Money Remedies: ಮುಂದಿನ 25 ದಿನಗಳಲ್ಲಿ ಶಂಖಕ್ಕೆ ಈ ವಿಶೇಷ ಪರಿಹಾರ ಮಾಡಿದರೆ ಇಷ್ಟಾರ್ಥ ಸಿದ್ಧಿ

Money Remedies: ಮಾರ್ಗಶಿರ ಮಾಸದಲ್ಲಿ ಶಂಖವನ್ನು ಪೂಜಿಸುವುದು ಅಥವಾ ಕೆಲವು ವಿಶೇಷ ಕ್ರಮಗಳನ್ನು ಮಾಡುವುದು ಶ್ರೀಕೃಷ್ಣ ಮತ್ತು ಲಕ್ಷ್ಮಿ ದೇವಿ ಇಬ್ಬರ ಆಶೀರ್ವಾದವನ್ನು ನೀಡುತ್ತದೆ.

Written by - Yashaswini V | Last Updated : Nov 23, 2021, 11:35 AM IST
  • ಹಿಂದೂ ಧರ್ಮದಲ್ಲಿ, ಎಲ್ಲಾ 12 ತಿಂಗಳುಗಳ ಪಂಚಾಂಗವು ವಿಭಿನ್ನ ಮಹತ್ವವನ್ನು ಹೊಂದಿದೆ
  • ಇನ್ನೇನು ಕಾರ್ತಿಕ ಮಾಸ ಮುಗಿಯುತ್ತಾ ಬಂದಿದೆ. ಮಾರ್ಗಶಿರ ಮಾಸ ಆರಂಭವಾಗಲಿದೆ
  • ಧನುರ್ ಮಾಸದಲ್ಲಿ ಯಾವುದೇ ದಿನ ಶಂಖದ ಈ ಪರಿಹಾರವನ್ನು ಮಾಡುವುದರಿಂದ, ವ್ಯಕ್ತಿಯ ಆರ್ಥಿಕ ಸಂಕಷ್ಟಗಳು ದೂರಾಗುತ್ತವೆ ಎಂದು ನಂಬಲಾಗಿದೆ
Money Remedies: ಮುಂದಿನ 25 ದಿನಗಳಲ್ಲಿ  ಶಂಖಕ್ಕೆ ಈ ವಿಶೇಷ ಪರಿಹಾರ ಮಾಡಿದರೆ ಇಷ್ಟಾರ್ಥ ಸಿದ್ಧಿ title=
Shanka Money Remedies

Money Remedies: ಹಿಂದೂ ಧರ್ಮದಲ್ಲಿ, ಎಲ್ಲಾ 12 ತಿಂಗಳುಗಳ ಪಂಚಾಂಗವು ವಿಭಿನ್ನ ಮಹತ್ವವನ್ನು ಹೊಂದಿದೆ. ಪ್ರತಿ ತಿಂಗಳುಗಳು ವಿವಿಧ ದೇವತೆಗಳಿಗೆ ಸಮರ್ಪಿತವಾಗಿದ್ದು, ಆ ತಿಂಗಳುಗಳಲ್ಲಿ ಆಯಾ ದೇವರನ್ನು ಪೂಜಿಸುವುದರಿಂದ ಅವರು ಶೀಘ್ರವಾಗಿ ಸಂತುಷ್ಟರಾಗುತ್ತಾರೆ ಎಂಬ ನಂಬಿಕೆ ಇದೆ. ಇನ್ನೇನು ಕಾರ್ತಿಕ ಮಾಸ ಮುಗಿಯುತ್ತಾ ಬಂದಿದೆ. ಮಾರ್ಗಶಿರ ಮಾಸ ಆರಂಭವಾಗಲಿದೆ. ಇದನ್ನು ಧನುರ್ ಮಾಸ ಎಂದೂ ಕರೆಯುತ್ತಾರೆ. ಈ ತಿಂಗಳು ಶ್ರೀಕೃಷ್ಣನ ಅಚ್ಚುಮೆಚ್ಚಿನ ತಿಂಗಳು ಮತ್ತು ಶಂಖವನ್ನು ಪೂಜಿಸುವುದು ಬಹಳ ಮಹತ್ವದ್ದಾಗಿದೆ. 

ಈ ಮಾಸದಲ್ಲಿ ಶ್ರೀಕೃಷ್ಣನ (Lord Krishna) ಪಂಚಜನ್ಯ ಶಂಖವನ್ನು ಸಾಮಾನ್ಯ ಶಂಖವನ್ನಾಗಿ ಪೂಜಿಸುವ ಮೂಲಕ ಭಗವಂತ ಪ್ರಸನ್ನನಾಗಿ ತನ್ನ ಭಕ್ತನ ಇಷ್ಟಾರ್ಥಗಳನ್ನು ಪೂರೈಸುತ್ತಾನೆ. ಸಾಗರ ಮಂಥನದ ಸಮಯದಲ್ಲಿ ಶಂಖವೂ ಕಾಣಿಸಿಕೊಂಡಿತು ಎಂದು ನಂಬಲಾಗಿದೆ. ಪುರಾಣಗಳ ಪ್ರಕಾರ, ಲಕ್ಷ್ಮೀ ದೇವಿಯನ್ನು ಸಾಗರನ ಪುತ್ರಿ ಮತ್ತು ಶಂಖವನ್ನು ಲಕ್ಷ್ಮಿ ದೇವಿಯ ಸಹೋದರ ಎಂದು ಪರಿಗಣಿಸಲಾಗುತ್ತದೆ. ಆದುದರಿಂದ ಶಂಖವನ್ನು ಪೂಜಿಸುವುದರಿಂದ ಲಕ್ಷ್ಮೀದೇವಿಯೂ ಪ್ರಸನ್ನಳಾಗುತ್ತಾಳೆ. ಲಕ್ಷ್ಮಿ ಪೂಜೆಯಲ್ಲಿ ಶಂಖವನ್ನು ಊದುವುದನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲು ಇದೇ ಕಾರಣ. ಅಲ್ಲದೆ, ಆರತಿಯ ನಂತರ ಶಂಖದೊಂದಿಗೆ ಭಕ್ತರ ಮೇಲೆ ನೀರು ಚಿಮುಕಿಸಲಾಗುತ್ತದೆ. 

ಇದನ್ನೂ ಓದಿ- 2022 Love Horoscope: ಹೊಸ ವರ್ಷದಲ್ಲಿ ಅದ್ಭುತವಾಗಿರಲಿದೆ ಈ 5 ರಾಶಿಯವರ ಪ್ರೀತಿಯ ಜೀವನ

ಹಣ ಪಡೆಯಲು ಶಂಖದ ಈ ಪರಿಹಾರಗಳನ್ನು ಮಾಡಿ :
ಧನುರ್ ಮಾಸದಲ್ಲಿ ಯಾವುದೇ ದಿನ ಶಂಖದ ಈ ಪರಿಹಾರವನ್ನು ಮಾಡುವುದರಿಂದ, ವ್ಯಕ್ತಿಯ ಆರ್ಥಿಕ ಸಂಕಷ್ಟಗಳು (Financial Crisis) ದೂರಾಗುತ್ತವೆ ಎಂದು ನಂಬಲಾಗಿದೆ. 

>> ದಕ್ಷಿಣಾವರ್ತಿ ಶಂಖದಲ್ಲಿ ಹಾಲನ್ನು ತುಂಬಿಸಿ ಮತ್ತು ವಿಷ್ಣುವಿಗೆ ಅಭಿಷೇಕ ಮಾಡಿ. ಇದರಿಂದ ನಾರಾಯಣನ ಕೃಪೆಯಿಂದ ಬಹಳಷ್ಟು ಲಾಭವಾಗುತ್ತದೆ.
>> ಮಾರ್ಗಶಿರ ಮಾಸದಲ್ಲಿ ಒಂದು ಮುತ್ತಿನ ಶಂಖದಲ್ಲಿ ಅಕ್ಕಿಯನ್ನು ತುಂಬಿ ನಂತರ ಅದನ್ನು ಒಂದು ಮೂಟೆಯಲ್ಲಿ ಕಟ್ಟಿಯಿಡಿ. ಈ ರೀತಿ ಮಾಡುವುದರಿಂದ ಧನ ಪ್ರಾಪ್ತಿಯಾಗಲಿದೆ.
>> ವಿಷ್ಣು ದೇವಾಲಯದಲ್ಲಿ ಶಂಖವನ್ನು ದಾನ ಮಾಡುವುದರಿಂದ ಹಣದ ಸಮಸ್ಯೆಗಳೆಲ್ಲವೂ ದೂರವಾಗುತ್ತದೆ. 
>> ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಮಾರ್ಗಶಿರ ಮಾಸದಲ್ಲಿ ದಕ್ಷಿಣಾವರ್ತಿ ಶಂಖದಲ್ಲಿ ಗಂಗಾಜಲ ಮತ್ತು ಕೇಸಲವನ್ನು ಬೆರೆಸಿ ಅಭಿಷೇಕ ಮಾಡಿ. ಮಾ ಲಕ್ಷ್ಮಿಯ ಕೃಪೆಯಿಂದ ನೀವು ಶ್ರೀಮಂತರಾಗುತ್ತೀರಿ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ- Mangal Dosh: ಮಂಗಳ ದೋಷ ನಿವಾರಣೆಗೆ ಇಂದೇ ಈ ಸಣ್ಣ ಕೆಲಸ ಮಾಡಿ

>> ಶಂಖ ಸ್ಥಾಪನೆಗೆ ಮಾರ್ಗಶಿರ ಮಾಸ ಅತ್ಯಂತ ಪ್ರಶಸ್ತವಾಗಿದೆ. ದಕ್ಷಿಣಾವರ್ತಿ ಶಂಖವನ್ನು ಪ್ರತಿಷ್ಠಾಪಿಸಿದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಎಂದಿಗೂ ಕಡಿಮೆಯಾಗುವುದಿಲ್ಲ. 
>> ಧನವಂತನಾಗುವ ನೆಪದಲ್ಲಿ ಶುಕ್ರದೋಷ ಬರುತ್ತಿದ್ದರೆ ಬಿಳಿಯ ಶಂಖ, ಅಕ್ಕಿ, ಬತಾಶವನ್ನು ಬಿಳಿ ಬಟ್ಟೆಯಲ್ಲಿ ಸುತ್ತಿ ನದಿಗೆ ಎಸೆಯಿರಿ. ಇದರಿಂದ ಒಳ್ಳೆಯದಾಗುತ್ತದೆ ಎಂದು ಹೇಳಲಾಗುತ್ತದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News