Health Tips: ಮಧುಮೇಹ, ತೂಕ ಇಳಿಕೆಯ ಜೊತೆಗೆ ಕ್ಯಾನ್ಸರ್ ಗೂ ಮಾರಕ ಈ ಸಿಹಿ ಗೆಡ್ಡೆ

Sweet Potato Benefits: ಸಾಮಾನ್ಯವಾಗಿ ಸಿಹಿ ಪದಾರ್ಥಗಳ ಸೇವನೆಯಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ, ಆದರೆ ಸಿಹಿ ಗೆಣಸು ಒಂದು ರೀತಿಯ ತರಕಾರಿಯಾಗಿದ್ದು, ಇದು ರುಚಿಯಲ್ಲಿ ಸಿಹಿಯಾಗಿದ್ದರೂ ಕೂಡ ಮಧುಮೇಹದಲ್ಲಿ ತುಂಬಾ ಪ್ರಯೋಜನಕಾರಿಯಾಗಿದೆ. 

Sweet Potato Benefits: ಸಾಮಾನ್ಯವಾಗಿ ಸಿಹಿ ಪದಾರ್ಥಗಳ ಸೇವನೆಯಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ, ಆದರೆ ಸಿಹಿ ಗೆಣಸು ಒಂದು ರೀತಿಯ ತರಕಾರಿಯಾಗಿದ್ದು, ಇದು ರುಚಿಯಲ್ಲಿ ಸಿಹಿಯಾಗಿದ್ದರೂ ಕೂಡ ಮಧುಮೇಹದಲ್ಲಿ ತುಂಬಾ ಪ್ರಯೋಜನಕಾರಿಯಾಗಿದೆ. ಸ್ವೀಟ್ ಪೋಟ್ಯಾಟೊ ಕೂಡ ಆಲೂಗಡ್ಡೆಯಂತೆಯೇ ಇರುತ್ತದೆ, ಹೀಗಾಗಿ ಅದನ್ನು ಸಿಹಿ ಗೆಣಸು ಎಂದೂ ಕರೆಯುತ್ತಾರೆ. ಸಿಹಿಗೆಣಸಿನಲ್ಲಿ ಹಲವಾರು ಔಷಧೀಯ ಗುಣಗಳಿವೆ. ಪ್ರತಿಯೊಬ್ಬರೂ ಚಳಿಗಾಲದಲ್ಲಿ ಸಿಹಿಗೆಣಸನ್ನು ಬೇಯಿಸಿ ಅಥವಾ ಕುದಿಸಿ ತಿನ್ನಲು ಇಷ್ಟಪಡುತ್ತಾರೆ. ಸಿಹಿಗೆಣಸು ಮಧುಮೇಹದಲ್ಲಿ ತುಂಬಾ ಪ್ರಯೋಜನಕಾರಿಯಾಗಿದೆ. ಸಿಹಿಗೆಣಸು ಮಧುಮೇಹ ವಿರೋಧಿ ಗುಣಗಳನ್ನು ಹೊಂದಿದೆ. ಮಧುಮೇಹದಲ್ಲಿ ಸಿಹಿ ಪದಾರ್ಥಗಳನ್ನು ತಿನ್ನುವುದನ್ನು ಸಾಮಾನ್ಯವಾಗಿ ನಿಷಿದ್ಧ ಎನ್ನಲಾಗುತ್ತದೆ, ಸಿಹಿಗೆಣಸು ತಿನ್ನುವುದು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಮಧುಮೇಹದ ಹೊರತಾಗಿ, ಸಿಹಿ ಗೆಣಸು ಅನೇಕ ರೋಗಗಳಿಗೂ ಸಹ ಪ್ರಯೋಜನಕಾರಿಯಾಗಿದೆ.

 

ಇದನ್ನೂ ಓದಿ-Headache Remedies: ಈ ಎಲೆಗಳಿಂದ ನಿಮ್ಮ ತಲೆನೋವು ಕ್ಷಣಾರ್ಧದಲ್ಲೇ ಮಾಯವಾಗುತ್ತೆ!

 

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

1. ತೂಕ ಇಳಿಕೆ: ಸಿಹಿ ಗೆಣಸು ತೂಕವನ್ನು ಇಳಿಕೆ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿ ಕ್ಯಾಲೋರಿಗಳ ಪ್ರಮಾಣ ತುಂಬಾ ಕಡಿಮೆಯಾಗಿರುತ್ತದೆ, ಜೊತೆಗೆ ಇದು ಫೈಬರ್‌ನ ಉತ್ತಮ ಮೂಲವಾಗಿದೆ. ಸಿಹಿ ಗೆಣಸು ಅತಿಯಾಗಿ ತಿನ್ನುವ ನಿಮ್ಮ ಬಯಕೆಯನ್ನು ನಿಯಂತ್ರಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನೀವು ತೂಕವನ್ನು ನಿಯಂತ್ರಿಸಲು ಬಯಸುತ್ತಿದ್ದರೆ, ನೀವು ಸಿಹಿ ಗೆಣಸು ಸೇವಿಸಬಹುದು.  

2 /5

2. ಜೀರ್ಣ ಕ್ರಿಯೆಗೆ ಉತ್ತಮ: ಜೀರ್ಣಕ್ರಿಯೆಯ ದೃಷ್ಟಿಯಿಂದ ಸಿಹಿ ಗೆಣಸು ಅತ್ಯಂತ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಹೇರಳ ಪ್ರಮಾಣದಲ್ಲಿ ಫೈಬರ್ ಇರುತ್ತದೆ, ಇದು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಸಿಹಿ ಗೆಣಸು ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆ ಬಲಗೊಳ್ಳುತ್ತದೆ. ಇದರಿಂದ ಅಜೀರ್ಣ, ಮಲಬದ್ಧತೆ ಸಮಸ್ಯೆ ಇರುವುದಿಲ್ಲ.  

3 /5

3. ಮೆದುಳನ್ನು ಸಕ್ರೀಯಗೊಳಿಸುತ್ತದೆ - ಸಿಹಿ ಗೆಣಸು ಪೋಷಕಾಂಶಗಳ ಆಗರವಾಗಿದೆ. ಇದರಲ್ಲಿ ಕೋಲೀನ್ ಎಂಬ ಪೋಷಕಾಂಶವಿದ್ದು, ಇದು ಸ್ಮರಣ ಶಕ್ತಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಸಿಹಿ ಗೆಣಸು ನರಮಂಡಲಕ್ಕೆ ಪ್ರಯೋಜನಕಾರಿಯಾಗಿದೆ. ಸಿಹಿ ಗೆಣಸು ತಿನ್ನುವುದರಿಂದ ಸ್ನಾಯುಗಳಿಗೂ ಬಲ ಸಿಗುತ್ತದೆ.  

4 /5

4. ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದೆ - ಸಿಹಿಗೆಣಸಿನಲ್ಲಿ ಉತ್ಕರ್ಷಣ ನಿರೋಧಕಗಳಲ್ಲದೆ, ಕ್ಯಾನ್ಸರ್ ವಿರೋಧಿ ಗುಣಗಳೂ ಕೂಡ ಇವೆ. ಇದರಲ್ಲಿರುವ ಪೋಷಕಾಂಶಗಳು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುತ್ತವೆ. ಸಿಹಿ ಗೆಣಸು ತಿನ್ನುವುದರಿಂದ ಅನೇಕ ರೀತಿಯ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು.  

5 /5

5.ಕಣ್ಣಿನ ಆರೋಗ್ಯಕ್ಕೆ ಉತ್ತಮ- ಬೀಟಾ ಕ್ಯಾರೋಟಿನ್ ಸಿಹಿಗೆಣಸಿನಲ್ಲಿದೆ, ಇದು ಕಣ್ಣುಗಳಿಗೆ ಪ್ರಯೋಜನಕಾರಿಯಾಗಿದೆ. ಇದು ಉತ್ಕರ್ಷಣ ನಿರೋಧಕಗಳು ಮತ್ತು ಆಂಥೋಸಯಾನಿನ್ಗಳಲ್ಲಿ ಸಮೃದ್ಧವಾಗಿದೆ. ಪ್ರತಿದಿನ ಸಿಹಿಗೆಣಸು ತಿನ್ನುವುದರಿಂದ ದೃಷ್ಟಿ ಹೆಚ್ಚುತ್ತದೆ.