ವಕೀಲಿ ವೃತ್ತಿ ಮತ್ತು ನ್ಯಾಯಾಂಗದಲ್ಲಿ ಲಿಂಗ ತಾರತಮ್ಯವಿದೆ- ನ್ಯಾ.ಇಂದು ಮಲ್ಹೋತ್ರಾ

 ವಕೀಲಿ ವೃತ್ತಿ ಮತ್ತು ನ್ಯಾಯಾಂಗದಲ್ಲಿ  ಲಿಂಗ ತಾರತಮ್ಯವಿದೆ  ಎಂದು ಸುಪ್ರಿಂಕೋರ್ಟ್ ನ್ಯಾಯಮೂರ್ತಿ ಇಂದು ಮಲ್ಹೊತ್ರಾ ಅಭಿಪ್ರಾಯ ಪಟ್ಟಿದ್ದಾರೆ.

Last Updated : Oct 14, 2018, 03:47 PM IST
ವಕೀಲಿ ವೃತ್ತಿ ಮತ್ತು ನ್ಯಾಯಾಂಗದಲ್ಲಿ  ಲಿಂಗ ತಾರತಮ್ಯವಿದೆ- ನ್ಯಾ.ಇಂದು ಮಲ್ಹೋತ್ರಾ title=

ನವದೆಹಲಿ: ವಕೀಲಿ ವೃತ್ತಿ ಮತ್ತು ನ್ಯಾಯಾಂಗದಲ್ಲಿ  ಲಿಂಗ ತಾರತಮ್ಯವಿದೆ  ಎಂದು ಸುಪ್ರಿಂಕೋರ್ಟ್ ನ್ಯಾಯಮೂರ್ತಿ ಇಂದು ಮಲ್ಹೊತ್ರಾ ಅಭಿಪ್ರಾಯ ಪಟ್ಟಿದ್ದಾರೆ.

ಆಕ್ಸ್ ಫರ್ಡ್ ವಿವಿ ಮತ್ತು  ವಿದಿ ಸೆಂಟರ್ ಫಾರ್ ಲೀಗಲ್ ಪಾಲಸಿ ಆಶ್ರಯದಲ್ಲಿ ನಡೆದ ಗೋಷ್ಠಿಯೊಂದರಲ್ಲಿ ಭಾಗವಹಿಸಿ ಮಾತನಾಡುತ್ತಾ " ನಾನು ಕಾನೂನು ಹಿನ್ನಲೆಯ ಕುಟುಂಬದಿಂದ ಬಂದಿದ್ದರೂ ಸಹಿತ ಈ ವೃತ್ತಿ ನನಗೆ ಸುಲಭದ್ದಾಗಿರಲಿಲ್ಲ,ನನ್ನ ತಂದೆ ಹಿರಿಯ ವಕೀಲರಾಗಿದ್ದರು ನಾನು ಈ ವೃತ್ತಿಯನ್ನು ಪ್ರಾರಂಭಿಸಿದ್ದಾಗ ಆವರು ಆಗಲೇ ತಮ್ಮ  ನಿವೃತ್ತಿ ಹಂತದಲ್ಲಿದ್ದರು ಆದ್ದರಿಂದ ನನಗೆ ಅವರಿಂದ ಅಷ್ಟು ಮಟ್ಟದ ಕೇಸ್ ಗಳ ಲಭ್ಯತೆ ಅವರಿಂದ ಸಿಗಲಿಲ್ಲ ಆದರೆ ಅವರು ನಿರ್ಮಿಸಿದ ದೊಡ್ಡ ಗ್ರಂಥಾಲಯದಿಂದ ನನಗೆ ಸಹಾಯವಾಯಿತು ಎಂದು ಅವರು ತಿಳಿಸಿದರು.

ಇನ್ನು ಮುಂದುವರೆದು " ನ್ಯಾಯಾಂಗದಲ್ಲಿ  ಲಿಂಗ ತಾರತಮ್ಯವಿದೆ ,ಸಾಮಾನ್ಯವಾಗಿ  ಕ್ಲಿಷ್ಟಕರ ವಾಣಿಜ್ಯಾತ್ಮಕ  ವಿಷಯಗಳ ನಿರ್ವಹಣೆಯಲ್ಲಿ ಮಹಿಳೆ ಅಷ್ಟು ಪರಿಣಿತಳಲ್ಲ ಎನ್ನುವ ಮಾತಿದೆ.ಕೆಲವು ಸರಿ ಹಿರಿಯ ನ್ಯಾಯಾಧೀಶರೇ ನಿಮಗೆ ಅದು ಅರ್ಥವಾಗುವುದಿಲ್ಲ ಎಂದು ಹೇಳುತ್ತಿದ್ದರು ಎಂದು ಸುಪ್ರಿಂ ಕೋರ್ಟ್ ನ್ಯಾಯಾಧೀಶೆ ಇಂದು ಮಲ್ಹೊತ್ರಾ ತಿಳಿಸಿದರು.
 

Trending News