ಚಳಿಗಾಲದ ತಲೆ ಹೊಟ್ಟಿನಿಂದ ಬೇಸೊತ್ತಿರುವಿರಾ ? ಹಾಗಾದ್ರೆ ಇಲ್ಲಿದೆ ನೋಡಿ ಮನೆಮದ್ದು

Home Remedies For Dandruff: ತಲೆಹೊಟ್ಟಿನ ಸಮಸ್ಯೆ ಇದು ಸಾಮಾನ್ಯವಾಗಿದ್ದು, ಮಕ್ಕಳಿಂದ ಹಿಡಿದು ಎಲ್ಲ ವಯೋಮಿತಿಯವರನ್ನ ಕಾಡುತ್ತಿರುವ ಪ್ರಮುಖ ಸಮಸ್ಯೆಯಾಗಿದೆ. ಇದರಿಂದ ಹಲವರು ಹೊರಗೆ ಹೋಗಲೂ ಕೂಡ ಹಿಂಜರಿಯುತ್ತಿದ್ದಾರೆ. ಮಾತ್ರವಲ್ಲ, ತಲೆಹೊಟ್ಟಿನ ಸಮಸ್ಯೆ ಅವರ ಆತ್ಮ ವಿಶ್ವಾಸವನ್ನೂ ಕುಗ್ಗಿಸುತ್ತದೆ. ಆದರೆ ಇದು ಅಂತಹ ದೊಡ್ಡ ಸಮಸ್ಯೆಯೇನಲ್ಲ. ತಲೆ ಹೊಟ್ಟಿನ ಸಮಸ್ಯೆ ನಿವಾರಣೆಗೆ ನಿಮ್ಮ ಅಡುಗೆ ಮನೆಯಲ್ಲಿಯೇ ಇದೆ ಸುಲಭ ಪರಿಹಾರ.

Written by - Yashaswini V | Last Updated : Jan 26, 2023, 02:29 PM IST
  • ತಲೆಹೊಟ್ಟಿನ ಸಮಸ್ಯೆ ಇದು ಸಾಮಾನ್ಯವಾಗಿದ್ದು, ಮಕ್ಕಳಿಂದ ಹಿಡಿದು ಎಲ್ಲ ವಯೋಮಿತಿಯವರನ್ನ ಕಾಡುತ್ತಿರುವ ಪ್ರಮುಖ ಸಮಸ್ಯೆಯಾಗಿದೆ.
  • ಉತ್ತಮ ಪ್ರೋಟಿನ್‌ ಇರುವ ಆಹಾರದ ಜೊತೆಗೆ ಹೆಚ್ಚು ನೀರನ್ನು ಕುಡಿಯುದರಿಂದ ಈ ಸಮಸ್ಯೆಯನ್ನ ಸುಧಾರಿಸಿಕೊಳ್ಳಬಹುದು.
  • ಇದಲ್ಲದೆ, ಧೂಳು ಮುಂತಾದ ಮಾಲಿನ್ಯಕಾರಕಗಳಿಂದ ಕೂದಲನ್ನು ರಕ್ಷಿಸಿಕೊಳ್ಳುವುದು ಒಳಿತು.
ಚಳಿಗಾಲದ ತಲೆ ಹೊಟ್ಟಿನಿಂದ ಬೇಸೊತ್ತಿರುವಿರಾ ? ಹಾಗಾದ್ರೆ ಇಲ್ಲಿದೆ ನೋಡಿ ಮನೆಮದ್ದು title=
Dandruff Treatment

Home Remedies For Dandruff: ತಲೆಹೊಟ್ಟು ಪ್ರತಿಯೊಬ್ಬರನ್ನು ಕಾಡುವ ಕೂದಲಿನ ಪ್ರಮುಖ ಹಾಗೂ ಸಾಮಾನ್ಯ ಸಮಸ್ಯೆಯಾಗಿದೆ. ಅತಿಯಾದ ತಲೆಹೊಟ್ಟಿನಿಂದಾಗಿ ಚರ್ಮದ ಮೇಲೆ ತುರಿಕೆ ಉಂಟಾಗುತ್ತದೆ. ಅದರಲ್ಲೂ ಚಳಿಗಾಲದಲ್ಲಿ ತಲೆಯ ಚರ್ಮ ಒಣಗುವುದರಿಂದ ಹೊಟ್ಟಿನ ಸಮಸ್ಯೆ ಇನ್ನಷ್ಟು ಹೆಚ್ಚಾಗುತ್ತದೆ. ಈ ತಲೆ ಹೊಟ್ಟಿಗೆ ನಿಖರವಾದ ಕಾರಣವನ್ನ ಹೇಳಲಾಗುವುದಿಲ್ಲ, ಕೆಲವರ ದೇಹ ಪ್ರಕೃತಿಯು ಇದಕ್ಕೆ ಕಾರಣವಾಗಿರಬಹುದು.

ತಲೆಹೊಟ್ಟಿನ ಸಮಸ್ಯೆ ಇದು ಸಾಮಾನ್ಯವಾಗಿದ್ದು, ಮಕ್ಕಳಿಂದ ಹಿಡಿದು ಎಲ್ಲ ವಯೋಮಿತಿಯವರನ್ನ ಕಾಡುತ್ತಿರುವ ಪ್ರಮುಖ ಸಮಸ್ಯೆಯಾಗಿದೆ. ಇದರಿಂದ ಹಲವರು ಹೊರಗೆ ಹೋಗಲೂ ಕೂಡ ಹಿಂಜರಿಯುತ್ತಿದ್ದಾರೆ. ಮಾತ್ರವಲ್ಲ, ತಲೆಹೊಟ್ಟಿನ ಸಮಸ್ಯೆ ಅವರ ಆತ್ಮ ವಿಶ್ವಾಸವನ್ನೂ ಕುಗ್ಗಿಸುತ್ತದೆ. ಆದರೆ ಇದು ಅಂತಹ ದೊಡ್ಡ ಸಮಸ್ಯೆಯೇನಲ್ಲ. ತಲೆ ಹೊಟ್ಟಿನ ಸಮಸ್ಯೆ ನಿವಾರಣೆಗೆ ನಿಮ್ಮ ಅಡುಗೆ ಮನೆಯಲ್ಲಿಯೇ ಇದೆ ಸುಲಭ ಪರಿಹಾರ.

ಇದನ್ನೂ ಓದಿ- ಕೂದಲಿನ ಈ ಸಮಸ್ಯೆಗಳಿಗೆ ನಿಂಬೆಯೊಂದೇ ಪರಿಹಾರ

ಉತ್ತಮ ಪ್ರೋಟಿನ್‌ ಇರುವ ಆಹಾರದ ಜೊತೆಗೆ ಹೆಚ್ಚು ನೀರನ್ನು ಕುಡಿಯುದರಿಂದ ಈ ಸಮಸ್ಯೆಯನ್ನ ಸುಧಾರಿಸಿಕೊಳ್ಳಬಹುದು. ಧೂಳು ಮುಂತಾದ ಮಾಲಿನ್ಯಕಾರಕಗಳಿಂದ ಕೂದಲನ್ನು ರಕ್ಷಿಸಿಕೊಳ್ಳುವುದು ಒಳಿತು. ಇಲ್ಲವಾದರೆ ಕೂದಲು ಉದುರುವ ಸಮಸ್ಯೆಯನ್ನು ಸಹ ಎದುರಿಸಬೇಕಾಗುತ್ತದೆ. ಇದಲ್ಲದೆ, ಮನೆಮದ್ದನ್ನ ಬಳಸುವುದರಿಂದ ಇಂತಹ ಸಮಸ್ಯೆಗಳಿಗೆ ಕ್ರಮೇಣವಾಗಿ ಮುಕ್ತಿ ನೀಡಬಹುದು. ಹಾಗೆಯೇ ದೇಹದ ಉಷ್ಣತೆ ಹೆಚ್ಚಿಸುವ ಪದಾರ್ಥಗಳನ್ನ ಕಡಿಮೆ ಸೇವಿಸುವುದು ಇಂತಹ ಸಮಸ್ಯೆಗಳಿಗೆ ದಾರಿ ಮಾಡಿಕೊಡುವುದಿಲ್ಲ. ಇದಲ್ಲದೆ, ಕೂದಲಿಗೆ ಸರಿಯಾದ ಆರೈಕೆಯಿಂದಲೂ ತಲೆ ಹೊಟ್ಟಿನ ಸಮಸ್ಯೆಯಿಂದ ಪರಿಹಾರ ಪಡೆಯಲು ಸಹಕಾರಿ ಆಗಲಿದೆ.

ಇದನ್ನೂ ಓದಿ- Dandruff Treatment: ಡ್ಯಾಂಡ್ರಫ್ ಸಮಸ್ಯೆಗೆ ಕೇವಲ 10 ರೂ.ಗಳಲ್ಲಿ ಪಡೆಯಿರಿ ಪರಿಹಾರ

ತಲೆ ಹೊಟ್ಟನ್ನು ಕಡಿಮೆ ಮಾಡಲು ಇಲ್ಲಿವೆ  ಸುಲಭ ಮನೆಮದ್ದುಗಳು : 
* ಕರಿಬೇವಿನ ನಾರನ್ನು ಕೊಬ್ಬರಿ ಎಣ್ಣೆಯಲ್ಲಿ ನೆನೆಸಿ ಎಣ್ಣೆಯನ್ನ ದಿನ ನಿತ್ಯ ಉಪಯೋಗಿಸುವುದರಿಂದ ತಲೆ ಹೊಟ್ಟು ಕ್ರಮೇಣ ಕಡಿಮೆಯಾಗಬಹುದು.
* ಬೇವು ನೆತ್ತಿಯನ್ನು ಸ್ವಚ್ಚಗೊಳಿಲು ಸಹಾಯ ಮಾಡುತ್ತದೆ. ಹಾಗೆಯೇ ಕೂದಲಿನ ಬೆಳವಣಿಗೆಯನ್ನ ಸುಧಾರಿಸಿ ತಲೆಹೊಟ್ಟಿನ ನಿವಾರಣೆಗೆ ಸಹಕಾರಿಯಾಗುತ್ತದೆ. 
* ಕೊಬ್ಬರಿ ಎಣ್ಣೆಯನ್ನ ಬಳಸುವವರು 3 ತಾಸಿಗಿಂತ ಜಾಸ್ತಿ ತಲೆಯಲ್ಲಿ ಎಣ್ಣೆಯನ್ನ ಬಿಡುವುದರಿಂದಲೂ ತಲೆಹೊಟ್ಟು ಉಂಟಾಗುತ್ತದೆ. ಆದ್ದರಿಂದ ತಲೆಯಲ್ಲಿ 3 ತಾಸಿಗಿಂತ ಜಾಸ್ತಿ ತಲೆಯಲ್ಲಿ ಇರದಂತೆ ನೋಡಿಕೊಳ್ಳಬೇಕು.
* ಅಲೋವೇರಾವನ್ನ ಕೂದಲಿನ ಬುಡಕ್ಕೆ ಹಚ್ಚುವುದರಿಂದಲೂ ತಲೆ ಹೊಟ್ಟನ್ನ ನಿವಾರಿಸಬಹುದು. ಇದರಲ್ಲಿ ಆಂಟಿ ಬ್ಯಾಕ್ಟಿರಿಯಾ ಗುಣಗಳಿರುವುದರಿಂದ ಯಾವುದೇ ಸೈಡ್‌ ಎಫೆಕ್ಟ್‌ ಉಂಟಾಗುವುದಿಲ್ಲ.
* ಮೆಂತ್ಯೆ ಕಾಳನ್ನು ರಾತ್ರಿ ನೆನಸಿ ಬೆಳಗ್ಗೆ ಅದರ ಪೇಸ್ಟ್‌ ನ್ನು ತಲೆಯ ಬುಡಕ್ಕೆ ಹಚ್ಚಿ 30 ನಿಮಿಷ ಬಿಟ್ಟು ತಲೆ ತೊಳೆಯುವುದರಿಂದ ತಲೆಹೊಟ್ಟು ನಿವಾರಿಸಬಹುದು.
* ಬೇವಿನ ಪುಡಿಯನ್ನ ತೆಂಗಿನ ಎಣ್ಣೆಯಲ್ಲಿ ಬೆರೆಸಿ ಕೂದಲಿಗೆ ಹಚ್ಚುವುದರಿಂದ ತಲೆಹೊಟ್ಟನ್ನ ನಿವಾರಿಸಬಹುದು.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಿರಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News