Health Tips: ಪರಂಗಿ ಹಣ್ಣಿನ ಜೊತೆಗೆ ಮಿಸ್ ಆಗಿ ಕೂಡ ಈ ಹಣ್ಣನ್ನು ತಿನ್ನಲೇಬೇಡಿ

Health Tips: ಕೆಲವು ಆಹಾರದೊಂದಿಗೆ ಪರಂಗಿ ಹಣ್ಣನ್ನು ತಿನ್ನುವುದು ನಿಮಗೆ ತುಂಬಾ ಹಾನಿಕಾರಕ ಎಂದು ಸಾಬೀತುಪಡಿಸಬಹುದು.  

Written by - Yashaswini V | Last Updated : Aug 7, 2021, 02:20 PM IST
  • ಹೊಟ್ಟೆಗೆ ಸಂಬಂಧಿಸಿದಂತೆ ಹಲವು ಸಮಸ್ಯೆಗಳನ್ನು ಗುಣಪಡಿಸಲು ಪರಂಗಿ ಹಣ್ಣು ಪ್ರಯೋಜನಕಾರಿ
  • ಮಧುಮೇಹ ರೋಗಿಗಳಿಗೆ ಈ ಹಣ್ಣನ್ನು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ
  • ಆದರೆ ಕೆಲವು ಆಹಾರಗಳೊಂದಿಗೆ ಪರಂಗಿ ಹಣ್ಣಿನ ಸೇವನೆ ಹಾನಿಕಾರಕ ಎಂದು ಹೇಳಲಾಗುತ್ತದೆ
Health Tips: ಪರಂಗಿ ಹಣ್ಣಿನ ಜೊತೆಗೆ ಮಿಸ್ ಆಗಿ ಕೂಡ ಈ ಹಣ್ಣನ್ನು ತಿನ್ನಲೇಬೇಡಿ title=
ಪರಂಗಿ ಹಣ್ಣಿನ ಸೇವನೆ ವೇಳೆ ಇವುಗಳ ಬಗ್ಗೆ ಇರಲಿ ಎಚ್ಚರ

ಬೆಂಗಳೂರು: ಪಪ್ಪಾಯ ಅಂದರೆ ಪರಂಗಿ ಹಣ್ಣು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಹೊಟ್ಟೆಗೆ ಸಂಬಂಧಿಸಿದಂತೆ ಹಲವು ಸಮಸ್ಯೆಗಳನ್ನು ಗುಣಪಡಿಸಲು  ಪರಂಗಿ ಹಣ್ಣು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಇದರ ಜೊತೆಗೆ ಮಧುಮೇಹ ರೋಗಿಗಳಿಗೆ ಈ ಹಣ್ಣನ್ನು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಪರಂಗಿ ಹಣ್ಣಿನ ಮತ್ತೊಂದು ಗುಣವೆಂದರೆ ಇದನ್ನು ಹಸಿಯಾಗಿಯೂ ತಿನ್ನಬಹುದು ಅಥವಾ ಮಾಗಿದ ಬಳಿಕವೂ ಸೇವಿಸಬಹುದು. ಆದರೆ ಪರಂಗಿ ಹಣ್ಣಿನ ಸೇವನೆ ವೇಳೆ ಕೆಲವು ವಿಷಯಗಳ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯವಾಗಿದೆ.

ಯಾವ ಆಹಾರಗಳೊಂದಿಗೆ ಪರಂಗಿ ಹಣ್ಣನ್ನು ಸೇವಿಸಬಾರದು?
>> ಬಾಳೆಹಣ್ಣನ್ನು ಪರಂಗಿ ಹಣ್ಣಿನೊಂದಿಗೆ ಸೇವಿಸುವುದು ತುಂಬಾ ಅಪಾಯಕಾರಿ. ಬಾಳೆಹಣ್ಣು (Banana) ಮತ್ತು ಪರಂಗಿ ಹಣ್ಣನ್ನು ಒಟ್ಟಿಗೆ ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ತೊಂದರೆಯಾಗಬಹುದು ಮತ್ತು ಅಜೀರ್ಣ, ವಾಂತಿ, ವಾಕರಿಕೆ, ಗ್ಯಾಸ್ ಮತ್ತು ಆಗಾಗ್ಗೆ ತಲೆನೋವು ಉಂಟಾಗಬಹುದು. 

ಇದನ್ನೂ ಓದಿ -  Alcohol: ಆಲ್ಕೋಹಾಲ್ ಜೊತೆಗೆ ಅಪ್ಪಿ-ತಪ್ಪಿಯೂ ಇವುಗಳನ್ನು ಸೇವಿಸಬೇಡಿ

>> ನಿಮಗೆ ಆಸ್ತಮಾ ಅಥವಾ ಯಾವುದೇ ಉಸಿರಾಟದ ಕಾಯಿಲೆ ಇದ್ದರೆ ಪರಂಗಿ ಹಣ್ಣನ್ನು (Papaya) ಎಂದಿಗೂ ಸೇವಿಸಬಾರದು. ಪರಂಗಿ ಹಣ್ಣಿನಲ್ಲಿರುವ ಪಪೈನ್ ಅಂತಹ ಜನರಿಗೆ ಅಲರ್ಜಿಯ ಪ್ರತಿಕ್ರಿಯೆಗಳನ್ನು ಉಂಟುಮಾಡಬಹುದು. ಇದು ಉಸಿರಾಟದ ಸಮಸ್ಯೆಗಳನ್ನು ಉಂಟುಮಾಡಬಹುದು. 

>> ಯಾವುದೇ ಶಸ್ತ್ರಚಿಕಿತ್ಸೆಯ ನಂತರ ಗಾಯ ಗುಣವಾಗುವ ಮೊದಲೇ ನೀವು ಪಪ್ಪಾಯಿ ತಿನ್ನಲು ಪ್ರಾರಂಭಿಸಿದರೆ, ಗಾಯವು ಬೇಗನೆ ವಾಸಿಯಾಗುವುದಿಲ್ಲ.

ಇದನ್ನೂ ಓದಿ -  Periods : ಮಹಿಳೆಯರೇ ಗಮನಿಸಿ : ಮುಟ್ಟಿನ ಸಮಯದಲ್ಲಿ ಈ 5 ಆಹಾರಗಳನ್ನ ಸೇವಿಸಬೇಡಿ!

>> ಪಪ್ಪಾಯಿಯಲ್ಲಿ ಫೈಬರ್ ಸಮೃದ್ಧವಾಗಿರುವುದರಿಂದ, ಇದು ಹೊಟ್ಟೆಯನ್ನು ಸ್ವಚ್ಛಗೊಳಿಸುತ್ತದೆ ಮತ್ತು ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸುತ್ತದೆ, ಆದರೆ ಇದನ್ನು ಹೆಚ್ಚು ಸೇವಿಸುವುದರಿಂದ ಹೊಟ್ಟೆ ನೋವು, ಸೆಳೆತ ಮತ್ತು ಅತಿಸಾರ ಉಂಟಾಗಬಹುದು.

ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಂಪೂರ್ಣ ಸತ್ಯವಾಗಿದೆ ಮತ್ತು ಸ್ಫುಟವಾಗಿದೆ ಎಂಬುದನ್ನು ಝೀ ಹಿಂದೂಸ್ಥಾನ್ ಕನ್ನಡ ಪುಷ್ಟೀಕರಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News