ಬಹಳ ಭಾವನಾತ್ಮಕವಾಗಿರುತ್ತಾರೆ ಈ ರಾಶಿಯವರು, ಪ್ರೇಮ ಜೀವನದ ಮೇಲೆ ಆಗಲಿದೆ ಪರಿಣಾಮ

ರಾಶಿಗಳಲ್ಲಿ ಬಹಳ ಭಾವುಕರಾಗಿರುವ  ರಾಶಿಚಕ್ರವೊಂದಿದೆ. ಈ ರಾಶಿಯವರ ವರ್ತನೆ ಅವರ ಪ್ರೀತಿಯ ಜೀವನದ ಮೇಲೂ ಪರಿಣಾಮ ಬೀರುತ್ತದೆ. 

Written by - Ranjitha R K | Last Updated : Nov 30, 2021, 10:28 AM IST
  • ಮೀನ ರಾಶಿಯವರು ತುಂಬಾ ಭಾವುಕರಾಗಿರುತ್ತಾರೆ
  • ವ್ಯಾಪಾರ ಮಾಡಿದರೆ ಪ್ರಗತಿ ಸಾಧಿಸುತ್ತಾರೆ.
  • ಈ ರಾಶಿಯವರು ಬೇಗ ಖಿನ್ನತೆಗೆ ಒಳಗಾಗುತ್ತಾರೆ
ಬಹಳ ಭಾವನಾತ್ಮಕವಾಗಿರುತ್ತಾರೆ ಈ ರಾಶಿಯವರು,  ಪ್ರೇಮ ಜೀವನದ ಮೇಲೆ ಆಗಲಿದೆ ಪರಿಣಾಮ

ನವದೆಹಲಿ : ಪ್ರತಿಯೊಂದು ರಾಶಿಯ ಜನರಲ್ಲೂ (Zodiac sign) ಒಂದಿಷ್ಟು ಒಳ್ಳೆಯದು ಮತ್ತೊಂದಷ್ಟು ಕೆಟ್ಟ ಗುಣಗಳು ಇದ್ದೇ ಇರುತ್ತದೆ. ಅದು ವ್ಯಕ್ತಿಯ ಜೀವನ, ವೃತ್ತಿ, ಸಂಬಂಧಗಳು ಇತ್ಯಾದಿಗಳ ಮೇಲೆ ಸ್ಪಷ್ಟವಾಗಿ ಗೋಚರಿಸುತ್ತದೆ. ತಮ್ಮ ಗುಣಗಳು ಕೆಲವೊಮ್ಮೆ ನಮಗೆ ಅನುಕೂಲವನ್ನು ಉಂಟು ಮಾಡಿದರೆ, ಇನ್ನು ಕೆಲವೊಮ್ಮೆ ಅನಾನುಕೂಲಗಳನ್ನೇ ತಂದೊಡ್ಡಬಹುದು. ಅನೇಕ ಬಾರಿ, ವ್ಯಕ್ತಿಯ ಅಭ್ಯಾಸವು ಅವನ ಜೀವನವನ್ನು ತಲೆಕೆಳಗಾಗಿ ಮಾಡಿ ಬಿಡಬಹುದು. ರಾಶಿಗಳಲ್ಲಿ ಬಹಳ ಭಾವುಕರಾಗಿರುವ  ರಾಶಿಚಕ್ರವೊಂದಿದೆ. ಈ ರಾಶಿಯವರ ವರ್ತನೆ ಅವರ ಪ್ರೀತಿಯ ಜೀವನದ ಮೇಲೂ ಪರಿಣಾಮ ಬೀರುತ್ತದೆ. ಈ ರಾಶಿಯವರು ಬಹಳ ಬೇಗ ಸೌಂದರ್ಯದತ್ತ ಆಕರ್ಷಿತರಾಗುತ್ತಾರೆ. 

ಬೇಗನೆ ಖಿನ್ನತೆಗೆ ಒಳಗಾಗುತ್ತಾರೆ :
ಮೀನ ರಾಶಿಯವರು (Pisces) ತಮ್ಮ ಪ್ರೀತಿಯ ಜೀವನ ಅಥವಾ ವೃತ್ತಿಜೀವನದ ಬಗ್ಗೆ ಆಗಾಗ ತಮ್ಮದೇ ಆದ ಆಲೋಚನೆಗಳಲ್ಲಿ ಕಳೆದುಹೋಗುತ್ತಾರೆ. ಅವರು ಎಲ್ಲವನ್ನೂ ಪರಿಪೂರ್ಣವಾಗಿ ಬಯಸುತ್ತಾರೆ. ಆದರೆ ಬೇಕಾದದ್ದನ್ನು ಪಡೆಯಲು ಶ್ರಮ ವಹಿಸುವ ಬದಲು ಯೋಚನೆಯಲ್ಲಿಯೇ ಸಮಯ ಕಳೆಯುತ್ತಾರೆ. ನಂತರ ತಾವು ಬಯಸಿದ ಫಲಿತಾಂಶ ಸಿಕ್ಕಿಲ್ಲ ಎಂದಾಗುವಾಗ, ದುಃಖ ಪಡುತ್ತಾರೆ, ನಿರಾಶೆಗೊಳ್ಳುತ್ತಾರೆ. ಇವರು ಸ್ವಭಾವತಃ ಉತ್ತಮರು ಮತ್ತು ಮೃದು ಸ್ವಭಾವದವರು.  ಆಕರ್ಷಕ ವ್ಯಕ್ತಿತ್ವವನ್ನು ಕೂಡಾ ಹೊಂದಿರುತ್ತಾರೆ. ಈ ರಾಶಿಯ (Zodiac sign nature) ಜನರು ಬಹಳ ರೋಮ್ಯಾಂಟಿಕ್ ಆಗಿರುತ್ತಾರೆ. 

ಇದನ್ನೂ ಓದಿ : Rashi Parivartan : ರಾಶಿ ಬದಲಾಯಿಸಿದ ಗುರು ಗ್ರಹ : ಈ 5 ರಾಶಿಯವರಿಗೆ ಒಲಿಯಲಿದೆ ಅದೃಷ್ಟ! 

ಬಹಳ ಸೃಜನಶೀಲವಾಗಿರುತ್ತಾರೆ : 
ಮೀನ ರಾಶಿಯವರು ತುಂಬಾ ಸೃಜನಶೀಲರು. ಈ ಜನರು ಆಂಕರಿಂಗ್, ಈವೆಂಟ್ ಮ್ಯಾನೇಜ್‌ಮೆಂಟ್‌ನಂತಹ (event management) ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಮಾಡಿದರೆ, ಉನ್ನತ ಸ್ಥಾನಕ್ಕೇ ಏರುತ್ತಾರೆ.  ಈ ರಾಶಿಯವರು (Zodiac sign) ತಮ್ಮ ಜೀವನದ ಬಗ್ಗೆ ಯಾವುದೇ ನಿಯಮ ಅಥವಾ ತತ್ವವನ್ನು ಮಾಡಿದರೆ, ಅದನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಾರೆ. ಹೆಚ್ಚು ಸೃಜನಾತ್ಮಕವಾಗಿರುತ್ತಾರೆ. ಶಿಕ್ಷಣ, ವೈದ್ಯಕೀಯ, ರಾಜಕೀಯ ಮುಂತಾದ ಕ್ಷೇತ್ರಗಳಲ್ಲೂ ಉತ್ತಮ ಯಶಸ್ಸನ್ನು ಪಡೆಯುತ್ತಾರೆ. ಅಂದಹಾಗೆ, ಈ ಜನರು ಉದ್ಯೋಗಕ್ಕಿಂತ ವ್ಯವಹಾರದಲ್ಲಿ ಹೆಚ್ಚಿನ ಯಶಸ್ಸನ್ನು ಪಡೆಯುತ್ತಾರೆ. 

ಇದನ್ನೂ ಓದಿ : Kharmas 2021 - ಈ 30 ದಿನಗಳಲ್ಲಿ ಯಾವುದೇ ಶುಭ ಕಾರ್ಯ ಮಾಡಬೇಡಿ, ಕಾರಣ ಇಲ್ಲಿದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ. 

More Stories

Trending News