Tips To Remove Holi Colour: ಬಟ್ಟೆಯಿಂದ ಹೋಳಿ ಬಣ್ಣ ತೆಗೆಯಲು ಇಲ್ಲಿದೆ ಟಿಪ್ಸ್

Tips To Remove Holi Colour: ಬಹುತೇಕ ಜನರಿಗೆ ಪ್ರಿಯವಾದ ಹಬ್ಬ ಎಂದರೆ ಹೋಳಿ. ಆದರೆ ಹಲವರಿಗೆ ಹೋಳಿ ಸಂದರ್ಭದಲ್ಲಿ ಬಟ್ಟೆಯ ಮೇಲಾದ ಬಣ್ಣಗಳನ್ನು ತೆಗೆಯುವುದು ಹೇಗಪ್ಪಾ ಎನ್ನುವ ಚಿಂತೆ. 

Written by - Yashaswini V | Last Updated : Mar 26, 2021, 01:40 PM IST
  • ಹೆಚ್ಚಿನ ಜನರು ಹೋಳಿ ಆಡುವಾಗ ಹಳೆಯ ಬಟ್ಟೆಗಳನ್ನು ಧರಿಸುತ್ತಾರೆ
  • ಆದರೆ ಕೆಲವರು ಈ ಬಗ್ಗೆ ಯೋಚಿಸಿರುವುದಿಲ್ಲ
  • ಬಳಿಕ ತಮ್ಮ ಬಟ್ಟೆಯಲ್ಲಿ ಆಗಿರುವ ಈ ಬಣ್ಣಗಳನ್ನು ತೆಗೆಯುವುದು ಹೇಗೆ ಎಂದು ಚಿಂತಿಸುತ್ತಾರೆ
Tips To Remove Holi Colour: ಬಟ್ಟೆಯಿಂದ ಹೋಳಿ ಬಣ್ಣ ತೆಗೆಯಲು ಇಲ್ಲಿದೆ ಟಿಪ್ಸ್ title=
Tips To Remove Holi Colour

Tips To Remove Holi Colour: ಹೋಳಿ ಹಬ್ಬಕ್ಕೆ ಕೆಲವೇ ದಿನಗಳು ಉಳಿದಿವೆ. ಎಲ್ಲೆಡೆ ಹೋಳಿ ಸಂಭ್ರಮಾಚರಣೆಗೆ ಸಿದ್ಧತೆಗಳು ಆರಂಭವಾಗಿವೆ. ಒಂದೆಡೆ ಮಾರುಕಟ್ಟೆಯಲ್ಲಿ ರಂಗಿನ ವಾತಾವರಣ ಸೃಷ್ಟಿಯಾಗಿದ್ದರೆ, ಇನ್ನೊಂದೆಡೆ ಜನರ ಸಿದ್ಧತೆಗಳು ಭರದಿಂದ ಸಾಗಿದೆ.  ಬಣ್ಣಗಳ ಈ ಪವಿತ್ರ ಹಬ್ಬದಲ್ಲಿ ಎಲ್ಲರೂ ಒಬ್ಬರಿಗೊಬ್ಬರು ಸಿಹಿ ಹಂಚಿ ಬಣ್ಣಗಳನ್ನು ಹಚ್ಚುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ. 

ಹೆಚ್ಚಿನ ಜನರು ಹೋಳಿ (Holi) ಆಡುವಾಗ ಹಳೆಯ ಬಟ್ಟೆಗಳನ್ನು ಧರಿಸುತ್ತಾರೆ ಮತ್ತು ನಂತರ ಬಣ್ಣದ ಬಟ್ಟೆಗಳನ್ನು ಎಸೆಯುತ್ತಾರೆ. ಆದರೆ ಕೆಲವರು ಈ ಬಗ್ಗೆ ಯೋಚಿಸಿರುವುದಿಲ್ಲ. ಬಳಿಕ ತಮ್ಮ ಬಟ್ಟೆಯಲ್ಲಿ ಆಗಿರುವ ಈ ಬಣ್ಣಗಳನ್ನು ತೆಗೆಯುವುದು ಹೇಗೆ ಎಂದು ಚಿಂತಿಸುತ್ತಾರೆ. ಆದರೆ ಈ ಬಗ್ಗೆ ನೀವು ಚಿಂತಿಸುವ ಅಗತ್ಯವಿಲ್ಲ.  ರಂಗಿನ ಈ ಉತ್ಸವದಲ್ಲಿ ನೀವು ನಿಮಗಿಷ್ಟವಾಗುವ ಬಟ್ಟೆ ಧರಿಸಬಹುದು. ಏಕೆಂದರೆ ಇಂದು ನಾವು ನಿಮಗೆ ಬಟ್ಟೆಗಳ ಮೇಲಾದ ಹೋಳಿ ಬಣ್ಣವನ್ನು ತೆಗೆಯಲು ಸುಲಭ ಟಿಪ್ಸ್ ತಿಳಿಸಲಿದ್ದೇವೆ. 

ವೆನೆಗರ್- ಬಣ್ಣದ ಬಟ್ಟೆಗಳನ್ನು ಸ್ವಚ್ಛಗೊಳಿಸಲು ಬಿಳಿ ವಿನೆಗರ್ ತುಂಬಾ ಪ್ರಯೋಜನಕಾರಿ. ಇದಕ್ಕಾಗಿ ನೀವು ಬಟ್ಟೆ ಒಗೆಯುವ ವೇಳೆ ಹೋಳಿ ಬಣ್ಣ ಇರುವ ಜಾಗದಲ್ಲಿ ಒಂದು ಕಪ್ ವಿನೆಗರ್ ಸುರಿಯಿರಿ. ನೆನಪಿಡಿ: ಈ ಟ್ರಿಕ್ ಹತ್ತಿ ಬಟ್ಟೆಗಳಿಗೆ ಮಾತ್ರ ಅನ್ವಯಿಸುತ್ತದೆ. 

ಇದನ್ನೂ ಓದಿ - Holi 2021 Skin Care Tips: ಈ ರೀತಿ ಬಣ್ಣಗಳಿಂದ ನಿಮ್ಮ ಚರ್ಮವನ್ನು ರಕ್ಷಿಸಿ

ಅಡಿಗೆ ಸೋಡಾ - ಬಟ್ಟೆಗಳಿಂದ ಬಣ್ಣವನ್ನು ತೆಗೆದುಹಾಕಲು ಅಡಿಗೆ ಸೋಡಾ ಕೂಡ ಸಹಕಾರಿಯಾಗಿದೆ. ಬ್ಲೀಚ್ನೊಂದಿಗೆ ಅಡುಗೆ ಸೋಡಾ ಹಾಕುವಿದರಿಂದ ಅದು ಇನ್ನೂ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ. ಆದರೆ ಎರಡನ್ನೂ ಅತಿಯಾಗಿ ಬಳಸಿದರೆ ಬಟ್ಟೆ ಹಾಳಾಗುವ ಸಾಧ್ಯತೆ ಇರುತ್ತದೆ.

ಪಾತ್ರೆ ತೊಳೆಯುವ ಸಾಬೂನು - ಪಾತ್ರೆ ತೊಳೆಯುವ ಸೋಪ್ ಬಳಸಿ ಸಹ ನೀವು ಬಟ್ಟೆಗಳ ಮೇಲಿನ ಬಣ್ಣದ ಗುರುತುಗಳನ್ನು ಸಹ ತೆಗೆದುಹಾಕಬಹುದು. ಭಕ್ಷ್ಯಗಳನ್ನು ತೊಳೆಯಲು ನೀವು ಡಿಶ್ವಾಶ್ ಸರ್ಫ್ ಅನ್ನು ಬಳಸಿದರೆ, ನೀವು ಅದನ್ನು ಸಹ ಬಳಸಬಹುದು.

ನಿಂಬೆ ರಸ- ಬಟ್ಟೆಗಳಿಂದ ಬಣ್ಣವನ್ನು ತೆಗೆದುಹಾಕಲು ನೀವು ಬಣ್ಣದ ಗುರುತಿನ ಮೇಲೆ ಸ್ವಲ್ಪ ನಿಂಬೆ (Lemon) ರಸವನ್ನು ಹಚ್ಚಿ ಅದನ್ನು ಸ್ವಲ್ಪ ಸಮಯದವರೆಗೆ ನೆನೆಯಲು ಬಿಡಿ. ನಂತರ ಅವುಗಳನ್ನು ಸೋಪಿನಿಂದ ಸ್ವಚ್ಛಗೊಳಿಸಿ. 

ಇದನ್ನೂ ಓದಿ - Holi precautions: ಗರ್ಭಿಣಿ ಮಹಿಳೆಯರೇ ಹೋಳಿ ಆಡುವಾಗ ಇರಲಿ ಎಚ್ಚರ

ಮೊಸರು- ಬಟ್ಟೆಗಳಿಂದ ಬಣ್ಣವನ್ನು ತೆಗೆದುಹಾಕಲು ನೀವು ಮೊಸರನ್ನು ಸಹ ಬಳಸಬಹುದು. ಇದಕ್ಕಾಗಿ ಬಟ್ಟೆಗಳನ್ನು ಮೊಸರಿನಲ್ಲಿ ಸ್ವಲ್ಪ ಹೊತ್ತು ನೆನೆಸಿಡಿ. ಇದು ಬಟ್ಟೆಯ ಮೇಲಿನ  ಕಲೆಗಳನ್ನು ನಿವಾರಿಸಲು ಸಹಾಯಕವಾಗಿದೆ ಎಂದು ಹೇಳಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News