Skin care: ಬೇಸಿಗೆಯಲ್ಲಿ ಉಂಟಾಗುವ ಒಣ ತ್ವಚೆಗೆ ಶಾಶ್ವತ ಪರಿಹಾರ ಬೇಕಾ..?

ಬೇಸಿಗೆಯಲ್ಲಿ ಪ್ರತಿಯೊಬ್ಬರಿಗೂ ಕಾಡುವ ಒಣ ತ್ವಚೆಯ ಸಮಸ್ಯೆಗೆ ಪವರ್ ಫುಲ್ ಮನೆಮದ್ದುಗಳು ಇಲ್ಲಿವೆ ನೋಡಿ.

Written by - PRATIBHA ANAND | Last Updated : Mar 20, 2022, 05:17 PM IST
  • ಬೇಸಿಗೆ ಕಾಲದಲ್ಲಿ ಕಾಡುವ ಒಣ ತ್ವಚೆಯ ಸಮಸ್ಯೆಗೆ ಇಲ್ಲಿವೆ ಮನೆಮದ್ದುಗಳು
  • ಕಡಲೆ ಹಿಟ್ಟು ಮೊಡವೆಗಳಿಗೆ ಚಿಕಿತ್ಸೆ ನೀಡುವ ಕೆಲವು ಗುಣಲಕ್ಷಣಗಳನ್ನು ಹೊಂದಿದೆ
  • ಮನೆಯ ಅಂಗಳದಲ್ಲಿ ಬೆಳೆಸುವ ಲೋಳೆಸರ ಒಣ ತ್ವಚೆಗೆ ಒಳ್ಳೆಯ ಮನೆಮದ್ದಾಗಿದೆ
Skin care: ಬೇಸಿಗೆಯಲ್ಲಿ ಉಂಟಾಗುವ ಒಣ ತ್ವಚೆಗೆ ಶಾಶ್ವತ ಪರಿಹಾರ ಬೇಕಾ..? title=
ಒಣ ತ್ವಚೆಯ ಸಮಸ್ಯೆಗೆ ಇಲ್ಲಿವೆ ಮನೆಮದ್ದುಗಳು

ನವದೆಹಲಿ: ಬೇಸಿಗೆ ಕಾಲ ಬಂತು ಅಂದ್ರೆ ಸಾಕು ಒಂದಲ್ಲ ಒಂದು ಸಮಸ್ಯೆ(​Summer Skin Care) ನಮ್ಮನ್ನು ಕಾಡುತ್ತಲಿರುತ್ತವೆ. ಕಡುಬೇಸಿಗೆಯಲ್ಲಿ ಚರ್ಮದ ಕಾಳಜಿ ಬಹಳ ಮುಖ್ಯವಾಗಿರುತ್ತದೆ. ಏಕೆಂದರೆ ಕೆಲವರಿಗೆ ಬೇಸಿಗೆ ಕಾಲದಲ್ಲಿ ಒಣ ತ್ವಚೆಯ ಸಮಸ್ಯೆ ಹೆಚ್ಚಾಗಿ ಕಾಡಲಾರಂಭಿಸುತ್ತದೆ. ಇದಕ್ಕೆ ಕಾರಣ ನಮ್ಮ ಬದಲಾದ ಪರಿಸರ, ಧೂಳು, ನೈರ್ಮಲ್ಯ, ಸೂರ್ಯನ ಕಿರಣ, ಬಿಸಿಲಿನ ಶಾಖ, ಹವಾಮಾನ ವೈಪರಿತ್ಯ, ಮಾರುಕಟ್ಟೆಯಲ್ಲಿ ಸಿಗುವ ಸಾಬೂನು ಹಾಗೂ ಸೌಂದರ್ಯ ವರ್ಧಕ ಸೇರಿದಂತೆ ಇನ್ನೂ ಮುಂತಾದವು. ಹಾಗಾದ್ರೆ ಇದಕ್ಕೆ ಮನೆ ಮದ್ದುಗಳನ್ನು ಬಳಸಿ ಹೇಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ…

ಒಣ ತ್ವಚೆಗೆ ಲೋಳೆಸರ ಉತ್ತಮ ಮನೆಮದ್ದು

ನಮ್ಮೆಲ್ಲರ ಮನೆಯ ಅಂಗಳದಲ್ಲಿ ಬೆಳೆಸುವ ಲೋಳೆಸರ ಒಣ ತ್ವಚೆ(Dry Skin)ಗೆ ಒಳ್ಳೆಯ ಮನೆಮದ್ದು ಎಂದರೆ ತಪ್ಪಾಗಲ್ಲ. ಹೌದು, ಅಲೋವೆರಾದಲ್ಲಿರುವ ವಿಟಮಿನ್ C ಮತ್ತು E, ಬೀಟಾ-ಕ್ಯಾರೋಟಿನ್, ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ಒಣ ತ್ವಚೆಗೆ ಪರಿಣಮಕಾರಿ ಮತ್ತು ಉರಿಯೂತದ ವಿರೋಧಿ ಗುಣಗಳನ್ನು ಕೂಡ ಹೊಂದಿದೆ. ಒಣ ಚರ್ಮಕ್ಕೆ ಚಿಕಿತ್ಸೆ ನೀಡಲು ಇದು ಸಹಾಯ ಮಾಡುತ್ತದೆ. ಅಲೋವೆರಾ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ. ಇನ್ನು ಈ ಅಲೋವೆರಾ ಜೆಲ್‌(Aloe Vera Gel) ಅನ್ನು ಪ್ರತಿದಿನ ರಾತ್ರಿ ಮಲಗುವ ಮುನ್ನ ನಿಮ್ಮ ತ್ವಚೆಗೆ ಹಚ್ಚಬೇಕು. ಇದು ನಿಮ್ಮ ಒರಟು ತ್ವಚೆಗೆ ತೇವಾಂಶ ಒದಗಿಸಿ ಚರ್ಮಕ್ಕೆ ಬೇಕಾಗಿರುವ ಅಂಶವನ್ನು ಒದಗಿಸುತ್ತದೆ. ಇದರಿಂದ ಒಣ ತ್ವಚೆಗೆ ಪರಿಹಾರ ಕಂಡುಕೊಳ್ಳಬಹುದು. ಇದಿಷ್ಟೇ ಅಲ್ಲದೆ ಸನ್ಬರ್ನ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ವಯಸ್ಸಾದಂತೆ ಕಾಣುವುದನ್ನು ಕೂಡ ತಡೆಯುತ್ತದೆ. ಮೊಡವೆಗಳ ವಿರುದ್ಧ ಹೋರಾಡಿ ತ್ವಚೆಯ ಮೇಲಿರುವ ರಂಧ್ರಗಳನ್ನು ಮುಚ್ಚಿ, ಚರ್ಮವನ್ನು ಮೃದುಗೊಳಿಸುತ್ತದೆ.

ಇದನ್ನೂ ಓದಿ: Liver Health : ನಿಮ್ಮ ಕಿಡ್ನಿ ಆರೋಗ್ಯಕ್ಕೆ ತಪ್ಪದೆ ಸೇವಿಸಿ ಈ ಆಹಾರಗಳನ್ನು! 

ಅಲೋವೆರಾವನ್ನು ಬಳಸುವುದು ಹೇಗೆ..?

ಕತ್ತರಿಸಿದ ಅಲೋವೆರಾ(Aloe Vera) ಸಿಪ್ಪೆಯನ್ನು ತೆಗೆದು ಅದರಲ್ಲಿ ಬರುವ ಹಳದಿ ಲೋಳೆಯನ್ನು ಚೆನ್ನಾಗಿ ತೊಳೆದು ನಂತರ ಒಳಗಿರುವ ಜೆಲ್ಅನ್ನು ಪೇಸ್ಟ್‌ ಮಾಡಿಕೊಂಡು ಬಳಸಬೇಕು. ಇನ್ನೂ ಬಹಳ ಹಳೆಯ ಅಂದರೆ 4ರಿಂದ 5 ವರ್ಷ ಹಳೆಯ ಗಿಡವಾದರೆ ತುಂಬಾ ಒಳ್ಳೆಯದು.

ತ್ವಚೆಗೆ ಮ್ಯಾಜಿಕ್ ನೀಡುವ ಕಡಲೆಹಿಟ್ಟು

ಕಡಲೆ ಹಿಟ್ಟು(Gram flour) ಮೊಡವೆಗಳಿಗೆ ಚಿಕಿತ್ಸೆ ನೀಡುವ ಕೆಲವು ಗುಣಲಕ್ಷಣಗಳನ್ನು ಹೊಂದಿದೆ. ಮೊಡವೆಗಳಿಂದ ಹೊರಹೊಮ್ಮಲು ಕಾರಣವಾಗುವ ಸೋಂಕುಗಳ ವಿರುದ್ಧ ಹೋರಾಡಲು ಸಹ ಸಹಕರಿಸುತ್ತದೆ. ಕಡಲೆ ಹಿಟ್ಟು(Skin Care Routine) ಎಣ್ಣೆಯುಕ್ತ ಚರ್ಮಕ್ಕೆ ಉತ್ತಮವಾದ ಕ್ಲೆನ್ಸರ್ ಆಗಿದೆ. ಇದು ಚರ್ಮದಿಂದ ಹೆಚ್ಚುವರಿ ಎಣ್ಣೆಯನ್ನು ಹೀರಿಕೊಳ್ಳಲು ಮತ್ತು ಕಲ್ಮಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಆದರೆ ಇದು ಚರ್ಮವನ್ನು ಒಣಗಿಸುವುದಿಲ್ಲ. ಇದು ತೇವಾಂಶವನ್ನು ನಿಯಂತ್ರಿಸುವ ಮೂಲಕ ಚರ್ಮವನ್ನು ಮೃದುವಾಗಿರಿಸುತ್ತದೆ. ಸ್ಕ್ರಬ್ ಚೆನ್ನಾಗಿ ಕೆಲಸ ಮಾಡುತ್ತದೆ ಮತ್ತು ನಿಮ್ಮ ದೇಹದಾದ್ಯಂತ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುತ್ತದೆ. ಇದು ಹೆಚ್ಚುವರಿ ಮೇದೋಗ್ರಂಥಿಗಳ ಸ್ರಾವ ಮತ್ತು ಕೊಳೆಯನ್ನು ಸಹ ತೆಗೆದುಹಾಕುತ್ತದೆ.

ಇದನ್ನೂ ಓದಿ: ದಿನಕ್ಕೊಂದು ಮೊಟ್ಟೆ ತಿಂದು ಫಿಟ್‌ ‍& ಫೈನ್‌ ಆಗಿರಿ..!

ಕಡಲೆ ಹಿಟ್ಟಿನ ಫೇಸ್‌ ಪ್ಯಾಕ್‌ ಹೇಗೆ ಬಳಸಬೇಕು..?

ವಾರದಲ್ಲಿ 2ರಿಂದ 3 ಬಾರಿ ಕಡಲೆಹಿಟ್ಟಿನ ಜೊತೆಗೆ ಹಸಿ ಹಾಲು, ಚಿಟಿಕೆ ಅರಿಶಿಣ ಮಿಶ್ರಣ ಮಾಡಿ ಫೇಸ್‌ ಪ್ಯಾಕ್‌ ತಯಾರಿಸಿ ತಣ್ಣೀರಿನಿಂದ ಮುಖ ತೊಳೆಯುವುದರಿಂದ ನಿಮ್ಮ ಒಣ ತ್ವಚೆಗೆ(Dry Skin Care) ಪರಿಹಾರ ಸಿಗುತ್ತದೆ.

ಇನ್ನೂ ಹಾಲಿನ ಕೆನೆಯನ್ನು ಪ್ರತಿದಿನ ರಾತ್ರಿ ಮಲಗುವ ಮುನ್ನ ಮುಖಕ್ಕೆ ಹಚ್ಚಿ 5 ನಿಮಿಷ ಒಳ್ಳೆಯ ಮಸಾಜ್‌ ಮಾಡಿರಿ. ಬೆಳಗ್ಗೆ ಎದ್ದ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆಯಿರಿ. ಇದರಿಂದ ನಿಮ್ಮ ಒಣ ತ್ವಚೆಗೆ(Beautiful Healthy Skin) ತೇವಾಂಶ ಒದಗಿಸಿ, ಚರ್ಮ ಒರಟಾಗುವುದನ್ನು ತಪ್ಪಿಸಿ, ತ್ವಚೆಯ ಮೇಲಿನ ಉರುಪನ್ನು ಇಲ್ಲವಾಗಿಸುತ್ತದೆ. ಹೀಗೆ ಒಂದಷ್ಟು ತಿಂಗಳುಗಳ ಕಾಲ ಮಾಡುವುದರಿಂದ ನಿಮ್ಮ ಒಣ ತ್ವಚೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು. 

ಪ್ರತಿಭಾ, ಜೀ ನ್ಯೂಸ್‌ ಕನ್ನಡ ಡಿಜಿಟಲ್‌

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News