ಮಧುಮೇಹದ ಆರಂಭಿಕ ಲಕ್ಷಣಗಳು ಇವು .! ಈ ಯೋಗಾಸನಗಳಿಂದ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಬಹುದು

ಆಯಾಸ, ತಲೆನೋವು, ಮಂದ ದೃಷ್ಟಿ ಮತ್ತು ಹೆಚ್ಚುತ್ತಿರುವ ಹೃದಯ ಬಡಿತ ಅನುಭವಕ್ಕೆ ಬಂದರೆ ತಕ್ಷಣ ಜಾಗರೂಕರಾಗಿ. ಏಕೆಂದರೆ ಇವೆಲ್ಲವೂ  ಮಧುಮೇಹದ ಆರಂಭಿಕ ಲಕ್ಷಣಗಳಾಗಿವೆ.   

Written by - Ranjitha R K | Last Updated : Jun 21, 2022, 12:04 PM IST
  • ಯೋಗಾಸನಗಳಿಂದ ಈ ರೋಗವನ್ನು ಸುಲಭವಾಗಿ ನಿಯಂತ್ರಿಸಬಹುದು.
  • ಯೋಗವು ಅನೇಕ ಪ್ರಮುಖ ಕಾಯಿಲೆಗಳ ಮೇಲೆ ಪರಿಣಾಮಕಾರಿಯಾಗಿರುತ್ತದೆ
  • ಮಧುಮೇಹದಂತಹ ರೋಗವನ್ನು ಸೋಲಿಸಬಹುದು.
ಮಧುಮೇಹದ ಆರಂಭಿಕ ಲಕ್ಷಣಗಳು ಇವು .! ಈ ಯೋಗಾಸನಗಳಿಂದ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಬಹುದು  title=
Yoga for diabetes (file photo)

ಬೆಂಗಳೂರು : ಮಧುಮೇಹದ ಲಕ್ಷಣಗಳನ್ನು ಆರಂಭದಲ್ಲಿಯೇ  ತಿಳಿದುಕೊಂಡರೆ, ಕೆಲವು ಯೋಗಾಸನಗಳಿಂದ ಈ ರೋಗವನ್ನು ಸುಲಭವಾಗಿ ನಿಯಂತ್ರಿಸಬಹುದು. ವಾಸ್ತವವಾಗಿ, ಯೋಗವು ಅನೇಕ ಪ್ರಮುಖ ಕಾಯಿಲೆಗಳ ಮೇಲೆ ಪರಿಣಾಮಕಾರಿಯಾಗಿರುತ್ತದೆ. ಯೋಗ ಮಾಡುವ ಮೂಲಕ ಕೂಡಾ ಮಧುಮೇಹದಂತಹ ರೋಗವನ್ನು ಸೋಲಿಸಬಹುದು. ಹಾಗಾದರೆ ಮಧುಮೇಹದ ಆರಂಭಿಕ ಲಕ್ಷಣಗಳು ಯಾವುವು ಮತ್ತು ಯಾವ ಯೋಗಾಸನಗಳ ಸಹಾಯದಿಂದ ಅದನ್ನು ನಿಯಂತ್ರಿಸಬಹುದು ನೋಡೋಣ. 

ಮಧುಮೇಹದ ಆರಂಭಿಕ ಲಕ್ಷಣಗಳು :
 ಆಗಾಗ ಆಯಾಸ, ತಲೆನೋವು, ಮಂದ ದೃಷ್ಟಿ ಮತ್ತು ಹೆಚ್ಚುತ್ತಿರುವ ಹೃದಯ ಬಡಿತ ಅನುಭವಕ್ಕೆ ಬಂದರೆ ತಕ್ಷಣ ಜಾಗರೂಕರಾಗಿ. ಏಕೆಂದರೆ  ಇವೆಲ್ಲವೂ  ಮಧುಮೇಹದ ಆರಂಭಿಕ ಲಕ್ಷಣಗಳಾಗಿವೆ. ಹಾಗಾಗಿ ಈ ಲಕ್ಷಣಗಳು ಕಂಡು ಬಂದಾಗ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಇಲ್ಲವಾದರೆ ಸಮಸ್ಯೆ ಉಲ್ಬಣ ವಾದಾಗ ಹೆಚ್ಚಿನ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಪದೇ ಪದೇ ಬಿಪಿ ಹೆಚ್ಚಾಗುವುದು ಮತ್ತು ಕಡಿಮೆಯಾಗುವುದು, ಅಸಿಡಿಟಿ ಕೂಡಾ ಇದರ ಲಕ್ಷಣಗಳಾಗಿವೆ.

ಇದನ್ನೂ ಓದಿ : Heart Attack Risk: ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತೆ ಈ ಎಲೆಗಳು

ಈ ಯೋಗ ಆಸನಗಳಿಂದ ರಕ್ತದಲ್ಲಿನ ಸಕ್ಕರೆ ನಿಯಂತ್ರಣದಲ್ಲಿರುತ್ತದೆ :
ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡಲು ಕೆಲವು ಯೋಗಾಸನಗಳನ್ನು ಮಾಡಬೇಕು. ಕೆಲವು ಯೋಗಾಸನಗಳು ಮಧುಮೇಹ ರೋಗಿಗಳಿಗೆ ವರದಾನವಾಗಿದೆ ಎಂದು ಹೇಳಲಾಗುತ್ತದೆ. ಅವುಗಳೆಂದರೆ   ಪಶ್ಚಿಮೋತ್ತನಾಸನ, ಪವನಮುಕ್ತಾಸನ, ಮಂಡೂಕಾಸನ, ವಕ್ರಾಸನ ಮತ್ತು ಬದ್ಧ ಕೋನಾಸನ. 

ಇದನ್ನೂ ಓದಿ : Sugarcane Juice Side Effects: ಈ ಜನರು ಅಪ್ಪಿ-ತಪ್ಪಿಯೂ ಕೂಡ ಕಬ್ಬಿನ ರಸ ಸೇವಿಸಬಾರದು, ಕಾರಣ ಇಲ್ಲಿದೆ

 

( ಸೂಚನೆ :  ಇಲ್ಲಿ ನೀಡಲಾದ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News