ಕರ್ನಾಟಕ ಶಿಕ್ಷಕರ ನೇಮಕಾತಿ ಪರೀಕ್ಷೆಯ ಅಡ್ಮಿಟ್ ಕಾರ್ಡ್‌ನಲ್ಲಿ ಸನ್ನಿ ಲಿಯೋನ್ ಫೋಟೋ

Karnataka Teachers Recruitment Exam Admit Card: ಕರ್ನಾಟಕ ಶಿಕ್ಷಕರ ನೇಮಕಾತಿ ಪರೀಕ್ಷೆಯ ಅಡ್ಮಿಟ್ ಕಾರ್ಡ್‌ನಲ್ಲಿ ಅಭ್ಯರ್ಥಿಯ ಚಿತ್ರದ ಬದಲು ಸನ್ನಿ ಲಿಯೋನ್ ಫೋಟೋ ಕಂಡು ಅಭ್ಯರ್ಥಿಯೊಬ್ಬರು ದಿಗ್ಭ್ರಮೆಗೊಂಡಿದ್ದಾರೆ. 

Written by - Yashaswini V | Last Updated : Nov 9, 2022, 12:21 PM IST
  • ಕರ್ನಾಟಕ ಶಿಕ್ಷಕರ ನೇಮಕಾತಿ ಪರೀಕ್ಷೆಯ ಅಡ್ಮಿಟ್ ಕಾರ್ಡ್‌ನಲ್ಲಿ ಅಭ್ಯರ್ಥಿಯ ಚಿತ್ರದ ಬದಲು ಸನ್ನಿ ಲಿಯೋನ್ ಫೋಟೋ
  • ಅಡ್ಮಿಟ್ ಕಾರ್ಡ್‌ನಲ್ಲಿ ಸನ್ನಿ ಲಿಯೋನ್ ಫೋಟೋ ವಿರುದ್ಧ ಕರ್ನಾಟಕ ಕಾಂಗ್ರೆಸ್ ಸಾಮಾಜಿಕ ಮಾಧ್ಯಮದ ಅಧ್ಯಕ್ಷ ಬಿಆರ್ ನಾಯ್ಡು ವಾಗ್ಧಾಳಿ
  • ನೀಲಿಚಿತ್ರ ತಾರೆ ನೋಡುವ ಹಂಬಲವಿದ್ದರೆ ಒಂದು ಫೋಟೋ ನೇತಾಕಿಕೊಳ್ಳಿ, ಅದಕ್ಕೆ ಶಿಕ್ಷಣ ಇಲಾಖೆಯನ್ನು ಉಪಯೋಗಿಸಬೇಡಿ ಎಂದು ಬಿ.ಆರ್. ನಾಯ್ಡು ವಾಗ್ಧಾಳಿ
ಕರ್ನಾಟಕ ಶಿಕ್ಷಕರ ನೇಮಕಾತಿ ಪರೀಕ್ಷೆಯ ಅಡ್ಮಿಟ್ ಕಾರ್ಡ್‌ನಲ್ಲಿ ಸನ್ನಿ ಲಿಯೋನ್ ಫೋಟೋ title=
Sunny Leone on admit card

Karnataka Teachers Recruitment Exam Admit Card: ಕರ್ನಾಟಕ ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಯೊಬ್ಬರು ತಮ್ಮ ಅಡ್ಮಿಟ್ ಕಾರ್ಡ್ ಕಂಡು ದಿಗ್ಭ್ರಮೆಗೊಂಡಿದ್ದಾರೆ. ವಾಸ್ತವವಾಗಿ,  ಕರ್ನಾಟಕ ಶಿಕ್ಷಕರ ನೇಮಕಾತಿ ಪರೀಕ್ಷೆಯ ಅಡ್ಮಿಟ್ ಕಾರ್ಡ್‌ನಲ್ಲಿ ಅಭ್ಯರ್ಥಿಯ ಚಿತ್ರದ ಬದಲು ಸನ್ನಿ ಲಿಯೋನ್ ಫೋಟೋ ಕಂಡು ಅಭ್ಯರ್ಥಿ ಗಾಬರಿಯಾಗಿದ್ದರೆ. ರಾಜ್ಯದ ಶಾಲಾ ಶಿಕ್ಷಣ ಇಲಾಖೆಯು ನಿರ್ವಹಿಸುವ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ-2022 ರ ಪ್ರವೇಶ ಕಾರ್ಡ್‌ನಲ್ಲಿ ಅಭ್ಯರ್ಥಿಯ ಭಾವಚಿತ್ರದ ಬದಲಿಗೆ ಸನ್ನಿ ಲಿಯೋನ್ ಫೋಟೋ ಹಾಕಿ ಎಡವಟ್ಟು ಮಾಡಿದೆ. 

ಅಡ್ಮಿಟ್ ಕಾರ್ಡ್‌ನಲ್ಲಿ ಅಭ್ಯರ್ಥಿಯ ಚಿತ್ರದ ಬದಲು ಸನ್ನಿ ಲಿಯೋನ್ ಫೋಟೋ:
ಮಾಧ್ಯಮ ವರದಿಗಳ ಪ್ರಕಾರ, ಆಪಾದಿತ ಪ್ರವೇಶ ಕಾರ್ಡ್‌ನ ಸ್ಕ್ರೀನ್ ಗ್ರ್ಯಾಬ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಕರ್ನಾಟಕ ಕಾಂಗ್ರೆಸ್ ಸಾಮಾಜಿಕ ಮಾಧ್ಯಮದ ಅಧ್ಯಕ್ಷ ಬಿಆರ್ ನಾಯ್ಡು ಅವರು ಮಂಗಳವಾರ ಈ ಕುರಿತಂತೆ ಟ್ವಿಟ್ಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ರಾಜ್ಯದ ಶಿಕ್ಷಣ ಇಲಾಖೆಯು ಅಭ್ಯರ್ಥಿಯ ಫೋಟೋ ಬದಲಿಗೆ ನೀಲಿಚಿತ್ರ ತಾರೆ ಚಿತ್ರವನ್ನು ಹಾಲ್ ಟಿಕೆಟ್‌ನಲ್ಲಿ ಮುದ್ರಿಸಿದೆ. ಸದನದಲ್ಲಿ ನೀಲಿಚಿತ್ರ ವೀಕ್ಷಿಸುವ ಪಕ್ಷದವರಿಂದ ಇನ್ನೇನು ತಾನೇ ನಿರೀಕ್ಷಿಸಲು ಸಾಧ್ಯ? @BCNagesh_bjp ಅವರೇ, ನೀಲಿಚಿತ್ರ ತಾರೆ ನೋಡುವ ಹಂಬಲವಿದ್ದರೆ ಒಂದು ಫೋಟೋ ನೇತಾಕಿಕೊಳ್ಳಿ, ಅದಕ್ಕೆ ಶಿಕ್ಷಣ ಇಲಾಖೆಯನ್ನು ಉಪಯೋಗಿಸಬೇಡಿ! ಎಂದು ವಾಗ್ದಾಳಿ ನಡೆಸಿದ್ದಾರೆ. 

ಇದನ್ನೂ ಓದಿ- ಮುರುಘಾ ಮಠಕ್ಕೆ ಆಡಳಿತಾಧಿಕಾರಿ, ವರದಿಯ ನಂತರ ತೀರ್ಮಾನ: ಸಿಎಂ ಬೊಮ್ಮಾಯಿ

ಬಿಆರ್ ನಾಯ್ಡು ಅವರ ಆರೋಪಕ್ಕೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ಕಚೇರಿಯಿಂದ ಪ್ರತಿಕ್ರಿಯಿಸಲಾಗಿದ್ದು, ಭಾವಚಿತ್ರವನ್ನು ಅಭ್ಯರ್ಥಿ ಅಪ್‌ಲೋಡ್ ಮಾಡಬೇಕು. ಸಿಸ್ಟಮ್ ಫೈಲ್‌ಗೆ ಲಗತ್ತಿಸುವ ಯಾವುದೇ ಫೋಟೋವನ್ನು ತೆಗೆದುಕೊಳ್ಳುತ್ತದೆ. ಅಡ್ಮಿಟ್ ಕಾರ್ಡ್‌ನಲ್ಲಿ ಸನ್ನಿ ಲಿಯೋನ್ ಅವರ ಫೋಟೋ ಹಾಕಿದ್ದೀರಾ ಎಂದು ನಾವು ಅಭ್ಯರ್ಥಿಯನ್ನು ಕೇಳಿದಾಗ, ಅವರು ತಮ್ಮ ಪತಿಯ ಸ್ನೇಹಿತ ವಿವರಗಳನ್ನು ಅಪ್‌ಲೋಡ್ ಮಾಡಿದ್ದಾರೆ ಎಂದು ಹೇಳಿದರು. ವಿಚಾರಣೆಯ ನಂತರ ಎಫ್‌ಐಆರ್ ದಾಖಲಿಸುವುದಾಗಿ ಕರ್ನಾಟಕ ಶಿಕ್ಷಣ ಇಲಾಖೆ ಪ್ರಕಟಿಸಿದೆ.

ಇದನ್ನೂ ಓದಿ- ಭಾರತೀಯರ ಬದುಕು ಕಸಿದ ನೋಟ್ ಬ್ಯಾನ್‌ನಿಂದಾದ ಲಾಭವೇನು?: ಕಾಂಗ್ರೆಸ್ ಪ್ರಶ್ನೆ

ವಾಸ್ತವವಾಗಿ, ನವೆಂಬರ್ 6 ರಂದು  ಕರ್ನಾಟಕ ಶಿಕ್ಷಕರ ನೇಮಕಾತಿ ಪರೀಕ್ಷೆ ನಡೆಯಿತು. ಕರ್ನಾಟಕದಾದ್ಯಂತ 781 ಸ್ಥಳಗಳಲ್ಲಿ ನಡೆಸಲಾದ ಪರೀಕ್ಷೆಯಲ್ಲಿ  3,32,913 ಅಭ್ಯರ್ಥಿಗಳು ಹಾಜರಾಗಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News