ನಿಮ್ಮ ಮನೆಯಲ್ಲಿಯೂ ಈ ಫೋಟೋಗಳಿದ್ದರೆ ತಕ್ಷಣ ತೆಗೆದುಬಿಡಿ

ಮನೆಯಲ್ಲಿ ಆರ್ಥಿಕ ಸಮೃದ್ಧಿಯನ್ನು ಪಡೆಯಲು, ಮನೆಯಲ್ಲಿ ಕುಳಿತ ಭಂಗಿಯಲ್ಲಿರುವ ಲಕ್ಷ್ಮಿಯ ಫೋಟೋ ಹಾಕಿದರೆ ಒಳ್ಳೆಯದು. ಇನ್ನು ಮನಯಲ್ಲಿ ಶಾಂತಿ ನೆಮ್ಮದಿ ಇರಬೇಕಾದರೆ ಮನೆಯ ಡ್ರಾಯಿಂಗ್ ರೂಂನ  ಗೋಡೆಯ ಮೇಲೆ ಹೂವುಗಳ ಫೋಟೋವನ್ನು ಹಾಕಬೇಕಂತೆ. 

Written by - Ranjitha R K | Last Updated : May 24, 2021, 12:40 PM IST
  • ಮನೆಯಲ್ಲಿ ಹಾಕುವ ಪ್ರತೀ ಪೋಟೋಗೂ ಇದೆ ಅರ್ಥ
  • ಧನ ಪ್ರಾಪ್ತಿಗಾಗಿ ಇರಲಿ ಈ ಫೋಟೋ
  • ಕಷ್ಟ ನಿವಾರಣೆಗೆ ಶ್ರೀ ಕೃಷ್ಣನ ಫೋಟೋ
ನಿಮ್ಮ ಮನೆಯಲ್ಲಿಯೂ ಈ ಫೋಟೋಗಳಿದ್ದರೆ ತಕ್ಷಣ ತೆಗೆದುಬಿಡಿ title=
ಮನೆಯಲ್ಲಿ ಹಾಕುವ ಪ್ರತೀ ಪೋಟೋಗೂ ಇದೆ ಅರ್ಥ (file photo)

ನವದೆಹಲಿ : ಮನೆಯ ಸೌಂದರ್ಯ ಹೆಚ್ಚಿಸಲು ವಿವಿಧ ಕಲಾಕೃತಿಗಳನ್ನು ಮನೆಯಲ್ಲಿ ಇಡುತ್ತೇವೆ. ಅಲ್ಲದೆ ಕೆಲ ಸುಂದರ ಫೋಟೋಗಳನ್ನು (Photos) ಕೂಡಾ ಹಾಕುತ್ತೇವೆ. ಈ ಕಲಾಕೃತಿಗಳಾಗಲೀ, ಫೋಟೊಗಳಾಗಲಿ ಮನುಷ್ಯನ ಮನಸ್ಸಿನ ಮೇಲೆಯೂ ಬಹಳವಾಗಿ ಪರಿಣಾಮ ಬೀರುತ್ತವೆ.  ಆದ್ದರಿಂದ ಮನೆಯಲ್ಲಿ ಇಡುವ ಸಲುವಾಗಿ ತರುವ ಪೋಟೊಗಳನ್ನು ಆರಿಸುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. 

ಧನ ಪ್ರಾಪ್ತಿಗಾಗಿ ಇರಲಿ ಈ ಫೋಟೋ : 
ಮನೆಯಲ್ಲಿ ಆರ್ಥಿಕ ಸಮೃದ್ಧಿಯನ್ನು ಪಡೆಯಲು, ಮನೆಯಲ್ಲಿ ಕುಳಿತ ಭಂಗಿಯಲ್ಲಿರುವ ಲಕ್ಷ್ಮಿಯ (Godess Lakshmi) ಫೋಟೋ ಹಾಕಿದರೆ ಒಳ್ಳೆಯದು. ಇನ್ನು ಮನೆಯಲ್ಲಿ ಶಾಂತಿ ನೆಮ್ಮದಿ ಇರಬೇಕಾದರೆ ಮನೆಯ ಡ್ರಾಯಿಂಗ್ ರೂಂನ (drawing room) ಗೋಡೆಯ ಮೇಲೆ ಹೂವುಗಳ ಫೋಟೋವನ್ನು ಹಾಕಬೇಕಂತೆ.  ನೀರಿನ ಪೋಟೋ ಹಾಕಿರೂ ಮನೆಯಲ್ಲಿ ಸಾಂತಿ ನೆಲೆಸುತ್ತದೆ ಎನ್ನುತ್ತಾರೆ ಹಿರಿಯರು. ಮನೆ ಮಂದಿಯ ಉತ್ತಮ ಆರೋಗ್ಯಕ್ಕಾಗಿ, ಉದಯಿಸುತ್ತಿರುವ ಸೂರ್ಯನ ಫೋಟೋವನ್ನು ಹಾಕಬೇಕು. 

ಇದನ್ನೂ ಓದಿ: Exercise- ದೀರ್ಘಾವಧಿಯ ಬಳಿಕ ವ್ಯಾಯಾಮ ಪ್ರಾರಂಭಿಸುತ್ತಿದ್ದರೆ ಈ ವಿಷಯಗಳ ಬಗ್ಗೆ ಇರಲಿ ಎಚ್ಚರ

ಕಷ್ಟ ನಿವಾರಣೆಗೆ ಶ್ರೀ ಕೃಷ್ಣನ ಫೋಟೋ:
ಶ್ರೀ ಕೃಷ್ಣನ (Lord Krishna) ಪೋಟೋಗಳನ್ನು ಹಾಕಿದರೆ ಮನೆಯ ಸಮಸ್ಯೆಗಳೆಲ್ಲವೂ ನಿವಾರಣೆಯಾಗುತ್ತದೆಯಂತೆ. ಭಗವಾನ್  ಶಿವ (Lord Shiva) ಅಥವಾ ಶ್ರೀಕೃಷ್ಣ ಆಶೀರ್ವಾದ ನೀಡುವಂಥಹ ಫೋಟೋಗಳು ಮನೆಯಲ್ಲಿದ್ದರೆ, ಎಲ್ಲಾ ಕಷ್ಟ, ನೋವು ನಿವಾರಣೆಯಾಗುತ್ತದೆಯಂತೆ. 

ಶಿಕ್ಷಣದಲ್ಲಿ ಯಶಸ್ಸಿಗೆ ಗಣೇಶನ ಫೋಟೊ :
ಶಿಕ್ಷಣದಲ್ಲಿ ಯಶಸ್ಸು ಪಡೆಯಲು ಮತ್ತು ಏಕಾಗ್ರತೆಗಾಗಿ, ಗಣೇಶನ ಫೋಟೋವನ್ನು (Lord Ganesha) ಹಾಕುವುದು ಉತ್ತಮ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು, ಮನೆಯಲ್ಲಿ  ಈ ಫೋಟೋವನ್ನು ಇಟ್ಟುಕೊಂಡಿರಬೇಕಂತೆ. ಇನ್ನು ಏಕಾಗ್ರತೆ ಹೆಚ್ಚಿಸಲು ಶ್ರೀ ಯಂತ್ರವನ್ನು ಕೂಡಾ ಬಳಸಬಹುದು. ಇನ್ನು ಓದುವ ಸ್ಥಳದಲ್ಲಿ ಕಾರ್ಟೂನ್ (Cartoon) ನಂಥಹ ಫೋಟೊಗಳನ್ನು ಯಾವತ್ತೂ ಇಡಬೇಡಿ. 

ಇದನ್ನೂ ಓದಿ: ವಾರಾಂತ್ಯದಲ್ಲಿ ಹೇರ್ ಕಟ್ ಮಾಡಿಸುವ ಮೊದಲು ಈ ವಿಚಾರ ತಿಳಿದುಕೊಳ್ಳಿ

ಸುಖಕರ ದಾಂಪತ್ಯಕ್ಕಾಗಿ ಇರಲಿ ಈ ಫೋಟೊ: 
ಫ್ಯಾಮಿಲಿ ಪೋಟೋವನ್ನು (Family photo) ಹಾಕುವುದರಿಂದ ಮನೆಯವರ ಪ್ರೀತಿ ಹೆಚ್ಚಾಗುತ್ತದೆಯಂತೆ. ಮನೆಯ ಪೂರ್ವ ಅಥವಾ ಉತ್ತರದ ಗೋಡೆಯ ಮೇಲೆ ಫ್ಯಾಮಿಲಿ ಫೋಟೊ ಹಾಕುವುದರಿಂದ ಮನೆಯಲ್ಲಿ ಸಂತೋಷ ಮತ್ತು ಶಾಂತಿ ನೆಲೆಯಾಗುತ್ತದೆಯಂತೆ. ಇದರೊಂದಿಗೆ ವೈವಾಹಿಕ ಜೀವನದಲ್ಲೂ ಸಂತೋಷ ಸಿಗುತ್ತದೆಯಂತೆ. ಆದರೆ ನೆನಪಿರಲಿ, ಮನೆಯ ದಕ್ಷಿಣದ ಗೋಡೆಯ ಮೇಲೆ ಯಾವತ್ತೂ ಫ್ಯಾಮಿಲಿ ಫೋಟೋ ಹಾಕಬೇಡಿ.

ಡ್ರಾಯಿಂಗ್ ರೂಂನಲ್ಲಿ ಹೂವಿನ ಫೋಟೋ ಇರಲಿ : 
ಲಿವಿಂಗ್ ರೂಮ್ ಅಥವಾ ಮಲಗುವ ಕೋಣೆಯಲ್ಲಿ ವಿವಿಧ ಬಣ್ಣಗಳು ಮತ್ತು ಹೂವುಗಳ ಚಿತ್ರಗಳನ್ನು ಇರಿಸುವುದು ಶುಭವೆಂದು ಪರಿಗಣಿಸಲಾಗಿದೆ.

ಈ ಫೋಟೋಗಳನ್ನು ತಪ್ಪಿಯೂ ಮನೆಯಲ್ಲಿಡಬೇಡಿ : 
ನೆನಪಿರಲಿ ನೋಡಲು ಸುಂದರವಾಗಿ ಕಾಣಿಸುತ್ತದೆ ಎಂಬ ಕಾರಣಕ್ಕೆ ತಪ್ಪಿಯೂ ಈ ಕೆಳಗಿನ ಫೋಟೋಗಳನ್ನು ಮನೆಯಲ್ಲಿ ಹಾಕಬೇಡಿ.
- ಕಾಡು ಪ್ರಾಣಿಗಳ (wild animals) ಚಿತ್ರ, ಅಥವಾ ಮೂರ್ತಿಗಳನ್ನು ಮನೆಯಲ್ಲಿಡಬೇಡಿ
- ದೇವರ ಚಿತ್ರಗಳನ್ನು ಮಲಗುವ ಕೋಣೆಯಲ್ಲಿ ಇಡಬೇಡಿ. 
-ಬೆಂಕಿ ಮತ್ತು ಮುಳ್ಳಿನ ಚಿತ್ರಗಳನ್ನು ಸಹ ಮನೆಯಲ್ಲಿ ಹಾಕಬಾರದು
- ಇನ್ನು ಮನೆಯಲ್ಲಿ ಹಾಕಿರುವ ಫೋಟೊಗಳ ಮೇಲೆ ಧೂಳು ಹಿಡಿಯದಂತೆ ಸ್ವಚ್ಛ ಮಾಡುತ್ತಾ ಇರಿ. 

ಇದನ್ನೂ ಓದಿ: Vastu tips : ಮನೆಯಲ್ಲಿ ಈ ಒಂದು ವಸ್ತುಯಿದ್ದರೆ ಸಾಕು Positive energy ತುಂಬಿರುತ್ತದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News