ಕೇವಲ ಹತ್ತೆ ನಿಮಿಷಗಳ ಕಾಲ ಲವ್ ಮಾಡುವುದರಿಂದ ಎಷ್ಟು ಕ್ಯಾಲೋರಿ ಬರ್ನ್ ಮಾಡಿಕೊಳ್ಳಬಹುದು ಗೊತ್ತಾ?

Weight Loss By Love Making: ಲವ್ ಮೇಕಿಂಗ್ ನಲ್ಲಿ ಸುಮಾರು 600 ಕ್ಯಾಲೋರಿ ಶಕ್ತಿ ಸುಡುತ್ತೆ ಎಂಬ ಸಂಗತಿ ನಿಮಗೆ ತಿಳಿದಿದೆಯಾ? ಹೌದು, ಫ್ಲೋರ್ಪ್ಲೇನಲ್ಲಿ ಶಾಮೀಲಾಗುವುದರಿಂದ ದೇಹದಿಂದ ಭಾರಿ ಪ್ರಮಾಣದ ಕ್ಯಾಲೋರಿಗಳನ್ನು ಬರ್ನ್ ಮಾಡಬಹುದು.   

Written by - Nitin Tabib | Last Updated : Aug 15, 2023, 07:16 PM IST
  • ಆರೋಗ್ಯ ತಜ್ನರ ಪ್ರಕಾರ 30 ನಿಮಿಷಗಳ ಕಾಲ ಒಂದುವೇಳೆ ನೀವು ಫೂಟ್ ಬಾಲ್ ಆಟವನ್ನು ಆಡಿದರೆ 105 ರಿಂದ 285 ಕ್ಯಾಲೋರಿಗಳನ್ನು ಸುಡಬಹುದು.
  • ಕ್ಯಾಲೋರಿ ಸುಡುವಿಕೆ ನಿಮ್ಮ ದೇಹದ ತೂಕವನ್ನು ಕೂಡ ಅವಲಂಭಿಸಿರುತ್ತದೆ. 72 ಕೆಜಿ ತೂಕ ಹೊಂದಿದವರು ಒಂದು ಗಂಟೆಯಲ್ಲಿ 219 ಕ್ಯಾಲೋರಿಗಳನ್ನು ಸುಡಬಹುದು.
  • 91 ಕೆಜಿ ಇರುವವರು 60 ನಿಮಿಷಗಳಲ್ಲಿ 273 ಕ್ಯಾಲೋರಿಗಳನ್ನು ಸುಡಬಹುದು.
ಕೇವಲ ಹತ್ತೆ ನಿಮಿಷಗಳ ಕಾಲ ಲವ್ ಮಾಡುವುದರಿಂದ ಎಷ್ಟು ಕ್ಯಾಲೋರಿ ಬರ್ನ್ ಮಾಡಿಕೊಳ್ಳಬಹುದು ಗೊತ್ತಾ? title=

ಬೆಂಗಳೂರು: ಕೆಲ ಜನರಿಗೆ ತಿಂಡಿ-ತಿನಿಸುಗಳನ್ನು ಸೇವಿಸುವುದು ಎಂದರೆ ತುಂಬಾ ಇಷ್ಟದ ಕೆಲಸವಾಗಿರುತ್ತದೆ. ಅವರು ಯಾವಾಗಲೂ ಏನನ್ನಾದರೂ ತಿನ್ನುವ ಯೋಜನೆ ರೂಪಿಸುವಲ್ಲಿ ತೊಡಗಿರುತ್ತಾರೆ. ಪ್ರತಿ ಅರ್ಧಗಂಟೆಗೊಮ್ಮೆ ಅವರು ಏನನ್ನಾದರೂ ತಿನ್ನುತ್ತಲೇ ಇರುತ್ತಾರೆ. ಆದರೆ, ಸತತವಾಗಿ ತಿನ್ನುವ ಅವರ ಈ ಅಭ್ಯಾಸ ಅವರ ಆರೋಗ್ಯದ ಮೇಲೆ ಪರಿಣಾಮ ಬೀರಲಾರಂಭಿಸುತ್ತದೆ. ಅತಿಯಾಗಿ ತಿನ್ನುವುದು ಮತ್ತು ಇಷ್ಟಪಡುವ ಎಲ್ಲಾ ಆಹಾರ ಸೇವಿಸುವುದರಿಂದ ದೇಹದಲ್ಲಿ ಹೆಚ್ಚುವರಿ ಕೊಬ್ಬು ಶೇಖರಣೆಗೊಳ್ಳಲು ಆರಂಭಿಸುತ್ತದೆ. ತೂಕ ಹೆಚ್ಚಿಸಿಕೊಳ್ಳುವ ಈ ಕೆಲಸ ಎಷ್ಟೊಂದು ಸುಲಭವಾಗಿದೆಯೋ, ಅದನ್ನು ಕರಗಿಸುವುದು ಅಷ್ಟೇ ಕಷ್ಟದ ಕೆಲಸವಾಗಿರುತ್ತದೆ. ಅನಾರೋಗ್ಯಕಾರ ಆಹಾರ ಸೇವನೆ ಕೇವಲ ತೂಕವನ್ನು ಮಾತ್ರ ಹೆಚ್ಚಿಸದೆ, ಹಲವು ಕಾಯಿಲೆಗಳನ್ನು ಕೂಡ ತನ್ನೊಂದಿಗೆ ತರುತ್ತದೆ. ತೂಕ ಇಳಿಸಿಕೊಳ್ಳಲು ದೃಢ ಸಂಕಲ್ಪ ಹಾಗೂ ಸಮರ್ಪಣೆಯ ಅವಶ್ಯಕತೆ ಇರುತ್ತದೆ. ಸತ್ಯದ ಸಂಗತಿ ಎಂದರೆ ಲೈಫ್ ಸ್ಟೈಲ್ ಹಾಗೂ ಆಹಾರ ಸೇವನೆಯಲ್ಲಿ ಸುಧಾರಣೆಯನ್ನು ತರುವ ಮೂಲಕ ನಾವು ನಮ್ಮ ದೇಹವನ್ನು ಸಾಕಷ್ಟು ಫಿಟ್ ಹಾಗೂ ಹೆಲ್ದಿಯಾಗಿಡಬಹುದು. 

ಶರೀರವನ್ನು ಆರೋಗ್ಯಕರವಾಗಿರಿಸಾಲು ನಾವು ನಿತ್ಯ ವ್ಯಾಯಾಮ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ಜನರ ಜೀವನಶೈಲಿ ಹೇಗಿದೆ ಎಂದರೆ ಕ್ಯಾಲೋರಿ ಸುಡುವಿಕೆಯಿಂದ ಕ್ಯಾಲೋರಿ ಸೇವನೆ ಹೆಚ್ಚಾಗಿ ಬಿಟ್ಟಿದೆ. ಇದರಿಂದ ಬೊಜ್ಜುತನ ವೇಗವಾಗಿ ಬೆಳೆಯಲು ಆರಂಭಿಸುತ್ತದೆ. ಅದರಲ್ಲಿಯೂ ವಿಶೇಷವಾಗಿ ಮಹಿಳೆಯರು ತೂಕ ಹೆಚ್ಚಳದಿಂದ ಹೆಚ್ಚು ತೊಂದರೆ ಅನುಭವಿಸುತ್ತಾರೆ. ದಿನವಿಡೀ ಮನೆಯ ಸ್ವಚ್ಛತೆ, ಅಡುಗೆಮನೆಯಲ್ಲಿ ಪಾತ್ರೆತೊಳೆಯುವಿಕೆ, ನೆಲ ಸ್ವಚ್ಛಗೊಳಿಸುವಿಕೆಯಂತಹ ಕ್ಯಾಲೋರಿ ಸುಡುವಂತಹ ಕೆಲಸಗಳನ್ನು ಮಾಡಿದ ಬಳಿಕವೂ ಕೂಡ ಅವರ ತೂಕ ಕಡಿಮೆಯಾಗುವುದಿಲ್ಲ ಎಂಬುದು ಅವರ ವಾದವಾಗಿರುತ್ತದೆ. ಆದರೆ, ಮನೆಯನ್ನು ಸ್ವಚ್ಛಗೊಳಿಸಲು ನೀವು ಎಷ್ಟು ಸಮಯವನ್ನು ತೆಗೆದುಕೊಳ್ಳುತ್ತಿರುವಿರಿ ಮತ್ತು ಮನೆಯನ್ನು ಸ್ವಚ್ಛಗೊಳಿಸಲು ಯಾವ ವಿಧಾನಗಳನ್ನು ನೀವು ಅನುಸರಿಸುತ್ತಿರುವಿರಿ ಎಂಬುದರ ಮೇಲೂ ಕೂಡ ನಿಮ್ಮ ಶಕ್ತಿ ಸುಡುವಿಕೆ ಅವಲಂಭಿಸಿರುತ್ತದೆ. 

ಉದಾಹರಣೆಗೆ ಯಾವುದೇ ಓರ್ವ ವ್ಯಕ್ತಿ 45 ಕೆಜಿ ತೂಕ ಹೊಂದಿದ್ದು, ಆತ 15 ನಿಮಿಷಗಳ ಕಾಲ ಮಾಪಿಂಗ್ ಕೆಲಸ ಮಾಡಿದರೆ ಸುಮಾರು 77 ಕ್ಯಾಲೋರಿ ಶಕ್ತಿಯನ್ನು ಸುಡಬಹುದು. 15 ನಿಮಿಷಗಳ ವರೆಗೆ ಪಾತ್ರೆ ತೊಳೆದರೆ ಆತ 38 ಕ್ಯಾಲೋರಿಗಳನ್ನು ಮಾತ್ರ ಸುಡುವಲ್ಲಿ ಯಶಸ್ವಿಯಾಗುತ್ತಾನೆ. ಇಂತಹ ಸನ್ನಿವೇಶದಲ್ಲಿ ಒಂದು ವೇಳೆ ನೀವು 500 ರಿಂದ 600 ಕ್ಯಾಲೋರಿಗಳನ್ನು ಸುಡುವ ಗುರಿಯನ್ನು ಹೊಂದಿದ್ದರೆ, ನಿತ್ಯ ಅರ್ಧ ಗಂಟೆ ನೀವು ವಿಶೇಷ ವ್ಯಾಯಾಮ ಮಾಡುವ ಅವಶ್ಯಕತೆ ಇದೆ. ಇದರಿಂದ ತಿಂಗಳಿಗೆ 50 ಸಾವಿರ ಕ್ಯಾಲೋರಿಗಳನ್ನು ಬರ್ನ್ ಮಾಡಬಹುದು. ಬನ್ನಿ ಯಾವ ಯಾವ ವ್ಯಾಯಾಮಗಳನ್ನು ಮಾಡುವ ಮೂಲಕ ನಿತ್ಯ 500 ಕ್ಯಾಲೋರಿ ಎನರ್ಜಿ ಬರ್ನ್ ಮಾಡಬಹುದು ತಿಳಿದುಕೊಳ್ಳೋಣ,

ವಾಕ್ ಮಾಡಿ ಕ್ಯಾಲೋರಿ ಬರ್ನ್ ಮಾಡಿ
ಯಾರೊಂದಿಗಾದರೂ ಫೋನ್ ನಲ್ಲಿ ತುಂಬಾ ಹೊತ್ತು ಮಾತನಾಡಬೇಕಾದರೆ, ನಡೆದಾಡುತ್ತಾ ನೀವು ಫೋನ್ ನಲ್ಲಿ ಮಾತನಾಡುವ ಮೂಲಕ ಕ್ಯಾಲೋರಿಗಳನ್ನು ಸುಡಬಹುದು. ಕುಳಿತುಕೊಳ್ಳುವುದಕ್ಕಿಂತ ನಿಂತುಕೊಳ್ಳುವುದರಿಂದ ನೀವು ಹೆಚ್ಚುವರಿ ಕ್ಯಾಲೋರಿಗಳನ್ನು ಬರ್ನ್ ಮಾಡಬಹುದು. 

10 ನಿಮಿಷದ ಲವ್ ಮೇಕಿಂಗ್ ನಿಂದ ನೀವು 600 ಕ್ಯಾಲೋರಿಗಳನ್ನು ಬರ್ನ್ ಮಾಡಬಹುದು
ರೊಮಾನ್ಸ್ ಮಾಡುವ ಮೂಲಕ ನೀವು 600 ಕ್ಯಾಲೋರಿಗಳನ್ನು ಬರ್ನ್ ಮಾಡಬಹುದು ಎಂಬ ಸಂಗತಿ ನಿಮಗೆ ತಿಳಿದಿದೆಯೇ? ಹೌದು, ಒಂದು ವೇಳೆ ನಿಮ್ಮ ತೂಕ 70 ಕೆಜಿ ಇದ್ದರೆ ಮತ್ತು 15 ನಿಮಿಷಗಳಲ್ಲಿ ನೀವು 25 ಕ್ಯಾಲೋರಿಗಳನ್ನು ಸುಡುತ್ತಿದ್ದರೆ, 45 ನಿಮಿಷಗಳಲ್ಲಿ ನೀವು ಒಟ್ಟು 216 ಕ್ಯಾಲೋರಿಗಳನ್ನು ಬರ್ನ್ ಮಾಡಬಹುದು. ಅಧ್ಯಯನವೊಂದರ ಪ್ರಕಾರ ಸ್ಟ್ಯಾಂಡಿಂಗ್ ಪೊಜಿಷನ್ ನಲ್ಲಿ ಎಲ್ಲಕ್ಕಿಂತ ಹೆಚ್ಚು ಕ್ಯಾಲೋರಿ ಸುಡುತ್ತದೆ ಎನ್ನಲಾಗುತ್ತದೆ. ಈ ಪೋಷಿಶನ್ ನಲ್ಲಿ ನಿಂತು ರೊಮಾನ್ಸ್ ಮಾಡಿ ಇಬ್ಬರು ಸಂಗಾತಿಗಳು ಸುಮಾರು 600 ಕ್ಯಾಲೋರಿಗಳನ್ನು ಸುಡಬಹುದು. 

ಬಾಲಿಂಗ್ ನಿಂದ 500 ಕ್ಯಾಲೋರಿ ಸುಡಬಹುದು
ಆರೋಗ್ಯ ತಜ್ನರ ಪ್ರಕಾರ 30 ನಿಮಿಷಗಳ ಕಾಲ ಒಂದುವೇಳೆ ನೀವು ಫೂಟ್ ಬಾಲ್ ಆಟವನ್ನು ಆಡಿದರೆ 105 ರಿಂದ 285 ಕ್ಯಾಲೋರಿಗಳನ್ನು ಸುಡಬಹುದು. ಕ್ಯಾಲೋರಿ ಸುಡುವಿಕೆ ನಿಮ್ಮ ದೇಹದ ತೂಕವನ್ನು ಕೂಡ ಅವಲಂಭಿಸಿರುತ್ತದೆ. 72 ಕೆಜಿ ತೂಕ ಹೊಂದಿದವರು ಒಂದು ಗಂಟೆಯಲ್ಲಿ 219 ಕ್ಯಾಲೋರಿಗಳನ್ನು ಸುಡಬಹುದು. 91 ಕೆಜಿ ಇರುವವರು 60 ನಿಮಿಷಗಳಲ್ಲಿ 273 ಕ್ಯಾಲೋರಿಗಳನ್ನು ಸುಡಬಹುದು. 

ಇದನ್ನೂ ಓದಿ-ಈ ಗಿಡದ ಹೂವಿನಿಂದ ತಯಾರಿಸಿದ ಚಹಾ ತೂಕ ಇಳಿಕೆಗೆ ರಾಮಬಾಣ ಉಪಾಯ!

ಮಟ್ಟಿಲು ಏರುವುದು
ತಜ್ಞರ ಪ್ರಕಾರ ನೀವು ಯಾವುದಾದರೊಂದು ಮಾಲ್ ಗೆ ಭೇಟಿ ನೀಡಿದಾಗ ಅಲ್ಲಿ ಎಕ್ಸಿಲೆಟರ್ ಬಳಸುವುದಕ್ಕಿಂತ ಮೆಟ್ಟಿಲುಗಳನ್ನು ಏರಿ ಕ್ಯಾಲೋರಿಗಳನ್ನು ಬರ್ನ್ ಮಾಡಬಹುದು. 30 ನಿಮಿಷಗಳ ಕಾಲ ಮೆಟ್ಟಿಲೇರುವುದು 500 ಕ್ಯಾಲೋರಿ ಶಕ್ತಿ ಸುಡುವಿಕೆಗೆ ಕಾರಣವಾಗುತ್ತದೆ. 

ಇದನ್ನೂ ಓದಿ-ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದಾಗ ಕಾಣಿಸಿಕೊಳ್ಳುತ್ತವೆ ಈ ಸಮಸ್ಯೆಗಳು, ಜಾಗ್ರತೆವಹಿಸಿ!

ವೇಗದ ನಡಿಗೆ
90 ನಿಮಿಷಗಳ ಕಾಲ 4ಎಂಪಿಹೆಚ್ ವೇಗದಿಂದ ಒಂದು ವೇಳೆ ನೀವು ವಾಕ್ ಮಾಡಿದರೆ 500 ಕ್ಯಾಲೋರಿಗಳನ್ನು ಸುಡಬಹುದು. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News