯಂತೆ, ನಿಮ್ಮ ರಾಶಿ ಇದರಲ್ಲಿದೆಯೇ ನೋಡಿಕೊಳ್ಳಿ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಾಲ್ಕು ರಾಶಿಚಕ್ರ ಚಿಹ್ನೆಗಳಿವೆ. ಈ ರಾಶಿಯಲ್ಲಿ ಜನಿಸಿದ ಹುಡುಗಿಯರು ಹೆಚ್ಚಾಗಿ ಪ್ರೇಮ ವಿವಾಹದತ್ತ ಒಲವು ಹೊಂದಿರುತ್ತಾರೆ. ಆ ನಾಲ್ಕು ರಾಶಿಚಕ್ರ ಚಿಹ್ನೆಗಳು ಯಾವುವು ನೋಡೋಣ. 

Written by - Ranjitha R K | Last Updated : Oct 11, 2021, 08:16 PM IST
  • ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಾಲ್ಕು ರಾಶಿಯವರು ಪ್ರೇಮ ವಿವಾಹದತ್ತ ಒಲವು ಹೊಂದಿರುತ್ತಾರೆ.
  • ಲವ್ ಮ್ಯಾರೇಜ್ ಅಥವಾ ಅರೇಂಜ್ಡ್ ಮ್ಯಾರೇಜ್ ಎನ್ನುವುದನ್ನು ಜ್ಯೋತಿಷ್ಯ ಶಾಸ್ತ್ರದ ಮೂಲಕ ತಿಳಿದುಕೊಳ್ಳಬಹುದು
  • ಹಾಗಿದ್ದರೆ ಆ ನಾಲ್ಕು ರಾಶಿಚಕ್ರ ಚಿಹ್ನೆಗಳು ಯಾವುವು ನೋಡೋಣ.
ಈ ನಾಲ್ಕು ರಾಶಿಯ ಹೆಣ್ಣು ಮಕ್ಕಳದ್ದು ಹೆಚ್ಚಾಗಿ ಲವ್ ಮ್ಯಾರೇಜ್ ಆಗುತ್ತದೆಯಂತೆ, ನಿಮ್ಮ ರಾಶಿ ಇದರಲ್ಲಿದೆಯೇ ನೋಡಿಕೊಳ್ಳಿ   title=
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಾಲ್ಕು ರಾಶಿಯವರು ಪ್ರೇಮ ವಿವಾಹದತ್ತ ಒಲವು ಹೊಂದಿರುತ್ತಾರೆ. (file photo)

ನವದೆಹಲಿ :  ತಮ್ಮ ಸಂಗಾತಿಯ ಮುಖವನ್ನು ಕೂಡಾ ನೋಡದೆ, ಮನೆಯ ಹಿರಿಯರು ತೋರಿಸಿದವರನ್ನು ಮದುವೆಯಾಗುತ್ತಿದ್ದ ಕಾಲವು ಇತ್ತು. ಆದರೆ ಪ್ರಸ್ತುತ ಸಮಯದಲ್ಲಿ, ಜನರು ತಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡುವ ಮೊದಲು ಸಾಕಷ್ಟು ಯೋಚಿಸುತ್ತಾರೆ. ಇಂದಿನ ಕಾಲದಲ್ಲಿ ಕೆಲವರು ಅರೇಂಜ್ಡ್ ಮ್ಯಾರೇಜ್ (Arrange marriage) ಅನ್ನು ನಂಬಿದರೆ, ಇನ್ನು ಕೆಲವರು ಪ್ರೇಮ ವಿವಾಹದತ್ತ (Love marriage) ಒಲವು ಹೊಂದಿರುತ್ತಾರೆ. ಅಂದಹಾಗೆ, ಪ್ರೇಮ ವಿವಾಹವಾಗಲಿ, ಅರೇಂಜ್ಡ್ ಮ್ಯಾರೇಜ್  ಅಗಲಿ ಭವಿಷ್ಯದಲ್ಲಿ ಏನಾಗಲಿದೆ ಎನ್ನುವುದು ಯಾರಿಗೂ  ತಿಳಿದಿರುವುದಿಲ್ಲ. ಆದರೆ ಜ್ಯೋತಿಷಿಗಳ (Astrology) ಪ್ರಕಾರ, ಲವ್ ಮ್ಯಾರೇಜ್ ಅಥವಾ ಅರೇಂಜ್ಡ್ ಮ್ಯಾರೇಜ್ ಆಗುವುದು ರಾಶಿಚಕ್ರ ಮತ್ತು ಜಾತಕದ ಮೂಲಕ ಖಚಿತ ಪಡಿಸಿಕೊಳ್ಳಬಹುದು.

ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ, ನಾಲ್ಕು ರಾಶಿಚಕ್ರ ಚಿಹ್ನೆಗಳಿವೆ. ಈ ರಾಶಿಯಲ್ಲಿ ಜನಿಸಿದ ಹುಡುಗಿಯರು ಹೆಚ್ಚಾಗಿ ಪ್ರೇಮ ವಿವಾಹದತ್ತ ಒಲವು ಹೊಂದಿರುತ್ತಾರೆ. ಆ ನಾಲ್ಕು ರಾಶಿಚಕ್ರ ಚಿಹ್ನೆಗಳು (Zodiac sign) ಯಾವುವು ನೋಡೋಣ. 

ಇದನ್ನೂ ಓದಿ : ಕೈಯ ಈ ಭಾಗದಲ್ಲಿ ಮಚ್ಚೆ ಇದ್ದರೆ ಭಾರೀ ಅಶುಭವಂತೆ, ನಿಮ್ಮ ಕೈಯನ್ನೊಮ್ಮೆ ನೋಡಿಕೊಳ್ಳಿ

ಮೇಷ : ಮೇಷ ರಾಶಿಯಲ್ಲಿ (Aries) ಜನಿಸಿದ ಹುಡುಗಿಯರು ತುಂಬಾ ಭಾವನಾತ್ಮಕವಾಗಿರುತ್ತಾರೆ.  ಇವರು ಯಾರನ್ನಾದರೂ ಪ್ರೀತಿಸುತ್ತಿದ್ದರೆ, ಮತ್ತೆ ಯಾವುದೇ ಕಾರಣಕ್ಕೂ ತಮ್ಮ ಜೀವನದಲ್ಲಿ ಇನ್ನೊಬ್ಬ ವ್ಯಕ್ತಿಗೆ ಸ್ಥಾನ ನೀಡುವುದಿಲ್ಲ. ಈ ರಾಶಿಚಕ್ರದ (Zodiac sign) ಬಹುತೇಕ ಹುಡುಗಿಯರು ಪ್ರೇಮ ವಿವಾಹವಾಗುತ್ತಾರೆ. ಅಷ್ಟು ಮಾತ್ರವಲ್ಲ ಅವರ ಮದುವೆ ಕೂಡ ಯಶಸ್ವಿಯಾಗುತ್ತದೆ.

ವೃಷಭ  (Taurus): ಈ ರಾಶಿಯ ಹುಡುಗಿಯರು ತುಂಬಾ ಹಠಮಾರಿ ಸ್ವಭಾವದವರು. ಅವರು ತಮ್ಮ ಸಂಗಾತಿಯ ಮೇಲೂ ಪ್ರಾಬಲ್ಯ ಹೊಂದಿರುತ್ತಾರೆ. ಹಠಮಾರಿ ಸ್ವಭಾವದಿಂದಾಗಿ, ತನ್ನ ಕುಟುಂಬದೊಂದಿಗೆ ಜಗಳವಾಡಿಯಾದರೂ ತಾವು ಮೆಚ್ಚಿದ ಸಂಗಾತಿಯನ್ನೇ ವಿವಾಹವಾಗುತ್ತಾರೆ. ಈ ರಾಶಿಯ ಹೆಚ್ಚಿನ ಹುಡುಗಿಯರು ಪ್ರೇಮ ವಿವಾಹವಾಗುತ್ತಾರೆ. 

ಇದನ್ನೂ ಓದಿ : Venus Remedies:ಪದೇ ಪದೇ ಧನ ಹಾನಿಯಾಗುತ್ತಿದ್ದರೆ ಈ ಉಪಾಯ ಅನುಸರಿಸಿ

ಮಿಥುನ : ಮಿಥುನ ರಾಶಿಯ (Gemini) ಹುಡುಗಿಯರು ತುಂಬಾ ಎಲ್ಲರೊಂದಿಗೆ ಬೆರೆಯುವ ಗುಣವನ್ನು ಹೊಂದಿರುತ್ತಾರೆ.  ಈ ಕಾರಣದಿಂದಾಗಿ ಅವರು ಅನೇಕ ವ್ಯವಹಾರಗಳನ್ನು ಹೊಂದಿರುತ್ತಾರೆ. ಆದರೆ, ಈ ರಾಶಿಯವರು ಒಮ್ಮೆ ಯಾರೊಂದಿಗಾದರೂ ಸಂಬಂಧ ಬೆಳೆಸಿಕೊಂಡರೆ ಕೊನೆ ತನಕ ಅದನ್ನು ನಿಭಾಯಿಸುತ್ತಾರೆ. ತನ್ನ ಸಂಬಂಧದ ಬಗ್ಗೆ ಸಂಪೂರ್ಣ ಪ್ರಾಮಾಣಿಕತೆಯನ್ನು ತೋರಿಸುತ್ತಾರೆ. ಸಾಮಾನ್ಯವಾಗಿ ಈ ರಾಶಿಯ ಹುಡುಗಿಯರು ಪ್ರೇಮ ವಿವಾಹವಾಗುತ್ತಾರೆ (Love marriage). 

ಧನು ರಾಶಿ : ಧನು ರಾಶಿಯ (Sagittarius) ಹುಡುಗಿಯರ ತಮ್ಮದೇ ಆದ ರೀತಿಯಲ್ಲಿ ಜೀವನ ನಡೆಸಲು ಬಯಸುತ್ತಾರೆ. ತನ್ನ ಜೀವನದ ಹೆಚ್ಚಿನ ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳುತ್ತಾರೆ. ಈ ರಾಶಿಚಕ್ರದ ಹುಡುಗಿಯರು ತುಂಬಾ ಬಹಿರಂಗವಾಗಿ ಮಾತನಾಡುತ್ತಾರೆ. ಇವರಲ್ಲಿ ಮುಚ್ಚುಮರೆ ಇರುವುದಿಲ್ಲ. ಇವರು ಬುದ್ಧಿವಂತರು ಮತ್ತು ಉತ್ಸಾಹಿಗಳು. ಧನು ರಾಶಿ ಹುಡುಗಿಯರು ತಮ್ಮ ರೀತಿಯ ವ್ಯಕ್ತಿಯನ್ನೇ  ಮದುವೆಯಾಗಲು ಬಯಸುತ್ತಾರೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News