Guru Rashi Parivartan 2021 - ಮುಂಬರುವ 14 ದಿನಗಳು ಈ ರಾಶಿಯ ಜನರ ಪಾಲಿಗೆ ತುಂಬಾ ಫಲದಾಯಕವಾಗಿವೆ, ನಿಮ್ಮ ರಾಶಿ ಇದೆಯಾ ಈ ಲಿಸ್ಟ್ ನಲ್ಲಿ?

Guru Rashi Parivartan 2021 - ಜ್ಯೋತಿಷ್ಯಶಾಸ್ತ್ರದಲ್ಲಿ (Astrology) ಗುರುವಿಗೆ (Jupiter) ವಿಶೇಷ ಸ್ಥಾನವಿದೆ. ಗುರುವಿನ ಕೃಪೆಯಿಂದ ವ್ಯಕ್ತಿ ಅದೃಷ್ಟವನ್ನು ಪಡೆಯುತ್ತಾನೆ. ಪ್ರಸ್ತುತ ಗುರು ಮಕರ ರಾಶಿಯಲ್ಲಿ ವಿರಾಜಮಾನನಾಗಿದ್ದಾನೆ. ನವೆಂಬರ್ 20, 2021 ರವರೆಗೆ ಗುರು (Guru Gochar Predictions) ಈ ರಾಶಿಯಲ್ಲಿ ಇರುತ್ತಾನೆ. 

Written by - Nitin Tabib | Last Updated : Nov 6, 2021, 05:07 PM IST
  • ಜ್ಯೋತಿಷ್ಯಶಾಸ್ತ್ರದಲ್ಲಿ (Astrology) ಗುರುವಿಗೆ (Jupiter) ವಿಶೇಷ ಸ್ಥಾನವಿದೆ.
  • ಗುರುವಿನ ಕೃಪೆಯಿಂದ ವ್ಯಕ್ತಿ ಅದೃಷ್ಟವನ್ನು ಪಡೆಯುತ್ತಾನೆ.
  • ಪ್ರಸ್ತುತ ಗುರು ಮಕರ ರಾಶಿಯಲ್ಲಿ ವಿರಾಜಮಾನನಾಗಿದ್ದಾನೆ.
Guru Rashi Parivartan 2021 - ಮುಂಬರುವ 14 ದಿನಗಳು ಈ ರಾಶಿಯ ಜನರ ಪಾಲಿಗೆ ತುಂಬಾ ಫಲದಾಯಕವಾಗಿವೆ, ನಿಮ್ಮ ರಾಶಿ ಇದೆಯಾ ಈ ಲಿಸ್ಟ್ ನಲ್ಲಿ? title=
Guru Rashi Parivartan 2021 (File Photo)

Guru Rashi Parivartan 2021 - ಜ್ಯೋತಿಷ್ಯಶಾಸ್ತ್ರದಲ್ಲಿ (Astrology) ಗುರುವಿಗೆ (Jupiter) ವಿಶೇಷ ಸ್ಥಾನವಿದೆ. ಗುರುವಿನ ಕೃಪೆಯಿಂದ ವ್ಯಕ್ತಿ ಅದೃಷ್ಟವನ್ನು ಪಡೆಯುತ್ತಾನೆ. ಪ್ರಸ್ತುತ ಗುರು ಮಕರ ರಾಶಿಯಲ್ಲಿ ವಿರಾಜಮಾನನಾಗಿದ್ದಾನೆ. ನವೆಂಬರ್ 20, 2021 ರವರೆಗೆ ಗುರು (Guru Gochar Predictions) ಈ ರಾಶಿಯಲ್ಲಿ ಇರುತ್ತಾನೆ. ಗುರುವು (Jupiter Transit 2021) ಜ್ಞಾನ, ಗುರು, ಮಕ್ಕಳು, ಹಿರಿಯ ಸಹೋದರ, ಶಿಕ್ಷಣ, ಧಾರ್ಮಿಕ ಕೆಲಸ, ಪವಿತ್ರ ಸ್ಥಳಗಳು, ಸಂಪತ್ತು, ದಾನ, ಪುಣ್ಯ ಮತ್ತು ಬೆಳವಣಿಗೆ ಇತ್ಯಾದಿಗಳಿಗೆ ಕಾರಕ ಗ್ರಹ ಎಂದು ಹೇಳಲಾಗುತ್ತದೆ. ಪುನರ್ವಸು, ವಿಶಾಖ ಮತ್ತು ಪೂರ್ವ ಭಾದ್ರಪದ ಹೀಗೆ  27 ನಕ್ಷತ್ರಗಳಿಗೆ ಗುರು ಗ್ರಹ ಅಧಿಪತಿ. ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ, ಮುಂಬರುವ 14 ದಿನಗಳವರೆಗೆ, ಕೆಲವು ರಾಶಿಚಕ್ರ ಚಿಹ್ನೆಗಳ (Horoscope) ಮೇಲೆ ಗುರುವಿನ ವಿಶೇಷ ಕೃಪೆ ಇರಲಿದೆ.  ಮುಂಬರುವ 14 ದಿನಗಳು ಯಾವ ರಾಶಿಯವರಿಗೆ ತುಂಬಾ ಶುಭಕರವಾಗಿರಲಿದೆ ಎಂಬುದನ್ನು ತಿಳಿಯೋಣ ಬನ್ನಿ.

ಮಿಥುನ ರಾಶಿ - ಮಿಥುನ ರಾಶಿಯವರಿಗೆ ನಿಂತು ಹೋದ ಕೆಲಸಗಳು  ಪೂರ್ಣಗೊಳ್ಳಬಹುದು. ಕೆಲಸದ ಸ್ಥಳದಲ್ಲಿ ನೀವು ಗೌರವವನ್ನು ಪಡೆಯುತ್ತೀರಿ. ಪ್ರಯಾಣದಿಂದ ಲಾಭದ ಸಾಧ್ಯತೆ ಇರುತ್ತದೆ. ಆದಾಯ ಹೆಚ್ಚಾಗಬಹುದು. ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ಕೆಲಸದಲ್ಲಿ ಯಶಸ್ಸು ಸಿಗಲಿದೆ.  ಉದ್ಯೋಗ ಮತ್ತು ವ್ಯವಹಾರಕ್ಕೆ ಸಮಯವು ಅನುಕೂಲಕರವಾಗಿದೆ.

ಕರ್ಕ ರಾಶಿ - ಕರ್ಕಾಟಕ ರಾಶಿಯ ಜನರ ಮೇಲೆ ಗುರುವು ಶುಭ ಪರಿಣಾಮವನ್ನು ಬೀರುತ್ತದೆ.  ಈ ಸಮಯದಲ್ಲಿ ನೀವು ನಿಮ್ಮ ಕೆಲಸದಲ್ಲಿ ಬಡ್ತಿ ಪಡೆಯುವ ಅವಕಾಶಗಳನ್ನು ಪಡೆಯುತ್ತೀರಿ. ಪ್ರತಿಷ್ಠೆ ಹೆಚ್ಚಾಗಬಹುದು. ನೀವು ವಾಹನವನ್ನು ಖರೀದಿಸಬಹುದು. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯುವಿರಿ. ವಹಿವಾಟಿನಿಂದ ಲಾಭವಿರುತ್ತದೆ.

ಇದನ್ನೂ ಓದಿ-Windows 11 ಬಳಕೆದಾರರಿಗೆ ಎದುರಾದ ತಾಂತ್ರಿಕ ತೊಂದರೆ, ಈ ವೈಶಿಷ್ಟ್ಯ ಕೆಲಸ ಮಾಡುತ್ತಿಲ್ಲ ಎಚ್ಚರ!

ಧನು ರಾಶಿ - ಧನು ರಾಶಿಯ ಜನರು ಉತ್ತಮ ಉದ್ಯೋಗ ಸಂಬಂಧಿತ ಸುದ್ದಿಗಳನ್ನು ಪಡೆಯಬಹುದು. ಆದಾಯದ ಹೆಚ್ಚಳವು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಬಹುದು. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ, ಇದರಿಂದಾಗಿ ವೈವಾಹಿಕ ಜೀವನವು ಸಂತೋಷವಾಗಿರುತ್ತದೆ. ಈ ಸಮಯವು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ವರದಾನಕ್ಕಿಂತ ಕಡಿಮೆಯಿಲ್ಲ. ಈ ಅವಧಿಯಲ್ಲಿ ಹೂಡಿಕೆ ಲಾಭದಾಯಕವಾಗಿರುತ್ತದೆ. ಆರೋಗ್ಯ ಚೆನ್ನಾಗಿರುತ್ತದೆ.

ಇದನ್ನೂ ಓದಿ- Karnataka Rains: ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ 3 ದಿನ ಭಾರೀ ಮಳೆ ಸಾಧ್ಯತೆ

ಮೀನ ರಾಶಿ  - ಮೀನ ರಾಶಿಯ ಜನರು ಶುಭ ಫಲಿತಾಂಶಗಳನ್ನು ಪಡೆಯುತ್ತಾರೆ. ಈ ಸಮಯದಲ್ಲಿ ನೀವು ನಿಮ್ಮ ಕೆಲಸದಲ್ಲಿ ಪ್ರಗತಿಯ ಅವಕಾಶಗಳನ್ನು ಪಡೆಯುತ್ತೀರಿ. ನೀವು ಹೊಸ ಕೆಲಸವನ್ನು ಪ್ರಾರಂಭಿಸಬಹುದು. ವ್ಯಾಪಾರಿಗಳು ಲಾಭ ಗಳಿಸಬಹುದು. ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ನಿಮಗೆ ಅವಕಾಶ ದೊರೆಯುತ್ತದೆ. ಹಣ ಮತ್ತು ಲಾಭ ಇರುತ್ತದೆ, ಇದರಿಂದಾಗಿ ಹಣಕಾಸಿನ ಭಾಗವು ಬಲವಾಗಿರುತ್ತದೆ. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಈ ಸಮಯವು ಮಂಗಳಕರವಾಗಿದೆ ಎಂದು ಹೇಳಬಹುದು.

ಇದನ್ನೂಓದಿ-Aryan Khan Drugs Case ಸೇರಿದಂತೆ ಒಟ್ಟು 6 ಪ್ರಕರಣಗಳ ತನಿಖೆ SITಗೆ ಹಸ್ತಾಂತರ

(ಸೂಚನೆ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವುದಕ್ಕು ಮುನ್ನ ವಿಷಯ ತಜ್ಞರ ಸಲಹೆ ಪಡೆಯಲು ಮರೆಯಬೇಡಿ)

ಇದನ್ನೂ ಓದಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News