ಸೋಮವಾರದ ದಿನವೇ ಯಾಕೆ ಶಿವನ ಪೂಜೆಗೆ ಶ್ರೇಷ್ಠ ತಿಳಿಯಿರಿ..!

ಸೋಮವಾರ ಅನೇಕ ಜನರು ಶಿವನನ್ನು ಪೂಜಿಸುತ್ತಾರೆ ಮತ್ತು ಉಪವಾಸ ಮಾಡುತ್ತಾರೆ. ಸೋಮವಾರ ಆಚರಿಸುವ ಉಪವಾಸವನ್ನು ಸೋಮೇಶ್ವರ ವೃತ ಎಂದೂ ಕರೆಯುತ್ತಾರೆ.  

Written by - Ranjitha R K | Last Updated : Mar 15, 2021, 11:52 AM IST
  • ಸೋಮವಾರದ ಶಿವಪೂಜೆಗೆ ವಿಶೇಷ ಸ್ಥಾನಮಾನವಿದೆ
  • ಸೋಮವಾರದ ಪೂಜೆ ವೃತಕ್ಕೆ ಪ್ರಾಪ್ತಿಯಾಗುತ್ತದೆಯಂತೆ ವಿಶೇಷ ಫಲ
  • ಶಿವಪೂಜೆಗೂ ಕೆಲವೊಂದು ನಿಯಮಗಳಿವೆ
 ಸೋಮವಾರದ ದಿನವೇ ಯಾಕೆ ಶಿವನ ಪೂಜೆಗೆ ಶ್ರೇಷ್ಠ ತಿಳಿಯಿರಿ..! title=
ಸೋಮವಾರದ ಶಿವಪೂಜೆಗೆ ವಿಶೇಷ ಸ್ಥಾನಮಾನವಿದೆ (file photo)

ಬೆಂಗಳೂರು : ಶಿವ ಅಂದರೆ ತ್ರಿಮೂರ್ತಿಗಳಲ್ಲಿ ಒಬ್ಬ. ಹಿಂದೂ ಧರ್ಮದಲ್ಲಿ ಶಿವನಿಗೆ (Lord shiva) ವಿಶೇಷ ಸ್ಥಾನವಿದೆ. ವಾರದ ಎಲ್ಲಾ ಏಳು ದಿನಗಳು ಕೂಡಾ ಯಾವುದಾದರೂ ಒಬ್ಬ ದೇವನಿಗೆ ಅರ್ಪಿತವಾಗಿರುತ್ತದೆ.  ಆ ದಿನದಂದು ಆಯಾ ದೇವರಿಗೆ ಪೂಜೆ, ವೃತಗಳನ್ನು ಮಾಡಿದರೆ ಇಷ್ಟಾರ್ಥ ಸಿದ್ದಿಸುತ್ತದೆ, ಮನೋಕಾಮನೆ ಈಡೇರುತ್ತದೆ ಎನ್ನುವುದು ನಂಬಿಕೆ. ಹೀಗೆ ಸೋಮವಾರ ಶಿವನಿಗೆ ಮೀಸಲು. ಸೋಮವಾರದ ಶಿವಪೂಜೆ (Monday Shiva pooja), ಸೋಮವಾರದ ವೃತ ವಿಶೇಷ ಫಲವನ್ನು ಒದಗಿಸುತ್ತದೆಯಂತೆ. ಹಾಗಾದರೆ ಸೋಮವಾರದ ಪೂಜೆ ಹೇಗೆ ಮಾಡಬೇಕು ಎನ್ನುವ ಮಾಹಿತಿ ಇಲ್ಲಿದೆ..

ಸೋಮವಾರವೇ  ಶಿವನಿಗೆ ಯಾಕೆ ಅರ್ಪಿತ ? 
 ಸೋಮವಾರ (Monday), ಅನೇಕ ಜನರು ಶಿವನನ್ನು ಪೂಜಿಸುತ್ತಾರೆ ಮತ್ತು ಉಪವಾಸ ಮಾಡುತ್ತಾರೆ. ಸೋಮವಾರ ಆಚರಿಸುವ ಉಪವಾಸವನ್ನು ಸೋಮೇಶ್ವರ ವೃತ ಎಂದೂ ಕರೆಯುತ್ತಾರೆ. ಸೋಮ ಅಂದರೆ ಚಂದ್ರ. ಪೌರಾಣಿಕ ನಂಬಿಕೆಗಳ ಪ್ರಕಾರ, ಚಂದ್ರ (Moon) ಸೋಮವಾರದ ದಿನವೇ  ಶಿವನನ್ನು ಪೂಜಿಸಿದ್ದನಂತೆ. ಈ ಪೂಜಾ ಫಲವಾಗಿಯೇ ಚಂದ್ರ ಕ್ಷಯರೋಗದಿಂದ ಮುಕ್ತಿ ಪಡೆದನಂತೆ. ಹಾಗಾಗಿ ಸೋಮವಾರ ಈಶ್ವರನ ಪೂಜೆಗೆ (Shiva pooja) ಅತ್ಯತಂತ ಶ್ರೇಷ್ಠವಾದ ದಿನ ಎಂದು ಪರಿಗಣಿಸಲಾಗಿದೆ. 

ಇದನ್ನೂ ಓದಿ Amarnath Yatra 2021: ಜೂನ್ 28 ರಿಂದ ಅಮರನಾಥ್ ಯಾತ್ರೆ ಆರಂಭ, ಏಪ್ರಿಲ್ 1 ರಿಂದ ನೋಂದಣಿ

ಇದಲ್ಲದೆ, ಸೋಮ ಎಂದರೆ ಸೌಮ್ಯ ಎಂದರ್ಥ. ಭಗವಾನ್ ಶಂಕರ ಬಹಳ ಶಾಂತವಾಗಿರುತ್ತಾನೆ. ಭಕ್ತರ ಭಕ್ತಿಗೆ ಬಹಳ ಬೇಗನೆ ಪ್ರಸನ್ನನಾಗಿ ಬಿಡುತ್ತಾನೆ. ಹಾಗಾಗಿಯೇ ಈಶ್ವರನನ್ನು ಬೋಲೆನಾಥ್, ಬೋಲೆ ಬಾಬಾ ಎಂದೂ ಕರೆಯುತ್ತಾರೆ. 

ಈಶ್ವರನ ಪೂಜೆಯ ವೇಳೆ ಈ ಕೆಳಗಿನ ಅಂಶಗಳನ್ನು ನೆನಪಿಡಿ : 
ಮೊದಲೇ ಹೇಳಿದ ಹಾಗೆ ಈಶ್ವರ ತನ್ನ ಭಕ್ತರ ಭಕ್ತಿಗೆ ಬಹಳ ಬೇಗನೆ ಪ್ರಸನ್ನನಾಗುತ್ತಾನೆ. ಆದರೆ ಅವನ ಆರಾಧನೆಯಲ್ಲಿ ಯಾವುದೇ ತಪ್ಪಾಗಬಾರದು. ಶಿವನ ಕೃಪೆಯು ಯಾವಾಗಲೂ ಉಳಿಯುವಂತೆ ಕೆಲವು ಪ್ರಮುಖ ವಿಷಯಗಳು ಮತ್ತು ನಿಯಮಗಳನ್ನು ನೋಡಿಕೊಳ್ಳುವುದು ಅವಶ್ಯಕ:
- ಸೋಮವಾರದ ದಿನ, ಶಿವಲಿಂಗಕ್ಕೆ (Shivalinga) ನೀರು ಮತ್ತು ಹಾಲಿನಿಂದ (milk) ಅಭಿಷೇಕ ಮಾಡಬೇಕು. ನಂತರ  ಬಿಲ್ವಪತ್ರೆಯನ್ನು  ಅರ್ಪಿಸಿ  ಓಂ ನಮಃ ಶಿವಾಯಃ  ಎಂಬ ಶಿವಮಂತ್ರವನ್ನು ಜಪಿಸಿ.
-ಈ ದಿನ ಶಿವನನ್ನು ಪೂಜಿಸಿದ ನಂತರ ಶಿವ ಚಾಲಿಸಾ ಅಥವಾ ಶಿವಷ್ಟಕವನ್ನು ಪಠಿಸಿ 
-ಶಿವನ ಪೂಜೆ ವೇಳೆ ಯಾವತ್ತೂ ಕೇದಗೆ ಹೂವನ್ನ ಬಳಸಬೇಡಿ. ಶಿವಪೂಜೆಗೆ  ತುಳಸಿ (Tulsi) ಎಲೆಗಳ ಬಳಕೆಯೂ ನಿಷಿದ್ಧ. ಶಿವಲಿಂಗಕ್ಕೆ ಯಾವುದೇ ಕಾರಣಕ್ಕೂ ಶಂಖದಿಂದ ನೀರನ್ನು ಅರ್ಪಿಸಬಾರದು. 
ಶಿವನ ಆರಾಧನೆಯಲ್ಲಿ ಎಳ್ಳು ಬಳಸಬಾರದು, ಹಾಗೆಯೇ ಶಿವಲಿಂಗಕ್ಕೆ ಅಥವಾ ಶಿವನ ಮೂರ್ತಿಗೆ  ಅರಿಶಿನ ಮತ್ತು ಕುಂಕುಮವನ್ನು ಕೂಡಾ ಹಚ್ಚಬಾರದು. 

ಇದನ್ನೂ ಓದಿRudraksha- ರುದ್ರಾಕ್ಷಿ ಉತ್ಪತ್ತಿಯಾದದ್ದು ಹೇಗೆ, ಅದನ್ನು ಧರಿಸುವುದರಿಂದ ಏನೆಲ್ಲಾ ಪ್ರಯೋಜನ ಗೊತ್ತಾ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News