Kinnar Marriage: ಮಂಗಳಮುಖಿಯರಲ್ಲೂ ನಡೆಯುತ್ತೆ ಮದುವೆ.! ವಿಚಿತ್ರ ಆಚರಣೆ.. ಕೇವಲ ಒಂದು ರಾತ್ರಿಗೆ ಈ ಕೆಲಸ ಮಾಡ್ತಾರೆ!!

Kinnar Marriage: ಮಂಗಳಮುಖಿಯರ ಜೀವನಕ್ಕೆ ಸಂಬಂಧಿಸಿದ ಅನೇಕ ಅಂಶಗಳು ಇನ್ನೂ ನಿಗೂಢವಾಗಿ ಮುಚ್ಚಿಹೋಗಿವೆ ಅಥವಾ ಕೆಲವೇ ಜನರಿಗೆ ಅವರ ಬಗ್ಗೆ ತಿಳಿದಿದೆ. ಮಂಗಳಮುಖಿಯರು ಸಮಾಜದಿಂದ ಪ್ರತ್ಯೇಕವಾಗಿರುತ್ತಾರೆ ಮತ್ತು ಎಂದಿಗೂ ಮದುವೆಯಾಗುವುದಿಲ್ಲ ಎಂದು ಸಾಮಾನ್ಯವಾಗಿ ನಂಬಲಾಗಿದೆ. 

Written by - Chetana Devarmani | Last Updated : Jan 29, 2023, 12:39 PM IST
  • ಮಂಗಳಮುಖಿಯರಲ್ಲೂ ನಡೆಯುತ್ತೆ ಮದುವೆ.!
  • ನಿಗೂಢ ಲೋಕದಲ್ಲಿ ವಿಚಿತ್ರ ಆಚರಣೆ
  • ಕೇವಲ ಒಂದು ರಾತ್ರಿಗೆ ಈ ಕೆಲಸ ಮಾಡ್ತಾರೆ!!
Kinnar Marriage: ಮಂಗಳಮುಖಿಯರಲ್ಲೂ ನಡೆಯುತ್ತೆ ಮದುವೆ.! ವಿಚಿತ್ರ ಆಚರಣೆ.. ಕೇವಲ ಒಂದು ರಾತ್ರಿಗೆ ಈ ಕೆಲಸ ಮಾಡ್ತಾರೆ!!   title=
Transgender Marriage

Transgender Marriage : ಮಂಗಳಮುಖಿಯರ ಜೀವನಕ್ಕೆ ಸಂಬಂಧಿಸಿದ ಅನೇಕ ಅಂಶಗಳು ಇನ್ನೂ ನಿಗೂಢವಾಗಿ ಮುಚ್ಚಿಹೋಗಿವೆ ಅಥವಾ ಕೆಲವೇ ಜನರಿಗೆ ಅವರ ಬಗ್ಗೆ ತಿಳಿದಿದೆ. ಮಂಗಳಮುಖಿಯರು ಸಮಾಜದಿಂದ ಪ್ರತ್ಯೇಕವಾಗಿರುತ್ತಾರೆ ಮತ್ತು ಎಂದಿಗೂ ಮದುವೆಯಾಗುವುದಿಲ್ಲ ಎಂದು ಸಾಮಾನ್ಯವಾಗಿ ನಂಬಲಾಗಿದೆ. ವಾಸ್ತವವೆಂದರೆ ಮಂಗಳಮುಖಿಯರೂ ಮದುವೆಯಾಗುತ್ತಾರೆ. ಮಂಗಳಮುಖಿಯರು ಮದುವೆಯ ನಂತರ ಅವರು ಒಂದು ರಾತ್ರಿ ವಧುಗಳಾಗುತ್ತಾರೆ ಮತ್ತು ಮರುದಿನವೇ ವಿಚಿತ್ರ ಕೆಲಸ ಮಾಡುತ್ತಾರೆ.

ಇದನ್ನೂ ಓದಿ : Skin Care : ಕಾಂತಿಯುತ ತ್ವಚೆಗಾಗಿ ಬಾದಾಮಿ ಜೊತೆ 2 ಹನಿ ಈ ಎಣ್ಣೆ ಬೆರೆಸಿ ಪ್ಯಾಕ್‌ ಹಾಕಿಕೊಳ್ಳಿ

ಮಂಗಳಮುಖಿಯರು ಸಂಪೂರ್ಣವಾಗಿ ಪುರುಷ ಅಥವಾ ಸ್ತ್ರೀ ಅಲ್ಲ. ಹೀಗಾಗಿ ಮದುವೆಯಾಗುತ್ತಾರೋ ಇಲ್ಲವೋ ಎಂಬ ಗೊಂದಲದ ಸ್ಥಿತಿ ನಿರ್ಮಾಣವಾಗಿದೆ. ಪ್ರತ್ಯೇಕ ಸಮುದಾಯವಾಗಿ ವಾಸಿಸುವ ಮಂಗಳಮುಖಿಯರು ಯಾವಾಗಲೂ ಅವಿವಾಹಿತರು ಎಂದು ಸಾಮಾನ್ಯವಾಗಿ ನಂಬಲಾಗಿದೆ. ವಾಸ್ತವದಲ್ಲಿ ಅದು ಹಾಗಲ್ಲದಿದ್ದರೂ, ಮಂಗಳಮುಖಿಯರು ಮದುವೆಯಾಗಿ ವಧುಗಳಾಗುವುದು ಕೇವಲ ಒಂದು ರಾತ್ರಿ ಮಾತ್ರ. ಮಂಗಳಮುಖಿಯರು ಯಾವುದೇ ಮನುಷ್ಯನನ್ನು ಮದುವೆಯಾಗಲ್ಲ. ಆದರೆ ಅವರ ದೇವರನ್ನು ಮದುವೆಯಾಗುತ್ತಾರೆ. ಅರ್ಜುನ ಮತ್ತು ನಾಗ ಕನ್ಯಾ ಉಲುಪಿಯ ಮಗನಾದ ಐರಾವಣ, ಅರಾವಣ ಎಂದೂ ಕರೆಯಲ್ಪಡುವ ಇವರು ಮಂಗಳಮುಖಿಯರ ಪ್ರಭು. ಮಹಾಭಾರತದಲ್ಲಿ ತನ್ನ ವನವಾಸದ ಸಮಯದಲ್ಲಿ ಅರ್ಜುನನು ಮಂಗಳಮುಖಿಯ ರೂಪದಲ್ಲಿ ವಾಸಿಸುತ್ತಿದ್ದನು.

ಇದನ್ನೂ ಓದಿ : Naga Sadhu: ಮಹಿಳೆಯರು ನಾಗಾಸಾಧು ಆಗುವ ಪ್ರಕ್ರಿಯೆಯೇ ಬಹಳ ವಿಚಿತ್ರ.! ನಿಗೂಢ ಲೋಕದ ವಿಸ್ಮಯಕಾರಿ ವಿಚಾರ ಇಲ್ಲಿದೆ

ಮಂಗಳಮುಖಿಯರ ಮದುವೆಯ ಸಂಭ್ರಮ ಅದ್ಧೂರಿಯಾಗಿರುತ್ತದೆ. ಇದು ತಮಿಳುನಾಡಿನ ಕೂವಾಗಂನಲ್ಲಿ ಪ್ರತಿ ವರ್ಷ ನಡೆಯುತ್ತದೆ. ತಮಿಳು ಹೊಸ ವರ್ಷದ ಮೊದಲ ಹುಣ್ಣಿಮೆಯ ದಿನವು 18 ದಿನಗಳ ಕಾಲ ನಡೆಯುವ ಮಂಗಳಮುಖಿಯರ ವಿವಾಹ ಉತ್ಸವದ  ನಡೆಯುತ್ತದೆ. ಮಂಗಳಮುಖಿಯರಿಗೆ 17ನೇ ದಿನ ಮದುವೆ. ಅವರು ವಧುವಿನಂತೆ ಅಲಂಕಾರಗಳನ್ನು ಮಾಡುತ್ತಾರೆ, ಅವರು ಮಂಗಳಮುಖಿ ಪುರೋಹಿತರಿಂದ ಮಂಗಳಸೂತ್ರಗಳನ್ನು ಧರಿಸುತ್ತಾರೆ. ಆದಾಗ್ಯೂ, ಮದುವೆಯ ಮರುದಿನ ಅರಾವಣ ದೇವರ ವಿಗ್ರಹವನ್ನು ನಗರದ ಸುತ್ತಲೂ ತೆಗೆದುಕೊಂಡು ನಂತರ ಅದನ್ನು ಒಡೆಯಲಾಗುತ್ತದೆ. ಯಾರೂ ಮಂಗಳಮುಖಿಯರಾಗಿ ಹುಟ್ಟಬಾರದು ಎಂದು ಇದನ್ನು ಮಾಡಲಾಗುತ್ತದೆ. ಇದರ ನಂತರ ಮಂಗಳಮುಖಿಯರು ತಮ್ಮ ಎಲ್ಲಾ ಮೇಕ್ಅಪ್ ಅನ್ನು ತೆಗೆದು ವಿಧವೆಯಂತೆ ಶೋಕಿಸುತ್ತಾರೆ. ಈ ರೀತಿಯಾಗಿ ಮಂಗಳಮುಖಿಯರೂ ಮದುವೆಯಾದ ಮರುದಿನವೇ ವಿಧವೆಯರಾಗುತ್ತಾರೆ.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News