ಇಲ್ಲಿ ಎಣ್ಣೆಯೇ ಇಲ್ಲದೆ ಪ್ರಜ್ವಲಿಸುತ್ತದೆ ದೀಪ : ವರ್ಷದಲ್ಲಿ ಬರೀ 5 ಗಂಟೆ ಮಾತ್ರ ದರ್ಶನ ಕೊಡುವ ಶಕ್ತಿ ಪೀಠ..!

ಈ ದೇವಾಲಯ ಕೆಲ ತಿಂಗಳು ಅಥವಾ ಕೆಲ ವಾರ ಅಲ್ಲ ಬರೀ  5 ಗಂಟೆಗಳ ಕಾಲ ಮಾತ್ರ ತೆರೆದಿರುತ್ತದೆ. ಈ 5 ಗಂಟೆಯ ಸಮಯದಲ್ಲಿ, ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸಿ ತಾಯಿಯ ದರ್ಶನ ಪಡೆಯುತ್ತಾರೆ. ಈ ವಿಶಿಷ್ಟ ದೇವಾಲಯವು ಛತ್ತೀಸ್ ಘಡದ ಗರಿಯಾಬಂದ್ ಜಿಲ್ಲೆಯಿಂದ 12 ಕಿ.ಮೀ ದೂರದಲ್ಲಿರುವ ಬೆಟ್ಟದ ಮೇಲೆ ಇದೆ. 

Written by - Ranjitha R K | Last Updated : Apr 16, 2021, 02:39 PM IST
  • ನಿರೈ ಮಾತಾ ದೇವಸ್ಥಾನ ಛತ್ತೀಸ್ ಘಡದ ಗರಿಯಾಬಂದ್ ಜಿಲ್ಲೆಯಲ್ಲಿದೆ
  • ಈ ದೇವಾಲಯದಲ್ಲಿ ತನ್ನಷ್ಟಕ್ಕೇ ಜ್ಯೋತಿಯೊಂದು ಪ್ರಜ್ವಲಿಸುತ್ತದೆ
  • ದೇವಾಲಯದಲ್ಲಿ ಮಹಿಳೆಯರಿಗೆ ಪ್ರವೇಶ ಮತ್ತು ಪೂಜೆ ಎರಡನ್ನೂ ನಿಷೇಧಿಸಲಾಗಿದೆ
ಇಲ್ಲಿ ಎಣ್ಣೆಯೇ ಇಲ್ಲದೆ ಪ್ರಜ್ವಲಿಸುತ್ತದೆ ದೀಪ : ವರ್ಷದಲ್ಲಿ ಬರೀ 5 ಗಂಟೆ ಮಾತ್ರ ದರ್ಶನ ಕೊಡುವ ಶಕ್ತಿ ಪೀಠ..! title=
ನಿರೈ ಮಾತಾ ದೇವಸ್ಥಾನ ಛತ್ತೀಸ್ ಘಡದ ಗರಿಯಾಬಂದ್ ಜಿಲ್ಲೆಯಲ್ಲಿದೆ (file photo)

ನವದೆಹಲಿ : ಭಾರತವನ್ನು ದೇವಾಲಯಗಳ ದೇಶ ಎಂದು ಕರೆಯುತ್ತಾರೆ. ಹೀಗೆ ಕರೆಯುವುದಕ್ಕೆ ಕಾರಣವೂ ಇದೆ. ನಮ್ಮ ದೇಶದಲ್ಲಿ ಅನೇಕ ದೇವಾಲಯಗಳಿವೆ. ಪ್ರತಿಯೊಂದು ದೇವಾಲಯಕ್ಕೂ ಅದರದ್ದೇ ಆದ ಮಹಿಮೆ ಇದೆ. ಕೆಲವು ದೇವಾಲಯಗಳು ವರ್ಷ ಪೂರ್ತಿ ಭಕ್ತರಿಗಾಗಿ ತೆರೆದಿರುತ್ತದೆ. ಇನ್ನು ಕೆಲ ದೇವಾಲಯಗಳನ್ನು (Temple) ಚಳಿಗಾಲದಲ್ಲಿ ಮುಚ್ಚಲಾಗುತ್ತದೆ. ಬರೀ ಬೇಸಿಗೆಯಲ್ಲಿ ಮಾತ್ರ  ದೇವಸ್ಥಾನಗಳಲ್ಲಿ ಭಕ್ತರು ಪೂಜೆ (Pooja in Temple) ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ದೇವಿ ದೇವಾಲಯಗಳ ಬಗ್ಗೆ ಹೇಳುವುದಾದರೆ ನಮ್ಮಲ್ಲಿ ಒಟ್ಟು 51 ಶಕ್ತಿ ಪೀಠಗಳಿವೆ (Shakti peeta). ಪ್ರತಿಯೊಂದು ಶಕ್ತಿ ಪೀಠ ಕೂಡಾ ತನ್ನದೇ ಆದ ವೈಶಿಷ್ಟ್ಯ ಹೊಂದಿದೆ. 

ಈ ದೇವಾಲಯವು ವರ್ಷದಲ್ಲಿ ಕೇವಲ 5 ಗಂಟೆಗಳ ಕಾಲ ಮಾತ್ರ ತೆರೆದಿರುತ್ತದೆ : 
ಈ ದೇವಾಲಯ ಕೆಲ ತಿಂಗಳು ಅಥವಾ ಕೆಲ ವಾರ ಅಲ್ಲ ಬರೀ  5 ಗಂಟೆಗಳ ಕಾಲ ಮಾತ್ರ ತೆರೆದಿರುತ್ತದೆ. ಈ 5 ಗಂಟೆಯ ಸಮಯದಲ್ಲಿ, ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸಿ ತಾಯಿಯ ದರ್ಶನ ಪಡೆಯುತ್ತಾರೆ. ಈ ವಿಶಿಷ್ಟ ದೇವಾಲಯವು ಛತ್ತೀಸ್ ಘಡದ ಗರಿಯಾಬಂದ್ ಜಿಲ್ಲೆಯಿಂದ 12 ಕಿ.ಮೀ ದೂರದಲ್ಲಿರುವ ಬೆಟ್ಟದ ಮೇಲೆ ಇದೆ. ಈ ದೇವಾಲಯದಲ್ಲಿ (Devi Temple) ತಾಯಿ ದೇವಿಯ ಪ್ರತಿಮೆ ಇದೆ.   ದೇವಳವನ್ನು  ನಿರೈ ಮಾತಾ ದೇವಸ್ಥಾನ ಎಂದು ಕರೆಯುತ್ತಾರೆ.

ಇದನ್ನೂ ಓದಿ : Ram Navami 2021: ಶ್ರೀರಾಮ ನವಮಿಯ ಶುಭ ಮುಹೂರ್ತ ಯಾವಾಗ? ಪೂಜೆ-ಹವನ ಪ್ರಕ್ತಿಯೆಯ ವಿಧಾನ ಹೇಗಿರಬೇಕು?

ದೇವಿಗೆ ಅರ್ಪಿಸುವುದು ತೆಂಗಿನಕಾಯಿ, ಅಗರಬತ್ತಿ ಮಾತ್ರ :
ಮೊದಲೇ ಹೇಳಿದ ಹಾಗೆ ಈ ದೇವಸ್ಥಾನ ಚೈತ್ರ ನವರಾತ್ರಿಯ ವಿಶೇಷ ದಿನದಂದು ಬಾಗಿಲು ತೆರೆಯುತ್ತದೆ. ಅದು ಕೂಡಾ ಬೆಳಗ್ಗೆ 4 ಗಂಟೆಯಿಂದ 9 ಗಂಟೆವರೆಗೆ. ಉಳಿದ ದಿನಗಳಲ್ಲಿ ಈ ದೇವಾಲಯದಲ್ಲಿ ಪೂಜಾ (Pooja) ಕಾರ್ಯಗಳನ್ನು ನಿಷೆಧಿಸಲಾಗಿರುತ್ತದೆ. ಇಲ್ಲಿಯ ಇನ್ನೊಂದು ವಿಶೇಷವೆಂದರೆ ಉಳಿದ ದೇವಿ ದೇವಾಲಯಗಳಂತೆ ಇಲ್ಲಿ ಅರಶಿನ (Turmeric) ಕುಂಕುಮ ಮುಂತಾದ ವಸ್ತುಗಳನ್ನು ತಾಯಿಗೆ ಅರ್ಪಿಸುವುದಿಲ್ಲ ಬದಲಾಗಿ, ಇಲ್ಲಿ, ತೆಂಗಿನಕಾಯಿ ಮತ್ತು ಅಗರಬತ್ತಿಯನ್ನು ಮಾತ್ರ ದೇವಿಗೆ ಸಮರ್ಪಿಸಲಾಗುತ್ತದೆ. 

ಈ ದೇವಾಲಯದಲ್ಲಿ ತನ್ನಷ್ಟಕ್ಕೇ ಪ್ರಜ್ವಲಿತಗೊಳ್ಳುತ್ತದೆ ಜ್ಯೋತಿ : 
ಈ ದೇವಾಲಯದಲ್ಲಿ ಚೈತ್ರ ನವರಾತ್ರಿಯ ವೇಳೆ ಎಣ್ಣೆಯೇ ಇಲ್ಲದ ದೀಪವೊಂದು ತನ್ನಷ್ಟಕ್ಕೆ ಪ್ರಜ್ವಲಿಸಲು ಆರಂಭವಾಗುತ್ತದೆ. ಅದು ಹೇಗೆ ಎನ್ನುವುದು ಮಾತ್ರ ಇಂದಿಗೂ ನಿಗೂಢ. ನಿರೈ ಮಾತಾ ದೇವಸ್ಥಾನದಲ್ಲಿ (Nirai Mata Temple) ಮಹಿಳೆಯರಿಗೆ ಪ್ರವೆಶ ನಿಷೇಧಿಸಲಾಗಿದೆ. ಇಲ್ಲಿ ಪುರುಷರು ಮಾತ್ರ ಬಂದು ತಾಯಿಗೆ ಪೂಜೆ ಸಲ್ಲಿಸಬಹುದು. ಕೇವಲ 5 ಗಂಟೆಗಳ ಅವಧಿಗೆ ಮಾತ್ರ  ದೇವಾಳಯ ಬಾಗಿಲು ತೆರೆಯುತ್ತದೆಯಾದರೂ ಸಾವಿರಾರು ಸಂಖ್ಯೆಯಲ್ಲಿ ಈ ಸಂದರ್ಭದಲ್ಲಿ ಆಗಮಿಸುವ ಭಕ್ತರು ಈ ಹೊತ್ತಲ್ಲಿ ತಾಯಿಯ ದರ್ಶನ ಪಡೆಯುತ್ತಾರೆ. ಇಲ್ಲಿ ಪ್ರಾರ್ಥಿಸಿಕೊಂಡ ಪ್ರತಿಯೊಂದು ಬೇಡಿಕೆಯೂ ಈಡೇರುತ್ತದೆ ಎನ್ನುವುದು ಭಕ್ತರ ನಂಬಿಕೆ. 

ಇದನ್ನೂ ಓದಿ : ಕರ್ಣಿ ಮಾತಾ ಮಂದಿರದಲ್ಲಿ ಇಲಿಗಳಿಗೇ ಪ್ರಾಶಸ್ತ್ಯ; ಇಲ್ಲಿಇಲಿಗಳು ತಿಂದು ಬಿಟ್ಟ ಆಹಾರವೇ ಪ್ರಸಾದ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News