ನವದೆಹಲಿ: ದೇಶದಲ್ಲಿ ಈಗ ಚಳಿಯ ಅಬ್ಬರ ಶುರುವಾಗಿದೆ. ತೀತ್ರ ಚಳಿಯಿಂದಾಗಿ ಜನರು ವಿವಿಧ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಆರೋಗ್ಯದ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯ. ಜನರನ್ನು ರೋಗಗಳಿಂದ ರಕ್ಷಿಸುವ ನೈಸರ್ಗಿಕ ಶಕ್ತಿ ತರಕಾರಿಗಳಿಗೆ ಇದೆ. ನೀವು ಕೆಲವು ತರಕಾರಿಗಳನ್ನು ಇಷ್ಟಪಡದಿರಬಹುದು, ಆದರೆ ಚಳಿಗಾಲದಲ್ಲಿ ಅವುಗಳನ್ನು ವಿವಿಧ ಭಕ್ಷ್ಯಗಳ ರೂಪದಲ್ಲಿ ಸೇವಿಸಬೇಕು. ಈ ತರಕಾರಿಗಳು ಮಕ್ಕಳು ಮತ್ತು ವಯಸ್ಸಾದವರಿಗೆ ಚಳಿಗಾಲದಲ್ಲಿ ತುಂಬಾ ಉಪಯುಕ್ತವಾಗಿವೆ. ಚಳಿಗಾಲದಲ್ಲಿ ಯಾವ ತರಕಾರಿಗಳನ್ನು ತಿನ್ನಬೇಕು ಎಂದು ತಿಳಿದುಕೊಳ್ಳಿರಿ.
ಪಾಲಕ್ ಸೊಪ್ಪು
ವಿಟಮಿನ್ B, C ಮತ್ತು E ಪಾಲಕ್ ಸೊಪ್ಪಿನಲ್ಲಿ ಕಂಡುಬರುತ್ತವೆ. ಶೀತ ಋತುವಿನಲ್ಲಿ ಇದು ಅನೇಕ ರೋಗಗಳಿಂದ ರಕ್ಷಿಸುತ್ತದೆ ಮತ್ತು ದೇಹವನ್ನು ಆರೋಗ್ಯಕರವಾಗಿರಿಸುತ್ತದೆ. ಇದು ಕಬ್ಬಿಣ, ಒಮೆಗಾ-3 ಕೊಬ್ಬಿನಾಮ್ಲಗಳು, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಮೆಗ್ನೀಸಿಯಮ್ನಂತಹ ಪೌಷ್ಟಿಕಾಂಶದ ಅಂಶಗಳನ್ನು ಒಳಗೊಂಡಿದೆ. ನೀವು ಮನೆಯಲ್ಲಿ ಪಾಲಕ್‌ನ ಅನೇಕ ಭಕ್ಷ್ಯಗಳನ್ನು ತಯಾರಿಸಬಹುದು, ಇದು ತಿನ್ನಲು ತುಂಬಾ ರುಚಿಯಾಗಿರುತ್ತದೆ.
ಇದನ್ನೂ ಓದಿ: Dates Benefits : ಖರ್ಜೂರದ ಆರೋಗ್ಯ ಪ್ರಯೋಜನಗಳನ್ನು ತಿಳಿದರೆ, ಶಾಕ್ ಆಗ್ತೀರಾ?
ಬತುವಾ ಸೊಪ್ಪು
ಬತುವಾ ಸೊಪ್ಪು ಆರೋಗ್ಯಕ್ಕೆ ಪ್ರಯೋಜನಕಾರಿ ತರಕಾರಿ. ಇದು ಮೆಗ್ನೀಸಿಯಮ್, ಕ್ಯಾಲ್ಸಿಯಂ, ಕಬ್ಬಿಣದಂತಹ ಅಗತ್ಯ ವಸ್ತುಗಳನ್ನು ಒಳಗೊಂಡಿದೆ. ಇದಲ್ಲದೆ 8 ವಿಧದ ವಿಟಮಿನ್ A, ಬB 1 ಮತ್ತು ವಿಟಮಿನ್ C ಕಂಡುಬರುತ್ತವೆ.
ಅಮರಂಥ್ ಗ್ರೀನ್ಸ್(Amarnath Greens)
ನಿಮಗೆ ರಕ್ತದ ಕೊರತೆಯಿದ್ದರೆ ಈ ತರಕಾರಿಯನ್ನು ಸೇವಿಸಬೇಕು. ಇದು ವಿಟಮಿನ್ A, ವಿಟಮಿನ್ B, ಕಬ್ಬಿಣ, ಕ್ಯಾಲ್ಸಿಯಂ ಮತ್ತು ಪ್ರೋಟೀನ್‌ಗಳ ನಿಧಿಯಾಗಿದೆ. ಆದ್ದರಿಂದ ನೀವು ಈ ತರಕಾರಿಯನ್ನು ಚಳಿಗಾಲದಲ್ಲಿ ಸಿವಿಸಲೇಬೇಕು.
ಇದನ್ನೂ ಓದಿ: Lukewarm Water Benefits : ಪ್ರತಿದಿನ ಬೆಳಗ್ಗೆ ಬಿಸಿ ನೀರು ಸೇವನೆ, ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ?
ಕ್ಯಾರೆಟ್
ಕ್ಯಾರೆಟ್ ಸದ್ಗುಣಗಳ ನಿಧಿಯಾಗಿದೆ. ಎಲ್ಲರ ಮೆಚ್ಚಿನ ಕ್ಯಾರೆಟ್ ಹಲ್ವಾ, ಪಾಯಸ ಮಾಡಿ ಸೇವಿಸಬಹುದು. ಇದು ಚಳಿಯಲ್ಲಿ ದೇಹಕ್ಕೆ ಸಾಕಷ್ಟು ಪ್ರಯೋಜನವನ್ನು ನೀಡುತ್ತದೆ. ವಿಟಮಿನ್ A, ಪೊಟ್ಯಾಸಿಯಮ್ ಮತ್ತು ಕಬ್ಬಿಣದಂತಹ ಅಂಶಗಳು ಇದರಲ್ಲಿ ಕಂಡುಬರುತ್ತವೆ. ನೀವು ಸಲಾಡ್ ರೂಪದಲ್ಲಿ ಕ್ಯಾರೆಟ್ ತೆಗೆದುಕೊಳ್ಳಬಹುದು.
ಬೀಟ್ರೂಟ್
ಇದನ್ನು ಹಣ್ಣುಗಳು ಮತ್ತು ತರಕಾರಿಗಳಲ್ಲಿ ಪ್ರಮುಖವೆಂದು ಪರಿಗಣಿಸಲಾಗಿದೆ. ಇದು ಅನೇಕ ಆರೋಗ್ಯ ಪ್ರಯೋಜನಗಳ ನಿಧಿಯಾಗಿದೆ. ಇದು ತೂಕವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ. ಸೋಡಿಯಂ, ಪೊಟ್ಯಾಸಿಯಮ್, ಫೈಬರ್ ನಂತಹ ಪೋಷಕಾಂಶಗಳು ಇದರಲ್ಲಿ ಕಂಡುಬರುತ್ತವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.