ಮಹಾರಾಷ್ಟ್ರದಲ್ಲಿ ಸರ್ಕಾರದಿಂದ ಮನೆ ಬಾಗಿಲಿಗೆ ಸಾರಾಯಿ ಪೂರೈಕೆ!

ಇನ್ನು ಕೆಲವೇ ದಿನಗಳಲ್ಲಿ ಸರ್ಕಾರವೇ ಮದ್ಯವನ್ನು ನಿಮ್ಮ ಮನೆಗೆ ಸಾರಾಯಿಯನ್ನು ಪೂರೈಸುವ ಯೋಜನೆಯನ್ನು ರೂಪಿಸುತ್ತಿದೆ.ಈ ಮೂಲಕ ದೇಶದಲ್ಲೇ ಈ ಕಾನೂನು ಜಾರಿಗೆ ತಂದ ಮೊದಲ ರಾಜ್ಯ ಎನ್ನುವ ಖ್ಯಾತಿಗೆ ಮಹಾರಾಷ್ಟ್ರ ಪಾತ್ರವಾಗಲಿದೆ.

Last Updated : Oct 14, 2018, 10:47 AM IST
ಮಹಾರಾಷ್ಟ್ರದಲ್ಲಿ ಸರ್ಕಾರದಿಂದ ಮನೆ ಬಾಗಿಲಿಗೆ ಸಾರಾಯಿ ಪೂರೈಕೆ! title=

ನವದೆಹಲಿ: ಇನ್ನು ಕೆಲವೇ ದಿನಗಳಲ್ಲಿ ಸರ್ಕಾರವೇ ಮದ್ಯವನ್ನು ನಿಮ್ಮ ಮನೆಗೆ ಸಾರಾಯಿಯನ್ನು ಪೂರೈಸುವ ಯೋಜನೆಯನ್ನು ರೂಪಿಸುತ್ತಿದೆ.ಈ ಮೂಲಕ ದೇಶದಲ್ಲೇ ಈ ಕಾನೂನು ಜಾರಿಗೆ ತಂದ ಮೊದಲ ರಾಜ್ಯ ಎನ್ನುವ ಖ್ಯಾತಿಗೆ ಮಹಾರಾಷ್ಟ್ರ ಪಾತ್ರವಾಗಲಿದೆ.

ಈ ಕುರಿತಾಗಿ ಸುದ್ದಿಗಾರೊಂದಿಗೆ ಮಾತನಾಡಿದ ಮಹಾರಾಷ್ಟ್ರ ಅಬಕಾರಿ ಸಚಿವ ಚಂದ್ರಶೇಖರ್ ಬವಾನ್ಕುಲೇ" ಡ್ರಂಕ್ ಮಾಡಿ ವಾಹನ ಚಾಲನೆ ಮಾಡುತ್ತಿರುವುದರಿಂದಾಗಿ ಅಪಘಾತದ ಪ್ರಕರಣಗಳು ಹೆಚ್ಚುತ್ತಿವೆ, ಆದ್ದರಿಂದ ಈಗ ಇ-ಕಾಮರ್ಸ್ ಉದ್ಯಮದ ಮೂಲಕ ಸಾರಾಯಿಯನ್ನು ಸಹ ಮನೆಗೆ ಪೂರೈಸುವ ಕುರಿತಾಗಿ ಈಗ ಕಾಯ್ದೆಯನ್ನು ಪ್ರಸ್ತಾಪಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಈ ಮದ್ಯವನ್ನು ಕೊಂಡುಕೊಳ್ಳಲು ಆಧಾರ ಕಾರ್ಡ್ ಮೂಲಕ ವ್ಯಕ್ತಿಗಳ ವಯಸ್ಸನ್ನು ಖಚಿತಪಡಿಸಿಕೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

ನ್ಯಾಷನಲ್ ಕ್ರೈಂ ರಿಕಾರ್ಡ್ ಬ್ಯೂರೋ ಪ್ರಕಾರ 2015 ರಲ್ಲಿ ಶೇ 4.64 ಲಕ್ಷ ರಸ್ತೆ ಅಪಘಾತಗಳು ಸಂಭವಿಸಿದ್ದು  ಅದರಲ್ಲಿ  ಒಟ್ಟು 6295 ಜನರು ಗಾಯಗೊಂಡಿದ್ದರೆ 2988 ಜನರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.ಈಗ ಇಂತಹ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಈಗ ಕಾಯ್ದೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಹೇಳಲಾಗಿದೆ.
 

Trending News