ಮಂಗಳೂರು: ಮಂಗಳೂರಿನಲ್ಲಿ ಶನಿವಾರ ಸಂಜೆ 5 ಗಂಟೆ ಸುಮಾರಿಗೆ ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ಕುಕ್ಕರ್ ಸ್ಫೋಟ ಸಂಭವಿಸಿದೆ. ಇದಾದ ನಂತರ ನಗರದಲ್ಲಿ ಹೈ ಅಲರ್ಟ್ ಜಾರಿಮಾಡಲಾಗಿದೆ.
ಚಾಲಕ ಮತ್ತು ವಾಹನದಲ್ಲಿದ್ದ ಪ್ರಯಾಣಿಕರಿಗೆ ಸುಟ್ಟ ಗಾಯಗಳಾಗಿದ್ದು, ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಗಳು ಸೂಚಿಸುತ್ತವೆ. ಶಂಕಾಸ್ಪದ ಸ್ಫೋಟದ ಹಿನ್ನೆಲೆಯಲ್ಲಿ ಮಂಗಳೂರು ನಗರದ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಇದನ್ನೂ ಓದಿ: ಹನಿ ಟ್ರಾಪ್ ಹನಿಗಳು ಸಿಎಂ ಕಚೇರಿಯಲ್ಲಿ ಬಿದ್ದಿದ್ದರ ಬಗ್ಗೆ ಸಿಎಂ ಬೊಮ್ಮಾಯಿ ಮಾತಾಡ್ಬೇಕು: ಕಾಂಗ್ರೆಸ್
ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಸಾರ್ವಜನಿಕ ಬಸ್ ಅನ್ನು ದಾಟುತ್ತಿರುವಾಗ ಆಟೋ ರಿಕ್ಷಾ ಸ್ಫೋಟಗೊಂಡಿದೆ. ನಂತರ ವಾಹನವು ದಟ್ಟವಾದ ಹೊಗೆಯ ಮೋಡದಲ್ಲಿ ಕಣ್ಮರೆಯಾಗುತ್ತದೆ. ಸ್ಫೋಟದ ಸ್ಥಳವು ಜನನಿಬಿಡ ರಸ್ತೆಯಂತೆ ತೋರುತ್ತಿದೆ ಮತ್ತು ಯಾವುದೇ ಹೆಚ್ಚುವರಿ ಹಾನಿಯನ್ನು ಅಧಿಕಾರಿಗಳು ಇನ್ನೂ ಖಚಿತಪಡಿಸಬೇಕಾಗಿದೆ.
Karnataka | At around 5pm today, an autorickshaw caught fire in the Kankanadi PS area. The reason behind the fire was a bag being carried by a passenger riding in the auto. Autodriver & passenger have sustained burn injuries,admitted to hospital: N Shashi Kumar, CP Mangaluru City pic.twitter.com/JuG9P1Sn6T
— ANI (@ANI) November 19, 2022
ಪ್ರಾಥಮಿಕ ತನಿಖಾ ವರದಿಗಳ ಪ್ರಕಾರ, ಆಟೋ ರಿಕ್ಷಾ ಸ್ಫೋಟಗೊಂಡಾಗ ಅದರೊಳಗೆ ಹಲವಾರು ಪ್ಲಾಸ್ಟಿಕ್ ಚೀಲಗಳು ಇದ್ದವು. ಘಟನೆ ನಡೆದ ಸ್ಥಳದಲ್ಲಿದ್ದ ಜನರು ಸ್ಫೋಟ ಸಂಭವಿಸುವ ಕೆಲವೇ ಕ್ಷಣಗಳ ಮೊದಲು ಬೆಂಕಿಯನ್ನು ಗುರುತಿಸಿದ್ದಾರೆ ಎಂದು ವರದಿ ಮಾಡಿದ್ದಾರೆ. ವರದಿಯ ಪ್ರಕಾರ, ರಿಕ್ಷಾ ಚಾಲಕನು ಕಿಡಿಯನ್ನು ಗಮನಿಸಿದನು ಆದರೆ ಸಮಯಕ್ಕೆ ಪ್ರತಿಕ್ರಿಯಿಸಲು ವಿಫಲನಾದನು ಎನ್ನಲಾಗಿದೆ.
ಇದನ್ನೂ ಓದಿ: ಬಡ ಮಕ್ಕಳ ಹಾಲಿಗೂ ಕನ್ನ : ʼಕ್ಷೀರಭಾಗ್ಯʼ ಕಾಳಸಂತೆಯಲ್ಲಿ ಮಾರಾಟ..!
ಸ್ಫೋಟ ನಡೆದ ಸ್ಥಳಕ್ಕೆ ಅಧಿಕಾರಿಗಳು ಆಗಮಿಸಿದ್ದು, ಮಂಗಳೂರಿನಲ್ಲಿ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಸಾರ್ವಜನಿಕರು ಭಯಪಡಬೇಡಿ ಎಂದು ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಮನವಿ ಮಾಡಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.