Propose by Zodiac: ಪ್ರೇಮಿಗಳ ದಿನದಂದು ರಾಶಿ ಪ್ರಕಾರ ಗಿಫ್ಟ್ ನೀಡಿದರೆ ವರ್ಷವಿಡೀ ಪ್ರೀತಿ ತುಂಬಿರುತ್ತೆ!

Propose by Zodiac: ಪ್ರೇಮಿಗಳ ದಿನದಂದು ತಮ್ಮ ಪ್ರೀತಿಯ ಸಂಗಾತಿಗೆ ಅವರು ಸಂತೋಷಪಡುವ ಉಡುಗೊರೆ ನೀಡಬೇಕು ಎಂದು ಎಲ್ಲರೂ ಯೋಜಿಸುತ್ತಾರೆ. ಆದರೆ, ಜ್ಯೋತಿಷ್ಯದ ಪ್ರಕಾರ ಅವರ ರಾಶಿಚಕ್ರ ಚಿಹ್ನೆಯ ಪ್ರಕಾರ ಉಡುಗೊರೆಯನ್ನು ಆಯ್ಕೆ ಮಾಡುವುದು ಉತ್ತಮ ಎಂದು ಹೇಳಲಾಗುತ್ತದೆ.

Written by - Yashaswini V | Last Updated : Feb 9, 2022, 07:56 AM IST
  • ಪ್ರೇಮಿಗಳ ದಿನದಂದು ನಿಮ್ಮ ಪ್ರೀತಿಯ ಸಂಗಾತಿಯನ್ನು ಈ ರೀತಿ ಸಂತೋಷಪಡಿಸಿ
  • ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಉಡುಗೊರೆ ನೀಡಿ
  • ಯಾವ ರಾಶಿಯ ಪ್ರೇಮ ಸಂಗಾತಿಗೆ ಯಾವ ರೀತಿಯ ಉಡುಗೊರೆ ನೀಡಿದರೆ ಒಳ್ಳೆಯದು ಎಂದು ತಿಳಿಯಿರಿ
Propose by Zodiac: ಪ್ರೇಮಿಗಳ ದಿನದಂದು ರಾಶಿ ಪ್ರಕಾರ ಗಿಫ್ಟ್ ನೀಡಿದರೆ ವರ್ಷವಿಡೀ ಪ್ರೀತಿ ತುಂಬಿರುತ್ತೆ! title=
Propose by Zodiac

Propose by Zodiac: ಪ್ರೇಮಿಗಳ ವಾರ ಆರಂಭವಾಗಿದೆ. ಜನರು ತಮ್ಮ ಸಂಗಾತಿಯ ಮನವೊಲಿಸಲು ಅಥವಾ ಮನಸ್ಸನ್ನು ಗೆಲ್ಲಲು ಉತ್ತಮ ಉಡುಗೊರೆ ನೀಡುವ ತವಕದಲ್ಲಿದ್ದಾರೆ. ಈ ಸಮಯದಲ್ಲಿ, ಪ್ರೀತಿಸುವವರು ಪರಸ್ಪರ ಗುಲಾಬಿಗಳನ್ನು ನೀಡುತ್ತಾರೆ. ಇದಲ್ಲದೆ ವ್ಯಾಲಂಟೈನ್ಸ್ ಡೇ (Valentine's Day) ದಿನ ತಮ್ಮ ಪ್ರೀತಿಯ ಸಂಗಾತಿಗೆ ಅವರು ಸಂತೋಷಪಡುವ ಉಡುಗೊರೆ ನೀಡಬೇಕು ಎಂದು ಎಲ್ಲರೂ ಯೋಜಿಸುತ್ತಾರೆ. ಆದರೆ, ಜ್ಯೋತಿಷ್ಯದ ಪ್ರಕಾರ ಅವರ ರಾಶಿಚಕ್ರ ಚಿಹ್ನೆಯ ಪ್ರಕಾರ ಉಡುಗೊರೆಯನ್ನು ಆಯ್ಕೆ ಮಾಡುವುದು ಉತ್ತಮ ಎಂದು ಹೇಳಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ ಪ್ರೇಮಿಗಳಿಗೆ ಅವರ ರಾಶಿಗೆ ಅನುಗುಣವಾಗಿ ಉಡುಗೊರೆ ನೀಡುವುದರಿಂದ ವರ್ಷವಿಡೀ ಪರಸ್ಪರರ ನಡುವೆ ಪ್ರೀತಿ ತುಂಬಿರುತ್ತದೆ ಎಂಬ ನಂಬಿಕೆ ಇದೆ. ಹಾಗಿದ್ದರೆ, ಯಾವ ರಾಶಿಯ ಪ್ರೇಮ ಸಂಗಾತಿಗೆ ಯಾವ ರೀತಿಯ ಉಡುಗೊರೆ ನೀಡಿದರೆ ಒಳ್ಳೆಯದು ಎಂದು ತಿಳಿಯಿರಿ. 

ಮೇಷ ರಾಶಿ: ಮೇಷ ರಾಶಿಯ ಅಧಿಪತಿ ಮಂಗಳ. ಈ ರಾಶಿಯವರಿಗೆ ಕೆಂಪು ಗುಲಾಬಿಗಳು ಮತ್ತು ರೊಮ್ಯಾಂಟಿಕ್ ಕಾರ್ಡ್‌ಗಳನ್ನು ನೀಡುವ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸುವುದು ಉತ್ತಮ. 

ವೃಷಭ ರಾಶಿ: ವೃಷಭ ರಾಶಿಯ ಅಧಿಪತಿ ಶುಕ್ರ. ಈ ರಾಶಿಯ ಜನರು ತುಂಬಾ ರೋಮ್ಯಾಂಟಿಕ್ (Romantic). ಅವರಿಗೆ ಗುಲಾಬಿಗಳೊಂದಿಗೆ ಉಡುಗೆ ಅಥವಾ ಸೌಂದರ್ಯವರ್ಧಕಗಳು ಅಥವಾ ಆಭರಣಗಳನ್ನು ನೀಡುವುದು ಒಳ್ಳೆಯದು. 

ಮಿಥುನ ರಾಶಿ: ಮಿಥುನ ರಾಶಿಯ ಅಧಿಪತಿ ಬುಧ, ಅವರಿಗೆ ಕೆಂಪು ಅಥವಾ ಬಿಳಿ ಗುಲಾಬಿಗಳಿರುವ ರೋಮ್ಯಾಂಟಿಕ್ ಕಾದಂಬರಿಗಳನ್ನು ನೀಡುವುದು ಒಳ್ಳೆಯದು. ಇದರೊಂದಿಗೆ, ನೀವು ಯಾವುದೇ ಕಲಾತ್ಮಕ ವಸ್ತುವನ್ನು ಸಹ ಉಡುಗೊರೆಯಾಗಿ ನೀಡಬಹುದು. 

ಇದನ್ನೂ ಓದಿ- Valentine Week: ಈ 4 ರಾಶಿಯವರಿಗೆ ಪ್ರೇಮಿಗಳ ವಾರ ತುಂಬಾ ವಿಶೇಷ

ಕರ್ಕ ರಾಶಿ: ಕರ್ಕ ರಾಶಿಯ ಅಧಿಪತಿ ಚಂದ್ರ. ಕೆಂಪು ಬಣ್ಣದ ಮೇಲೆ ಬಿಳಿ ಪಟ್ಟೆಗಳನ್ನು ಹೊಂದಿರುವ ಗುಲಾಬಿಯನ್ನು ಅವರಿಗೆ ನೀಡುವುದು ಉತ್ತಮ. ಇದರೊಂದಿಗೆ, ನೀವು ಮುತ್ತಿನ ಮಣಿಗಳು ಅಥವಾ ಸುಗಂಧ ದ್ರವ್ಯಗಳನ್ನು ನೀಡಬಹುದು.

ಸಿಂಹ ರಾಶಿ: ಸಿಂಹ ರಾಶಿಯ ಅಧಿಪತಿ ಸೂರ್ಯ. ಈ ಪ್ರೇಮಿಗಳ ದಿನದಂದು ಅವಳಿಗೆ ಕಿತ್ತಳೆ ಗುಲಾಬಿಗಳಿರುವ ನೀಲಿ ಉಡುಪನ್ನು ಉಡುಗೊರೆಯಾಗಿ ನೀಡಿ. 

ಕನ್ಯಾ ರಾಶಿ: ಕನ್ಯಾ ರಾಶಿಯ ಅಧಿಪತಿ ಬುಧ. ಪ್ರೇಮಿಗಳ ದಿನದಂದು ಪ್ರಣಯದ ಸ್ಪರ್ಶವನ್ನು ಸೇರಿಸಲು ಅವರಿಗೆ ಕೆಂಪು ಮತ್ತು ನೀಲಿ ಗುಲಾಬಿಗಳನ್ನು ನೀಡಿ. ಸಾಧ್ಯವಾದರೆ, ಕೆಂಪು-ನೀಲಿ ಗುಲಾಬಿಗಳ ಪುಷ್ಪಗುಚ್ಛವನ್ನು ಉಡುಗೊರೆಯಾಗಿ (Valentine's Day gift) ನೀಡಿ.  

ತುಲಾ ರಾಶಿ: ತುಲಾ ರಾಶಿಯ ಅಧಿಪತಿ ಶುಕ್ರ. ನೀವು ಅವರಿಗೆ ಗುಲಾಬಿ ಬಣ್ಣದ ಗುಲಾಬಿಗಳನ್ನು ನೀಡಬಹುದು. ಇದರೊಂದಿಗೆ ಪಿಂಕ್ ಅಥವಾ ವೈಟ್ ಕಲರ್ ಡ್ರೆಸ್ ಕೊಟ್ಟರೆ ಚೆನ್ನಾಗಿರುತ್ತದೆ. 

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯ ಅಧಿಪತಿ ಮಂಗಳ. ಅವರಿಗೆ ಕೆಂಪು ಬಣ್ಣದ ಗುಲಾಬಿಗಳನ್ನು ನೀಡುವುದು ಉತ್ತಮ. ಇದರ ಹೊರತಾಗಿ ಹಳದಿ ಗುಲಾಬಿ ಮತ್ತು ಯಾವುದೇ ಎಲೆಕ್ಟ್ರಾನಿಕ್ ವಸ್ತುವನ್ನು ಉಡುಗೊರೆಯಾಗಿ ನೀಡುವುದು ಒಳ್ಳೆಯದು.  

ಇದನ್ನೂ ಓದಿ- Rose Day: ಗುಲಾಬಿ ಬಣ್ಣಗಳ ಪ್ರಾಮುಖ್ಯತೆ ಏನು? ಯಾವ ಬಣ್ಣದ ಗುಲಾಬಿ ಏನನ್ನು ಸೂಚಿಸುತ್ತೆ?

ಧನು ರಾಶಿ: ಧನು ರಾಶಿಯ ಆಡಳಿತ ಗ್ರಹ ಗುರು. ಈ ಜನರಿಗೆ ಕಿತ್ತಳೆ ಅಥವಾ ಹಳದಿ ಗುಲಾಬಿಗಳನ್ನು ನೀಡುವುದು ಉತ್ತಮ. ಇದರ ಹೊರತಾಗಿ ದುಬಾರಿ ಉಡುಗೊರೆಗಳನ್ನು ನೀಡುವ ಯೋಜನೆ ಇದ್ದರೆ, ನೀವು ಚಿನ್ನದ ಪೆಂಡೆಂಟ್ ಅಥವಾ ಉಂಗುರಗಳನ್ನು ನೀಡಬಹುದು. 

ಮಕರ ರಾಶಿ: ಮಕರ ರಾಶಿಯ ಅಧಿಪತಿ ಶನಿ. ಅವರಿಗೆ ಕೆಂಪು ಅಥವಾ ನೀಲಿ ಗುಲಾಬಿಗಳನ್ನು ನೀಡುವುದು ಒಳ್ಳೆಯದು. ಇದಲ್ಲದೇ ಯಾವುದೇ ಪುರಾತನ ವಸ್ತುವನ್ನು ಉಡುಗೊರೆಯಾಗಿ ನೀಡಬಹುದು. 

ಕುಂಭ ರಾಶಿ: ಕುಂಭ ರಾಶಿಯ ಅಧಿಪತಿಯೂ ಶನಿಯೇ. ಈ ರಾಶಿಯ ಜನರಿಗೆ ಕೆಂಪು ಅಥವಾ ನೀಲಿ ಗುಲಾಬಿಗಳು ಮತ್ತು ಯಾವುದೇ ಪುರಾತನ ವಸ್ತುಗಳನ್ನು ಉಡುಗೊರೆಯಾಗಿ ನೀಡಬಹುದು. 

ಮೀನ ರಾಶಿ: ಮೀನ ರಾಶಿಯ ಅಧಿಪತಿ ಗುರು. ಅವರು ಹಳದಿ ಬಣ್ಣದ ಉಡುಗೊರೆಯನ್ನು ಇಷ್ಟಪಡುತ್ತಾರೆ. ಹಾಗೆಯೇ ಹಳದಿ ಗುಲಾಬಿ ಮತ್ತು ಉಡುಗೆಯನ್ನು ಕೊಟ್ಟರೆ ಚೆನ್ನಾಗಿರುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News