ಮೂತ್ರದ ಬಣ್ಣ ಮತ್ತು ಮೂತ್ರಪಿಂಡದ ಆರೋಗ್ಯ: ಭಾರತದಲ್ಲಿ ಅನಾರೋಗ್ಯಕರ ಆಹಾರ ಪದ್ಧತಿಯಿಂದಾಗಿ, ಮೂತ್ರಪಿಂಡದ ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮವನ್ನು ಬೀರುತ್ತದೆ ಮತ್ತು ಕ್ರಮೇಣ ಈ ಪ್ರಮುಖ ಅಂಗವು ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ. ಅಂತಿಮವಾಗಿ ಇದು ಕಾರ್ಯನಿರ್ವಹಿಸುವುದನ್ನೇ ನಿಲ್ಲಿಸಬಹುದು. ಮೂತ್ರಪಿಂಡ ವೈಫಲ್ಯದಿಂದ ನಿಮ್ಮ ಮೂತ್ರದ ಬಣ್ಣ ಬದಲಾಗುತ್ತದೆ ಎಂದು ನಿಮಗೆ ತಿಳಿದಿದೆಯೇ? ಇದು ಮೂತ್ರಪಿಂಡ ವೈಫಲ್ಯದ ಪ್ರಮುಖ ಲಕ್ಷಣವಾಗಿದೆ. ಇದಲ್ಲದೆ, ಮೂತ್ರದ ಬಣ್ಣ ಮೂತ್ರಪಿಂಡ ವೈಫಲ್ಯದ ಬಗ್ಗೆ ಹಲವು ಸಂಕೇತಗಳನ್ನೂ ನೀಡುತ್ತವೆ.
ಮೂತ್ರಪಿಂಡ ವೈಫಲ್ಯದ ಆರಂಭಿಕ ಚಿಹ್ನೆಗಳು:
ಮದ್ಯಪಾನ, ಅಧಿಕ ರಕ್ತದೊತ್ತಡ, ಮಧುಮೇಹ ಅಥವಾ ಕೆಲವು ಔಷಧಿಗಳ ಸೇವನೆಯು ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗಬಹುದು. ಮೂತ್ರಪಿಂಡವು ಸಾಕಷ್ಟು ಹಾನಿಯಾದ ನಂತರ ಮೂತ್ರಪಿಂಡದ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆದಾಗ್ಯೂ, ಕೆಲವು ಸಮಸ್ಯೆಗಳನ್ನು ಅದರ ಆರಂಭಿಕ ಲಕ್ಷಣಗಳಾಗಿ ಕಾಣಬಹುದು.
- ಮೂತ್ರ ವಿಸರ್ಜನೆ ಕಡಿಮೆಯಾಗುವುದು
- ನೀರು ತುಂಬುವುದರಿಂದ ಕೀಲುಗಳಲ್ಲಿ ನೋವು
- ಉಸಿರಾಟದ ತೊಂದರೆ
ಇದನ್ನೂ ಓದಿ- Diabetes Diet: ಬ್ಲಡ್ ಶುಗರ್ ಕಂಟ್ರೋಲ್ ಮಾಡಲು ಮಧುಮೇಹಿಗಳು ಈ 4 ಆಹಾರಗಳನ್ನು ಸೇವಿಸಿ
ಮೂತ್ರಪಿಂಡ ವೈಫಲ್ಯದಲ್ಲಿ ಕಂಡುಬರುವ ಲಕ್ಷಣಗಳು
- ಆಗಾಗ್ಗೆ ಕಾಣಿಸಿಕೊಳ್ಳುವ ವಿಪರೀತ ತಲೆನೋವು
- ದೇಹದಲ್ಲಿ ತುರಿಕೆ
- ದಿನವಿಡೀ ಆಯಾಸದಿಂದ ಇರುವುದು
- ರಾತ್ರಿವೇಳೆ ಸರಿಯಾಗಿ ನಿದ್ರೆ ಬರದಿರುವುದು
- ಇದ್ದಕ್ಕಿದ್ದಂತೆ ತೂಕ ಅಥವಾ ಹಸಿವು ಕಡಿಮೆಯಾಗುವುದು
- ದೈಹಿಕ ದೌರ್ಬಲ್ಯ
- ಜ್ಞಾಪಕ ಶಕ್ತಿ ಕಡಿಮೆಯಾಗುವುದು
- ಏಕಾಗ್ರತೆಯ ಕೊರತೆ
ಮೂತ್ರದ ಬಣ್ಣವು ಮೂತ್ರಪಿಂಡದ ಆರೋಗ್ಯವನ್ನು ಹೇಳುತ್ತದೆ:
ಮೂತ್ರದ ಬಣ್ಣವು ನಿಮ್ಮ ಮೂತ್ರಪಿಂಡಗಳ ಬಗ್ಗೆ ಕೆಲವು ಸೂಚನೆಗಳನ್ನು ನೀಡುತ್ತದೆ. ಇದನ್ನು ನಿರ್ಲಕ್ಷಿಸುವ ತಪ್ಪನ್ನು ಮಾಡಬೇಡಿ, ಇದು ಮೂತ್ರಪಿಂಡ ವೈಫಲ್ಯದ ದೊಡ್ಡ ಸಂಕೇತವಾಗಿದೆ. ಹಾಗಾಗಿ ಈ ರೀತಿಯ ಲಕ್ಷಣಗಳು ಕಂಡು ಬಂದರೆ ತಕ್ಷಣ ತಜ್ಞ ವೈದ್ಯರನ್ನು ಸಂಪರ್ಕಿಸಿ.
ಇದನ್ನೂ ಓದಿ- Coronavirus 4th Wave: ಈಗ ಕಣ್ಣುಗಳ ಮೇಲೆ ಕರೋನಾ ಪರಿಣಾಮ, ಇವು 3 ದೊಡ್ಡ ಲಕ್ಷಣಗಳು
ಮೂತ್ರದ ಬಣ್ಣದ ಅರ್ಥವೇನು?
>> ಸ್ಪಷ್ಟ ಅಥವಾ ತಿಳಿ ಹಳದಿ ಬಣ್ಣ - ದೇಹವು ಚೆನ್ನಾಗಿ ಹೈಡ್ರೀಕರಿಸಲ್ಪಟ್ಟಿದೆ
>> ಗಾಢ ಹಳದಿ ಬಣ್ಣ - ದೇಹದಲ್ಲಿ ನೀರಿನ ಕೊರತೆ ಎಂದರೆ ನಿರ್ಜಲೀಕರಣ
>>ಕಿತ್ತಳೆ ಬಣ್ಣ - ದೇಹದಲ್ಲಿ ತೀವ್ರವಾದ ನೀರಿನ ನಷ್ಟ ಅಥವಾ ಪಿತ್ತರಸದ ಚಿಹ್ನೆ
>>ಗುಲಾಬಿ ಅಥವಾ ಕೆಂಪು ಬಣ್ಣ - ಮೂತ್ರದಲ್ಲಿ ರಕ್ತ ಅಥವಾ ಬೀಟ್ರೂಟ್ ರೀತಿಯ ಆಹಾರ ಸೇವನೆಯ ಕಾರಣ
>> ಮೂತ್ರದಲ್ಲಿ ನೊರೆ - ಮೂತ್ರದಲ್ಲಿ ಪ್ರೋಟೀನ್ನ ಸಂಕೇತ ಮತ್ತು ಮೂತ್ರಪಿಂಡ ವೈಫಲ್ಯದಂತಹ ಮೂತ್ರಪಿಂಡದ ಕಾಯಿಲೆಯ ಲಕ್ಷಣ
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.