ನಾನ್ ಸ್ಟಿಕ್ ಪಾತ್ರೆಗಳಲ್ಲಿ ಈ ಎರಡು ಆಹಾರವನ್ನು ತಪ್ಪಿಯೂ ಬೇಯಿಸಬೇಡಿ

ನಾನ್ ಸ್ಟಿಕ್ ಪ್ಯಾನ್ ಅಥವಾ ಕಡಾಯಿ ಅಡುಗೆಮನೆಯ ಪ್ರಮುಖ ಭಾಗವಾಗಿದೆ. ಇತ್ತೀಚಿನ ದಿನಗಳಲ್ಲಿ ಅಡುಗೆ ಎಣ್ಣೆಗಳು ದುಬಾರಿಯಾಗಿದೆ. ಹಾಗಾಗಿ ಅದರ ಪ್ರಾಮುಖ್ಯತೆಯೂ ಹೆಚ್ಚಾಗಿದೆ. ಆದರೆ ಅಂತಹ ಪಾತ್ರೆಗಳಲ್ಲಿ ಎಲ್ಲವನ್ನೂ ಬೇಯಿಸಬಾರದು.  

Written by - Ranjitha R K | Last Updated : Sep 12, 2022, 03:07 PM IST
  • ನಾನ್ ಸ್ಟಿಕ್ ಪಾತ್ರೆಯಲ್ಲಿ ಅಡುಗೆ ಮಾಡುವ ಪ್ರಯೋಜನಗಳು
  • ಕಡಿಮೆ ಎಣ್ಣೆ ಬಳಸಿ ಅಡುಗೆ ಮಾಡುವುದು ಸಾಧ್ಯ
  • ಇದರಲ್ಲಿ ಅಡುಗೆ ಮಾಡುವುದು ಕೂಡಾ ಸುಲಭ
 ನಾನ್ ಸ್ಟಿಕ್ ಪಾತ್ರೆಗಳಲ್ಲಿ ಈ ಎರಡು ಆಹಾರವನ್ನು ತಪ್ಪಿಯೂ ಬೇಯಿಸಬೇಡಿ title=
Non Stick Cookware (file photo)

ಬೆಂಗಳೂರು :  ನಾನ್ ಸ್ಟಿಕ್ ಪಾತ್ರೆಗಳ ಬಳಕೆ ಕಳೆದ ಕೆಲವು ವರ್ಷಗಳಿಂದ  ಬಹಳವಾಗಿ ಆಗುತ್ತಿದೆ. ಆಲ್ಯುಮೀನಿಯಮ್ ಮತ್ತು ಸ್ಟೀಲ್ ಪಾತ್ರೆಗಳಿಗೆ ಹೋಲಿಸಿದರೆ, ಈ ನಾನ್ ಸ್ಟಿಕ್ ಪಾತೆಗಳು ಕೊಂಚ ದುಬಾರಿಯಾಗಿದೆ. ಆದರೆ ಈ ಪಾತ್ರೆ ಗಳಲ್ಲಿರುವ ವಿಶೇಷ ಲೇಪನದ ಕಾರಣ, ಕಡಿಮೆ ಎಣ್ಣೆ ಬಳಸಿ ಅಡುಗೆ ಮಾಡಬಹುದು. 

ನಾನ್ ಸ್ಟಿಕ್ ಪಾತ್ರೆಯಲ್ಲಿ ಅಡುಗೆ ಮಾಡುವ ಪ್ರಯೋಜನಗಳು :
ನಾನ್ ಸ್ಟಿಕ್ ಪಾತ್ರೆಯಲ್ಲಿ ಅಡುಗೆ ಮಾಡುವುದರಿಂದ, ಕಡಿಮೆ ಎಣ್ಣೆ ಬಳಸಿ ಆಹಾರ ತಯಾರಿಸಬಹುದು. ಇದರಿಂದ ಬೊಜ್ಜು, ಅಧಿಕ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡಬಹುದು. ಈ ರೀತಿಯ ಪಾತ್ರೆಗಳ ಮತ್ತೊಂದು ವಿಶೇಷತೆ ಎಂದರೆ ಅದರಲ್ಲಿ ಆಹಾರ ತಯಾರಿಸುವುದು ಕೂಡಾ ಸುಲಭ. ಈ ರೀತಿಯ ಹಲವಾರು ಪ್ರಯೋಜನಗಳ ಹೊರತಾಗಿಯೂ, ಕೆಲವು ವಸ್ತುಗಳನ್ನು ನಾನ್ ಸ್ಟಿಕ್ ಕುಕ್‌ವೇರ್‌ನಲ್ಲಿ ಬೇಯಿಸಬಾರದು. ಈ ಆಹಾರಗಳನ್ನು ನಾನ್ ಸ್ಟಿಕ್ ಪಾತ್ರೆಯಲ್ಲಿ ಬೇಯಿಸಿದರೆ   ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ.

ಇದನ್ನೂ ಓದಿ : ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದಾಗ ಕಣ್ಣುಗಳಲ್ಲಿ ಕಂಡು ಬರುತ್ತವೆ ಈ 3 ಲಕ್ಷಣಗಳು

ನಾನ್ ಸ್ಟಿಕ್ ಪ್ಯಾನ್ ನಲ್ಲಿ ಈ ಆಹಾರಗಳನ್ನು ಬೇಯಿಸಬೇಡಿ :
1.ಮಾಂಸ :

ಮಾಂಸಾಹಾರಿ ಪದಾರ್ಥಗಳನ್ನು ಬೇಯಿಸಲು ಹೆಚ್ಚಿನ ಶಾಖದ ಅಗತ್ಯವಿರುತ್ತದೆ,. ಅದರಲ್ಲೂ ಮಾಂಸವನ್ನು ಈ ಪಾತ್ರೆಯಲ್ಲಿ ಬೇಯಿಸಿದರೆ, ಪಾತ್ರೆಯ ಲೇಪನವು ಕರಗಲು ಪ್ರಾರಂಭವಾಗುತ್ತದೆ. ಹೀಗಾದಾಗ ಅದು ಆಹಾರದೊಂದಿಗೆ ಬೆರೆತು ಮನುಷ್ಯನ ಹೊಟ್ಟೆ ಸೇರುತ್ತದೆ. ಈ ಲೇಪನ ಹೊಟ್ಟೆ ಸೇರಿದರೆ ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಆದ್ದರಿಂದ, ನಾನ್ ಸ್ಟಿಕ್ ಪ್ಯಾನ್‌ನಲ್ಲಿ  ಮಾಂಸ  ಬೇಯಿಸುವ  ತಪ್ಪನ್ನು  ಮಾಡಬಾರದು.  ಮಾಂಸ ಬೇಯಿಸಲು ಸ್ಟೀಲ್, ಅಲ್ಯೂಮಿನಿಯಂ  ಪಾತ್ರೆಗಳನ್ನು ಮಾತ್ರ ಬಳಸಿ. 

2, ವೆಜಿಟೇಬಲ್ ಸ್ಟಿರ್ ಫ್ರೈ :
 ಇತ್ತೀಚಿನ ದಿನಗಳಲ್ಲಿ ವೆಜಿಟೇಬಲ್ ಸ್ಟಿರ್ ಫ್ರೈ ಟ್ರೆಂಡ್ ಹೆಚ್ಚಾಗುತ್ತಿದೆ. ಇದು ಅದ್ಭುತವಾದ ಖಾದ್ಯವಾಗಿದ್ದು, ಇದರಲ್ಲಿ ಮಸಾಲೆಗಳು ಮತ್ತು ಎಣ್ಣೆಯ ಬಳಕೆ ಅತ್ಯಲ್ಪವಾಗಿರುತ್ತದೆ. ಈ ಕಾರಣದಿಂದಲೇ ಆರೋಗ್ಯ ಪ್ರಜ್ಞೆಯುಳ್ಳ ಜನರು ಈ ಪಾಕವಿಧಾನವನ್ನು ತುಂಬಾ ಇಷ್ಟಪಡುತ್ತಾರೆ. ಆದರೆ ಸಮಸ್ಯೆಯೆಂದರೆ, ಈ ಆಹಾರ ಪದಾರ್ಥವನ್ನು ಹೆಚ್ಚು ಶಾಖದಲ್ಲಿ ದೀರ್ಘಕಾಲದವರೆಗೆ ಬೇಯಿಸಲಾಗುತ್ತದೆ. ನಾನ್ ಸ್ಟಿಕ್ ಪಾತ್ರೆಗಳು ಪಾತ್ರೆಗಳು ಹೆಚ್ಚಿನ ಶಾಖವನ್ನು ಸಹಿಸಿಕೊಳ್ಳುವುದಿಲ್ಲ. ಹೆಚ್ಚಿನ ಶಾಖದಿಂದ ಅದರ ಲೇಪನವು  ಏಳಲು ಆರಂಭಿಸುತ್ತದೆ. 
 
 ಇದನ್ನೂ ಓದಿ
Body Detox: ಶರೀರದಿಂದ ವಿಷಕಾರಿ ಪದಾರ್ಥ ಹೊರಹಾಕುವ ಸಮಯ ಬಂದಿದೆ ಎನ್ನುತ್ತವೆ ಲಕ್ಷಣಗಳು

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News