ಮನೆಯಲ್ಲೇ ತಯಾರಿಸಿ ಫೇಸ್‌ ಪ್ಯಾಕ್‌... ಮುಖದ ಸುಕ್ಕುಗಳಿಗೆ ಹೇಳಿ ಬೈ ಬೈ

ಕುತ್ತಿಗೆಯ ಮೇಲಿನ ಚರ್ಮವು ಮುಖದಂತೆಯೇ ಮೃದು ಮತ್ತು ಸೂಕ್ಷ್ಮವಾಗಿರುತ್ತದೆ. ಆದ್ದರಿಂದ ಅದರ ಬಗ್ಗೆಯೂ ವಿಶೇಷ ಕಾಳಜಿ ವಹಿಸಬೇಕು. ಕುತ್ತಿಗೆಯ ಮೇಲಿನ ಸುಕ್ಕುಗಳಿಗೆ ಹಲವಾರು ಮನೆಮದ್ದುಗಳಿವೆ. ಆದರೆ ಅವು ನಿರೀಕ್ಷಿತ ಫಲಿತಾಂಶ ನೀಡುತ್ತದೆಯೋ ಇಲ್ಲವೋ ಎಂಬುದೇ ಪ್ರಶ್ನೆ. ಆದರೆ ಇಂದು ನಾವು ಇಲ್ಲಿ ಕೆಲ ಸಲಹೆಗಳನ್ನು ನೀಡುತ್ತಿದ್ದೇವೆ. ಅವುಗಳು ನಿಮ್ಮ ಕುತ್ತಿಗೆಯ ಬಳಿಯಿರುವ ಸುಕ್ಕುಗಳನ್ನು ಕಡಿಮೆಗೊಳಿಸಲು ಸಹಕಾರಿಯಾಗಬಹುದು.   

Written by - Bhavishya Shetty | Last Updated : May 28, 2022, 02:09 PM IST
  • ಮುಖ ಮತ್ತು ಕುತ್ತಿಗೆಯಲ್ಲಿ ಕಂಡುಬರುವ ಸುಕ್ಕುಗಳ ಸಮಸ್ಯೆ
  • ಚರ್ಮದ ಸುಕ್ಕುಗಳಿಗೆ ಇಲ್ಲಿದೆ ಮನೆಮದ್ದು
  • ಇದು ಮುಖದ ಅಂದದ ಜೊತೆಗೆ ಆರೋಗ್ಯವನ್ನು ವೃದ್ಧಿಸುತ್ತದೆ
ಮನೆಯಲ್ಲೇ ತಯಾರಿಸಿ ಫೇಸ್‌ ಪ್ಯಾಕ್‌... ಮುಖದ ಸುಕ್ಕುಗಳಿಗೆ ಹೇಳಿ ಬೈ ಬೈ title=
Homemade Packs

ಬದಲಾಗುತ್ತಿರುವ ಜೀವನಶೈಲಿಯಿಂದ ಅನೇಕ ಜನರು ಚರ್ಮದ ಸುಕ್ಕುಗಳ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವೃದ್ಧಾಪ್ಯದಲ್ಲಿ ಸುಕ್ಕುಗಳು ಸಹಜ. ಆದರೆ ಇತ್ತೀಚಿನ ದಿನಗಳಲ್ಲಿ ಯುವಕರು ಹದಿಹರೆಯದಲ್ಲಿಯೂ ಸುಕ್ಕುಗಳ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹೀಗಾಗಿ ತ್ವಚೆಯನ್ನು ಸರಿಯಾಗಿ ಪೋಷಿಸಿದರೆ ಚೆನ್ನಾಗಿ ಉಳಿದುಕೊಳ್ಳುತ್ತದೆ ಎಂಬುದು ತಜ್ಞರ ಮಾತು. ಈ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಕೆಲ ಫೇಸ್‌ಪ್ಯಾಕ್‌ಗಳನ್ನು ತಯಾರಿಸಿಕೊಳ್ಳಿ. ಅದು ನಿಮ್ಮ ಮುಖದ ಅಂದದ ಜೊತೆಗೆ ಆರೋಗ್ಯವನ್ನೂ ಕಾಪಾಡಬಹುದು.  

ಕುತ್ತಿಗೆಯ ಮೇಲಿನ ಚರ್ಮವು ಮುಖದಂತೆಯೇ ಮೃದು ಮತ್ತು ಸೂಕ್ಷ್ಮವಾಗಿರುತ್ತದೆ. ಆದ್ದರಿಂದ ಅದರ ಬಗ್ಗೆಯೂ ವಿಶೇಷ ಕಾಳಜಿ ವಹಿಸಬೇಕು. ಕುತ್ತಿಗೆಯ ಮೇಲಿನ ಸುಕ್ಕುಗಳಿಗೆ ಹಲವಾರು ಮನೆಮದ್ದುಗಳಿವೆ. ಆದರೆ ಅವು ನಿರೀಕ್ಷಿತ ಫಲಿತಾಂಶ ನೀಡುತ್ತದೆಯೋ ಇಲ್ಲವೋ ಎಂಬುದೇ ಪ್ರಶ್ನೆ. ಆದರೆ ಇಂದು ನಾವು ಇಲ್ಲಿ ಕೆಲ ಸಲಹೆಗಳನ್ನು ನೀಡುತ್ತಿದ್ದೇವೆ. ಅವುಗಳು ನಿಮ್ಮ ಕುತ್ತಿಗೆಯ ಬಳಿಯಿರುವ ಸುಕ್ಕುಗಳನ್ನು ಕಡಿಮೆಗೊಳಿಸಲು ಸಹಕಾರಿಯಾಗಬಹುದು. 

ಇದನ್ನು ಓದಿ: ಜೂನ್ 27 ರವರೆಗೆ ಅತ್ಯಂತ ಎಚ್ಚರದಿಂದ ಇರಬೇಕು ಈ ನಾಲ್ಕು ರಾಶಿಯವರು , ಮಂಗಳ ನೀಡಲಿದ್ದಾನೆ ಭಾರೀ ಕಷ್ಟ

ಕೃಷ್ಣ ಜೀರಿಗೆ /ಕಪ್ಪು ಜೀರಿಗೆ ತೈಲ:
ಕೃಷ್ಣ ಜೀರಿಗೆ ಅಥವಾ ಕಪ್ಪು ಜೀರಿಗೆ ತೈಲವು ಚರ್ಮವನ್ನು ಹಾನಿಯಿಂದ ರಕ್ಷಿಸುತ್ತದೆ. ಈ ಎಣ್ಣೆಯನ್ನು ಕುತ್ತಿಗೆಗೆ ಹಚ್ಚಿ 15 ನಿಮಿಷಗಳ ಕಾಲ ಮಸಾಜ್ ಮಾಡಬೇಕು. ಹೀಗೆ ಮಾಡಿದರೆ ಕುತ್ತಿಗೆಯ ಮೇಲೆ ಕಂಡುಬರುವ ಸುಕ್ಕುಗಳನ್ನು ನಿವಾರಿಸುತ್ತದೆ. 

ಮೊಟ್ಟೆಯ ಬಿಳಿ ಭಾಗ:
ಕುತ್ತಿಗೆಯ ಮೇಲಿನ ಸುಕ್ಕುಗಳನ್ನು ಕಡಿಮೆ ಮಾಡಲು ಮೊಟ್ಟೆಯ ಬಿಳಿಭಾಗವನ್ನು ಬಳಸಬಹುದು. ಇದರಲ್ಲಿ ಪ್ರೋಟೀನ್ ಮತ್ತು ಅಲ್ಬುಮಿನ್ ಸಮೃದ್ಧವಾಗಿದೆ. ಈ ಸಲಹೆ ಸ್ಕಿನ್ ಟೋನ್ ಬದಲಾಯಿಸಲು ಸಹ ಸಹಾಯ ಮಾಡುತ್ತದೆ. ಒಂದು ಬಟ್ಟಲಿನಲ್ಲಿ ಮೊಟ್ಟೆಯ ಬಿಳಿಭಾಗವನ್ನು ತೆಗೆದುಕೊಂಡು 2 ಚಮಚ ಜೇನುತುಪ್ಪ, 2 ಚಮಚ ಗ್ಲಿಸರಿನ್, 2 ಚಮಚ ರೋಸ್ ವಾಟರ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ದಪ್ಪ ಪೇಸ್ಟ್ ಮಾಡಿಕೊಳ್ಳಿ. ಅದನ್ನು ಕುತ್ತಿಗೆಯ ಮೇಲೆ ಲೇಪಿಸಿ. ಬಳಿಕ 20 ನಿಮಿಷಗಳ ನಂತರ ಚೆನ್ನಾಗಿ ನೀರಿನಿಂದ ತೊಳೆಯಿರಿ.

ಆಪಲ್ ಸೈಡರ್ ವಿನೆಗರ್:
ಆಪಲ್ ಸೈಡರ್ ವಿನೆಗರ್ ಸುಕ್ಕುಗಳನ್ನು ತೆಗೆಯಲು ಸಹಕಾರಿಯಾಗಿದೆ. ಆಪಲ್ ಸೈಡರ್ ವಿನೆಗರ್ ಅಲ್ಫಾ ಹೈಡ್ರಾಕ್ಸಿಲ್ ಆಮ್ಲವನ್ನು ಹೊಂದಿದ್ದು, ಇದು ಡೆಡ್‌ಸ್ಕಿನ್‌ಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ಬೇಳೆ ಕಾಳುಗಳ ಬಳಕೆ:
ಬೇಳೆಕಾಳುಗಳ ಬಳಕೆಯು ಚರ್ಮದ ಮೇಲೆ ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇವು ತ್ವಚೆಯನ್ನು ಅಂದವಾಗಿ ಕಾಣುವಂತೆ ಮಾಡುತ್ತದೆ. ಅರ್ಧ ಕಪ್ ಉದ್ದಿನ ಬೇಳೆಯನ್ನು ರಾತ್ರಿ ನೀರಿನಲ್ಲಿ ನೆನೆಸಿ, ಬೆಳಗ್ಗೆ ಸೋಸಿ ಮಿಕ್ಸರ್ ಗ್ರೈಂಡರ್‌ನಲ್ಲಿ ರುಬ್ಬಿಕೊಳ್ಳಿ. ಈಗ ಈ ಪೇಸ್ಟ್‌ಗೆ ಟೊಮ್ಯಾಟೋ ರಸವನ್ನು ಸೇರಿಸಿ ಬಳಿಕ, ಕುತ್ತಿಗೆಗೆ ಹಚ್ಚಿಕೊಳ್ಳಿ.

ಇದನ್ನು ಓದಿ: White Hair Problem: ನೈಸರ್ಗಿಕವಾಗಿ ಬಿಳಿ ಕೂದಲನ್ನು ಕಪ್ಪಾಗಿಸಲು ಸರಳ ಮನೆಮದ್ದು

ಅಕ್ಕಿ ಹಿಟ್ಟಿನ ಪ್ಯಾಕ್:
ಅಕ್ಕಿ ಹಿಟ್ಟನ್ನು ಮೊದಲು ರೋಸ್ ವಾಟರ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಅದನ್ನು ಕುತ್ತಿಗೆಯ ಬಳಿ ಮಸಾಜ್ ಮಾಡಿ. 10 ನಿಮಿಷಗಳ ನಂತರ ನೀರಿನಿಂದ ತೊಳೆಯಿರಿ. 

(ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಸ್ವೀಕರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಲು ಮರೆಯದಿರಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ)

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News