Viral Video: ಅಣ್ಣ-ತಂಗಿಯ ಬಾಂಧವ್ಯದ ಈ ವಿಡಿಯೋ ನೋಡಿದ್ರೆ ನಿಮ್ಮ ಕಣ್ಣಲ್ಲಿ ನೀರು ಬರುತ್ತೆ!

ಈ ವಿಡಿಯೋವನ್ನು 3.6 ಕೋಟಿಗೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಲಕ್ಷಾಂತರ ಜನರು ಲೈಕ್ ಮತ್ತು ಶೇರ್ ಮಾಡಿದ್ದಾರೆ. ಈ ವಿಡಿಯೋ ನೋಡಿದ್ರೆ ನಿಮ್ಮ ಕಣ್ಣಂಚಲ್ಲಿ ಗ್ಯಾರಂಟಿ ನೀರು ಜಿನುಗುತ್ತದೆ.

Written by - Puttaraj K Alur | Last Updated : Nov 22, 2022, 03:49 PM IST
  • ಅಣ್ಣ-ತಂಗಿಯ ಬಾಂಧವ್ಯದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್
  • ಅಣ್ಣನಿಗಾಗಿ ತಂಗಿ, ತಂಗಿಗಾಗಿ ಅಣ್ಣ ಮಾಡಿದ ತ್ಯಾಗ ಎಂತಹದ್ದು ನೋಡಿ
  • ಈ ವಿಡಿಯೋ ನೋಡಿದ್ರೆ ನಿಮ್ಮ ಕಣ್ಣಂಚಲಿ ನೀರು ಜಿನುಗುವುದ ಗ್ಯಾರಂಟಿ
Viral Video: ಅಣ್ಣ-ತಂಗಿಯ ಬಾಂಧವ್ಯದ ಈ ವಿಡಿಯೋ ನೋಡಿದ್ರೆ ನಿಮ್ಮ ಕಣ್ಣಲ್ಲಿ ನೀರು ಬರುತ್ತೆ! title=
ಅಣ್ಣ-ತಂಗಿ ವಿಡಿಯೋ ವೈರಲ್!

ನವದೆಹಲಿ: ಸೋಷಿಯಲ್ ಮೀಡಿಯಾದಲ್ಲಿ ಪ್ರತಿದಿನವೂ ಹಲವಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಕೆಲವು ಫನ್ನಿ ಫನ್ನಿಯಾಗಿದ್ರೆ ಇನ್ನೂ ಕೆಲವು ವಿಡಯೋಗಳು ನಿಮ್ಮ ಕಣ್ಣಂಚಲಿ ನೀರು ಜಿನುಗುವಂತೆ ಮಾಡುತ್ತವೆ. ಅದೇ ರೀತಿ ಅಣ್ಣ-ತಂಗಿಯ ಪ್ರೀತಿಯ ಬಾಂಧವ್ಯದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಈ ವಿಡಿಯೋದಲ್ಲಿ ಇಬ್ಬರು ಪುಟಾಣಿ ಮಕ್ಕಳು ಊಟ ಮಾಡುತ್ತಿರುವುದನ್ನು ನೀವು ಕಾಣಬಹುದು. ಇವರಿಬ್ಬರೂ ಅಣ್ಣ-ತಂಗಿ. ಇಬ್ಬರು ಸೇರಿ ವಿವಿಧ ರೀತಿಯ ಆಹಾರವನ್ನು ಸೇವಿಸುತ್ತಿರುತ್ತಾರೆ. ಈ ವೇಳೆ ಪ್ಲೇಟಿನಲ್ಲಿದ್ದ ಒಂದು ಬಿಸ್ಕತ್ತನ್ನು ತಂಗಿ ತೆಗೆದುಕೊಳ್ಳುತ್ತಾಳೆ. ಅದೇ ಸಂದರ್ಭ ಮೊಬೈಲ್ ನೋಡುತ್ತಾ ಪ್ಲೇಟಿನಲ್ಲಿದ್ದ ಅದೇ ಬಿಸ್ಕತ್ತನ್ನು ತೆಗೆದುಕೊಳ್ಳಲು ಅಣ್ಣನೂ ಪ್ರಯತ್ನಿಸುತ್ತಾನೆ.

ಇದನ್ನೂ ಓದಿ: Football ಮೈದಾನಕ್ಕೆ ಬಂದ ಘೇಂಡಾಮೃಗ: ಅದನ್ನು ಓಡಿಸಲು ಆಟಗಾರರು ಮಾಡಿದ ಕಿತಾಪತಿ ನೋಡಿ

ಪ್ಲೇಟಿನಲ್ಲಿದ್ದ ಬಿಸ್ಕತ್ತನ್ನು ತಂಗಿ ತೆಗೆದುಕೊಂಡಿರುವುದು ಅಣ್ಣನಿಗೆ ಗೊತ್ತಿರುವುದಿಲ್ಲ, ಆದರೆ ಅಣ್ಣ ಬಿಸ್ಕತ್ತು ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ತಂಗಿ ನೋಡಿರುತ್ತಾಳೆ. ಹೀಗಾಗಿ ಆಕೆ ಮತ್ತೆ ತನ್ನ ಅಣ್ಣನಿಗೆ ಬಿಸ್ಕತ್ತು ನೀಡಬೇಕೆಂದು ಪ್ಲೇಟಿನಲ್ಲಿ ಇಡುತ್ತಾಳೆ. ಇದನ್ನು ಸೂಕ್ಷ್ಮವಾಗಿ ಗಮನಿಸುವ ಅಣ್ಣ ತನಗಾಗಿ ತಂಗಿ ಬಿಸ್ಕತ್ತು ತ್ಯಾಗ ಮಾಡುತ್ತಿದ್ದಾಳೆಂದು ತಿಳಿದುಕೊಳ್ಳುತ್ತಾನೆ. ಆತ ಬಿಸ್ಕತ್ತನ್ನು ತಾನೇ ತೆಗೆದುಕೊಳ್ಳುವಂತೆ ಮಾಡಿ ತಂಗಿಗೆ ನೀಡುತ್ತಾನೆ.

ತನ್ನ ಮೇಲೆ ಅಣ್ಣ ಇಟ್ಟಿರುವ ಪ್ರೀತಿಗೆ ಸ್ಮೈಲ್ ಮಾಡುವ ತಂಗಿ ಆತನಿಗೆ ಸಹಿಮುತ್ತು ನೀಡುತ್ತಾಳೆ. ಈ ವಿಡಿಯೋವನ್ನು 3.6 ಕೋಟಿಗೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಲಕ್ಷಾಂತರ ಜನರು ಲೈಕ್ ಮತ್ತು ಶೇರ್ ಮಾಡಿದ್ದಾರೆ. ಈ ವಿಡಿಯೋ ನೋಡಿದ್ರೆ ನಿಮ್ಮ ಕಣ್ಣಂಚಲ್ಲಿ ಗ್ಯಾರಂಟಿ ನೀರು ಜಿನುಗುತ್ತದೆ. ಅಣ್ಣ-ತಂಗಿಯ ಈ ಪ್ರೀತಿಯ ಬಾಂಧವ್ಯ ಕಂಡು ನೆಟಿಜನ್‍ಗಳು ಭಾವುಕರಾಗಿದ್ದಾರೆ.

ಇದನ್ನೂ ಓದಿViral Video: ವಾವ್ಹ್.. ಹೇಗಿದೆ ನೋಡಿ ಪುಟ್ಟ ಮಗುವಿನ ಸ್ನಾನ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News