ನವದೆಹಲಿ: ಕೊರೊನಾ ವೈರಸ್(CoronaVirus) ಯುಗದಲ್ಲಿ ಹೃದ್ರೋಗಕ್ಕೆ ಸಂಬಂಧಿಸಿದ ಜನರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಿತ್ತು. ನೀವು ಈಗಾಗಲೇ ಪರಿಧಮನಿಯ ಕಾಯಿಲೆ(Coronary Artery Disease), ಅಧಿಕ ರಕ್ತದೊತ್ತಡ ಮತ್ತು ಹೃದಯ ವೈಫಲ್ಯದಂತಹ ಸಮಸ್ಯೆಗಳನ್ನು ಹೊಂದಿದ್ದರೆ ತುಂಬಾ ಜಾಗರೂಕರಾಗಿರಬೇಕು.
ಹೃದಯದ ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದಿರಿ! (Be careful about heart health)
ಅಧಿಕ ಕೊಲೆಸ್ಟ್ರಾಲ್, High Triglycerides ಮತ್ತು ಅಧಿಕ ರಕ್ತದೊತ್ತಡ(High Cholesterol)ದಂತಹ ಸಮಸ್ಯೆಗಳೊಂದಿಗೆ ಹೃದಯ ರೋಗಿಗಳು ಆಗಾಗ ಹೃದ್ರೋಗಶಾಸ್ತ್ರಜ್ಞರ ಬಳಿಗೆ ಬರುತ್ತಾರೆ. ಈ ಸಮಸ್ಯೆಗಳು ಕಾಣಿಸಿಕೊಂಡರೆ ಹೃದಯವು ಅಪಾಯದಲ್ಲಿದೆ ಎಂದರ್ಥ. ಈ ಸಮಸ್ಯೆಗಳಿಂದ ಬಳಲುತ್ತಿರುವ ಹೆಚ್ಚಿನ ಜನರು ದೈಹಿಕ ಚಟುವಟಿಕೆ ಮಾಡದೆ, ಒತ್ತಡಮಯ ಬದುಕು ನಡೆಸುತ್ತಿರುತ್ತಾರೆ. ಇದಲ್ಲದೆ ಅಧಿಕ ತೂಕದ ಕಾರಣದಿಂದ ಈ ಸಮಸ್ಯೆಗಳನ್ನು ಎದುರಿಸುತ್ತಾರೆ. ಆರಂಭದಲ್ಲಿ ಈ ಆರೋಗ್ಯ ಸಮಸ್ಯೆಗಳು ಚಿಕ್ಕದಾಗಿ ಕಾಣಿಸಿದರೂ, ಕ್ರಮೇಣ ಅವು ಹೃದಯದ ಅಪಧಮನಿಗಳನ್ನು ಹಾನಿಗೊಳಿಸುತ್ತವೆ. ಹೀಗಾಗಿ ಹೃದಯ ಸಂಬಂಧಿ ಸಮಸ್ಯೆಗಳ(Heart Disease) ಬಗ್ಗೆ ತುಂಬಾ ಎಚ್ಚರಿಕೆ ವಹಿಸುವುದು ಮುಖ್ಯ.
ಇದನ್ನೂ ಓದಿ: Badam Milk - ಬಾದಾಮ್ ಮಿಲ್ಕ್ ಸೇವನೆಯ 5 ಜಬರ್ದಸ್ತ್ ಲಾಭಗಳು ಇಲ್ಲಿವೆ
ನಿಮ್ಮ ಹೃದಯವನ್ನು ಆರೋಗ್ಯವಾಗಿಡಲು 4 ಸಲಹೆಗಳು
1. ಆರೋಗ್ಯಕರ ಜೀವನಶೈಲಿ
ಹೃದ್ರೋಗಿಗಳಿಗೆ ಆರೋಗ್ಯಕರ ಮತ್ತು ಸಮತೋಲಿತ ಜೀವನಶೈಲಿ(Healthy Lifestyle)ಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ವೈದ್ಯರ ಶಿಫಾರಸಿನಂತೆ ನಿಯಮಿತ ವ್ಯಾಯಾಮ ಮತ್ತು ಯೋಗವನ್ನು ಮಾಡಬೇಕು. ಬೆಳಗ್ಗೆ ಮತ್ತು ಸಂಜೆ ನಡಿಗೆ ನಿಮ್ಮ ಆರೋಗ್ಯಕ್ಕೆ ಸಹಕಾರಿಯಾಗುತ್ತದೆ. ಕಾಲು ಚಾಚಿ ಕುಳಿತುಕೊಳ್ಳುವ ಬದಲು ಮನೆಯಲ್ಲಿಯೇ ಎರಡು ಸುತ್ತು ಹಾಕುವುದು ಉತ್ತಮ. ನಿಯಮಿತವಾಗಿ ಕನಿಷ್ಠ 30 ನಿಮಿಷಗಳ ಕಾಲ ದೈಹಿಕ ಚಟುವಟಿಕೆ ಮಾಡಬೇಕು. ಮನೆಯಲ್ಲಿಯೇ ತಯಾರಿಸಿದ ಆರೋಗ್ಯಕರ ಆಹಾರ ಸೇವಿಸಬೇಕು. ನಿಮ್ಮ ಆಹಾರದಲ್ಲಿ ಕಡಿಮೆ ಕೊಬ್ಬಿನ ಪ್ರೋಟೀನ್ ತೆಗೆದುಕೊಳ್ಳಿ. ಇದಕ್ಕಾಗಿ ನೀವು ಚಿಕನ್ ಮತ್ತು ಸೀ ಫುಡ್(SeaFood)ಸೇವಿಸಬಹುದು. ತಾಜಾ ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಒಣ ಹಣ್ಣುಗಳನ್ನು ಸೇವಿಸಬಹುದು. ಇದಲ್ಲದೆ ನಿಮ್ಮ ರಕ್ತದೊತ್ತಡವನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಬೇಕು.
2. ವೈದ್ಯರ ಸಲಹೆ ಪಡೆಯಿರಿ
ಹೃದಯ ರೋಗಿಗಳು ನಿರಂತರವಾಗಿ ಹೃದ್ರೋಗ ತಜ್ಞರ ಸಲಹೆಯನ್ನು ತೆಗೆದುಕೊಳ್ಳುತ್ತಲೇ ಇರುತ್ತಾರೆ. ಆಸ್ಪತ್ರೆ ಅಥವಾ ಕ್ಲಿನಿಕ್ಗೆ ಹೋಗಲು ಸಾಧ್ಯವಾಗದಿದ್ದರೆ ಆನ್ಲೈನ್ ಸಮಾಲೋಚನೆ ಮೂಲಕವೂ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಹೆಚ್ಚಿನ ವೈದ್ಯರು ಈಗ ರೋಗಿಗಳ ಜೊತೆಗೆ ಆನ್ಲೈನ್ ಸಮಾಲೋಚನೆ ನೀಡುವತ್ತ ಗಮನ ಹರಿಸುತ್ತಿದ್ದಾರೆ. ಫೋನ್ ಅಥವಾ ವಿಡಿಯೋ ಕರೆ ಮೂಲಕ ರೋಗಿಯ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ವೈದ್ಯರು ಚಿಕಿತ್ಸೆ(Heart Health)ಯ ಬಗ್ಗೆ ಸಲಹೆ ಸೂಚನೆ ನೀಡುತ್ತಾರೆ.
ಇದನ್ನೂ ಓದಿ: Health Tips: ಮನೆಯಿಂದ ಹೊರಹೋಗುವಾಗ ಮೊಸರು ಮತ್ತು ಸಕ್ಕರೆಯನ್ನು ಏಕೆ ತಿನ್ನುತ್ತಾರೆ?
3. ಔಷಧಿಗಳನ್ನು ತೆಗೆದುಕೊಳ್ಳಲು ಮರೆಯದಿರಿ
ಏನೇ ಆಗಲಿ ವೈದ್ಯರನ್ನು ಸಂಪರ್ಕಿಸದೆ ನೀವು ಯಾವುದೇ ಔಷಧಿ ತೆಗೆದುಕೊಳ್ಳುವುದನ್ನು ನಿಲ್ಲಿಸಬಾರದು. ವಿಶೇಷವಾಗಿ ಅಧಿಕ ರಕ್ತದೊತ್ತಡಕ್ಕೆ ಔಷಧಿಗಳನ್ನು ತೆಗೆದುಕೊಳ್ಳಲು ಯಾವಾಗಲೂ ಮರೆಯದಿರಿ. ನಿಮ್ಮ ವೈದ್ಯರು ಶಿಫಾರಸು ಮಾಡಿದ ಔಷಧಿಗಳನ್ನು ಮಾತ್ರ ತೆಗೆದುಕೊಳ್ಳಿ. ನೀವು ಯಾವುದೇ ಹೃದ್ರೋಗದಿಂದ ಬಳಲುತ್ತಿದ್ದರೆ ನಿಯಮಿತವಾಗಿ ವೈದ್ಯರನ್ನು ಸಂಪರ್ಕಿಸಿ ಸಲಹೆ ಸೂಚನೆ ಪಡೆದುಕೊಳ್ಳಿರಿ. ಯುವಕರು ವರ್ಷಕ್ಕೊಮ್ಮೆ ತಮ್ಮ ಲಿಪಿಡ್ ಪ್ರೊಫೈಲ್ ಅನ್ನು ಪರೀಕ್ಷಿಸಬೇಕು ಮತ್ತು ಪ್ರತಿ ತಿಂಗಳು ರಕ್ತದೊತ್ತಡ ಮಟ್ಟ(High Blood Pressure)ವನ್ನು ಪರೀಕ್ಷಿಸಬೇಕು.
4. ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳಿರಿ
ನಿಮ್ಮ ದೇಹ ಮತ್ತು ದುಃಖವನ್ನು ನೀವಷ್ಟೇ ಹೆಚ್ಚು ಅರ್ಥಮಾಡಿಕೊಳ್ಳುತ್ತೀರಿ. ಆದ್ದರಿಂದ ಯಾವಾಗ ವೈದ್ಯರ ಸಹಾಯ ಪಡೆಯಬೇಕೆಂಬುದರ ಬಗ್ಗೆ ನೀವು ಚೆನ್ನಾಗಿ ಅರ್ಥಮಾಡಿಕೊಂಡಿರುತ್ತೀರಿ. ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಹೃದಯಾಘಾತವಾಗಿದ್ದರೆ ಅಥವಾ ನೀವು ಬಿಪಿ, ಕೊಲೆಸ್ಟ್ರಾಲ್, ಟ್ರೈಗ್ಲಿಸರೈಡ್ ಮತ್ತು ಸ್ಥೂಲಕಾಯತೆಯಿಂದ ಬಳಲುತ್ತಿದ್ದರೆ ನೀವು ವೈದ್ಯರ ಬಳಿಗೆ ಹೋಗಿ ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳಬೇಕು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.