ಪುಷ್ಪಾ ವಿಲನ್ ಫಹಾದ್ ಫಾಜಿಲ್ ವಿರುದ್ಧ ಪ್ರಕರಣ ದಾಖಲು!

case against Pushpa villain Fahad Fazil: ಫಹದ್ ನಿರ್ಮಾಣ ಮಾಡುತ್ತಿರುವ ಪಿಂಕೇಲಿ ಸಿನಿಮಾ ಶೂಟಿಂಗ್ ಹಂತದಲ್ಲಿದೆ. ಇದೇ ವೇಳೆ ಫಹಾದ್ ಫಾಜಿಲ್ ವಿರುದ್ಧ ಪ್ರಕರಣವೊಂದು ದಾಖಲಾಗಿದೆ. 

Written by - Savita M B | Last Updated : Jun 29, 2024, 05:17 PM IST
  • ಪುಷ್ಪಾ ವಿಲನ್ ಫಹದ್ ನಿರ್ಮಾಣ ಮಾಡುತ್ತಿರುವ ಪಿಂಕೇಲಿ ಸಿನಿಮಾ ಶೂಟಿಂಗ್ ಹಂತದಲ್ಲಿದೆ.
  • ಈ ಚಿತ್ರದ ಚಿತ್ರೀಕರಣವನ್ನು ಇತ್ತೀಚೆಗೆ ಕೇರಳದ ಎರ್ನಾಕುಲಂ ತುರ್ತು ಚಿಕಿತ್ಸಾ ವಿಭಾಗದಲ್ಲಿ ನಡೆಸಲಾಯಿತು
ಪುಷ್ಪಾ ವಿಲನ್ ಫಹಾದ್ ಫಾಜಿಲ್ ವಿರುದ್ಧ ಪ್ರಕರಣ ದಾಖಲು!  title=

Fahad Fazil: ಪುಷ್ಪಾ ವಿಲನ್ ಫಹದ್ ನಿರ್ಮಾಣ ಮಾಡುತ್ತಿರುವ ಪಿಂಕೇಲಿ ಸಿನಿಮಾ ಶೂಟಿಂಗ್ ಹಂತದಲ್ಲಿದೆ. ಈ ಚಿತ್ರದ ಚಿತ್ರೀಕರಣವನ್ನು ಇತ್ತೀಚೆಗೆ ಕೇರಳದ ಎರ್ನಾಕುಲಂ ತುರ್ತು ಚಿಕಿತ್ಸಾ ವಿಭಾಗದಲ್ಲಿ ನಡೆಸಲಾಯಿತು. ಈ ವೇಳೆ ಸಾಮಾನ್ಯ ರೋಗಿಗಳು ತೀವ್ರ ತೊಂದರೆಗೊಳಗಾಗಿದ್ದಾರೆ... ಈ ವಿಷಯವನ್ನು ಸುಮೋಟೋ ಆಗಿ ತೆಗೆದುಕೊಂಡಿರುವ ಮಾನವ ಹಕ್ಕುಗಳ ಆಯೋಗ, ನಿರ್ಮಾಪಕ ಫಹಾದ್ ಫಾಜಿಲ್ ವಿರುದ್ಧ ಕೇರಳದಲ್ಲಿ ಪ್ರಕರಣ ದಾಖಲಿಸಿದೆ.  

ಇದನ್ನೂ ಓದಿ-ಗೌರಿ ರಿಲೀಸ್ ಡೇಟ್ ಅನೌನ್ಸ್: ಈ ವಿಶೇಷ ದಿನಕ್ಕೆ ಬರುತ್ತಿದೆ ಇಂದ್ರಜಿತ್ ಸಿನಿಮಾ

 ಫಹಾದ್ ಫಾಜಿಲ್ ಖ್ಯಾತ ಮಲಯಾಳಂ ನಟ. ನಿರ್ಮಾಪಕರಾಗಿ ಹಲವು ಸಿನಿಮಾ ಮಾಡಿ ಯಶಸ್ಸು ಕಂಡಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾದ ‘ಆವೇಷಂ’ ಚಿತ್ರದ ಮೂಲಕ ಬ್ಲಾಕ್‌ಬಸ್ಟರ್ ಹಿಟ್ ಗಳಿಸಿದರು. ಫಹಾದ್ ಮಲಯಾಳಂನಲ್ಲೂ ನಿರ್ಮಾಪಕರಾಗಿ ಹಲವು ಸಿನಿಮಾ ಮಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಸರ್ಕಾರಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ಪಿಂಕೆಲಿ ಚಿತ್ರದ ಚಿತ್ರೀಕರಣ ನಡೆದಿದೆ. ಗುರುವಾರ ರಾತ್ರಿಯಿಡೀ ತುರ್ತು ಚಿಕಿತ್ಸಾ ವಿಭಾಗದಲ್ಲಿ ಗುಂಡಿನ ದಾಳಿಯ ಶೂಟಿಂಗ್ ನಡೆದಿದ್ದರಿಂದ ಅಲ್ಲಿನ ರೋಗಿಗಗಳಿಗೆ ತೀವ್ರ ತೊಂದರೆ ಆಗಿದೆ ಎಂದು ವರದಿಯಾಗಿದೆ.. 

ಇದನ್ನೂ ಓದಿ-ಶೂಟಿಂಗ್ ಮುಗಿಸಿದ ʼಒನ್ ಅಂಡ್ ಹಾಫ್ʼ...! ನಿರ್ಮಾಪಕ ಹುಟ್ಟುಹಬ್ಬಕ್ಕೆ ಸಾಂಗ್ ಗ್ಲಿಂಪ್ಸ್ ಗಿಫ್ಟ್‌

 ಎರ್ನಾಕುಲಂ ಜಿಲ್ಲಾ ವೈದ್ಯಾಧಿಕಾರಿ ಬೀನಾ ಕುಮಾರಿ ಕೂಡ ಮೂಲ ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಿತ್ರೀಕರಣಕ್ಕೆ ಅನುಮತಿ ನೀಡಿದ್ದು ಹೇಗೆ ಎಂದು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ.. ಅಲ್ಲದೇ ಏಳು ದಿನಗಳೊಳಗೆ ವಿವರಣೆ ನೀಡುವಂತೆ ಆದೇಶ ನೀಡಲಾಗಿದೆ.. ಆದರೆ, ಚಲನಚಿತ್ರ ನಿರ್ಮಾಪಕರ ಸಂಘ ಈ ಆರೋಪವನ್ನು ನಿರಾಕರಿಸಿದೆ. ಈ ಇಡೀ ವಿಷಯವನ್ನು ಸುಮೋಟೋ ಆಗಿ ತೆಗೆದುಕೊಂಡ ಕೇರಳ ಮಾನವ ಹಕ್ಕುಗಳ ಆಯೋಗ ನಿರ್ಮಾಪಕ ಫಹಾದ್ ಫಾಜಿಲ್ ವಿರುದ್ಧ ಪ್ರಕರಣ ದಾಖಲಿಸಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News