ಭಕ್ತರು ನೋಡ ನೋಡುತ್ತಿದ್ದಂತೆ ಕಣ್ಮರೆಯಾಗುತ್ತೆ ಈ ಶಿವಮಂದಿರ: ಪುರಾಣದಲ್ಲಿ ಹೇಳಿರೋದೇನು?

ಗುಜರಾತಿನ ವಡೋದರದಲ್ಲಿ ಇಂತಹ ಒಂದು ವಿಶ್ವವಿಖ್ಯಾತ ದೇವಾಲಯವಿದ್ದು, ಅದು ದಿನೇ ದಿನೇ ಕಣ್ಮರೆಯಾಗುತ್ತದೆ. ಸ್ವಲ್ಪ ಹೊತ್ತಿನ ಬಳಿಕ ಕಾಣಿಸಿಕೊಳ್ಳುತ್ತದೆ. ಈ ರೋಮಾಂಚನಕಾರಿ ಘಟನೆಯನ್ನು ನೋಡಲು ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಜನರು ಇಲ್ಲಿಗೆ ಬರುತ್ತಾರೆ.

Written by - Bhavishya Shetty | Last Updated : Aug 1, 2022, 12:14 PM IST
  • ಗುಜರಾತಿನ ವಡೋದರದಲ್ಲಿದೆ ವಿಶ್ವವಿಖ್ಯಾತ ದೇವಾಲಯ
  • ಈ ಪ್ರಸಿದ್ಧ ಸ್ಥಳದ ಹೆಸರು ಸ್ತಂಬೇಶ್ವರ ಮಹಾದೇವ ದೇವಾಲಯ
  • ನೀರಿನಲ್ಲಿ ಮುಳುಗಿ, ಮತ್ತೆ ಗೋಚರವಾಗುವ ವಿಶೇಷ ದೇವಸ್ಥಾನ
ಭಕ್ತರು ನೋಡ ನೋಡುತ್ತಿದ್ದಂತೆ ಕಣ್ಮರೆಯಾಗುತ್ತೆ ಈ ಶಿವಮಂದಿರ: ಪುರಾಣದಲ್ಲಿ ಹೇಳಿರೋದೇನು?  title=
Shiv Mandir

ಶ್ರಾವಣ ಮಾಸದಲ್ಲಿ ಶಿವ ದೇವಾಲಯಗಳಿಗೆ ಭೇಟಿ ನೀಡುವುದು, ಪ್ರಮುಖ ತೀರ್ಥಯಾತ್ರೆಗಳಿಗೆ ಹೋಗುವುದು ತುಂಬಾ ಫಲಕಾರಿಯಾಗಿದೆ. ಹಾಗಾಗಿ ಶ್ರಾವಣ ಮಾಸದಲ್ಲಿ ದೇಶದ ಪ್ರಮುಖ ಶಿವಾಲಯಗಳಲ್ಲಿ ಭಕ್ತರ ದಂಡೇ ಇರುತ್ತದೆ. ಅದರಲ್ಲೂ ಕೆಲ ಪ್ರಸಿದ್ಧ ದೇವಾಲಯಗಳಲ್ಲಿ ಅದರ ಪ್ರಖ್ಯಾತಿಯಿಂದಲೇ ಜನರು ಆಗಮಿಸಿ ಶಿವನ ಆಶೀರ್ವಾದ ಪಡೆಯುತ್ತಾರೆ. ಇನ್ನು ನಾವು ಇಂದು ಮಾಹಿತಿ ನೀಡಲಿರುವ ದೇವಾಲಯ ಪುರಾತನವಾದದ್ದು ಮತ್ತು ಇಲ್ಲಿನ ರಹಸ್ಯಕ್ಕೆ ಹೆಸರುವಾಸಿಯಾಗಿದೆ. 

ಇದನ್ನೂ ಓದಿ: Monkeypox: ಕರ್ನಾಟಕದ ಗಡಿ ರಾಜ್ಯದಲ್ಲಿ ಮಂಕಿಪಾಕ್ಸ್‌ಗೆ ಓರ್ವ ಬಲಿ?

ಗುಜರಾತಿನ ವಡೋದರದಲ್ಲಿ ಇಂತಹ ಒಂದು ವಿಶ್ವವಿಖ್ಯಾತ ದೇವಾಲಯವಿದ್ದು, ಅದು ದಿನೇ ದಿನೇ ಕಣ್ಮರೆಯಾಗುತ್ತದೆ. ಸ್ವಲ್ಪ ಹೊತ್ತಿನ ಬಳಿಕ ಕಾಣಿಸಿಕೊಳ್ಳುತ್ತದೆ. ಈ ರೋಮಾಂಚನಕಾರಿ ಘಟನೆಯನ್ನು ನೋಡಲು ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಜನರು ಇಲ್ಲಿಗೆ ಬರುತ್ತಾರೆ.

ಪ್ರಸಿದ್ಧ ಶಿವ ದೇವಾಲಯದ ಹೆಸರು ಸ್ತಂಬೇಶ್ವರ ಮಹಾದೇವ ದೇವಾಲಯ. ಇದು ಸಮುದ್ರದ ಒಂದು ಭಾಗದಲ್ಲಿದೆ. ಈ ದೇವಾಲಯವನ್ನು ಶಿವನ ಮಗ ಕಾರ್ತಿಕೇಯ ಸ್ಥಾಪಿಸಿದನೆಂದು ನಂಬಲಾಗಿದೆ. ಸಮುದ್ರದೊಳಗೆ ಇರುವ ಈ ದೇವಾಲಯವು ದಿನಕ್ಕೆ ಎರಡು ಬಾರಿ ನೀರಿನಲ್ಲಿ ಮುಳುಗುತ್ತದೆ, ನಂತರ ಅದು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ವಾಸ್ತವವಾಗಿ, ಈ ಸಮುದ್ರದಲ್ಲಿ ಪ್ರತಿದಿನ ನೀರಿನ ಮಟ್ಟವು ತುಂಬಾ ಏರುತ್ತದೆ. ಹೀಗಾಗಿ ದೇವಾಲಯವು ಮುಳುಗಿ, ಬಳಿಕ ಕಡಿಮೆಯಾದಾಗ ಮತ್ತೆ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ ಎಂದು ಕೆಲವರು ಹೇಳುತ್ತಾರೆ. ಆದರೆ ಭಕ್ತರ ನಂಬಿಕೆ ಮಾತ್ರ ಬೇರೆಯದ್ದೇ. ಈ ಘಟನೆ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ನಡೆಯುತ್ತದೆ.

ಶಿವನ ದೇವಾಲಯವು ಸಮುದ್ರದಲ್ಲಿ ಮುಳುಗಿ ಮತ್ತೆ ಕಾಣಿಸಿಕೊಂಡಾಗ, ಭಕ್ತರು ಹೇಳುವುದು ಹೀಗೆ: "ಸಮುದ್ರದಿಂದ ಶಿವನಿಗೆ ಅಭಿಷೇಕವಾಯಿತು" ಎಂದು ಭಕ್ತಿಯಿಂದ ಹೇಳುತ್ತಾರೆ. ಸಮುದ್ರ ಮಟ್ಟ ಹೆಚ್ಚಾದಾಗ ದೇವಸ್ಥಾನಕ್ಕೆ ಭಕ್ತರ ಪ್ರವೇಶವನ್ನು ಕೆಲಕಾಲ ಸ್ಥಗಿತಗೊಳಿಸಲಾಗುತ್ತದೆ. 

ಸ್ಕಂದ ಪುರಾಣ ಮತ್ತು ಶಿವ ಪುರಾಣದ ರುದ್ರ ಸಂಹಿತೆಯಲ್ಲಿ, ಸ್ತಂಭೇಶ್ವರ ದೇಗುಲದ ಬಗ್ಗೆ ಹೇಳಲಾಗಿದೆ. ರಾಕ್ಷಸ ತಾರಕಾಸುರನು, ಶಿವನ ಪುತ್ರರಿಂದ ಮಾತ್ರ ನನಗೆ ಸಾವು ಬರಲಿ ಎಂದು ವರ ಪಡೆಯುತ್ತಾನೆ. ಆ ಸಂದರ್ಭದಲ್ಲಿ ದೇವಾನುದೇವತೆಗಳು ಗಿರಿಜಾ ಕಲ್ಯಾಣ ಮಾಡಿಸಿದರು. ಆ ಬಳಿಕ ಜನ್ಮ ತಾಳಿದವರೇ ಕಾರ್ತಿಕೇಯ. ಕೇವಲ 6 ದಿನಗಳ ಪ್ರಾಯದ ಕಾರ್ತಿಕೇಯನು ತಾರಕಾಸುರನನ್ನು ಮಟ್ಟಹಾಕಿ, ಜನರನ್ನು ರಾಕ್ಷಸನ ಕೈಯಿಂದ ರಕ್ಷಿಸುತ್ತಾನೆ. 

ಇದನ್ನೂ ಓದಿ: ಬೆಲ್ಲದ ಮೇಲಿನ GST ಖಂಡಿಸಿ ರೈತರಿಂದ ಬೃಹತ್ ಪ್ರತಿಭಟನೆ

ಆ ಬಳಿಕ ರಾಕ್ಷಸನನ್ನು ಕೊಂದ ಸ್ಥಳದಲ್ಲಿ ಈ ಶಿವ ದೇವಾಲಯವನ್ನು ನಿರ್ಮಿಸಲಾಯಿತು ಎಂದು ಹೇಳಲಾಗುತ್ತದೆ. ಈ ದೇವಾಲಯವನ್ನು ಸುಮಾರು 150 ವರ್ಷಗಳ ಹಿಂದೆ ಪತ್ತೆಹಚ್ಚಲಾಗಿದೆ.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News