Gold Price Today : ಅಗ್ಗವಾಯಿತು ಚಿನ್ನ ಬೆಳ್ಳಿ ದರ .!

Gold Price Today : ನಿನ್ನೆ ಸ್ಥಿರವಾಗಿದ್ದ ಚಿನ್ನದ ಬೆಲೆಯಲ್ಲಿ ಇಂದು ಇಳಿಕೆ ಕಂಡು ಬಂದಿದೆ. ನಿನ್ನೆ ಚಿನ್ನದ ಬೆಲೆಯಲ್ಲಿ ಯಾವುದೇ ರೀತಿಯ ಬದಲಾವಣೆಯಾಗಿರಲಿಲ್ಲ. 

Last Updated : Nov 22, 2022, 08:51 AM IST
  • ಚಿನ್ನದ ಬೆಲೆಯಲ್ಲಿ ಇಳಿಕೆ
  • ಬೆಳ್ಳಿ ಬೆಲೆಯಲ್ಲಿ ಕೂಡಾ ಇಳಿಕೆ ದಾಖಲು
  • ಇಂದಿನ ದರ ಎಷ್ಟು ತಿಳಿಯಿರಿ
 Gold Price Today : ಅಗ್ಗವಾಯಿತು ಚಿನ್ನ ಬೆಳ್ಳಿ ದರ .! title=
Gold price today

ಬೆಂಗಳೂರು : Gold Price Today : ನಿನ್ನೆ ಸ್ಥಿರವಾಗಿದ್ದ ಚಿನ್ನದ ಬೆಲೆಯಲ್ಲಿ ಇಂದು ಇಳಿಕೆ ಕಂಡು ಬಂದಿದೆ. ನಿನ್ನೆ ಚಿನ್ನದ ಬೆಲೆಯಲ್ಲಿ ಯಾವುದೇ ರೀತಿಯ ಬದಲಾವಣೆಯಾಗಿರಲಿಲ್ಲ. ಆದರೆ ಇಂದು ಹಳದಿ ಲೋಹದ ಬೆಲೆಯಲ್ಲಿ 100 ರೂಪಾಯಿಗಳಷ್ಟು ಇಳಿಕೆ ಕಂಡು ಬಂದಿದೆ. ಈ ಇಳಿಕೆಯೊಂದಿಗೆ 24 ಕ್ಯಾರೆಟ್ ಚಿನ್ನದ ಬೆಲೆ 52,920 ರೂ. ಆಗಿದ್ದರೆ, 22 ಕ್ಯಾರೆಟ್ ಬಂಗಾರದ ಬೆಲೆ  48,500 ರೂ. ಆಗಿದೆ.

ಗುಡ್ ರಿಟರ್ನ್ ಮಾಹಿತಿ ಪ್ರಕಾರ ದೇಶದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ ಹೀಗಿದೆ.

ನಗರ      22 ಕ್ಯಾರೆಟ್ ಚಿನ್ನದ ಬೆಲೆ     24 ಕ್ಯಾರೆಟ್ ಚಿನ್ನದ ಬೆಲೆ
 ಚೆನ್ನೈ 49,200 53,670
 ಮುಂಬಯಿ 48,500 52,920
ದೆಹಲಿ 48,700 53,070
ಕೋಲ್ಕತ್ತಾ 48,500 52,920
ಬೆಂಗಳೂರು 48,550 52,970
ಹೈದರಾಬಾದ್ 48,500 52,920
ಕೇರಳ 48,500 52,920

ಇದನ್ನೂ ಓದಿ : Bank News: ಕೋಟ್ಯಾಂತರ ಬ್ಯಾಂಕ್ ಗ್ರಾಹಕರಿಗೊಂದು ಮಹತ್ವದ ಮಾಹಿತಿ

ಇನ್ನು ನಿನ್ನೆ ಕೇವಲ 100  ರೂಪಾಯಿಯಷ್ಟು ಏರಿಕೆಯಾಗಿದ್ದ ಬೆಳ್ಳಿ ಬೆಲೆಯಲ್ಲಿ ಇಂದು 400 ರೂಪಾಯಿಗಳಷ್ಟು ಇಳಿಕೆ ಕಂಡು ಬಂದಿದೆ. ಈ ಲೇಖನ ಬರೆಯುವ ಹೊತ್ತಿಗೆ ಗುಡ್ ರಿಟರ್ನ್ ಮಾಹಿತಿ ಪ್ರಕಾರ ಬೆಳ್ಳಿ ಬೆಲೆ ಎಷ್ಟಿತ್ತು ನೋಡೋಣ.

ನಗರ  ಇಂದಿನ ಬೆಳ್ಳಿ ಬೆಲೆ 
 ಚೆನ್ನೈ 66,500
 ಮುಂಬಯಿ 60,600
ದೆಹಲಿ 60,600
ಕೋಲ್ಕತ್ತಾ 60,600
ಬೆಂಗಳೂರು 66,500
ಹೈದರಾಬಾದ್ 66,500
ಕೇರಳ 66,500

ಇದನ್ನೂ ಓದಿ : PAN Card ನಲ್ಲಿ ಈ ತಪ್ಪು ಇದ್ದರೆ, ಈಗಲೇ ಸುಧಾರಿಸಿಕೊಳ್ಳಿ... ಇಲ್ದಿದ್ರೆ?

ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸುವುದು  ಹೇಗೆ ?
ನೀವು ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸಬೇಕಾದರೆ 8955664433 ಮೊಬೈಲ್ ಸಂಖ್ಯೆ ಗೆ ಮಿಸ್ಡ್ ಕಾಲ್ ನೀಡಿ. ಮಿಸ್ಡ್ ಕಾಲ್ ನೀಡಿದ ಕೂಡಲೇ ಇತ್ತೀಚಿನ ದರಗಳನ್ನು  ಸಂದೇಶ ರೂಪದಲ್ಲಿ ಸ್ವೀಕರಿಸುವುದು ಸಾಧ್ಯವಾಗುತ್ತದೆ ಆದರೆ ನೆನಪಿರಲಿ, ಇಲ್ಲಿ ನೀಡಲಾದ ದರವನ್ನು ಹೊರತುಪಡಿಸಿ, ಗ್ರಾಹಕರು GSTಯನ್ನು ಸಹ ಪಾವತಿಸಬೇಕಾಗುತ್ತದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News