ನವದೆಹಲಿ: ಇಂದಿನ ಧಾವಂತದ ಜೀವನದಲ್ಲಿ ಮನುಷ್ಯ ಎಷ್ಟು ಬ್ಯುಸಿಯಾಗಿದ್ದಾನೆಂದರೆ ಆತನ ಜೀವನಶೈಲಿಯೇ ಸಂಪೂರ್ಣವಾಗಿ ಬದಲಾಗಿದೆ. ನಿದ್ದೆಯಿಂದ ಏಳುವ ಸಮಯದಿಂದ ಹಿಡಿದು ಸೇವಿಸುವ ಆಹಾರ ಪದ್ಧತಿಯವರೆಗೆ ಎಲ್ಲವೂ ಬದಲಾಗಿದೆ. ಬಟ್ಟೆ ಒಗೆಯುವುದು ಕೂಡ ಈ ಕಾರ್ಯಗಳಲ್ಲಿ ಸೇರಿದೆ. ಸಮಯದ ಅಭಾವದಿಂದ ಅನೇಕರು ಹಗಲಿನ ಬದಲು ರಾತ್ರಿ ವೇಳೆ ಬಟ್ಟೆ ಒಗೆಯುತ್ತಾರೆ. ಶಾಸ್ತ್ರಗಳ ಪ್ರಕಾರ ಹೀಗೆ ಮಾಡುವುದು ಸರಿಯೇ? ಇದರ ಬಗ್ಗೆ ವಾಸ್ತು ಶಾಸ್ತ್ರ ಏನು ಹೇಳುತ್ತದೆ? ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ರಾತ್ರಿ ಬಟ್ಟೆ ಒಗೆಯುವುದು ಸರಿಯೇ?
ವಾಸ್ತುಶಾಸ್ತ್ರದ ಪ್ರಕಾರ, ನಾವು ಯಾವಾಗಲೂ ಹಗಲಿನಲ್ಲಿ ಬಟ್ಟೆ ಒಗೆಯಬೇಕು. ಹಗಲಿನಲ್ಲಿ ಬಟ್ಟೆ ಒಗೆಯುವಾಗ ಉತ್ತಮವಾದ ಸೂರ್ಯನ ಬೆಳಕು ಮತ್ತು ಗಾಳಿ ಸಿಗುತ್ತದೆ. ಇದರಿಂದ ಬಟ್ಟೆಗಳಲ್ಲಿರುವ ಸೂಕ್ಷ್ಮಜೀವಿಗಳು ಸಂಪೂರ್ಣವಾಗಿ ನಾಶವಾಗುತ್ತವೆ. ಮತ್ತೊಂದೆಡೆ ರಾತ್ರಿ ವೇಳೆ ಬಟ್ಟೆ ಒಗೆಯುವುದು ಇದಕ್ಕೆ ವಿರುದ್ಧವಾಗಿದೆ. ಸಾಕಷ್ಟು ಸೂರ್ಯನ ಬೆಳಕು ಮತ್ತು ಗಾಳಿ ಇರದ ಕಾರಣ ಎಲ್ಲಾ ಸೂಕ್ಷ್ಮಜೀವಿಗಳು ರಾತ್ರಿಯಲ್ಲಿ ಒದ್ದೆಯಾದ ಬಟ್ಟೆಯ ಮೇಲೆ ಅಂಟಿಕೊಳ್ಳುತ್ತವೆ, ಇದು ನಂತರ ಅನೇಕ ರೋಗಗಳನ್ನು ತರುತ್ತದೆ.
ಇದನ್ನೂ ಓದಿ: HD Kumaraswamy : ಗಡಿ ವಿವಾದ ಮುಗಿದು ಹೋದ ಅಧ್ಯಾಯ : ಹೆಚ್.ಡಿ. ಕುಮಾರಸ್ವಾಮಿ
ನಕಾರಾತ್ಮಕ ಶಕ್ತಿ ಕಾಡುತ್ತದೆ
ಧಾರ್ಮಿಕ ವಿದ್ವಾಂಸರ ಪ್ರಕಾರ, ರಾತ್ರಿಯಲ್ಲಿ ಬಟ್ಟೆ ಒಗೆಯುವಾಗ ನಕಾರಾತ್ಮಕ ಶಕ್ತಿಯು ಸೂಕ್ಷ್ಮಜೀವಿಗಳ ರೂಪದಲ್ಲಿ ಪ್ರವೇಶಿಸುತ್ತದೆ. ಬೆಳಗ್ಗೆ ಆ ಬಟ್ಟೆಗಳನ್ನು ಧರಿಸಿದಾಗ ನಕಾರಾತ್ಮಕ ಶಕ್ತಿಯು ವ್ಯಕ್ತಿಯನ್ನು ಪ್ರವೇಶಿಸುತ್ತದೆ. ಇದರ ನಂತರ ಆ ವ್ಯಕ್ತಿಯ ಎಲ್ಲಾ ಕೆಲಸಗಳು ಹಿಮ್ಮುಖವಾಗಲು ಪ್ರಾರಂಭಿಸುತ್ತವೆ. ಆತ ಮಾಡುವ ಯಾವುದೇ ಕೆಲಸದಲ್ಲಿ ಅಡಚಣೆ ಇರುತ್ತದೆ. ಇದರಿಂದ ವ್ಯಕ್ತಿಗೆ ದೊಡ್ಡ ನಿರಾಶೆಯಾಗುತ್ತದೆ.
ಮನೆಯ ಸಂತೋಷ & ಸಮೃದ್ಧಿ ದೂರವಾಗುತ್ತದೆ
ಸಾಧ್ಯವಾದಷ್ಟು ರಾತ್ರಿ ಬಟ್ಟೆ ಒಗೆಯುವುದನ್ನು ತಪ್ಪಿಸಬೇಕು ಎನ್ನುತ್ತಾರೆ ವಾಸ್ತು ತಜ್ಞರು. ಕೆಲವು ಕಾರಣಗಳಿಂದ ಹಗಲಿನಲ್ಲಿ ಸಮಯವಿಲ್ಲದಿದ್ದರೆ ಮತ್ತು ರಾತ್ರಿಯಲ್ಲಿ ನೀವು ಬಟ್ಟೆ ತೊಳೆಯಬೇಕಾದರೆ ಅವುಗಳನ್ನು ತೆರೆದ ಸ್ಥಳದಲ್ಲಿ ಒಣಗಿಸಬಾರದು. ಹೀಗೆ ಮಾಡುವುದರಿಂದ ಎಲ್ಲಾ ರೀತಿಯ ಸಣ್ಣ ಸೂಕ್ಷ್ಮಾಣುಗಳು ಅವುಗಳ ಮೇಲೆ ಅಂಟಿಕೊಳ್ಳುತ್ತವೆ. ನಂತರ ಇದು ನಿಮಗೆ ದೊಡ್ಡ ಹಾನಿಯನ್ನುಂಟು ಮಾಡುತ್ತದೆ. ಇದರೊಂದಿಗೆ ಮನೆಯ ಸುಖ-ಸಮೃದ್ಧಿಯೂ ಶಾಶ್ವತವಾಗಿ ಹೋಗುತ್ತದೆ.
ಇದನ್ನೂ ಓದಿ: ನೆಲ, ಜಲ, ಗಡಿ, ಭಾಷೆ ವಿಚಾರದಲ್ಲಿ ರಾಜಿ ಆಗಲ್ಲ- ಬಿ.ಎಸ್.ಯಡಿಯೂರಪ್ಪ
(ವಿಶೇಷ ಸೂಚನೆ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.