Shani Gochar: ಶನಿಯ ರಾಶಿ ಪರಿವರ್ತನೆ, ನಿಮ್ಮ ಜೀವನದ ಮೇಲೆ ಯಾವ ಪ್ರಭಾವ ಉಂಟಾಗಲಿದೆ, ಇಲ್ಲಿದೆ ವಿವರ

Saturn Transit 2022: ಶನಿಯ ರಾಶಿ ಪರಿವರ್ತನೆ ಒಂದು ರಾಶಿಯ ಜನರ ಪಾಲಿಗೆ ಸಾಡೆಸಾತಿ ಮತ್ತು ಇನ್ನೊಂದು ರಾಶಿಯ ಜನರ ಪಾಲಿಗೆ ಎರಡುವರೆ ವರ್ಷ ಶನಿಕಾಟ ತರುತ್ತದೆ. ಮುಂಬರುವ ವರ್ಷದಲ್ಲಿ (Shani Gochar 2022) ಒಟ್ಟು 8 ರಾಶಿ ಚಕ್ರದ ಜನರ ಪಾಲಿಗೆ ಶನಿ ಮಹಾದೆಸೆ ಇರಲಿದೆ. 

Written by - Nitin Tabib | Last Updated : Nov 23, 2021, 12:48 PM IST
  • ಶನಿಯ ರಾಶಿ ಪರಿವರ್ತನೆಯಿಂದ ಮಹಾ ಬದಲಾವಣೆ
  • ಕುಂಭ ರಾಶಿಯ ಜನರ ಪಾಲಿಗೆ ಸಾಡೆಸಾತಿ ಆರಂಭ
  • ಒಟ್ಟು 8 ರಾಶಿಯ ಜಾತಕದವರ ಮೇಲೆ ಶನಿಯ ಮಹಾದೆಸೆ ಇರಲಿದೆ.
Shani Gochar: ಶನಿಯ ರಾಶಿ ಪರಿವರ್ತನೆ, ನಿಮ್ಮ ಜೀವನದ ಮೇಲೆ ಯಾವ ಪ್ರಭಾವ ಉಂಟಾಗಲಿದೆ, ಇಲ್ಲಿದೆ ವಿವರ title=
Saturn Transit 2022 (File Photo)

ನವದೆಹಲಿ: Shani Rashi Parivartan - ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ಶನಿಯನ್ನು (Shani Dev) ಕ್ರೂರ ದೇವತೆ ಎಂದು ಪರಿಗಣಿಸಲಾಗುತ್ತದೆ. ಶನಿಯು ಎಲ್ಲಾ ಗ್ರಹಗಳಲ್ಲಿ ನಿಧಾನವಾಗಿ ಚಲಿಸುತ್ತದೆ ಮತ್ತು ಎರಡೂವರೆ ವರ್ಷಗಳಲ್ಲಿ ಒಮ್ಮೆ ತನ್ನ  ರಾಶಿಯನ್ನು  ಬದಲಾಯಿಸುತ್ತದೆ. ಆದ್ದರಿಂದ, ಶನಿ ಸ್ಥಾನದಲ್ಲಿನ ಪ್ರತಿಯೊಂದು ಬದಲಾವಣೆಯು ಎಲ್ಲಾ ರಾಶಿಚಕ್ರದ ಚಿಹ್ನೆಗಳ ಮೇಲೆ ದೀರ್ಘವಾದ ಪರಿಣಾಮವನ್ನು ಬೀರುತ್ತದೆ. ಪ್ರಸ್ತುತ ಶನಿಯು ಮಕರ ರಾಶಿಯಲ್ಲಿದ್ದು ಮುಂದಿನ ವರ್ಷ ಅಂದರೆ 2022ರ ಏಪ್ರಿಲ್ ನಲ್ಲಿ ತನ್ನ ರಾಶಿಯನ್ನು ಬದಲಾಯಿಸಿ ಕುಂಭ ರಾಶಿಯನ್ನು ಪ್ರವೇಶಿಸಲಿದೆ. ಸದ್ಯ ಧನು, ಮಕರ, ಕುಂಭ ರಾಶಿಗಳಲ್ಲಿ ಶನಿಯ ಸಾಡೇ ಸಾತಿ (Shani Sade Sati On Zodiac Signs) ನಡೆಯುತ್ತಿದ್ದು, ಮಿಥುನ-ತುಲಾ ರಾಶಿಯಲ್ಲಿ ಶನಿಯ ಎರಡೂವರೆ ವರ್ಷದ ದೆಸೆ ನಡೆಯುತ್ತಿದೆ.

ಈ ರಾಶಿಗಳ ಮೇಲೆ ಮಹಾದೆಸೆ  ಆರಂಭವಾಗುತ್ತದೆ
ಶನಿಯು ಕುಂಭ ರಾಶಿಯನ್ನು ಪ್ರವೇಶಿಸಿದ ಕೂಡಲೇ ಮೀನ, ಕುಂಭ ಮತ್ತು ಮಕರ ರಾಶಿಯ ಮೇಲೆ ಶನಿಯ ಎರಡೂವರೆ ವರ್ಷ ಪ್ರಾರಂಭವಾಗಲಿದೆ. ಇದಲ್ಲದೆ, ಶನಿಯ ಎರಡೂವರೆ ವರ್ಷದ ದೆಸೆ ಕರ್ಕ ಮತ್ತು ವೃಶ್ಚಿಕ ರಾಶಿಯ ಮೇಲೆ ಚಲಿಸುತ್ತದೆ. ಇದರ ನಂತರ, ಶನಿಯು ಮಾರ್ಚ್ 29, 2025 ರಂದು ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಈ ರೀತಿಯಾಗಿ, ಜ್ಯೋತಿಷ್ಯ ಲೆಕ್ಕಾಚಾರದ ಆಧಾರದ ಮೇಲೆ, 2022 ರಲ್ಲಿ, ಒಟ್ಟು 8  ರಾಶಿಗಳು ಶನಿಯು ಪ್ರಭಾವಕ್ಕೆ ಒಳಗಾಗಲಿವೆ. ಧನು ರಾಶಿ, ಮಕರ , ಕುಂಭ, ಮೀನ, ಮಿಥುನ, ತುಲಾ, ಕರ್ಕ ಮತ್ತು ವೃಶ್ಚಿಕ ರಾಶಿಗಳು ಪ್ರಭಾವಕ್ಕೆ ಒಳಗಾಗಲಿವೆ. ಮತ್ತೊಂದೆಡೆ, ಮೇಷ, ವೃಷಭ, ಸಿಂಹ ಮತ್ತು ಕನ್ಯಾ ರಾಶಿಯ ಜನರು ವರ್ಷವಿಡೀ ಶನಿಯ ಪ್ರಭಾವದಿಂದ ಮುಕ್ತರಾಗಿರಲಿದ್ದಾರೆ. 

ಇದನ್ನೂ ಓದಿ-Money Remedies: ಮುಂದಿನ 25 ದಿನಗಳಲ್ಲಿ ಶಂಖಕ್ಕೆ ಈ ವಿಶೇಷ ಪರಿಹಾರ ಮಾಡಿದರೆ ಇಷ್ಟಾರ್ಥ ಸಿದ್ಧಿ

ಶನಿಯು 6 ತಿಂಗಳ ಕಾಲ ಹಿಮ್ಮುಖ ಚಲಿಸಲಿದ್ದಾನೆ (Saturn Transit In 2022)
ಆದರೆ, ಈ ಅವಧಿಯಲ್ಲಿ, ಶನಿ ಗ್ರಹವು 12 ಜುಲೈ 2022 ರಿಂದ 17 ಜನವರಿ 2023 ರವರೆಗೆ ಹಿಮ್ಮುಖ ಚಲಿಸಲಿದ್ದಾನೆ. ಇದರಿಂದ ಶನಿದೇವನ ಎರಡೂವರೆ ವರ್ಷದ ದೆಸೆ ಮತ್ತು ಸಾಡೆಸಾತಿ (Shani Sade Sati) ಎದುರಿಸುತ್ತಿರುವವರು  ಸಾಕಷ್ಟು ತೊಂದರೆಗಳನ್ನು ಅನುಭವಿಸಬೇಕಾಗಲಿದೆ. ಸಾಮಾನ್ಯವಾಗಿ, ಶನಿಯ ಮಹಾದೆಸೆ (Shani Impact)  ನಡೆಯುವ ರಾಶಿಚಕ್ರದ ಚಿಹ್ನೆಗಳು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಧನಹಾನಿ, ಆರೋಗ್ಯ ಸಮಸ್ಯೆ, ವೃತ್ತಿಯಲ್ಲಿ ಅಡೆತಡೆಗಳೂ ಬರುತ್ತವೆ. ಮತ್ತೊಂದೆಡೆ, ನಮ್ಮ ದೈನಂದಿನ ಜೀವನದ ಬಗ್ಗೆ ಮಾತನಾಡುವುದಾದರೆ, ನಿದ್ರಾಹೀನತೆ, ಜನರೊಂದಿಗೆ ಅನಗತ್ಯ ವಿವಾದಗಳು, ಗೌರವ ನಷ್ಟ, ನ್ಯಾಯಾಲಯದ ಪ್ರಕರಣಗಳು, ಸಾಲದಂತಹ ಸಮಸ್ಯೆಗಳು ಎದುರಾಗುತ್ತವೆ.

ಇದನ್ನೂ ಓದಿ-ತಿರುಪತಿಯಲ್ಲಿ ಕೂದಲು ದಾನ ಮಾಡುವ ಸಂಪ್ರದಾಯ ಹೇಗೆ ಆರಂಭವಾಯಿತು?: ಕುತೂಹಲಕಾರಿ ಕಥೆ ತಿಳಿಯಿರಿ

(Disclaimer:  ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಈ  ಮಾಹಿತಿಯನ್ನು ಝೀ ಹಿಂದೂಸ್ತಾನ್ ಕನ್ನಡ ಖಚಿತಪಡಿಸುವುದಿಲ್ಲ. ಅನುಸರಿಸುವುದಕ್ಕು ಮೊದಲು ವಿಷಯ ತಜ್ಞರ ಸಲಹೆ ಪಡೆಯಿರಿ)

ಇದನ್ನೂ ಓದಿ-2022 Love Horoscope: ಹೊಸ ವರ್ಷದಲ್ಲಿ ಅದ್ಭುತವಾಗಿರಲಿದೆ ಈ 5 ರಾಶಿಯವರ ಪ್ರೀತಿಯ ಜೀವನ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News