ದಾಳಿಂಬೆಯನ್ನು ಇದರೊಟ್ಟಿಗೆ ಬೆರೆಸಿ ಹಚ್ಚಿದರೆ ಬಿಳಿ ಕೂದಲು ಕಪ್ಪಾಗಿ ಮಾರುದ್ದ ಕೇಶರಾಶಿ ಬೆಳೆಯುವುದು!

Hair Growth Mask: ಮಳೆಗಾಲದಲ್ಲಿ ಚರ್ಮದ ಜೊತೆಗೆ ಕೂದಲಿಗೆ ವಿಶೇಷ ಕಾಳಜಿ ಬೇಕು. ಬೇಸಿಗೆಯಲ್ಲಿ ಕೂದಲಿಗೆ ಹಾನಿಯ ಜೊತೆಗೆ ಬೆವರುವಿಕೆಯಿಂದ ಕೂದಲು ಉದುರುವುದು ಹೆಚ್ಚಾಗುತ್ತದೆ. 

Written by - Chetana Devarmani | Last Updated : Jun 9, 2024, 09:01 AM IST
  • ಕೂದಲು ಬೆಳವಣಿಗೆ ಮಾಸ್ಕ್
  • ದಾಳಿಂಬೆ ಹೇರ್ ಮಾಸ್ಕ್ ಪ್ರಯೋಜನಗಳು
  • ದಾಳಿಂಬೆ ಹೇರ್ ಮಾಸ್ಕ್ ಮಾಡುವುದು ಹೇಗೆ?
ದಾಳಿಂಬೆಯನ್ನು ಇದರೊಟ್ಟಿಗೆ ಬೆರೆಸಿ ಹಚ್ಚಿದರೆ ಬಿಳಿ ಕೂದಲು ಕಪ್ಪಾಗಿ ಮಾರುದ್ದ ಕೇಶರಾಶಿ ಬೆಳೆಯುವುದು!   title=

Pomegranate Hair Mask Benefits: ಮಳೆಗಾಲದಲ್ಲಿ ಚರ್ಮದ ಜೊತೆಗೆ ಕೂದಲಿಗೆ ವಿಶೇಷ ಕಾಳಜಿ ಬೇಕು. ಬೇಸಿಗೆಯಲ್ಲಿ ಕೂದಲಿಗೆ ಹಾನಿಯ ಜೊತೆಗೆ ಬೆವರುವಿಕೆಯಿಂದ ಕೂದಲು ಉದುರುವುದು ಹೆಚ್ಚಾಗುತ್ತದೆ. ಕೂದಲು ಉದುರುವಿಕೆ ತಡೆಯಲು ಅನೇಕ ರೀತಿಯ ಉತ್ಪನ್ನಗಳನ್ನು ಜನರು ಬಳಸುತ್ತಾರೆ. ಆದರೆ ಈ ಉತ್ಪನ್ನಗಳ ಬಳಕೆಯು ಕೂದಲಿಗೆ ಹಾನಿಯನ್ನುಂಟು ಮಾಡುತ್ತದೆ. 

ಕೆಮಿಕಲ್‌ ಯುಕ್ತ ಉತ್ಪನ್ನಗಳ ಬದಲು ದಾಳಿಂಬೆಯಿಂದ ಮಾಡಿದ ಈ ಹೇರ್ ಪ್ಯಾಕ್ ಅನ್ನು ಹಚ್ಚುವುದರಿಂದ ಕೂದಲಿಗೆ ರಕ್ಷಣೆ ದೊರೆಯುತ್ತದೆ. ದಾಳಿಂಬೆಯಲ್ಲಿರುವ ಆಂಟಿ-ಆಕ್ಸಿಡೆಂಟ್‌ಗಳು ಕೂದಲನ್ನು ಬಲಪಡಿಸುತ್ತದೆ. ನೆತ್ತಿಯಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ದಾಳಿಂಬೆ ಹೇರ್ ಪ್ಯಾಕ್ ಹಚ್ಚುವುದರಿಂದ ಕೂದಲಿನ ಹೊಳಪು ಹೆಚ್ಚುತ್ತದೆ. ಕೂದಲು ಸ್ಟ್ರಾಂಗ್ ಆಗುತ್ತದೆ.

ಇದನ್ನೂ ಓದಿ:  High BP : ಈ ಕೆಂಪು ತರಕಾರಿ ಎಷ್ಟೇ ಹೈ ಬಿಪಿ ಇದ್ದರೂ ಕ್ಷಣದಲ್ಲೇ ಕಂಟ್ರೋಲ್‌ ಮಾಡುತ್ತೆ !

ದಾಳಿಂಬೆ ಮತ್ತು ಮೊಸರು ಹೇರ್ ಪ್ಯಾಕ್

ದಾಳಿಂಬೆ ಮತ್ತು ಮೊಸರಿನ ಹೇರ್ ಪ್ಯಾಕ್ ಮಾಡಲು 7 - 8 ಸ್ಪೂನ್‌ ದಾಳಿಂಬೆ ಬೀಜಗಳನ್ನು 3-4 ಚಮಚ ಮೊಸರಿನ ಜೊತೆ ಬ್ಲೆಂಡರ್‌ನಲ್ಲಿ ಹಾಕಿ ಪೇಸ್ಟ್‌ ಮಾಡಿ. ಈಗ ಈ ಮಿಶ್ರಣವನ್ನು ಕೂದಲಿನ ಬೇರಿನಿಂದ ತುದಿಯವರೆಗೆ ಹಚ್ಚಿಕೊಳ್ಳಿ. 20 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ಒಣಗಿಸಿ. ಬಳಿಕ ಕೂದಲನ್ನು ನೀರಿನಿಂದ ತೊಳೆಯಿರಿ. ಈ ಹೇರ್ ಪ್ಯಾಕ್ ಕೂದಲಿಗೆ ಪೋಷಣೆ ನೀಡಿ ನೆತ್ತಿಯನ್ನು ಆರೋಗ್ಯವಾಗಿರಿಸುತ್ತದೆ. 

ದಾಳಿಂಬೆ ಮತ್ತು ಜೇನುತುಪ್ಪ ಹೇರ್ ಪ್ಯಾಕ್

1 ಟೀ ಸ್ಪೂನ್ ಜೇನುತುಪ್ಪದ ಜೊತೆಗೆ 4 ರಿಂದ 5 ಚಮಚಗಳು ದಾಳಿಂಬೆ ಬೀಜ ಹಾಕಿ ಮಿಕ್ಸಿ ಮಾಡಿ. ಈ ಪೇಸ್ಟ್‌ನ್ನು ಕೂದಲಿಗೆ ಸಂಪೂರ್ಣವಾಗಿ ಅನ್ವಯಿಸಿ. 10 ನಿಮಿಷದ ಬಳಿಕ ನೀರಿನಿಂದ ವಾಶ್‌ ಮಾಡಿ. ಈ ಹೇರ್ ಪ್ಯಾಕ್ ಕೂದಲು ಒಣಗುವುದನ್ನು ತಡೆಯುತ್ತದೆ. ಕೂದಲು ಉದುರುವುದನ್ನು ತಡೆಯುತ್ತದೆ. ಕೂದಲಿಗೆ ಹೊಳಪನ್ನೂ ತರುತ್ತದೆ.

ದಾಳಿಂಬೆ ಮತ್ತು ಆಲಿವ್ ಅಯಿಲ್ ಹೇರ್ ಪ್ಯಾಕ್

1/4 ಕಪ್ ದಾಳಿಂಬೆ ರಸ, 1 ಟೀಚಮಚ ಆಲಿವ್ ಎಣ್ಣೆ ಮತ್ತು 1/2 ಕಪ್ ನೀರು ತೆಗೆದುಕೊಂಡು ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ ಮತ್ತು 20 ನಿಮಿಷಗಳ ಕಾಲ ಬಿಡಿ. ಅದರ ನಂತರ ಕೂದಲನ್ನು ನೀರಿನಿಂದ ತೊಳೆಯಿರಿ. ಈ ಹೇರ್ ಪ್ಯಾಕ್ ಕೂದಲಿಗೆ ಆಂತರಿಕವಾಗಿ ಪೋಷಣೆ ನೀಡುತ್ತದೆ. ಬೆಳವಣಿಗೆಯನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ:  ಈ ಹಸಿರು ಎಲೆಯ ಒಂದು ಹನಿ ರಸ ಬ್ಲಡ್‌ ಶುಗರ್‌ ಅನ್ನು ನಿಮಿಷಗಳಲ್ಲಿ ನಿಯಂತ್ರಣಕ್ಕೆ ತರುವುದು!

(ಸೂಚನೆ: ಈ ಮಾಹಿತಿ ಮನೆಮದ್ದುಗಳನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮುನ್ನ ವೈದ್ಯರ ಸಲಹೆ ಅಗತ್ಯ. ಜೀ ಕನ್ನಡ ನ್ಯೂಸ್‌ ಯಾವ ರೀತಿಯಲ್ಲೂ ಹೊಣೆಯಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News