Name Plate Vastu Rules: ಪ್ರತಿಯೊಂದು ವಸ್ತುವಿನ ಧನಾತ್ಮಕ ಫಲಿತಾಂಶಕ್ಕಾಗಿ ವಾಸ್ತು ಶಾಸ್ತ್ರದಲ್ಲಿ ಕೆಲವು ನಿಯಮಗಳನ್ನು ಹೇಳಲಾಗಿದೆ. ಈ ನಿಯಮಗಳನ್ನು ಅನುಸರಿಸದೆ ಹೋದಲ್ಲಿ ಪ್ರತಿಕೂಲ ಫಲಿತಾಂಶಗಳು ಪ್ರಾಪ್ತಿಯಾಗುತ್ತವೆ. ಅದೇ ರೀತಿ ಮನೆಯ ಹೊರಗೆ ಅಳವಡಿಸಲಾಗುವ ನಾಮಫಲಕಕ್ಕೂ ಕೂಡ ವಾಸ್ತು ಶಾಸ್ತ್ರದಲ್ಲಿ ಕೆಲವು ನಿಯಮಗಳನ್ನು ಹೇಳಲಾಗಿದೆ. ಇದು ಕೇವಲ ಮನೆಯ ಗುರುತಾಗಿರದೆ, ಧನಾತ್ಮಕ ಶಕ್ತಿಯನ್ನು ಕೂಡ ತನ್ನತ್ತ ಆಕರ್ಷಿಸುತ್ತದೆ.
ಹಲವರು ತಮ್ಮ ಹೆಸರಿನಂತೆಯ ತಮ್ಮ ಮನೆಗೂ ಕೂಡ ನಾಮಕರಣ ಮಾಡುತ್ತಾರೆ. ಅಷ್ಟೇ ಅಲ್ಲ ಅದನ್ನು ತಮ್ಮ ನಾಮಫಲಕದಲ್ಲಿಯೂ ಕೂಡ ಬರೆದುಕೊಳ್ಳುತ್ತಾರೆ. ಇದಲ್ಲದೆ ಮನೆಯ ಮುಖ್ಯಸ್ಥನ ಹೆಸರನ್ನೂ ಕೂಡ ಅದರ ಮೇಲೆ ಬರೆಯುತ್ತಾರೆ. ಮನೆಯ ಹೊರಗೆ ನಾಮಫಲಕವನ್ನು ಅಳವಡಿಸುವಾಗ ವಿಶೇಷ ಕಾಳಜಿವಹಿಸಬೇಕು. ಇದರಿಂದ ಮನೆಯಲ್ಲಿ ಯಶಸ್ಸು, ಕೀರ್ತಿ ಮತ್ತು ಸುಖ-ಸಮೃದ್ಧಿಯ ಆಗಮನವಾಗುತ್ತದೆ.
ನಾಮಫಲಕ ಅಳವಡಿಸುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ
>> ನಾಮಫಲಕ ಯಾವಾಗಲೂ ಸ್ವಚ್ಛವಾಗಿರಬೇಕು ಮತ್ತು ಸರಿಯಾದ ಗಾತ್ರದಲ್ಲಿರಬೇಕು ಎನ್ನುತ್ತಾರೆ ವಾಸ್ತು ತಜ್ಞರು. ವಾಸ್ತು ಪ್ರಕಾರ ನಾಮಫಲಕದ ಆಕಾರವು ಆಯತಾಕಾರವಾಗಿರಬೇಕು.
>> ನಾಮಫಲಕದಲ್ಲಿ ಎರಡು ಸಾಲುಗಳಲ್ಲಿ ಹೆಸರನ್ನು ಬರೆಯಬೇಕು. ಪ್ರವೇಶ ದ್ವಾರದ ಬಲಭಾಗದಲ್ಲಿ ಅದನ್ನು ಅಳವಡಿಸಬೇಕು.
>> ನಾಮಫಲಕದಲ್ಲಿ ಬರೆದಿರುವ ಅಕ್ಷರಗಳ ವಿನ್ಯಾಸ ಸ್ಫುಟವಾಗಿರಬೇಕು.
>> ನಾಮಫಲಕದ ಮೇಲೆ ಫಲಕ ತುಂಬುವ ರೀತಿಯಲ್ಲಿ ಹೆಸರನ್ನು ಬರೆದಿರಬಾರದು. ಅದರಲ್ಲಿ ಖಾಲಿ ಜಾಗ ಕಾಣಿಸುವಂತಿರಬೇಕು.
>> ಗೋಡೆ ಅಥವಾ ಬಾಗಿಲಿಗೆ ನೆಟ್ ಪ್ಲೇಟ್ ಅಳವಡಿಸುವಾಗ, ಅದು ಯಾವಾಗಲು ಮಧ್ಯಭಾಗದಲ್ಲಿರಬೇಕು ಎಂಬುದರ ಕಾಳಜಿವಹಿಸಿ.
>> ನಾಮಫಲಕ ಎಲ್ಲಿಯೂ ಕೂಡ ಹಾನಿಗೊಳಗಾಗಿರಬಾರದು ಅಥವಾ ಅದರಲ್ಲಿ ರಂಧ್ರಗಳಿರಬಾರದು.
>> ಮನೆಯ ಮುಖ್ಯಸ್ಥನ ರಾಶಿಯ ಆಧಾರದ ಮೇಲೆ ನಾಮಫಲಕದ ಬಣ್ಣ ಇರಬೇಕು ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ.
>> ನಿಮ್ಮ ಆಯ್ಕೆಯ ಅನುಗುಣವಾಗಿ, ನೀವು ನಾಮಫಲಕದ ಒಂದು ಬದಿಯಲ್ಲಿ ಗಣಪತಿ ಅಥವಾ ಸ್ವಸ್ತಿಕ್ ಚಿಹ್ನೆಯನ್ನು ಸಹ ಇರಿಸಬಹುದು.
>> ನಾಮಫಲಕ ಒಡೆದಿದ್ದಲ್ಲಿ ಅಥವಾ ಅದರ ಮೇಲೆ ಬಣ್ಣ ಬಿದ್ದಿದ್ದರೆ ಅದನ್ನು ತಕ್ಷಣ ಬದಲಾಯಿಸಿ. ಇಲ್ಲದಿದ್ದರೆ ಅದು ಮನೆಯಲ್ಲಿನ ನಕಾರಾತ್ಮಕತೆಗೆ ಕಾರಣವಾಗುತ್ತದೆ.
ಇದನ್ನೂ ಓದಿ-Vastu Tips: ದಂಪತಿ ಮಧ್ಯೆ ಕಲಹ ತಪ್ಪಿಸಲು ಬೆಡ್ ರೂಮ್ ವಾಸ್ತು ಹೀಗಿರಲಿ
>> ನಾಮಫಲಕದ ಮೇಲೆ ಬೆಳಕು ಬೀಳಲು ನೀವು ಸಣ್ಣ ಬಲ್ಬ್ ಅನ್ನು ಸಹ ಅಳವಡಿಸಬಹುದು. ಈ ಎಲ್ಲಾ ನಿಯಮಗಳನ್ನು ಅನುಸರಿಸಿದರೆ ಲಕ್ಷ್ಮಿ ದೇವಿಯು ಮನೆಯಲ್ಲಿ ನೆಲೆಸುತ್ತಾಳೆ ಮತ್ತು ಮನೆಯಲ್ಲಿ ಸಂತೋಷ-ಸಮೃದ್ಧಿ ಮತ್ತು ಸಕಾರಾತ್ಮಕತೆಯ ಸಂಚಾರವಾಗುತ್ತದೆ.
ಇದನ್ನೂ ಓದಿ-Name Astrology: ಈ ಹೆಸರಿನ ಹುಡುಗಿಯರು ತುಂಬಾ ಮುದ್ದಾಗಿರುತ್ತಾರೆ!
(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.