ತಿರುಪತಿಯಲ್ಲಿ ಕೂದಲು ದಾನ ಮಾಡುವ ಸಂಪ್ರದಾಯ ಹೇಗೆ ಆರಂಭವಾಯಿತು?: ಕುತೂಹಲಕಾರಿ ಕಥೆ ತಿಳಿಯಿರಿ

ತಿರುಪತಿಯಲ್ಲಿ ಕೂದಲು ದಾನ ಮಾಡುವ ಮೂಲಕ ಲಕ್ಷ್ಮಿ ದೇವಿಯ ಆಶೀರ್ವಾದ ಮತ್ತು ಇಷ್ಟಾರ್ಥಗಳನ್ನು ಪೂರೈಸುವುದರ ಹಿಂದೆ ಪೌರಾಣಿಕ ಕಾರಣ ಅಡಗಿದೆ.

Written by - Puttaraj K Alur | Last Updated : Nov 23, 2021, 11:12 AM IST
  • ತಿರುಪತಿಯಲ್ಲಿ ಕೂದಲು ದಾನ ಮಾಡುವ ಸಂಪ್ರದಾಯ ಹೇಗೆ ಆರಂಭವಾಯಿತು?
  • ಕೂದಲು ದಾನ ಮಾಡಿದರೆ ದೇವರು10 ಪಟ್ಟು ಫಲ ಹಿಂತಿರುಗಿಸುತ್ತಾನೆಂಬ ನಂಬಿಕೆಯಿದೆ
  • ಪುರುಷರು ಮಾತ್ರವಲ್ಲದೆ ಮಹಿಳೆಯರು ಕೂಡ ತಮ್ಮ ಕೂದಲನ್ನು ದಾನ ಮಾಡುತ್ತಾರೆ
ತಿರುಪತಿಯಲ್ಲಿ ಕೂದಲು ದಾನ ಮಾಡುವ ಸಂಪ್ರದಾಯ ಹೇಗೆ ಆರಂಭವಾಯಿತು?: ಕುತೂಹಲಕಾರಿ ಕಥೆ ತಿಳಿಯಿರಿ title=
ತಿರುಪತಿಯಲ್ಲಿ ಕೂದಲು ದಾನ ಏಕೆ ಮಾಡುತ್ತಾರೆ?

ನವದೆಹಲಿ: ದೇಶದ ಅತ್ಯಂತ ಶ್ರೀಮಂತ ದೇಗುಲವಾದ ತಿರುಪತಿ ಬಾಲಾಜಿ(Tirupati Balaji)ಯೊಂದಿಗೆ ಹಲವು ರಹಸ್ಯಗಳು ಸೇರಿಕೊಂಡಿವೆ. ಈ ದೇವಸ್ಥಾನಕ್ಕೆ ದೇಶ ವಿದೇಶಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಆದರೆ ಕೊರೊನಾದಿಂದಾಗಿ ಇಲ್ಲಿ ಸಾಕಷ್ಟು ನಿರ್ಬಂಧಗಳನ್ನು ವಿಧಿಸಲಾಗಿದೆ. ಈ ದೇವಾಲಯದ ವಿಶೇಷವೆಂದರೆ ಭಕ್ತರು ತಮ್ಮ ತಲೆಯ ಕೂದಲನ್ನು ದಾನ(Hair Donation) ಮಾಡುವುದು. ಪ್ರಪಂಚದ ಬೇರೆ ಯಾವುದೇ ದೇವಾಲಯಗಳಲ್ಲಿ ಇದು ಕಂಡುಬರುವುದಿಲ್ಲ. ತಿರುಪತಿ ದೇವಸ್ಥಾನದಲ್ಲಿ ಬಾಲಾಜಿಗೆ ಯಾವುದೇ ಒಬ್ಬ ವ್ಯಕ್ತಿಯು ತನ್ನ ಕೂದಲನ್ನು ದಾನ ಮಾಡಿದರೆ ದೇವರು ಅಂತವರಿಗೆ 10 ಪಟ್ಟು ಫಲ ಹಿಂತಿರುಗಿಸುತ್ತಾನೆ ಎಂದು ನಂಬಲಾಗಿದೆ. ಇಲ್ಲಿ ಕೂದಲು ದಾನ ಮಾಡುವವರ ಮೇಲೆ ತಾಯಿ ಲಕ್ಷ್ಮಿ ವಿಶೇಷ ಅನುಗ್ರಹ ನೀಡುತ್ತಾಳೆಂಬ ನಂಬಿಕೆ ಇದೆ.  

ಮಹಿಳೆಯರು ಕೂಡ ಕೂದಲು ದಾನ ಮಾಡುತ್ತಾರೆ

ಈ ವೆಂಕಟೇಶ್ವರನ ದೇವಸ್ಥಾನ(Lord Venkteshwar)ದಲ್ಲಿ ಪುರುಷರು ಮಾತ್ರವಲ್ಲದೆ ಮಹಿಳೆಯರು ಕೂಡ ತಮ್ಮ ಕೂದಲನ್ನು ದಾನ ಮಾಡುತ್ತಾರೆ. ಹಣಕಾಸಿನ ಪರಿಸ್ಥಿತಿಯಲ್ಲದೆ ಮಹಿಳೆಯರು ಅನೇಕ ಬೇಡಿಕೆಗಳನ್ನು ಪೂರೈಸುವಂತೆ ವ್ರತಗಳನ್ನು ಮಾಡುತ್ತಾರೆ. ಈ ವ್ರತ ಮುಗಿದ ಮೇಲೆ ತಮ್ಮ ಉದ್ದನೆಯ ಕೂದಲನ್ನು ದಾನ ಮಾಡುತ್ತಾರೆ. ತಿರುಪತಿ ಬಾಲಾಜಿಗೆ ತಲೆಗೂದಲನ್ನು ದಾನ ಮಾಡಿ ಹೋದವನು ತನ್ನ ಪಾಪ-ಅನಿಷ್ಟಗಳನ್ನು ಕೂದಲಿನ ರೂಪದಲ್ಲಿ ಬಿಡುತ್ತಾನೆ ಎಂದೂ ಹೇಳಲಾಗುತ್ತದೆ. ಇದರೊಂದಿಗೆ ದೇವರು ಯಾವಾಗಲೂ ಭಕ್ತರ ಮೇಲೆ ಕೃಪೆಯನ್ನು ಇರಿಸುತ್ತಾನೆ. ಸಾಮಾನ್ಯವಾಗಿ ಇಲ್ಲಿ ಪ್ರತಿದಿನ 20 ಸಾವಿರ ಜನರು ತಮ್ಮ ಕೂದಲನ್ನು ದಾನ ಮಾಡುತ್ತಾರೆ. ಇದಕ್ಕಾಗಿ ಪ್ರತಿದಿನ 500ಕ್ಕೂ ಹೆಚ್ಚು ಕ್ಷೌರಿಕರು ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಇದನ್ನೂ ಓದಿ: 2022 Love Horoscope: ಹೊಸ ವರ್ಷದಲ್ಲಿ ಅದ್ಭುತವಾಗಿರಲಿದೆ ಈ 5 ರಾಶಿಯವರ ಪ್ರೀತಿಯ ಜೀವನ

ಈ ಕಾರಣಕ್ಕೆ ಕೂದಲು ದಾನ  

ತಿರುಪತಿಯಲ್ಲಿ ಕೂದಲು ದಾನ ಮಾಡುವ ಮೂಲಕ(Women Donates Hair) ಲಕ್ಷ್ಮಿ ದೇವಿಯ ಆಶೀರ್ವಾದ ಮತ್ತು ಇಷ್ಟಾರ್ಥಗಳನ್ನು ಪೂರೈಸುವುದರ ಹಿಂದೆ ಪೌರಾಣಿಕ ಕಾರಣ(Reason Behind Hair Donation) ಅಡಗಿದೆ. ಕಥೆಗಳ ಪ್ರಕಾರ ಪ್ರಾಚೀನ ಕಾಲದಲ್ಲಿ ಬಾಲಾಜಿ ದೇವರ ಮೇಲೆ ಇರುವೆಗಳ ಪರ್ವತವು ರೂಪುಗೊಂಡಿತು. ದಿನವೂ ಒಂದು ಹಸು ಆ ಪರ್ವತಕ್ಕೆ ಬಂದು ಹಾಲು ಕೊಟ್ಟು ಹೋಗುತ್ತಿತ್ತು. ಇದರಿಂದ ಕೋಪಗೊಂಡ ಹಸುವಿನ ಮಾಲೀಕ ಕೊಡಲಿಯಿಂದ ಹಸುವನ್ನು ಕೊಂದಿದ್ದನಂತೆ. ಈ ದಾಳಿಯ ವೇಳೆ ಬಾಲಾಜಿಯ ತಲೆಗೂ ಪೆಟ್ಟು ಬಿದ್ದಿದ್ದು, ತಲೆಗೂದಲು ಕೂಡ ಕತ್ತರಿಸಿ ಹೋಗಿದ್ದವಂತೆ. ಆಗ ಆತನ ತಾಯಿ ನೀಲಾದೇವಿ ತನ್ನ ಕೂದಲನ್ನು ಕತ್ತರಿಸಿ ಬಾಲಾಜಿಯ ತಲೆಯ ಮೇಲೆ ಇಟ್ಟಿದ್ದಳಂತೆ. ಹೀಗೆ ಮಾಡಿದ್ದರಿಂದ ಬಾಲಾಜಿ ದೇವರ ಗಾಯವು ತಕ್ಷಣವೇ ವಾಸಿಯಾಯಿತು.

ಇದರಿಂದ ಸಂತಸಗೊಂಡ ನಾರಾಯಣನು ಕೂದಲು ದೇಹಕ್ಕೆ ಸೌಂದರ್ಯವನ್ನು ನೀಡುತ್ತದೆ ಮತ್ತು ನೀವು ಅವುಗಳನ್ನು ಸುಲಭವಾಗಿ ನನಗಾಗಿ ಬಿಟ್ಟಿದ್ದೀರಿ ಎಂದು ಹೇಳಿದರು. ಆದುದರಿಂದಲೇ ಇಂದಿನಿಂದ ನನಗಾಗಿ ಯಾರು ತನ್ನ ಜುಟ್ಟು ಬಿಟ್ಟುಕೊಡುತ್ತಾರೋ ಅವರ ಪ್ರತಿಯೊಂದು ಆಸೆಯೂ ಈಡೇರುತ್ತದೆ ಎಂದು ಹೇಳಿದ್ದರಂತೆ. ಅಂದಿನಿಂದ ಬಾಲಾಜಿ ದೇವಸ್ಥಾನದಲ್ಲಿ ಭಕ್ತರು ಮುಡಿ ಕಟ್ಟುತ್ತಿದ್ದಾರೆ. ಇಂದಿಗೂ ತಿರುಪತಿ ಬಾಲಾಜಿಯ ದೇವಸ್ಥಾನದ ಸಮೀಪವಿರುವ ಪರ್ವತವನ್ನು ನೀಲದಾರಿ ಬೆಟ್ಟಗಳು ಎಂದು ಕರೆಯಲಾಗುತ್ತದೆ ಮತ್ತು ಅದರ ಸಮೀಪದಲ್ಲಿ ತಾಯಿ ನೀಲಾ ದೇವಿಯ ದೇವಸ್ಥಾನವೂ ಇದೆ.

ಇದನ್ನೂ ಓದಿ: Mangal Dosh: ಮಂಗಳ ದೋಷ ನಿವಾರಣೆಗೆ ಇಂದೇ ಈ ಸಣ್ಣ ಕೆಲಸ ಮಾಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News