Belly Fat Reducing Tips: ಕಚೇರಿಯಲ್ಲಿನ ನಿಮ್ಮ ಚೆಯರ್ ನಲ್ಲಿಯೇ ಕುಳಿತು ಈ ವ್ಯಾಯಾಮ ಮಾಡಿ ಹೊಟ್ಟೆ ಬೊಜ್ಜು ಕರಗಿಸಿ!

Belly Fat Reducing Tipsಇತ್ತೀಚಿನ ದಿನಗಳಲ್ಲಿ ಬೊಜ್ಜು ಮತ್ತು ಹೊಟ್ಟೆ ಬೆಳೆಯುವ ಸಮಸ್ಯೆ ಸಾಮಾನ್ಯ ಸಮಸ್ಯೆಯಾಗಿ ಪರಿಣಮಿಸಿದೆ. ಹೀಗಿರುವಾಗ ನೀವು ನಿಮ್ಮ ಕಚೇರಿಯ ಆಸನದಲ್ಲಿಯೇ ಕುಳಿತು ಮಾಡಬಹುದಾದ ಕೆಲ ವ್ಯಾಯಾಮಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ,  

Written by - Nitin Tabib | Last Updated : Jul 6, 2023, 11:55 PM IST
  • ಬೆಳೆಯುತ್ತಿರುವ ಹೊಟ್ಟೆ ಮತ್ತು ಸ್ಥೂಲಕಾಯ ಸಮಸ್ಯೆಯಿಂದ ಒಂದು ವೇಳೆ ನೀವೂ ಒಕೂದ ತೊಂದರೆಗೊಳಗಾಗಿದ್ದರೆ,
  • ಕಚೇರಿಯಲ್ಲಿನ ನಿಮ್ಮ ಆಸನದ ಮೇಲೆ ಕುಳಿತು ಮಾಡಬಹುದಾದ ಕೆಲವು
  • ವ್ಯಾಯಾಮಗಳ ಕುರಿತು ನಾವು ನಿಮಗೆ ಮಾಹಿತಿಯನ್ನು ನೀಡಲಿದ್ದೇವೆ.
Belly Fat Reducing Tips: ಕಚೇರಿಯಲ್ಲಿನ ನಿಮ್ಮ ಚೆಯರ್ ನಲ್ಲಿಯೇ ಕುಳಿತು ಈ ವ್ಯಾಯಾಮ ಮಾಡಿ ಹೊಟ್ಟೆ ಬೊಜ್ಜು ಕರಗಿಸಿ! title=

Belly Fat Reducing Tips: ಸ್ಥೂಲಕಾಯ ಮತ್ತು ಹೊಟ್ಟೆ ಬೆಳೆಯುವ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಒಂದು ಸಾಮಾನ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ. ಕಳಪೆ ಜೀವನಶೈಲಿ, ತಡರಾತ್ರಿಯವರೆಗೆ  ಎಚ್ಚರದಿಂದಿರುವುದು, ಗಂಟೆಗಟ್ಟಲೆ ಒಂದೇ ಸ್ಥಳದಲ್ಲಿ ಕೆಲಸ ಮಾಡುವುದು ಇತ್ಯಾದಿಗಳಿಂದ ಕ್ರಮೇಣ ತೂಕ ಹೆಚ್ಚಾಗುತ್ತದೆ, ಪರಿಣಾಮವಶಾತ್ ಹೊಟ್ಟೆ ಹೊರಬರಲು ಪ್ರಾರಂಭಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕಚೇರಿಗೆ ಹೋಗುವವರು ತೂಕ ಇಳಿಕೆಗಾಗಿ ಗಂಟೆಗಟ್ಟಲೆ ಜಿಮ್ ನಲ್ಲಿ ಬೆವರು ಸುರಿಸಬೇಕಾಗುತ್ತದೆ ಮತ್ತು ಅದಕ್ಕಾಗಿ ಸಮಯ ಹುಡುಕುವುದೇ ಕಷ್ಟಕರವಾಗುತ್ತದೆ. ಬೆಳೆಯುತ್ತಿರುವ ಹೊಟ್ಟೆ ಮತ್ತು ಸ್ಥೂಲಕಾಯ ಸಮಸ್ಯೆಯಿಂದ ಒಂದು ವೇಳೆ ನೀವೂ ಒಕೂದ ತೊಂದರೆಗೊಳಗಾಗಿದ್ದರೆ, ಕಚೇರಿಯಲ್ಲಿನ ನಿಮ್ಮ ಆಸನದ ಮೇಲೆ ಕುಳಿತು ಮಾಡಬಹುದಾದ ಕೆಲವು ವ್ಯಾಯಾಮಗಳ ಕುರಿತು ನಾವು ನಿಮಗೆ ಮಾಹಿತಿಯನ್ನು ನೀಡಲಿದ್ದೇವೆ.

ಕಚೇರಿಯ ಆಸನದ ಮೇಲೆ ಕುಳಿತು ಈ ವ್ಯಾಯಾಮಗಳನ್ನು ಮಾಡಿ
ಹ್ಯಾಂಗಿಂಗ್ ಬಾಡಿ ಎಕ್ಸರ್ಸೈಜ್ 

ಹ್ಯಾಂಗಿಂಗ್ ಬಾಡಿ ಎಕ್ಸರ್ಸೈಜ್  ಒಂದು ರೀತಿಯ ವ್ಯಾಯಾಮವಾಗಿದ್ದು, ಇದರಿಂದ ಇಡೀ ದೇಹವು ಟೋನ್ ಆಗಿರುತ್ತದೆ. ಇದನ್ನು ಮಾಡಲು, ಆಸನದ ಎರಡು ನಿಮ್ಮ ತೋಳುಗಳನ್ನು ಇಡಿ. ಇದರ ನಂತರ, ತೋಳುಗಳ ಮೇಲೆ ತೂಕವನ್ನು ಹೆಚ್ಚಿಸುತ್ತ ನಿಮ್ಮ ಮೇಲಕ್ಕೆತ್ತಲು ಪ್ರಯತ್ನಿಸಿ. ಈ ಅವಧಿಯಲ್ಲಿ ನೀವು ಪದೇ ಪದೇ ಕಾಲುಗಳನ್ನು ನೇರಗೊಳಿಸಬೇಕು ಮತ್ತು ಒಳಭಾಗಕ್ಕೆ ತಳ್ಳಲು ನೀವು ಯತ್ನಿಸಬೇಕು ಎಂಬುದನ್ನು ನೆನಪಿನಲ್ಲಿಡಿ. ನಿಮ್ಮ ಕಛೇರಿಯಲ್ಲಿ ನೀವು ಈ ವ್ಯಾಯಾಮವನ್ನು ದಿನಕ್ಕೆ 7 ರಿಂದ 8 ಬಾರಿ ಪುನರಾವರ್ತಿಸಬಹುದು.

ಲೆಫ್ಟ್ ರೈಟ್ ಮೂವ್ಮೆಂಟ್ 
ಹಲವಾರು ಗಂಟೆಗಳ ಕಾಲ ನಿರಂತರವಾಗಿ ಒಂದೇ ಭಂಗಿಯಲ್ಲಿ ಕೆಲಸ ಮಾಡುವುದು ಕೆಲವೊಮ್ಮೆ ಬೆನ್ನು ಮತ್ತು ಬೆನ್ನುನೋವಿನ ಸಮಸ್ಯೆಗಳನ್ನು ಉಂಟುಮಾಡಬಹುದು. ಇಂತಹ ಪರಿಸ್ಥಿತಿಯಲ್ಲಿ, ನೀವು ಪ್ರತಿದಿನ 5 ರಿಂದ 7 ನಿಮಿಷಗಳ ಲೆಫ್ಟ್ ರೈಟ್ ಚಲನೆಯನ್ನು ಮಾಡುವುದರಿಂದ ಬೆನ್ನು ಮತ್ತು ಕುತ್ತಿಗೆ ನೋವಿನಿಂದ ಪರಿಹಾರ ಸಿಗುತ್ತದೆ. ಇದಕ್ಕಾಗಿ, ನಿಮ್ಮ ಕೈಗಳು ಮತ್ತು ಮೇಜಿನ ನಡುವೆ ಸ್ವಲ್ಪ ಅಂತರವನ್ನು ನಿರ್ಮಿಸಿಕೊಳ್ಳಿ. ಈಗ ನಿಮ್ಮ ದೇಹವನ್ನು ಒಮ್ಮೆ ಎಡಕ್ಕೆ ಮತ್ತು ನಂತರ ಬಲಕ್ಕೆ ಸರಿಸಿ. ನೀವು ಈ ವ್ಯಾಯಾಮವನ್ನು 10 ರಿಂದ 12 ಬಾರಿ ಪುನರಾವರ್ತಿಸಬೇಕು. ಹೀಗೆ ಮಾಡುವುದರಿಂದ ಹೊಟ್ಟೆಯ ಕೊಬ್ಬನ್ನು ನೀವು ಕರಗಿಸಬಹುದು.

ಇದನ್ನೂ ಓದಿ-Girls Google Search Tendency: ಮದುವೆಗೂ ಮುನ್ನ ಹುಡ್ಗೀರು ಗೂಗಲ್ ನಲ್ಲಿ ಇಂಥಾ ವಿಷ್ಯ ಸರ್ಚ್ ಮಾಡ್ತಾರಾ?

ಕೋರ್ ಎಕ್ಸರ್ಸೈಜ್
ನಿಮ್ಮ ಬೆನ್ನು ಮತ್ತು ಸ್ನಾಯುಗಳ ನೋವನ್ನು ಕಡಿಮೆ ಮಾಡಲು ಆಸನದ ಮೇಲೆ ಕುಳಿತು ಮಾಡಲಾಗುವ ಕೋರ್ ಎಕ್ಸರ್ಸೈಜ್ ಸಹಾಯ ಮಾಡುತ್ತವೆ. ಈ ವ್ಯಾಯಾಮ ಮಾಡಲು, ಕಾಲುಗಳನ್ನು ಸ್ಟ್ರೆಚ್ ಮಾಡಿ. ಈ ವ್ಯಾಯಾಮದ 4 ಸೆಟ್ಗಳನ್ನು ನೀವು ಪುನರಾವರ್ತಿಸಬಹುದು.

ಇದನ್ನೂ ಓದಿ-Tulsi For Hair Health: ಕೂದಲಿಗೆ ಒಂದು ವರದಾನವಿದ್ದಂತೆ ತುಳಸಿ, ಈ ರೀತಿ ಬಳಸಿ ದಟ್ಟವಾದ ಕೇಶರಾಶಿ ನಿಮ್ಮದಾಗಿಸಿ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/38l6m8543Vk?feature=share

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News