Pearl Gemstone: ಈ 5 ರಾಶಿಯವರು ಮುತ್ತುಗಳನ್ನು ಧರಿಸಬಾರದು, ಧರಿಸಿದರೆ ಏನಾಗುತ್ತೆ ಗೊತ್ತಾ..?

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮುತ್ತು ಚಂದ್ರನಿಗೆ ಸಂಬಂಧಿಸಿದೆ. ಚಂದ್ರನು ಮನಸ್ಸಿನ ಕಾರಕ ಗ್ರಹ. ಮಾನಸಿಕ ಸಮಸ್ಯೆಗಳು ಚಂದ್ರನ ದುಷ್ಪರಿಣಾಮಗಳಿಂದ ಬರುತ್ತವೆ. ಚಂದ್ರ ಗ್ರಹವನ್ನು ಬಲಪಡಿಸಲು ಮುತ್ತುಗಳನ್ನು ಧರಿಸಲು ಸಲಹೆ ನೀಡಲು ಇದು ಕಾರಣವಾಗಿದೆ.

Written by - Puttaraj K Alur | Last Updated : Feb 8, 2022, 08:32 PM IST
  • ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಯ ಜನರು ಮುತ್ತುಗಳನ್ನು ಧರಿಸಬಾರದು
  • ಮಿಥುನ ರಾಶಿಯವರು ಮುತ್ತುಗಳನ್ನು ಧರಿಸಿದರೆ ಜೀವನದಲ್ಲಿ ಏರುಪೇರು ಉಂಟಾಗುತ್ತದೆ
  • ಸಿಂಹ ರಾಶಿಯ ಜನರು ಮುತ್ತುಗಳನ್ನು ಧರಿಸಿದರೆ ಇದ್ದಕ್ಕಿದ್ದಂತೆ ಖರ್ಚು ಹೆಚ್ಚಾಗುತ್ತದೆ
Pearl Gemstone: ಈ 5 ರಾಶಿಯವರು ಮುತ್ತುಗಳನ್ನು ಧರಿಸಬಾರದು, ಧರಿಸಿದರೆ ಏನಾಗುತ್ತೆ ಗೊತ್ತಾ..? title=
ಯಾವ ರಾಶಿಯವರು ಮುತ್ತುಗಳನ್ನು ಧರಿಸಬಾರದು ಗೊತ್ತಾ..?

ನವದೆಹಲಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮುತ್ತುಗಳು ಚಂದ್ರನಿಗೆ ಸಂಬಂಧಿಸಿವೆ. ಚಂದ್ರನು ಮನಸ್ಸಿನ ಕಾರಕ ಗ್ರಹ. ಮಾನಸಿಕ ಸಮಸ್ಯೆಗಳು ಚಂದ್ರನ ದುಷ್ಪರಿಣಾಮಗಳಿಂದ ಬರುತ್ತವೆ. ಚಂದ್ರ ಗ್ರಹವನ್ನು ಬಲಪಡಿಸಲು ಮುತ್ತುಗಳನ್ನು ಧರಿಸುವಂತೆ ಸಲಹೆ(Pearls Wearing Rules) ನೀಡಲು ಇದು ಕಾರಣವಾಗಿದೆ. ಜಾತಕದ ಲಗ್ನದಲ್ಲಿರುವ ಗ್ರಹಗಳ ಪ್ರಕಾರ ಮುತ್ತುಗಳನ್ನು ಧರಿಸುವುದು ಲಾಭದಾಯಕವಾಗಿದೆ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಯವರು ಮುತ್ತುಗಳನ್ನು ಧರಿಸಬಾರದು. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ವೃಷಭ ರಾಶಿ (Taurus)

ಈ ರಾಶಿಚಕ್ರವು ಶುಕ್ರ ಗ್ರಹದಿಂದ ಆಳಲ್ಪಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಈ ರಾಶಿಯ ಜನರು ಮುತ್ತುಗಳನ್ನು ಧರಿಸಬಾರದು(Pearl Gemstone). ವೃಷಭ ರಾಶಿಯ ಜನರು ಮುತ್ತುಗಳನ್ನು ಧರಿಸಿದರೆ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದೇ ರೀತಿ ದುಂದುಗಾರಿಕೆ ಹೆಚ್ಚಾಗಲು ಪ್ರಾರಂಭಿಸುತ್ತದೆ. ಕುಟುಂಬದ ಸದಸ್ಯರೊಂದಿಗೆ ಪರಸ್ಪರ ದೂರವಾಗುವ ಸಂದರ್ಭಗಳು ಬರುತ್ತವೆ.  

ಇದನ್ನೂ ಓದಿ: Crystal Ganesha Idol - ಸುಖ-ಸಮೃದ್ಧಿ ಮತ್ತು ಭಾಗ್ಯ ಬೆಳಗಲು ಮನೆಯಲ್ಲಿರಲಿ ಗಣೇಶನ ಈ ವಿಗ್ರಹ

ಮಿಥುನ ರಾಶಿ (Gemini)

ಮಿಥುನ ರಾಶಿಯನ್ನು ಬುಧ ಗ್ರಹ ಆಳುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಈ ರಾಶಿಯ ಜನರು ಮುತ್ತುಗಳನ್ನು ಧರಿಸಬಾರದು(Pearls Gemstone Benefits). ಏಕೆಂದರೆ ಹೀಗೆ ಮಾಡುವುದರಿಂದ ಜೀವನದಲ್ಲಿ ಏರುಪೇರು ಉಂಟಾಗುತ್ತದೆ. ಅಲ್ಲದೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದರ ಹೊರತಾಗಿ ಒತ್ತಡದಿಂದಾಗಿ ಯಾವುದೇ ವಿಶ್ರಾಂತಿ ಇರುವುದಿಲ್ಲ.

ಸಿಂಹ (Leo)

ಸಿಂಹ ರಾಶಿಯು ಸೂರ್ಯ ದೇವರ ಒಡೆತನದಲ್ಲಿದೆ. ಈ ರಾಶಿಯ ಜನರು ಮುತ್ತುಗಳನ್ನು ಧರಿಸಬಾರದು(Benefits Of Pearls). ವಾಸ್ತವವಾಗಿ ಕೆಲವು ಸಂದರ್ಭಗಳಲ್ಲಿ ಸೂರ್ಯ ಮತ್ತು ಚಂದ್ರನ ಸಂಬಂಧವು ಉತ್ತಮವಾಗಿಲ್ಲ. ಈ ರಾಶಿಯ ಜನರು ಮುತ್ತುಗಳನ್ನು ಧರಿಸಿದರೆ ಇದ್ದಕ್ಕಿದ್ದಂತೆ ಖರ್ಚು ಹೆಚ್ಚಾಗುತ್ತದೆ.

ಇದನ್ನೂ ಓದಿ: ಈ 4 ರಾಶಿಯವರ ಮೇಲೆ ಸದಾ ಇರುತ್ತದೆ ಲಕ್ಷ್ಮೀ ಕೃಪೆ, ಜೀವನಪೂರ್ತಿ ಶ್ರೀಮಂತರಾಗಿಯೇ ಇರುತ್ತಾರೆ ಇವರು

ಧನು ರಾಶಿ  (Sagittarius)

ಧನು ರಾಶಿಯ ಅಧಿಪತಿ ಗುರು. ಗುರು ಮತ್ತು ಚಂದ್ರನ ನಡುವೆ ದ್ವೇಷದ ಭಾವನೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಈ ರಾಶಿಯ ಜನರು ಮುತ್ತುಗಳನ್ನು ಧರಿಸಬಾರದು. ಧನು ರಾಶಿಯವರಿಗೆ ಮುತ್ತುಗಳನ್ನು ಧರಿಸುವುದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆಯಿದೆ(Pearls Harmful). ಇದಲ್ಲದೇ ಜೀವನದಲ್ಲಿ ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಕುಂಭ ರಾಶಿ (Aquarius)

ಶನಿಯು ಕುಂಬ ರಾಶಿಯನ್ನು ಆಳುತ್ತಾನೆ. ಚಂದ್ರ ಮತ್ತು ಶನಿಯ ನಡುವಿನ ಸಂಬಂಧ ಚೆನ್ನಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಈ ರಾಶಿಚಕ್ರದ ಜನರು ಮುತ್ತುಗಳನ್ನು ಧರಿಸಬಾರದು. ಜಾತಕದಲ್ಲಿ ಶನಿ ಮತ್ತು ಚಂದ್ರನ ಸಂಯೋಜನೆಯು ವಿಷಯೋಗವನ್ನು ಉಂಟುಮಾಡುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ ಕುಂಭ ರಾಶಿಯವರು ಮುತ್ತುಗಳನ್ನು ಧರಿಸುವುದನ್ನು ತಪ್ಪಿಸಬೇಕು. ಕುಂಭ ರಾಶಿಯವರು ಮುತ್ತುಗಳನ್ನು ಧರಿಸಿದರೆ ಆರೋಗ್ಯದ ಸಮಸ್ಯೆ ಶುರುವಾಗುತ್ತದೆ.

(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು  Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News