Feng Shui Tips: ಅವಿವಾಹಿತರು ತಮ್ಮ ಬೇಡ ರೂಂನಲ್ಲಿ ಈ ವಸ್ತುಗಳನ್ನು ಇಡಬಾರದು, ಕಾರಣ ಇಲ್ಲಿದೆ

Feng Shui Tips for Bedroom: ಮಲಗುವ ಕೋಣೆ ತಪ್ಪು ಒಂದು ವೇಳೆ ತಪ್ಪು ದಿಕ್ಕಿನಲ್ಲಿರುವುದರಿಂದ ಯಾವ ರೀತಿ ಆರೋಗ್ಯ, ಆರ್ಥಿಕ, ಮಾನಸಿಕ ಸ್ಥಿತಿಗಳು ಸೇರಿದಂತೆ ವೈವಾಹಿಕ ಜೀವನ-ಪ್ರೇಮ ಜೀವನದ ಮೇಲೆ ಪರಿಣಾಮ ಬೀರುತ್ತದೆಯೋ ಹಾಗೆಯೇ ಮಲಗುವ ಕೋಣೆಯಲ್ಲಿ ಇರಿಸಲಾಗಿರುವ ಕೂಡ ಸಾಕಷ್ಟು ಪ್ರಭಾವ ಬೀರುತ್ತವೆ. ಫೆಂಗ್ ಶೂಯಿ ನಿಯಮಗಳ ಪ್ರಕಾರ, ಮಲಗುವ ಕೋಣೆಯಲ್ಲಿ ಕೆಲವು ವಸ್ತುಗಳನ್ನು ಇಡುವುದನ್ನು ನಿಷೇಧಿಸಲಾಗಿದೆ.  

Written by - Nitin Tabib | Last Updated : Jun 12, 2022, 01:50 PM IST
  • ಫೆಂಗ್ ಶೂಯಿಯಲ್ಲಿ ಮಲಗುವ ಕೋಣೆಯ ಬಗ್ಗೆ ಪ್ರಮುಖ ವಿಷಯಗಳನ್ನು ಸಹ ಹೇಳಲಾಗಿದೆ.
  • ಇದರ ಪ್ರಕಾರ, ಅವಿವಾಹಿತರು ತಮ್ಮ ಮಲಗುವ ಕೋಣೆಯಲ್ಲಿ ಕೆಲವು ವಸ್ತುಗಳನ್ನು ಇರಿಸುವುದರಿಂದ ದೊಡ್ಡ ಹಾನಿ ಸಂಭವಿಸುತ್ತದೆ ಎನ್ನಲಾಗಿದೆ.
Feng Shui Tips: ಅವಿವಾಹಿತರು ತಮ್ಮ ಬೇಡ ರೂಂನಲ್ಲಿ ಈ ವಸ್ತುಗಳನ್ನು ಇಡಬಾರದು, ಕಾರಣ ಇಲ್ಲಿದೆ title=
Feng Shuei Rules

Feng Shui Tips for Unmarried People: ಚೀನೀ ವಾಸ್ತು ಶಾಸ್ತ್ರ ಫೆಂಗ್ ಶೂಯಿನಲ್ಲಿ ನಿಯಮಗಳನ್ನು ಅನುಸರಿಸುವ ಮೂಲಕ ಹಲವು ಸಮಸ್ಯೆಗಳನ್ನು ಹೇಗೆ ನಿವಾರಿಸುವುದು ಎಂಬುದನ್ನು ಹೇಳಲಾಗಿದೆ. ಇದರೊಂದಿಗೆ, ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯಲು, ಮನೆ ಮತ್ತು ಕಚೇರಿಯಲ್ಲಿ ಕೆಲವು ವಿಶೇಷ ವಸ್ತುಗಳನ್ನು ಇರಿಸಲು ಸಲಹೆ ನೀಡಲಾಗುತ್ತದೆ. ಫೆಂಗ್ ಶೂಯಿಯಲ್ಲಿ ಮಲಗುವ ಕೋಣೆಯ ಬಗ್ಗೆ ಪ್ರಮುಖ ವಿಷಯಗಳನ್ನು ಸಹ ಹೇಳಲಾಗಿದೆ. ಇದರ ಪ್ರಕಾರ, ಅವಿವಾಹಿತರು ತಮ್ಮ  ಮಲಗುವ ಕೋಣೆಯಲ್ಲಿ ಕೆಲವು ವಸ್ತುಗಳನ್ನು ಇರಿಸುವುದರಿಂದ ದೊಡ್ಡ ಹಾನಿ ಸಂಭವಿಸುತ್ತದೆ ಎನ್ನಲಾಗಿದೆ. ಈ ವಸ್ತುಗಳು ಅವರ ಪ್ರೇಮ ಜೀವನದಲ್ಲಿ ಮತ್ತು ಭವಿಷ್ಯದ ವೈವಾಹಿಕ ಜೀವನದಲ್ಲಿ ತೊಂದರೆಗಳನ್ನು ತರುವ ಸಾಧ್ಯತೆ ಇದೆ ಎನ್ನಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಅವಿವಾಹಿತರು ತಮ್ಮ ಮಲಗುವ ಕೋಣೆಯಲ್ಲಿ ಯಾವ ವಸ್ತುಗಳನ್ನು ಇಡಬಾರದು ಅಥವಾ ಈಗಾಗಲೇ ಇರಿಸಿದ್ದರೆ, ಅವುಗಳನ್ನು ಹೊರಹಾಕಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,

ಅವಿವಾಹಿತರು ತಮ್ಮ ಮಲಗುವ ಕೋಣೆಯಲ್ಲಿ ಈ ವಸ್ತುಗಳನ್ನು ಇಡಬಾರದು
>> ಅವಿವಾಹಿತರು ತಮ್ಮ ಮಲಗುವ ಕೋಣೆಯಲ್ಲಿ ಟಿವಿ-ಕಂಪ್ಯೂಟರ್ ಅನ್ನು ಇಡಬಾರದು, ಇದು ಅವರ ಜೀವನದಲ್ಲಿ ತಪ್ಪು ತಿಳುವಳಿಕೆ ಮತ್ತು ಸಂವಹನದ ಕೊರತೆಯನ್ನು ಉಂಟುಮಾಡಬಹುದು. ಈ ವಸ್ತುಗಳು ಪ್ರೇಮ ಜೀವನದಲ್ಲಿ ತೊಂದರೆಗೆ ಕಾರನವಾಗಬಹುದು.

>> ಅವಿವಾಹಿತರು ತಮ್ಮ ಮಲಗುವ ಕೋಣೆಯಲ್ಲಿ ನದಿ, ಕೊಳ, ಜಲಪಾತ ಮುಂತಾದ ನೀರಿಗೆ ಸಂಬಂಧಿಸಿದ ಯಾವುದೇ ಚಿತ್ರಗಳನ್ನು ಹಾಕಬಾರದು. ಇದರಿಂದ ಅವರ ಭಾವಿ ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಎದುರಾಗಬಹುದು.

>> ಮಲಗುವ ಕೋಣೆಯಲ್ಲಿ ಪಾರ್ಟಿಷನ್ ಇರುವುದು, ಕೋಣೆಯ ಮೇಲ್ಛಾವಣಿಯ ಮಧ್ಯಭಾಗದಲ್ಲಿ ಬೀಮ್ ಇರುವುದು ಅಥವಾ ಕೋಣೆಯ ಮಧ್ಯದಲ್ಲಿ ಕಂಬಗಳು ಇರುವುದು, ಅವರ ಮದುವೆಯಲ್ಲಿ ಅಡೆತಡೆಗಳನ್ನು ಸೃಷ್ಟಿಸುತ್ತವೆ. ಹೀಗಾಗಿ ಅಂತಹ ಕೋಣೆಯಲ್ಲಿ ಮಲಗಬೇಡಿ.

>> ಅವಿವಾಹಿತರು 2 ಹಾಸಿಗೆಯ ಮೇಲೆ ಮಲಗಬಾರದು. ಇದು ಅವರ ಜೀವನದಲ್ಲಿ ನಕಾರಾತ್ಮಕತೆಯನ್ನು ತರುತ್ತದೆ. ಪ್ರೇಮ ಜೀವನದಲ್ಲಿ ಸಮಸ್ಯೆಗಳನ್ನೂ ಕೂಡ ಸೃಷ್ಟಿಸುತ್ತದೆ.

>> ಅವಿವಾಹಿತರು ಮಲಗುವ ಕೋಣೆಯಲ್ಲಿ ಟಾಯ್ಲೆಟ್-ವಾಶ್‌ರೂಮ್ ಅಟ್ಯಾಚ್ ಆಗಿದ್ದರೆ, ಅದರ ಬಾಗಿಲು ಯಾವಾಗಲೂ ಮುಚ್ಚಿರಬೇಕು. ವಿಶೇಷವಾಗಿ ಶೌಚಾಲಯದ ಬಾಗಿಲು ಹಾಸಿಗೆಯ ಮುಂಭಾಗದಲ್ಲಿದ್ದರೆ ಅದರ ಬಾಗಿಲನ್ನು ಯಾವಾಗಲು ಮುಚ್ಚಿರಿ. 

>> ಅವಿವಾಹಿತರು ತಮ್ಮ ಮಲಗುವ ಕೋಣೆಯಲ್ಲಿ ತಮ್ಮ ಹಾಸಿಗೆಯನ್ನು ಯಾವುದೇ ಮೂಲೆಗೆ ಅಥವಾ ಕಿಟಕಿಗೆ ಹೊಂದಿಕೊಂಡಂತೆ ಇರಿಸಬಾರದು.

ಇದನ್ನೂ ಓದಿ-ಗ್ರಹ ದೋಷಗಳ ಪರಿಹಾರಕ್ಕೆ ಈ ಮಂತ್ರ ಪಠಿಸಿ: ಮಂಗಳಕರ ಫಲ ಪಡೆಯಿರಿ

>> ಎಲ್ಲಾ ಜನರು ಮಲಗುವ ಕೋಣೆಯಲ್ಲಿ ಕನ್ನಡಿ ಹಾಕುವುದನ್ನು ತಪ್ಪಿಸಬೇಕು. ಅದರಲ್ಲಿಯೂ ವಿಶೇಷವಾಗಿ ತಮ್ಮ ಮಲಗುವ ಕೋಣೆಯಲ್ಲಿ ಕನ್ನಡಿಯನ್ನು ಹಾಕಲೇಬಾರದು. ಒಂದು ವೇಳೆ ಈಗಾಗಲೇ ಕನ್ನಡಿ ಇದ್ದರೆ ಯಾವಾಗಲು ಮುಚ್ಚಿಡಬೇಕು.

ಇದನ್ನೂ ಓದಿ-Knowledge Story: ನೀವು ಬಳಸುವ ಟೂತ್‌ಪೇಸ್ಟ್‌ ಹೇಗೆ ತಯಾರಾಗುತ್ತೆ ಗೊತ್ತಾ?

(ಹಕ್ಕುತ್ಯಾಗ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News