Shani Margi 2022: ಶೀಘ್ರದಲ್ಲಿಯೇ ಶನಿಯ ನೇರ ನಡೆ ಆರಂಭ, ಮಹಾ ಪುರುಷ ರಾಜಯೋಗದಿಂದ ಈ ರಾಶಿಯವರಿಗೆ ಜಬರ್ದಸ್ತ್ ಲಾಭ

Shani Margi In Makar: ಜೋತಿಷ್ಯ ಶಾಸ್ತ್ರದ ಪ್ರಕಾರ ಯಾವುದೇ ಒಂದು ಗ್ರಹದ ನೇರ ನಡೆ ಅಥವಾ ವಕ್ರ ನಡೆ ಎಲ್ಲಾ 12 ರಾಶಿಗಳ ಜಾತಕದವರ ಮೇಲೆ ಪ್ರಭಾವ ಬೀರುತ್ತದೆ. ಅಕ್ಟೋಬರ್ 23 ರಂದು ಶನಿ ಮಕರ ರಾಶಿಯಲ್ಲಿ ನೇರ ನಡೆ ಅನುಸರಿಸಲಿದ್ದಾನೆ. ಇದರಿಂದ ಕೆಲ ರಾಶಿಗಳ ಜನರಿಗೆ ಜಬರ್ದಸ್ತ್ ಲಾಭ ಸಿಗಲಿದೆ.  

Written by - Nitin Tabib | Last Updated : Sep 10, 2022, 02:03 PM IST
  • ಜುಲೈನಲ್ಲಿಯೇ ಶನಿಯು ಮಕರ ರಾಶಿಯಲ್ಲಿ ತನ್ನ ವಕ್ರ ನಡೆಯನ್ನು ಆರಂಭಿಸಿದ್ದು,
  • ಅಕ್ಟೋಬರ್‌ನಲ್ಲಿ ಮಕರ ರಾಶಿಯಲ್ಲಿಯೇ ಆತ ಪುನಃ ತನ್ನ. ನೇರ ನಡೆಯನ್ನು ಆರಂಭಿಸುತ್ತಿದ್ದು,
  • ಕೆಲವು ರಾಶಿಗಳ ಜನರ ಪಾಲಿಗೆ ಮಹಾಪುರುಷ ರಾಜಯೋಗ ನಿರ್ಮಾಣಗೊಳ್ಳುತ್ತಿದೆ.
Shani Margi 2022: ಶೀಘ್ರದಲ್ಲಿಯೇ ಶನಿಯ ನೇರ ನಡೆ ಆರಂಭ, ಮಹಾ ಪುರುಷ ರಾಜಯೋಗದಿಂದ ಈ ರಾಶಿಯವರಿಗೆ ಜಬರ್ದಸ್ತ್ ಲಾಭ title=
Saturn Retrograde 2022

Shani Margi Effect: ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿ ದೇವನನ್ನು ಅತ್ಯಂತ ನಿಷ್ಠುರ ಗ್ರಹವೆಂದು ಪರಿಗಣಿಸಲಾಗಿದೆ. ಶನಿ ದೇವನನ್ನು ನ್ಯಾಯದ ದೇವರು ಮತ್ತು ಕರ್ಮವನ್ನು ಕೊಡುವ ದೇವರು ಎಂದು ಪರಿಗಣಿಸಲಾಗುತ್ತದೆ.  ಆತ ವ್ಯಕ್ತಿಯ ಒಳ್ಳೆಯ ಮತ್ತು ಕೆಟ್ಟ ಕರ್ಮಗಳಿಗೆ ಅನುಗುಣವಾಗಿ ಅವರಿಗೆ ಫಲ ನೀಡುತ್ತಾನೆ ಎನ್ನಲಾಗುತ್ತದೆ. ಯಾರ ಜಾತಕದಲ್ಲಿ ಶನಿಯ ಉತ್ತಮ ಸ್ಥಾನವನ್ನು ಹೊಂದಿರುತ್ತಾನೋ ಆ ಜನರಿಗೆ ಶನಿ ಶುಭ ಫಲಿತಾಂಶಗಳನ್ನು ನೀಡುತ್ತಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅಕ್ಟೋಬರ್ 23 ರಂದು ಶನಿಯು ಮಕರ ರಾಶಿಯಲ್ಲಿ ಮತ್ತೆ ತನ್ನ ನೇರ ನಡೆಯನ್ನು ಅನುಸರಿಸಲಿದ್ದಾನೆ. ಅಂದಹಾಗೆ, ಶನಿಯ ಈ ಮಾರ್ಗ ಬದಲಾವಣೆ ಎಲ್ಲಾ ರಾಶಿಗಳ ಜನರಿಗೆ ಶುಭ ಮತ್ತು ಅಶುಭ ಫಲಿತಾಂಶಗಳನ್ನು ನೀಡುತ್ತದೆ. ಆದರೆ ಕೆಲವು ರಾಶಿಯ ಜನರು ಇದರಿಂದ ವಿಶೇಷ ಲಾಭವನ್ನು ಪಡೆಯಲಿದ್ದಾರೆ.

ಜುಲೈನಲ್ಲಿಯೇ ಶನಿಯು ಮಕರ ರಾಶಿಯಲ್ಲಿ ತನ್ನ ವಕ್ರ ನಡೆಯನ್ನು ಆರಂಭಿಸಿದ್ದು, ಅಕ್ಟೋಬರ್‌ನಲ್ಲಿ ಮಕರ ರಾಶಿಯಲ್ಲಿಯೇ ಆತ ಪುನಃ ತನ್ನ. ನೇರ ನಡೆಯನ್ನು ಆರಂಭಿಸುತ್ತಿದ್ದು, ಕೆಲವು ರಾಶಿಗಳ ಜನರ ಪಾಲಿಗೆ ಮಹಾಪುರುಷ ರಾಜಯೋಗ ನಿರ್ಮಾಣಗೊಳ್ಳುತ್ತಿದೆ. ಈ ಯೋಗವು ಆ ರಾಶಿಗಳಿಗೆ ಬಲವಾದ ಪ್ರಯೋಜನಗಳನ್ನು ನೀಡಲಿದೆ. ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ.  

ಮೇಷ ರಾಶಿ - ಮಕರ ರಾಶಿಯಲ್ಲಿ ಶನಿಯ ನೇರ ನಡೆ ಈ ರಾಶಿಯ ಜನರಿಗೆ ವಿಶೇಷವಾಗಿ ಲಭಾಕಾರಿಯಾಗಲಿದೆ. ಶನಿದೇವನು ನಿಮ್ಮ ರಾಶಿಯ ಹತ್ತನೇ ಮನೆಯಲ್ಲಿರಲಿದ್ದಾನೆ. ಇದನ್ನು ವ್ಯಾಪಾರ ಮತ್ತು ಉದ್ಯೋಗದ ಸ್ಥಳವೆಂದು ಪರಿಗಣಿಸಲಾಗಿದೆ. ಆದ್ದರಿಂದ, ಈ ಅವಧಿಯಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಒಳ್ಳೆಯದು. ಹೊಸ ಉದ್ಯೋಗ ಪ್ರಸ್ತಾಪ ಅಥವಾ ಬಡ್ತಿಯ ಸಾಧ್ಯತೆಯೂ ಇದೆ. ಇದೇ ವೇಳೆ, ವ್ಯವಹಾರದಲ್ಲಿ ಉತ್ತಮ ಲಾಭದ ಸಾಧ್ಯತೆಯಿದೆ. ಕೆಲಸದ ಸ್ಥಳದಲ್ಲಿ ನೀವು ಮೆಚ್ಚುಗೆ ಪಡೆಯುವಿರಿ. ನಿಮ್ಮ ಪ್ರಶಂಸೆ ಸಿಗಲಿದೆ. ಈ ಅವಧಿಯಲ್ಲಿ ಟೈಗರ್ ಸ್ಟೋನ್ ಧರಿಸುವುದು ಪ್ರಯೋಜನಕಾರಿಯಾಗಿದೆ.

ಮೀನ ರಾಶಿ - ಶನಿಯು ಈ ನಿಮ್ಮ ಜಾತಕದ 11 ನೇ ಮನೆಯಲ್ಲಿ ಚಲಿಸಲಿದ್ದಾನೆ. ಇದನ್ನು ಆದಾಯ ಮತ್ತು ಲಾಭದ ಮನೆ ಎಂದು ಪರಿಗಣಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಶನಿಯ ನೇರನಡೆಯಿಂದಾಗಿ ಆದಾಯವು ಹೆಚ್ಚಾಗಬಹುದು. ಹೊಸ ಆದಾಯದ ಮೂಲದಿಂದ ಹಣ ಗಳಿಸುವಲ್ಲಿ ಯಶಸ್ವಿಯಾಗುವಿರಿ. ಹೊಸ ವ್ಯವಹಾರ ಸಂಬಂಧಗಳು ರೂಪುಗೊಳ್ಳಬಹುದು. ವ್ಯವಹಾರದಲ್ಲಿ ಹೊಸ ಒಪ್ಪಂದವನ್ನು ಅಂತಿಮಗೊಳಿಸುವುದು ಭವಿಷ್ಯದಲ್ಲಿ ಲಾಭವನ್ನು ನೀಡಲಿದೆ. ವ್ಯಾಪಾರದಲ್ಲಿ ಲಾಭ ಇರುತ್ತದೆ. ನೀವು ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ, ಸಮಯವು ಅನುಕೂಲಕರವಾಗಿರುತ್ತದೆ. ಷೇರುಗಳು ಅಥವಾ ಲಾಟರಿ ಇತ್ಯಾದಿಗಳಿಂದ ಲಾಭದ ಸಾಧ್ಯತೆ ಇದೆ. ಈ ಅವಧಿಯಲ್ಲಿ ನೀವು ವಾಹನ ಅಥವಾ ಆಸ್ತಿಯನ್ನು ಖರೀದಿಸಬಹುದು. ಚಿನ್ನದ ಬಣ್ಣದ ರತ್ನ ಧಾರಣೆಯಿಂದ ಅದೃಷ್ಟ ದ್ವಿಗುಣಗೊಳ್ಳಲಿದೆ.

ಇದನ್ನೂ ಓದಿ-Pitru Paksha 2022: ಇಂದಿನಿಂದ ಪಿತೃಪಕ್ಷ ಆರಂಭ, ಈ ತಪ್ಪುಗಳನ್ನು ಮಾಡ್ಬೇಡಿ, ಮುಹೂರ್ತಗಳ ವಿವರ ಇಲ್ಲಿದೆ

ಧನು ರಾಶಿ - ಈ ಸಮಯ ವ್ಯಾಪಾರ ಮತ್ತು ವೃತ್ತಿಗೆ ಅನುಕೂಲಕರವಾಗಿದೆ. ಶನಿಯು ಈ ರಾಶಿಯ ಎರಡನೇ ಸ್ಥಾನದಲ್ಲಿ ಸಂಚರಿಸಲಿದ್ದಾನೆ. ಇದು ಸಂಪತ್ತು ಮತ್ತು ಮಾತಿನ ಸ್ಥಳವೆಂದು ಪರಿಗಣಿಸಲಾಗಿದೆ. ಈ ಅವಧಿಯಲ್ಲಿ, ಹಠಾತ್ ಧನಲಾಭದ ಸಾಧ್ಯತೆ ಇದೆ. ನಿಮಗೆ ಬರಬೇಕಾದ ಅಥವಾ ಸಾಲದ ರೂಪದಲ್ಲಿ ನೇವು ನೀಡಿದ ಹಣ ನಿಮ್ಮ ಬಳಿ ಹಿಂದಿರುಗಲಿದೆ. ವ್ಯಾಪಾರದಲ್ಲಿ ಉತ್ತಮ ಲಾಭದ ಸಾಧ್ಯತೆ ಇದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಮಾತು ಮತ್ತು ಮಾರ್ಕೆಟಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಈ ಸಮಯವು ಉತ್ತಮವಾಗಿದೆ. ಈ ಅವಧಿಯಲ್ಲಿ, ವೈಡೂರ್ಯ ರತ್ನಗಳನ್ನು ಧರಿಸಲು ಸಲಹೆ ನೀಡಲಾಗುತ್ತದೆ.

ಇದನ್ನೂ ಓದಿ-Panchak September 2022: ನಾಳೆಯಿಂದ 'ಚೋರ ಪಂಚಕ' ಆರಂಭ, ಹಣಕಾಸಿನ ವಿಚಾರದಲ್ಲಿ ಎಚ್ಚರ ಅಗತ್ಯ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News