Health Tips: ತಾಮ್ರದ ಪಾತ್ರೆಯಲ್ಲಿನ ನೀರನ್ನು ನೀವೂ ಕುಡಿಯುತ್ತಿದ್ದರೆ, ಈ ತಪ್ಪು ಮಾಡಬೇಡಿ, ಪ್ರಯತ್ನ ಎಲ್ಲಾ ವ್ಯರ್ಥವಾಗುತ್ತೆ!

Health Care Tips: ತಾಮ್ರದ ಪಾತ್ರೆಯಲ್ಲಿ ಇಟ್ಟಿರುವ ನೀರು ದೇಹದಲ್ಲಿರುವ ವಿಷಕಾರಿ ಪದಾರ್ಥಗಳನ್ನು ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ಈ ನೀರು ಸೇವನೆಗೆ ಆಯುರ್ವೇದದಲ್ಲಿ ಕೆಲವು ನಿಯಮಗಳನ್ನು ಹೇಳಲಾಗಿದೆ. ಅದರ ಪ್ರಯೋಜನಗಳನ್ನು ಪಡೆಯಲು, ನಿಯಮಗಳನ್ನು ಪಾಲಿಸುವುದು ತುಂಬಾ ಮುಖ್ಯ (Lifestyle News In Kannada).  

Written by - Nitin Tabib | Last Updated : Feb 26, 2024, 10:00 PM IST
  • ಅಸಿಡಿಟಿಯಿಂದ ಬಳಲುತ್ತಿರುವವರು ಈ ನೀರನ್ನು ಎಂದಿಗೂ ಕುಡಿಯಬಾರದು, ಇಲ್ಲದಿದ್ದರೆ ತಾಮ್ರದ ನೀರು ಚಾರ್ಜ್ ಮಾಡಿದ ಬಿಳಿಕ ಉಷ್ಣ ಗುಣಧರ್ಮ ಪಡೆದುಕೊಳ್ಳುತ್ತದೆ ಮತ್ತು ನಿಮ್ಮ ಸಮಸ್ಯೆ ಹೆಚ್ಚಾಗುತ್ತದೆ.
  • ನೀವು ಹೊಟ್ಟೆ ಹುಣ್ಣು ಇತ್ಯಾದಿಗಳಿಂದ ಬಳಲುತ್ತಿದ್ದರೂ ಸಹ, ಈ ನೀರನ್ನು ಕುಡಿಯುವುದನ್ನು ತಪ್ಪಿಸಿ.
  • ನೀವು ಕಿಡ್ನಿ ಅಥವಾ ಹೃದ್ರೋಗಿಯಾಗಿದ್ದರೆ ಈ ನೀರನ್ನು ಕುಡಿಯುವ ಮೊದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ.
Health Tips: ತಾಮ್ರದ ಪಾತ್ರೆಯಲ್ಲಿನ ನೀರನ್ನು ನೀವೂ ಕುಡಿಯುತ್ತಿದ್ದರೆ, ಈ ತಪ್ಪು ಮಾಡಬೇಡಿ, ಪ್ರಯತ್ನ ಎಲ್ಲಾ ವ್ಯರ್ಥವಾಗುತ್ತೆ! title=

Copper Vessel Water Health Benefits: ನಮ್ಮಲ್ಲಿ ಹಲವಾರು  ತಾಮ್ರದ ಪಾತ್ರೆಯಲ್ಲಿರುವ ನೀರು ಕುಡಿಯುವ ಅಭ್ಯಾಸ ಮಾಡಿಕೊಂಡಿರುತ್ತಾರೆ.  ಅದು  ದೇಹಕ್ಕೆ ತುಂಬಾ ಪ್ರಯೋಜನಗಳನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಪ್ರಕೃತಿ ಚಿಕಿತ್ಸಾ ತಜ್ಞ ಡಾ.ರಮಾಕಾಂತ್ ಶರ್ಮಾ ಅವರ ಪ್ರಕಾರ ತಾಮ್ರದ ಪಾತ್ರೆಯಲ್ಲಿ ಇಟ್ಟಿರುವ ನೀರು ದೇಹದಿಂದ ವಿಷಕಾರಿ ಪದಾರ್ಥಗಳನ್ನು ಹೊರಹಾಕುವ ಸಾಮರ್ಥ್ಯ ಹೊಂದಿದೆ.  ಆದರೆ ಈ ನೀರು ಸೇವನೆಗೆ ಆಯುರ್ವೇದದಲ್ಲಿ ಕೆಲವು ನಿಯಮಗಳನ್ನು ಹೇಳಲಾಗಿದೆ. ಜನರು ತಾಮ್ರದ ಪಾತ್ರೆಗಳಲ್ಲಿ ನೀರನ್ನು ಕುಡಿಯುತ್ತಾರೆ, ಆದರೆ ಬಹುತೇಕರಿಗೆ ಅದರ ನಿಯಮಗಳು ತಿಳಿದಿಲ್ಲ, ಆದ್ದರಿಂದ ಅವರು ಅದರ ಸಂಪೂರ್ಣ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯುವುದರಿಂದ ಆಗುವ ಪ್ರಯೋಜನಗಳು ಮತ್ತು ಅದಕ್ಕೆ ಸಂಬಂಧಿಸಿದ ನಿಯಮಗಳನ್ನು ತಿಳಿದುಕೊಳ್ಳೋಣ ಬನ್ನಿ.(Lifestyle News In Kannada)

ದೇಹಕ್ಕೆ ಅದರಿಂದ ಆಗುವ ಪ್ರಯೋಜನಗಳು ಏನು? 
ತಾಮ್ರದ ಪಾತ್ರೆಯಲ್ಲಿ ಇರಿಸಲಾದ ನೀರು ದೇಹದಲ್ಲಿ ವಾತ, ಪಿತ್ತ ಮತ್ತು ಕಫವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ ಎನ್ನಲಾಗುತ್ತದೆ. . ಆಯುರ್ವೇದದ ಪ್ರಕಾರ, ದೇಹದಲ್ಲಿ ಯಾವುದೇ ರೀತಿಯ ಕಾಯಿಲೆಗೆ ಕಾರಣವೆಂದರೆ ವಾತ, ಪಿತ್ತ ಮತ್ತು ಕಫದ ಅಸಮತೋಲನ ಸ್ಥಿತಿಯಾಗಿದೆ. ಹೇಗಿರುವಾಗ ತಾಮ್ರದ ನೀರನ್ನು ಅನೇಕ ರೀತಿಯ ಸಮಸ್ಯೆಗಳಿಂದ ರಕ್ಷಿಸಲು ಸಹಾಯಕವೆಂದು ಪರಿಗಣಿಸಲಾಗುತ್ತದೆ.

ಇದಲ್ಲದೆ, ಈ ನೀರು ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸುತ್ತದೆ ಎಂದು ಪರಿಗಣಿಸಲಾಗಿದೆ. ಇದು ಕರುಳಿನಲ್ಲಿ ಸಂಗ್ರಹವಾಗಿರುವ ವಿಷಕಾರಿ ಪದಾರ್ಥಗಳನ್ನು ಸ್ವಚ್ಛಗೊಳಿಸುತ್ತದೆ ಮತ್ತು ಗ್ಯಾಸ್, ಅಸಿಡಿಟಿ ಮುಂತಾದ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ.

ತಾಮ್ರವು ನಮ್ಮ ದೇಹದಲ್ಲಿ ರಕ್ತವನ್ನು ಶುದ್ಧೀಕರಿಸುವ ಕೆಲಸ ಮಾಡುತ್ತದೆ. ಈ ನೀರನ್ನು ಕುಡಿಯುವುದರಿಂದ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ. 

ತಾಮ್ರದ ನೀರು ಸಂಧಿವಾತದ ಸಮಸ್ಯೆಯನ್ನು ತೊಡೆದುಹಾಕುವ ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ.

ಕ್ಯಾನ್ಸರ್ ವಿರೋಧಿ ಅಂಶಗಳು ತಾಮ್ರದ ನೀರಿನಲ್ಲಿವೆ, ಇದು ಈ ಮಾರಣಾಂತಿಕ ರೋಗವನ್ನು ತಡೆಗಟ್ಟುವಲ್ಲಿ ಸಹಕಾರಿಯಾಗಿದೆ. .

ಈ ನೀರನ್ನು ಹೇಗೆ ಕುಡಿಯಬೇಕು?
ತಾಮ್ರದ ಪಾತ್ರೆಯಲ್ಲಿ ಇಟ್ಟಿರುವ ನೀರನ್ನು ಯಾವ ಸಮಯದಲ್ಲಾದರೂ ಕುಡಿಯಬಹುದಾದರೂ, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಆಗುವ ಪ್ರಯೋಜನಗಳು ಹೆಚ್ಚು. ಇದನ್ನು ಬೆಳಗ್ಗೆ ಒಂದೊಂದೇ ಗುಟುಕು ಕುಡಿಯಬೇಕು. ಅದರ ಪ್ರಯೋಜನಗಳನ್ನು ಪಡೆಯಲು, ಕನಿಷ್ಠ 5 ರಿಂದ 7 ಗಂಟೆಗಳ ಕಾಲ ಪಾತ್ರೆಯಲ್ಲಿ ನೀರನ್ನು ಇಡುವುದು ತುಂಬಾ ಮುಖ್ಯ, ಇದರಿಂದ ತಾಮ್ರದ ಗುಣಲಕ್ಷಣಗಳು ನೀರಿನಲ್ಲಿ ಇಳಿಯುತ್ತವೆ. ಆದ್ದರಿಂದ ರಾತ್ರಿ ಮಲಗುವ ಮುನ್ನ ತಾಮ್ರದ ಪಾತ್ರೆಯನ್ನು ಶುಚಿಗೊಳಿಸಿ ಅದರಲ್ಲಿ ನೀರು ತುಂಬಿಸಿ ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಈ ನೀರಿನ ಒಂದೊಂದೇ ಗುಟುಕನ್ನು ಕುಡಿಯಿರಿ. ಇದರಿಂದ ನಿಮಗೆ ಸಾಕಷ್ಟು ಪ್ರಯೋಜನಗಳು ಸಿಗುತ್ತವೆ.

ನಿಮ್ಮ ಒಂದು ಸಣ್ಣ ತಪ್ಪು ನಿಮ್ಮೆಲ್ಲಾ ಪ್ರಯತ್ನ ಹಾಳುಮಾಡುತ್ತದೆ
ಡಾ.ರಮಾಕಾಂತ್ ಅವರ ಪ್ರಕಾರ, ತಾಮ್ರದ ಪಾತ್ರೆಯಲ್ಲಿ ಇರಿಸಲಾದ ನೀರನ್ನು ಚಾರ್ಜ್ಡ್ ವಾಟರ್ ಎಂದು ಕರೆಯಲಾಗುತ್ತದೆ. ಅದನ್ನು ಕುಡಿಯಲು, ಕನಿಷ್ಠ 5 ರಿಂದ 7 ಗಂಟೆಗಳ ಕಾಲ ತಾಮ್ರದ ಪಾತ್ರೆಯಲ್ಲಿರಿಸುವುದು ತುಂಬಾ ಮುಖ್ಯವಾದ ಸಂಗತಿಯಾಗಿದೆ, ಇದರಿಂದಾಗಿ ತಾಮ್ರದ ಅಂಶ ನೀರಿನಲ್ಲಿ ಇಳಿಯುತ್ತದೆ. ಆದರೆ ನೀವು ಈ ಪಾತ್ರೆಯನ್ನು ನೆಲದ ಮೇಲೆ ಇರಿಸಿದರೆ, ನಿಮ್ಮ ಶ್ರಮವು ವ್ಯರ್ಥವಾಗುತ್ತದೆ. ವಾಸ್ತವದಲ್ಲಿ, ಈ ಪಾತ್ರೆಯನ್ನು ನೆಲದ ಮೇಲೆ ಇಡುವುದರಿಂದ, ನೀರಿನಲ್ಲಿ ತಾಮ್ರದ ಗುಣಲಕ್ಷಣಗಳು ಸಂಪೂರ್ಣವಾಗಿ ಹೀರಲ್ಪಡುವುದಿಲ್ಲ, ಗುರುತ್ವಾಕರ್ಷಣೆಯಿಂದಾಗಿ ತಾಮ್ರದ ಗುಣಲಕ್ಷಣಗಳು ನೆಲದಲ್ಲಿ ಹೀರಲ್ಪಡುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ನೀವು ತಾಮ್ರದ ನೀರಿನ ಎಲ್ಲಾ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ನೀವು ತಾಮ್ರದ ಪಾತ್ರೆಯಲ್ಲಿ ನೀರನ್ನು ಇರಿಸಿದಾಗ, ಆ ಪಾತ್ರೆಯನ್ನು ಮರದ ಹಲಗೆ ಅಥವಾ ಮೇಜಿನ ಮೇಲೆ ಇರಿಸಿ.

ಇದನ್ನೂ ಓದಿ-Hair Care Tips: 50ನೇ ವಯಸ್ಸಿನಲ್ಲಿಯೂ ನೀಳ ಮತ್ತು ದಟ್ಟವಾದ ಕೇಶರಾಶಿ ನಿಮ್ಮದಾಗಬೇಕೇ? ಇಂದಿನಿಂದಲೇ ಈ 5 ಸಂಗತಿಗಳನ್ನು ಅನುಸರಿಸಿ!

ಈ ಕಾಯಿಲೆಗಳಿಂದ ಬಳಲುತ್ತಿರುವವರು ಈ ನೀರನ್ನು ಕುಡಿಯಬಾರದು
ಅಸಿಡಿಟಿಯಿಂದ ಬಳಲುತ್ತಿರುವವರು ಈ ನೀರನ್ನು ಎಂದಿಗೂ ಕುಡಿಯಬಾರದು, ಇಲ್ಲದಿದ್ದರೆ ತಾಮ್ರದ ನೀರು ಚಾರ್ಜ್ ಮಾಡಿದ ಬಿಳಿಕ ಉಷ್ಣ ಗುಣಧರ್ಮ ಪಡೆದುಕೊಳ್ಳುತ್ತದೆ ಮತ್ತು ನಿಮ್ಮ ಸಮಸ್ಯೆ ಹೆಚ್ಚಾಗುತ್ತದೆ.
ನೀವು ಹೊಟ್ಟೆ ಹುಣ್ಣು ಇತ್ಯಾದಿಗಳಿಂದ ಬಳಲುತ್ತಿದ್ದರೂ ಸಹ, ಈ ನೀರನ್ನು ಕುಡಿಯುವುದನ್ನು ತಪ್ಪಿಸಿ.
ನೀವು ಕಿಡ್ನಿ ಅಥವಾ ಹೃದ್ರೋಗಿಯಾಗಿದ್ದರೆ ಈ ನೀರನ್ನು ಕುಡಿಯುವ ಮೊದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ.
ನೀರನ್ನು ಬಿಟ್ಟರೆ ತಾಮ್ರದ ಪಾತ್ರೆಯಲ್ಲಿ ಹಾಲು, ಹುಳಿ ಪದಾರ್ಥಗಳನ್ನು ಇಟ್ಟು ತಿನ್ನುವ ತಪ್ಪನ್ನು ಮಾಡಬೇಡಿ. ಇದು ಆಹಾರ ಫುಡ್ ಪಾಯಿಸನಿಂಗ್ ಗೆ ಕಾರಣವಾಗಬಹುದು.

ಇದನ್ನೂ ಓದಿ-Harward ಸಲಹೆ: ದೇಹದಲ್ಲಿ ಹೆಚ್ಚಾಗಿದೆಯಾ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ? ಈ ಆಹಾರಗಳಿಂದ ಅಂತರ ಕಾಯ್ದುಕೊಳ್ಳಿ!

(ಹಕ್ಕುತ್ಯಾಗ- ಆತ್ಮೀಯ ಓದುಗರೇ, ನಮ್ಮ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮ್ಮಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನೀವು ಎಲ್ಲಾದರು ಓದಿದ್ದರೆ, ಅದನ್ನು ಅನುಸರಿಸುವ ಮುನ್ನ ವೈದ್ಯರನ್ನು ಅಥವಾ ವಿಷಯ ತಜ್ನರನ್ನು ಸಂಪರ್ಕಿಸಿ.)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News