ಉತ್ತಮ ನಿದ್ದೆಗೆ ಈ ಸರಳ ವಿಧಾನಗಳನ್ನು ಅನುಸರಿಸಿದರೆ ಸಾಕು ..!

 ಒಬ್ಬ ವ್ಯಕ್ತಿಯು 24 ಗಂಟೆಗಳಲ್ಲಿ 8 ಗಂಟೆಗಳ ಕಾಲ ನಿದ್ರೆ ಪಡೆಯಬೇಕು.  ರಾತ್ರಿ ಹೊತ್ತು ಸರಿಯಾಗಿ ನಿದ್ದೆ ಮಾಡದೇ ಹೋದರೆ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

Written by - Ranjitha R K | Last Updated : Mar 21, 2022, 10:24 AM IST
  • ದಿನಕ್ಕೆ 8 ಗಂಟೆಯ ನಿದ್ದೆ ಅಗತ್ಯ
  • ಸರಿಯಾಗಿ ನಿದ್ದೆ ಮಾಡದೇ ಹೋದರೆ ಕಾಡುತ್ತದೆ ಆರೋಗ್ಯ ಸಮಸ್ಯೆ
  • ಉತ್ತಮ ನಿದ್ದೆಗೆ ಸಿಂಪಲ್ ಟಿಪ್ಸ್
ಉತ್ತಮ ನಿದ್ದೆಗೆ ಈ ಸರಳ ವಿಧಾನಗಳನ್ನು ಅನುಸರಿಸಿದರೆ ಸಾಕು ..! title=
ದಿನಕ್ಕೆ 8 ಗಂಟೆಯ ನಿದ್ದೆ ಅಗತ್ಯ (file photo)

ಬೆಂಗಳೂರು : ಇಂದಿನ ಅತ್ಯಂತ ಬಿಡುವಿಲ್ಲದ ಜೀವನಶೈಲಿಯಲ್ಲಿ (Lifestyle), ನಿದ್ರೆಯ ಬಗ್ಗೆ ಸರಿಯಾಗಿ ಗಮನ ಹರಿಸುವುದಿಲ್ಲ. ಆರೋಗ್ಯಕರ ಜೀವನಕ್ಕೆ ಉತ್ತಮ ನಿದ್ರೆ ಬಹಳ ಮುಖ್ಯ (Importance of sleep). ಒಬ್ಬ ವ್ಯಕ್ತಿಯು 24 ಗಂಟೆಗಳಲ್ಲಿ 8 ಗಂಟೆಗಳ ಕಾಲ ನಿದ್ರೆ ಪಡೆಯಬೇಕು.  ರಾತ್ರಿ ಹೊತ್ತು ಸರಿಯಾಗಿ ನಿದ್ದೆ ಮಾಡದೇ ಹೋದರೆ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. 

ಸುಲಭ ನಿದ್ರೆ 5  ಸಲಹೆಗಳು :

1. ಮಲಗುವ ಸಮಯಕ್ಕೆ ಅರ್ಧ ಗಂಟೆ ಮೊದಲು ಸ್ಕ್ರೀನ್  ಆಫ್ ಮಾಡಿ:
ಹೀಗೆ ಮಾಡುವುದರಿಂದ ಮಲಗುವ ಮುನ್ನ ದೇಹಕ್ಕೆ ವಿಶ್ರಾಂತಿ ಸಿಗುತ್ತದೆ (Sleeping tips). ಈ ನಿಯಮವು ಮಕ್ಕಳಿಗೆ ಬಹಳ ಮುಖ್ಯವಾಗಿದೆ. ವಯಸ್ಕರೂ ಈ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಇದಕ್ಕಾಗಿ, ಮಲಗುವ ಕೋಣೆಯಿಂದ ಟಿವಿ (Tv) ಅಥವಾ ಕಂಪ್ಯೂಟರ್ ಸ್ಕ್ರೀನ್ ಅನ್ನು ತೆಗೆದುಹಾಕಬಹುದು. ಮಲಗುವ ಸಮಯದಲ್ಲಿ ನಿಮ್ಮ ಮೊಬೈಲ್ ಅನ್ನು ನೋಡಬಾರದು ಎನ್ನುವುದು ಕೂಡಾ ನೆನಪಿರಲಿ (Tips to get sleep). 

2. ಮಲಗುವ ಮುನ್ನ  ಬಿಸಿನೀರಿನ ಸ್ನಾನ  :
ಸ್ಲೀಪ್ ಫೌಂಡೇಶನ್ ಪ್ರಕಾರ, ಮಲಗುವ ಮುನ್ನ ಸ್ನಾನ ಮಾಡುವುದರಿಂದ ಕೈ ಮತ್ತು ಪಾದಗಳಿಗೆ ರಕ್ತದ ಹರಿವು ಹೆಚ್ಚಾಗುತ್ತದೆ. ಸ್ನಾನದ ನಂತರ ಮಲಗುವುದರಿಂದ ಚೆನ್ನಾಗಿ ನಿದ್ದೆ ಬರುತ್ತದೆ (Bath before sleep). ಆದರೆ ಸ್ನಾನ ಮಾಡಿ ಬಂದು ಮತ್ತೆ ಟಿವಿ ನೋಡಲು ಕುಳಿತರೆ ತಪ್ಪಾಗುತ್ತದೆ. 

ಇದನ್ನೂ ಓದಿ : How To Reduce Belly Fat: ಖಾಲಿ ಹೊಟ್ಟೆಯಲ್ಲಿ ಈ ಟೀ ಕುಡಿಯುವುದರಿಂದ ಕರಗುತ್ತೆ ಬೆಲ್ಲಿ ಫ್ಯಾಟ್!

3. ಮಲಗುವ ಕೋಣೆಯಲ್ಲಿ ಕತ್ತಲೆ ಮತ್ತು ಶಾಂತಿ ಅತ್ಯಗತ್ಯ :
ಹೆಚ್ಚಿನ ಬೆಳಕು ನಿಮ್ಮ ದೇಹದ ಮೆಲಟೋನಿನ್ (ನಿದ್ರೆಯ ಹಾರ್ಮೋನ್) ಉತ್ಪಾದನೆಗೆ ಅಡ್ಡಿಪಡಿಸುತ್ತದೆ. ಮಲಗುವ ಮುನ್ನ ಕಿಟಕಿ ಪರದೆಗಳು ಸರಿಯಾಗಿ ಮುಚ್ಚಿವೆಯೇ ಎನ್ನುವುದನ್ನು ನೋಡಿಕೊಳ್ಳಿ. ಕೋಣೆಯಲ್ಲಿ ಇನ್ನೂ ಬೆಳಕು ಬಂದರೆ, ಕಣ್ಣಿನ ಮಾಸ್ಕ್ ಹಾಕಿ  ಮಲಗಿಕೊಳ್ಳಿ.

4. ಹಾಸಿಗೆಯಲ್ಲಿ ಫೋನ್, ಕಂಪ್ಯೂಟರ್ ಟಿವಿ ನಿಷೇಧ : 
ಅನೇಕ ಜನರಿಗೆ, ಮಲಗುವ ಮೊದಲು ಫೋನ್ ನೋಡುವ ಅಭ್ಯಾಸವಿರುತ್ತದೆ. ಮಲಗುವ ಮುನ್ನ ಫೋನ್ ನೋಡುತ್ತಾ ಕುಳಿತರೆ ಸಮಯ ಹೋಗುವುದೇ ತಿಳಿಯುವುದಿಲ್ಲ.  ಮಾತ್ರವಲ್ಲ ಇದು ನಿದ್ರೆಯ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಮಾರನೇ ದಿನದ ಚಟುವಟಿಕೆಯ ಮೇಲೆ ಕೂಡಾ ಪರಿಣಾಮ ಬೀರುತ್ತದೆ.  

ಇದನ್ನೂ ಓದಿ : Health Tips: ಸ್ನಾನ ಮಾಡುವಾಗ ಈ 5 ತಪ್ಪುಗಳನ್ನು ಮಾಡಬೇಡಿ

5. ಕೆಫೀನ್ ಸೇವನೆ ಮೇಲೆ ಹಿಡಿತವಿರಲಿ : 
ಸ್ಲೀಪ್ ಎಜುಕೇಶನ್ ಪ್ರಕಾರ, ಮಲಗುವ ಸಮಯಕ್ಕೆ ಆರು ಗಂಟೆಗಳ ಮೊದಲು ಕೆಫೀನ್ (caffeine)ಸೇವಿಸುವುದರಿಂದ ಒಂದು ಗಂಟೆ ನಿದ್ರೆ  ಕಡಿಮೆಯಾಗುತ್ತದೆ. ವಯಸ್ಸಾದವರಲ್ಲಿ ಈ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತವೆ. ಏಕೆಂದರೆ ಅವರ ದೇಹವು ಕೆಫೀನ್ ಅನ್ನು ಸಂಸ್ಕರಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News