IND vs ENG: ಇಂಡೋ-ಆಂಗ್ಲರ ಸೆಮಿ ಫೈನಲ್ ಹಣಾಹಣಿ: ಟೀಂ ಇಂಡಿಯಾದಲ್ಲಿ ಆಯ್ತು ಈ ಪ್ರಮುಖ ಬದಲಾವಣೆ!

IND vs ENG Semi-Final: ಸೂಪರ್-12ರಲ್ಲಿ ಸರಣಿ ಗೆಲುವಿನ ನಂತರ ಮಹತ್ವದ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಲು ಭಾರತ ಯೋಜನೆ ಸಿದ್ಧಪಡಿಸಿದೆ. ಗೆಲುವಿನ ಸಂಯೋಜನೆಯನ್ನು ಮುಂದುವರಿಸಿರುವ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಈಗಾಗಲೇ ಅಂತಿಮ ತಂಡದಲ್ಲಿ ಪರಿಸ್ಥಿತಿಗಳಿಗೆ ಅನುಗುಣವಾಗಿ ಬದಲಾವಣೆಗಳಾಗಬಹುದು ಎಂದು ಸೂಚಿಸಿದ್ದಾರೆ.

Written by - Bhavishya Shetty | Last Updated : Nov 10, 2022, 12:34 PM IST
    • ಭಾರತ-ಇಂಗ್ಲೆಂಡ್ ತಂಡಗಳು ಅಂತಿಮ ಸುತ್ತಿನ ಗುರಿಯೊಂದಿಗೆ ಕಣಕ್ಕೆ ಇಳಿಯುತ್ತಿವೆ
    • ಪಾಕಿಸ್ತಾನ ಈಗಾಗಲೇ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಫೈನಲ್ ತಲುಪಿದೆ
    • ರೋಹಿತ್ ಅಂತಿಮ ತಂಡದಲ್ಲಿ ಎರಡು ಬದಲಾವಣೆ ಮಾಡುವ ಸಾಧ್ಯತೆ ಇದೆ
IND vs ENG: ಇಂಡೋ-ಆಂಗ್ಲರ ಸೆಮಿ ಫೈನಲ್ ಹಣಾಹಣಿ: ಟೀಂ ಇಂಡಿಯಾದಲ್ಲಿ ಆಯ್ತು ಈ ಪ್ರಮುಖ ಬದಲಾವಣೆ!  title=
Cricket

IND vs ENG T20 World Cup Semi Final: ಆಸ್ಟ್ರೇಲಿಯದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ T20 ವಿಶ್ವಕಪ್ 2022 ಅದ್ಧೂರಿ ರಂಗವನ್ನು ತಲುಪಿದೆ. ಪಾಕಿಸ್ತಾನ ಈಗಾಗಲೇ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಫೈನಲ್ ತಲುಪಿದ್ದರೆ, ಭಾರತ ಇಂದು ಇಂಗ್ಲೆಂಡ್ ತಂಡವನ್ನು ಎದುರಿಸಲು ಸಜ್ಜಾಗಿದೆ. ಅಡಿಲೇಡ್‌ನಲ್ಲಿ ಎರಡನೇ ಸೆಮಿಫೈನಲ್ ಪಂದ್ಯ ಮಧ್ಯಾಹ್ನ 1.30ಕ್ಕೆ ಆರಂಭವಾಗಲಿದೆ. ಇಂದು ಗೆಲ್ಲುವ ತಂಡ ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ. ಆ ಮೂಲಕ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಅಂತಿಮ ಸುತ್ತಿನ ಗುರಿಯೊಂದಿಗೆ ಕಣಕ್ಕೆ ಇಳಿಯುತ್ತಿವೆ. ಎರಡೂ ತಂಡಗಳು ಬಲಿಷ್ಠವಾಗಿರುವುದರಿಂದ ಸಮಬಲದ ಹೋರಾಟವನ್ನು ಮಿಸ್ ಮಾಡಿಕೊಳ್ಳುವಂತಿಲ್ಲ.

ಇದನ್ನೂ ಓದಿ: IND vs ENG Matches: ಭಾರತ-ಇಂಗ್ಲೆಂಡ್ ಕ್ರಿಕೆಟ್ ಸಮರದಲ್ಲಿ ಹೆಚ್ಚು ಪಂದ್ಯ ಗೆದ್ದವರ್ಯಾರು ಗೊತ್ತಾ?

ಸೂಪರ್-12ರಲ್ಲಿ ಸರಣಿ ಗೆಲುವಿನ ನಂತರ ಮಹತ್ವದ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಲು ಭಾರತ ಯೋಜನೆ ಸಿದ್ಧಪಡಿಸಿದೆ. ಗೆಲುವಿನ ಸಂಯೋಜನೆಯನ್ನು ಮುಂದುವರಿಸಿರುವ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಈಗಾಗಲೇ ಅಂತಿಮ ತಂಡದಲ್ಲಿ ಪರಿಸ್ಥಿತಿಗಳಿಗೆ ಅನುಗುಣವಾಗಿ ಬದಲಾವಣೆಗಳಾಗಬಹುದು ಎಂದು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಅಂತಿಮ ಭಾರತ ತಂಡದ ಆಯ್ಕೆ ಕುತೂಹಲ ಮೂಡಿಸಿದೆ. ನಾಯಕ ಮತ್ತು ಕೋಚ್ ಮಾತುಗಳನ್ನು ಗಮನಿಸಿದರೆ ರೋಹಿತ್ ಅಂತಿಮ ತಂಡದಲ್ಲಿ ಎರಡು ಬದಲಾವಣೆ ಮಾಡುವ ಸಾಧ್ಯತೆ ಇದೆ.

ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಆಲ್ ರೌಂಡರ್ ಅಕ್ಸರ್ ಪಟೇಲ್ ಬದಲಿಗೆ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಆಡುವ ಸಾಧ್ಯತೆ ಇದೆ. ಸೆಮಿಸ್ ನಡೆಯುವ ಅಡಿಲೇಡ್ ಪಿಚ್ ನಿಧಾನಗತಿಯ ಬೌಲರ್‌ಗಳಿಗೆ ಸೂಕ್ತವಾಗಿದೆ. ಇದರೊಂದಿಗೆ ಎಡಗೈ ಸ್ಪಿನ್ನರ್ ಅಕ್ಸರ್ ಬದಲಿಗೆ ಮಣಿಕಟ್ಟಿನ ಮಾಂತ್ರಿಕ ಚಹಾಲ್ ಆಡುವ ಉತ್ತಮ ಅವಕಾಶಗಳಿವೆ. ಮೆಗಾ ಟೂರ್ನಿಯಲ್ಲಿ ಅಕ್ಷರ್ ಹೆಚ್ಚು ಪ್ರಭಾವ ಬೀರಲಿಲ್ಲ ಎಂಬುದು ಗೊತ್ತೇ ಇದೆ. ಬೌಲಿಂಗ್‌ನಲ್ಲಿ ನಿಧಾನಗತಿಯಂತೆ ಕಂಡರೂ, ಬ್ಯಾಟಿಂಗ್‌ನಲ್ಲಿ ಅವರು ಉತ್ತಮವಾಗಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಯಾರು ವಿಕೆಟ್ ಕೀಪರ್ ಆಗಿ ಆಡುತ್ತಾರೆ ಎಂಬ ಕುತೂಹಲ ಇನ್ನೂ ಇದೆ. ದಿನೇಶ್ ಕಾರ್ತಿಕ್ ಮತ್ತು ರಿಷಬ್ ಪಂತ್ ನಡುವೆ ಯಾರನ್ನು ತೆಗೆದುಕೊಳ್ಳಲಾಗುವುದು ಎಂಬುದರ ಕುರಿತು ಇನ್ನೂ ಸ್ಪಷ್ಟತೆ ಇಲ್ಲ. ಅಲ್ಪಾವಧಿ ಟೂರ್ನಿಯಲ್ಲಿ ಡಿಕೆಶಿ ನಿರೀಕ್ಷೆಗೆ ತಕ್ಕಂತಿಲ್ಲ. ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಪಂತ್ ಗೆ ಅವಕಾಶ ಸಿಕ್ಕರೂ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಇದರಿಂದಾಗಿ ಈ ಎರಡರಲ್ಲಿ ಯಾವುದನ್ನು ತೆಗೆದುಕೊಳ್ಳಬೇಕು ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ. ಆದರೆ ಇಂಗ್ಲೆಂಡ್ ವಿರುದ್ಧ ಪಂತ್ ಆಡುವ ಸಾಧ್ಯತೆ ಹೆಚ್ಚಿದೆಯಂತೆ. ಒಂದು ವೇಳೆ ಡಿಕೆ ಸೆಮಿಫೈನಲ್‌ನಲ್ಲಿ ಆಡದಿದ್ದರೆ ಅವರ ವೃತ್ತಿಜೀವನ ಕ್ಲೋಸ್ ಆಗುವ ಸಾಧ್ಯತೆಗಳಿವೆ.

ಇದನ್ನೂ ಓದಿ: IND vs ENG: ಇಂಡೋ-ಆಂಗ್ಲರ ನಡುವೆ ಸೆಮಿಸ್ ಸಮರ: ಪಾಕ್ ವಿರುದ್ಧ ಫೈನಲ್ ಆಡುವವರು ಯಾರು?

ಸಂಭಾವ್ಯ ಆಟಗಾರರ ಪಟ್ಟಿ:

ಭಾರತ: ಕೆಎಲ್ ರಾಹುಲ್, ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಯುಜ್ವೇಂದ್ರ ಚಾಹಲ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್,

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News