ಎದೆಯೆಂಬ ಹಣತೆಯಲ್ಲಿ ಅಕ್ಷರವೆಂಬ ದೀಪ ಬೆಳಗಿಸಿ ಬಾಳಿಗೆ ಭವ್ಯ ಬೆಳಕು ನೀಡಿದ ಗುರುಗಳಿಗೆ ವಂದನೆ

Happy Teachers Day : ಭಾರತದ ರಾಷ್ಟ್ರಪತಿ ಡಾ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಸ್ಮರಣಾರ್ಥವಾಗಿ ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ಶಿಕ್ಷಕರ ದಿನವು ಕೇವಲ ಆಚರಣೆ ಮಾಡುವುದಕ್ಕಾಗಲಿ ಅಥವಾ ಶುಭಾಶಯ ಕೋರುವುದಕ್ಕಾಗಿ ಕ್ಯಾಲೆಂಡರ್‌ನಲ್ಲಿ ಗುರುತಿಸಲಾದ ದಿನವಲ್ಲ. ಹಾಗಾದರೆ ಏನು ಈ ಶಿಕ್ಷಕರ ದಿನ ವಿಶೇಷತೆ ಎನ್ನುವದನ್ನು ತಿಳಿದಕೊಳ್ಳೋಣ.   

Written by - Savita M B | Last Updated : Sep 5, 2023, 11:01 AM IST
  • ಶಾಲೆಯಲ್ಲಿ ಶಿಕ್ಷಕರು ಬರೀ ಶಿಕ್ಷಕರಲ್ಲ ತಾಯಿ ಹಾಗೂ ತಂದೆಯೂ ಕೂಡ.
  • ನಮ್ಮ ಜೀವನದಲ್ಲಿ ಶಿಕ್ಷಕರು ಅತೀ ಪ್ರಮುಖ ಪಾತ್ರವನ್ನು ವಹಿಸುತ್ತಾರೆ.
  • ನಾವು ನಮ್ಮ ಜೀವನದುದ್ದಕ್ಕೂ ಅವರನ್ನು ನೆನೆಯುವ ಹಲವಾರು ಸಂದರ್ಭಗಳು ನಮಗೆ ಎದುರಾಗುತ್ತಲೇ ಇರುತ್ತವೆ.
ಎದೆಯೆಂಬ ಹಣತೆಯಲ್ಲಿ ಅಕ್ಷರವೆಂಬ ದೀಪ ಬೆಳಗಿಸಿ ಬಾಳಿಗೆ ಭವ್ಯ ಬೆಳಕು ನೀಡಿದ ಗುರುಗಳಿಗೆ ವಂದನೆ  title=

Teachers Day : ಶಾಲೆಯಲ್ಲಿ ಶಿಕ್ಷಕರು ಬರೀ ಶಿಕ್ಷಕರಲ್ಲ ತಾಯಿ ಹಾಗೂ ತಂದೆಯೂ ಕೂಡ. ಹೌದು ಚಿಕ್ಕ ಮಕ್ಕಳಿಗೆ ಪಠ್ಯದೊಂದಿಗೆ, ಜೀವನದ ಪಾಠ ಹೇಳುತ್ತಾರೆ. ಅವರ ಪ್ರತಿ ಮಾರ್ಗದರ್ಶನದ ಹಿಂದೆ ನಮ್ಮನ್ನು ಮುಂದಿನ ಜೀವನಕ್ಕೆ ಸಿದ್ಧಪಡಿಸುವ ಉದ್ದೇಶವಿರುತ್ತದೆ. 

ಹೌದು ನಮ್ಮ ಜೀವನದಲ್ಲಿ ಶಿಕ್ಷಕರು ಅತೀ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ನಾವು ನಮ್ಮ ಜೀವನದುದ್ದಕ್ಕೂ ಅವರನ್ನು ನೆನೆಯುವ ಹಲವಾರು ಸಂದರ್ಭಗಳು ನಮಗೆ ಎದುರಾಗುತ್ತಲೇ ಇರುತ್ತವೆ. ಇನ್ನು ಪ್ರತಿ ವರ್ಷ  ಸೆಪ್ಟೆಂಬರ್ 5 ಬಂದರಂತೂ ಬದುಕಿನಲ್ಲಿ ಬಂದಂತಹ ಎಲ್ಲ ಗುರುಗಳು ನೆನಪಿಗೆ ಬರುತ್ತಾರೆ. 

ಇದನ್ನೂ ಓದಿ-ಮಾದರಿ ಶಿಕ್ಷಕಿ: ಹದಿನಾಲ್ಕು ವರ್ಷಗಳಿಂದ ಸರ್ಕಾರಿ ಶಾಲೆಯಲ್ಲಿ ಸೇವೆ, ಬಿ.ಇಡಿ ನಲ್ಲಿ ಗೋಲ್ಡ್ ಮೆಡಲಿಸ್ಟ್

ಭಾರತದ ರಾಷ್ಟ್ರಪತಿ ಡಾ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಸ್ಮರಣಾರ್ಥವಾಗಿ 1962ರಿಂದ ಶಿಕ್ಷಕರ ದಿನವನ್ನು ಆಚರಿಸಲಾಯಿತು. ಎಲ್ಲರ ಜೀವನದಲ್ಲಿ ಶೀಕ್ಷಕರು ಎಷ್ಟು ಪ್ರಮುಖ ಪಾತ್ರವವನ್ನು ವಹಿಸುತ್ತಾರೆ ಎನ್ನುವುದನ್ನು ನೆನಪಿಸಲು ಡಾ. ರಾಧಾಕೃಷ್ಣನ್ ಅವರ ಜನ್ಮದಿನವನ್ನು ದೇಶದಾದ್ಯಂತ ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ.

ಗುರುವಿಲ್ಲದೇ ಜ್ಞಾನದ ಹಾದಿ ಕಷ್ಟ..ಜಗತ್ತಿನಲ್ಲಿ ಗುರು ಎಂದರೇ ದೇವರ ಇನ್ನೊಂದು ರೂಪ. “ ಗುರುರ್ ಬ್ರಹ್ಮ ಗುರುರ್ ವಿಷ್ಣು ಗುರುರ್ ದೇವೋ ಮಹೇಶ್ವರಃ ಗುರುರ್ ಸಾಕ್ಷಾತ್ ಪರಬ್ರಹ್ಮ: ತಸ್ಮೈ ಶ್ರೀ ಗುರವೇ ನಮಃ” ಎಂದು ಪ್ರತಿಯೊಬ್ಬ ಗುರುವಿಗೂ ನಮಸ್ಕರಿಸುತ್ತಿದ್ದೇವೆ. ಎಲ್ಲ ಗುರುಗಳಿಗೂ ಶಿಕ್ಷಕರ ದಿನಾಚರಣೆಯ ಶೂಭಾಶಯಗಳು. ನಿಮ್ಮ ಪ್ರತಿಯೊಂದು ಮಾರ್ಗದರ್ಶನಗಳು ಇಂದು ನಮ್ಮ ಜೀವನವನ್ನು ಬೆಳಗುತ್ತಿವೆ. ಅದಕ್ಕೆ ನಾವು ಚಿರಋಣಿ. 

ಇದನ್ನೂ ಓದಿ-ಕೂದಲು ವೇಗವಾಗಿ ಬೆಳೆಯಲು ಅಕ್ಕಿ ನೀರನ್ನು ಹೀಗೆ ಬಳಸಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

Trending News