Krishna Janmashtami: ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ

Krishna Janmashtami: ಉಡುಪಿಯಲ್ಲಿ ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ. ದ್ವಾರಕೆಯಿಂದ ಬಂದ ಕೃಷ್ಣ ಎಂಟು ಶತಮಾನದ ಹಿಂದೆ ಉಡುಪಿಯ ಕೃಷ್ಣ ಮಠದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿದ್ದಾನೆ. ಇಂದು ಶ್ರೀಕೃಷ್ಣನ ಬಾಲರೂಪದಲ್ಲಿ ಪೂಜಿಸಲಾಗುತ್ತಿದೆ. 

Written by - Yashaswini V | Last Updated : Sep 6, 2023, 04:43 PM IST
  • ಬೆಳಗ್ಗಿನಿಂದಲೇ ಸಾವಿರಾರು ಮಂದಿ ಬಂದು ಕೃಷ್ಣದೇವರ ದರ್ಶನ ಕೈಗೊಳ್ಳುತ್ತಿದ್ದಾರೆ.
  • ಇಂದು ಹಗಲಿಡಿ ಉಪವಾಸ ಇರುವ ಕೃಷ್ಣ ಭಕ್ತರು, ನಿರಂತರ ಪೂಜೆ ಭಜನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
  • ಮಧ್ಯರಾತ್ರಿ 11:42ಕ್ಕೆ ಕೃಷ್ಣದೇವರಿಗೆ ಅರ್ಘ್ಯ ಪ್ರದಾನ ನಡೆಯಲಿದೆ.
Krishna Janmashtami: ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ title=

Krishna Janmashtami: ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ ಜೋರಾಗಿದೆ. ಈ  ಪ್ರಯುಕ್ತ ಉಡುಪಿಯ ಶ್ರೀಕೃಷ್ಣ ಮಠವನ್ನು ಹೂಗಳಿಂದ ಸಿಂಗರಿಸಲಾಗಿದೆ. ನಾಡಿನಲ್ಲೆಡೆಯ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಶ್ರೀಕೃಷ್ಣನ ದರ್ಶನ ಪಡೆಯುತ್ತಿದ್ದಾರೆ. ರಾಜಾಂಗಣದಲ್ಲಿ ನಡೆದ ಮುದ್ದುಕೃಷ್ಣ ವೇಷ ಸ್ಪರ್ಧೆ ಹಬ್ಬಕ್ಕೆ ರಂಗು ತುಂಬಿತು. ಇನ್ನು ಅಷ್ಟಮಿಯ ಪ್ರಮುಖ ಆಕರ್ಷಣೆ ಹುಲಿವೇಷದ ತಂಡಗಳ ಭರ್ಜರಿ ಪ್ರದರ್ಶನ ನಡೆಯಿತು. 

ಹೌದು, ಇಂದು ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಕೃಷ್ಣ ವೇಷದಾರಿಗಳೆ ತುಂಬಿ ತುಳುಕುತ್ತಿದ್ದರು. ಇಂದು ನಡೆದ ಮುದ್ದುಕೃಷ್ಣ, ಬಾಲಕೃಷ್ಣ ಹಾಗೂ ಕಿಶೋರ ಕೃಷ್ಣ ಸ್ಪರ್ಧೆಗಳು ಅಷ್ಟಮಿಯ ರಂಗನ್ನು ಹೆಚ್ಚಿಸಿದ್ದು, ಮುದ್ದು ಮಕ್ಕಳ ಕೃಷ್ಣನ ವಿವಿಧ ವೇಷಗಳು ಕಣ್ಮನ ಸೆಳೆದವು. ಮಠದ ರಾಜಾಂಗಣದಲ್ಲಿ ಮಕ್ಕಳ ಮುದ್ದು ಕೃಷ್ಣ ಸ್ಪರ್ಧೆಯಲ್ಲಿ ನೂರಕ್ಕೂ ಹೆಚ್ಚು ಚಿಣ್ಣರು ಭಾಗವಹಿಸಿದ್ದರು. ತಾಯಂದಿರು ತಮ್ಮ ಮಕ್ಕಳನ್ನು ಸ್ಪರ್ಧೆಗೆ ಅಣಿಗೊಳಿಸುವ ದೃಶ್ಯ ರಾಜಾಂಗಣದಲ್ಲಿ ಕಂಡು ಬಂದವು. ಗೋವರ್ಧನ ಕೃಷ್ಣ, ಶ್ರೀಕೃಷ್ಣನ ಬಾಲ ಲೀಲೆ, ದನ ಮೇಯಿಸುವ ಗೋಪಾಲಕ, ಬೆಣ್ಣೆ ಕದಿಯುವ ಮುಕುಂದ, ಕೊಳಲು ಊದುವ ಕೃಷ್ಣ, ಕಾಳಿಂಗ ಮರ್ಧನ ಕೃಷ್ಣ ಹೀಗೆ ಮಕ್ಕಳ ನಾನಾ ವೇಷಗಳು ಆಕರ್ಷಣೀಯವಾಗಿದ್ದವು

ಇದನ್ನೂ ಓದಿ- ಮನೆಯಲ್ಲಿ ನಂದಿ ವಿಗ್ರಹವನ್ನು ಪ್ರತಿಷ್ಠಾಪಿಸುವಾಗ ಈ ವಿಷಯಗಳನ್ನು ನಿರ್ಲಕ್ಷಿಸಬೇಡಿ

ಇನ್ನು ಅಷ್ಟಮಿಗೂ ಹುಲಿವೇಷಕ್ಕೂ ಅವಿನಾಭಾವ ಸಂಬಂಧ. ಹುಲಿವೇಷಧಾರಿಗಳು ಪೂಜೆ ಸಲ್ಲಿಸಿ ನಗರ ಸಂಚಾರ ನಡೆಸುವುದು ವಾಡಿಕೆ. ಹತ್ತಾರು ತಂಡಗಳು ಜಿಲ್ಲೆಯಾದ್ಯಂತ ಸಂಚರಿಸಿ ಜನರ ಕಣ್ಮನ ಸೆಳೆದರು. ಈ ಬಾರಿ ಹೆಣ್ಣುಹುಲಿಗಳು ಗಮನ ಸೆಳೆಯುತ್ತಿವೆ. ಕಾಡಬೆಟ್ಟುವಿನ ಅಶೋಕ್ ರಾಜ್ ಅವರ ಹುಲಿ ವೇಷಧಾರಿಗಳ ತಂಡ ಭರ್ಜರಿ ಪ್ರದರ್ಶನ ನಡೆಸುತ್ತಿದೆ. ಈ ಬಾರಿ ವಿಶೇಷ ಆಕರ್ಷಣೆ ಎನ್ನುವಂತೆ ಅಶೋಕ್ ರಾಜ್ ಹುಲಿ ವೇಷ ತಂಡದ ವತಿಯಿಂದ ಹೆಣ್ಣು ಹುಲಿಗಳು ಕೂಡ ಅಕಾಡಕ್ಕೆ ಇಳಿದಿವೆ. ಈ ಮೊದಲು ಅಶೋಕ್ ರಾಜ್ ಅವರ ಪುತ್ರಿ ಸುಷ್ಮಾ ರಾಜ್ ಅವರು ಹುಲಿ ವೇಷದ ಮೂಲಕ ಹುಡುಗಿಯರಲ್ಲೂ ಕೂಡ ಹುಲಿ ವೇಷದ ಕಿಚ್ಚು ಹಚ್ಚಿದರು. ನಂತರದ ವರ್ಷಗಳಲ್ಲಿ ನಿರಂತರವಾಗಿ ಉಡುಪಿಯ ಅಷ್ಟಮಿಗೆ ವಿಶೇಷ ಎನ್ನುವಂತೆ ಹೆಣ್ಣು ಹುಲಿಗಳು ಪ್ರದರ್ಶನ ನೀಡುತ್ತಾ ಬಂದಿದೆ.

ಇದನ್ನೂ ಓದಿ- 30 ವರ್ಷಗಳಲ್ಲಿ ಇದೇ ಮೊದಲು... ಜನ್ಮಾಷ್ಟಮಿಯಂದು ಈ ರಾಶಿಯವರಿಗೆ ಅಖಂಡ ವರ ಸಿದ್ಧಿ! ಶ್ರೀಕೃಷ್ಣನ ದಯೆಯಿಂದ ಹಣದ ಸುರಿಮಳೆ, ಬ್ಯಾಕ್ ಟು ಬ್ಯಾಕ್ ಸಕ್ಸಸ್

ಅಷ್ಟಮಿ ಪ್ರಯುಕ್ತ ಇಂದು ತಡರಾತ್ರಿ ಚಂದ್ರೋದಯ ಕಾಲದಲ್ಲಿ ದೇವರಿಗೆ ಅರ್ಘ್ಯ ಪ್ರದಾನ ನಡೆಯಲಿದೆ. ಇದು ಪ್ರಮುಖ ಸಂಪ್ರದಾಯವಾಗಿದ್ದು ಈ ವೇಳೆ ಮಠಾಧೀಶರು ಮತ್ತು ಭಕ್ತರು ಸಾಕ್ಷಿಯಾಗಲಿದ್ದಾರೆ. ಉಳಿದಂತೆ ಗುರುವಾರ ವಿಟ್ಲಪಿಂಡಿ ಉತ್ಸವ ನಡೆಯಲಿದ್ದು ಹಬ್ಬದ ಸಂಭ್ರಮ ದ ಪರಾಕಾಷ್ಠೆಗೆ ತಲುಪಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

Trending News