June 26 Rashifal - ವೈದಿಕ ಜೋತಿಷ್ಯಶಾಸ್ತ್ರಗಳಲ್ಲಿ ಒಟ್ಟು 12 ರಾಶಿಗಳ ವರ್ಣನೆ ಮಾಡಲಾಗಿದೆ. ಪ್ರತಿಯೊಂದು ರಾಶಿಗೂ ಒಂದು ರಾಷ್ಯಾಧಿಪ ಗ್ರಹವಿರುತ್ತದೆ. ಈ ಗ್ರಹ-ನಕ್ಷತ್ರಗಳ ನಡೆಯನ್ನು ಆಧರಿಸಿ, ಜೋತಿಷ್ಯ ಲೆಕ್ಕಾಚಾರ ನಡೆಸಲಾಗುತ್ತದೆ. ಜೋತಿಷ್ಯ ಶಾಸ್ತ್ರದ ಪ್ರಕಾರ ಜೂನ್ 26ರ ದಿನ ಕೆಲ ರಾಶಿಗಳ ಪಾಲಿಗೆ ಅತ್ಯಂತ ಶುಭ ಸಾಬೀತಾಗಲಿದೆ. ಈ ರಾಶಿಗಳ ಜನರ ಪಾಲಿಗೆ ಜೂನ ಜೂನ್ 26 ವರದಾನಕ್ಕಿಂತ ಕಮ್ಮಿ ಏನಿಲ್ಲ ಎಂದರೆ ತಪ್ಪಾಗಲಾರದು.
ಮೇಷ ರಾಶಿ- ಮೇಷ ರಾಶಿಯ ಜನರ ಪಾಲಿಗೆ ಜೂನ್ 26 ತುಂಬಾ ಫಲಪ್ರದಾಯಿ ಸಾಬೀತಾಗಲಿದೆ. ನೌಕರಿ ಹಾಗೂ ವ್ಯಾಪಾರಕ್ಕೆ ಈ ಸಮಯ ತುಂಬಾ ಶುಭವಾಗಿದೆ. ವೈವಾಹಿಕ ಜೀವನ ಸುಖದಿಂದ ತುಂಬಿರಲಿದೆ. ಧನ-ಲಾಭದ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಕಾರ್ಯ ಕ್ಷೇತ್ರದಲ್ಲಿ ನೀವು ಮಾಡುವ ಕೆಲಸ ಕಾರ್ಯಗಳಿಗೆ ಭಾರಿ ಪ್ರಶಂಸೆ ವ್ಯಕ್ತವಾಗಲಿದೆ. ನೌಕರಿಯ ಹೊಸ ಆಫರ್ ಸಿಗುವ ಸಾಧ್ಯತೆ ಇದೆ. ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ.
ಮಿಥುನ ರಾಶಿ- ಶುಭ ಪರಿಣಾಮಗಳ ಪ್ರಾಪ್ತಿ. ಧನಲಾಭ, ಆಧ್ಯಾತ್ಮಿಕ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಅವಕಾಶ ಸಿಗಲಿದೆ. ನೌಕರಿ ಹಾಗೂ ವ್ಯಾಪಾರದಲ್ಲಿ ವೃದ್ಧಿ ಸಂಭವ. ವೈವಾಹಿಕ ಜೀವನ ಸುಖಮಯವಾಗಲಿದೆ. ಹೊಸ ಮನೆ-ವಾಹನ ಖರೀದಿಸುವ ಯೋಗ ನಿರ್ಮಾಣಗೊಳ್ಳುತ್ತಿದೆ. ಕೆಲಸ ಕಾರ್ಯಗಳಲ್ಲಿ ಭಾರಿ ಯಶಸ್ಸನ್ನು ನಿರೀಕ್ಷಿಸಬಹುದು.
ವೃಶ್ಚಿಕ ರಾಶಿ- ಧನ ಲಾಭದಿಂದ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯಾಗಲಿದೆ. ಘನತೆ-ಗೌರವ, ಸ್ಥಾನ-ಮಾನದಲ್ಲಿ ವೃದ್ಧಿಯಾಗಲಿದೆ. ನೌಕರಿ ಮತ್ತು ವ್ಯಾಪಾರದಲ್ಲಿ ಲಾಭದ ಸಂಕೇತಗಳಿವೆ. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಶುಭ ಫಲಗಳು ಪ್ರಾಪ್ತಿಯಾಗಲಿವೆ.ದಾಂಪತ್ಯ ಜೀವನ ಸುಖಮಯವಾಗಿರಲಿದೆ. ಕಾರ್ಯಕ್ಷೇತ್ರದಲ್ಲಿ ನೀವು ಮಾಡಿದ ಕೆಲಸ ಕಾರ್ಯಗಳಿಗೆ ಭಾರಿ ಪ್ರಶಂಸೆ ವ್ಯಕ್ತವಾಗಲಿದೆ. ಕುಟುಂಬ ಸದಸ್ಯರ ಸಾಥ್ ಸಿಗಲಿದೆ.
ಇದನ್ನೂ ಓದಿ-ಶ್ರಾವಣ ತರಲಿದೆ ಶುಭದಿನ: ಈ ಮಾಸದಲ್ಲಿ ಶಿವಪೂಜೆಯನ್ನು ಹೀಗೆ ಮಾಡಿ
ಮೀನ ರಾಶಿ- ಧನಲಾಭದ ಯೋಗ. ಆರ್ಥಿಕ ಸ್ಥಿತಿ ಸುಧಾರಣೆ. ಭಾಗ್ಯದ ಸಂಪೂರ್ಣ ಸಾಥ್ ಸಿಗಲಿದೆ. ಈ ಅವಧಿ ನಿಮಗೆ ವರದಾನಕ್ಕಿಂತ ಕಮ್ಮಿಯೇನಿಲ್ಲ. ವೈವಾಹಿಕ ಜೀವನ ಸುಖದಿಂದ ಕೂಡಿರಲಿದೆ. ಕುಟುಂಬ ಸದಸ್ಯರಿಂದ ಬೆಂಬಲ ಸಿಗಲಿದೆ. ಘನತೆ-ಗೌರವ ಹೆಚ್ಚಾಗಲಿದೆ. ಸ್ಥಾನ-ಮಾನದಲ್ಲಿಯೂ ಕೂಡ ಹೆಚ್ಚಳವಾಗಲಿದೆ.
ಇದನ್ನೂ ಓದಿ-Zodiac Sign: ಈ ರಾಶಿಗಳ ಜನರು ಕಾಲಲ್ಲಿ ಕಪ್ಪು ದಾರ ಕಟ್ಟಿಕೊಳ್ಳಬಾರದು
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.