ರಫೇಲ್ ಹಗರಣದ ತನಿಖೆ ಮಾಡಿದ್ದೇ ಆದಲ್ಲಿ ಮೋದಿಗೆ ಉಳಿಗಾಲವಿಲ್ಲ -ರಾಹುಲ್ ಗಾಂಧಿ

ರಾಫೆಲ್ ಒಪ್ಪಂದದ ಕುರಿತಾಗಿ ತಮ್ಮ ವಾಗ್ದಾಳಿ ಮುಂದುವರೆಸಿರುವ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ ಇದರ ಕುರಿತಾಗಿ ತನಿಖೆ ಪ್ರಾರಂಭಿಸಿದ್ದೆ ಆದಲ್ಲಿ ಪ್ರಧಾನಿ ಮೋದಿಗೆ ಉಳಿಗಾಲವಿಲ್ಲ ಎಂದು ಟೀಕಾ ಪ್ರಹಾರ ನಡೆಸಿದರು.

Last Updated : Nov 2, 2018, 01:52 PM IST
ರಫೇಲ್ ಹಗರಣದ ತನಿಖೆ ಮಾಡಿದ್ದೇ ಆದಲ್ಲಿ ಮೋದಿಗೆ ಉಳಿಗಾಲವಿಲ್ಲ -ರಾಹುಲ್ ಗಾಂಧಿ title=

ನವದೆಹಲಿ: ರಾಫೆಲ್ ಒಪ್ಪಂದದ ಕುರಿತಾಗಿ ತಮ್ಮ ವಾಗ್ದಾಳಿ ಮುಂದುವರೆಸಿರುವ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ ಇದರ ಕುರಿತಾಗಿ ತನಿಖೆ ಪ್ರಾರಂಭಿಸಿದ್ದೆ ಆದಲ್ಲಿ ಪ್ರಧಾನಿ ಮೋದಿಗೆ ಉಳಿಗಾಲವಿಲ್ಲ ಎಂದು ಟೀಕಾ ಪ್ರಹಾರ ನಡೆಸಿದರು.

ಅನಿಲ್ ಅಂಬಾನಿ ಅವರ ರಿಲಯನ್ಸ್ ಕಂಪನಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಫ್ರೆಂಚ್ ನ ಡಸಾಲ್ಟ್ ಕಂಪನಿ ಜೊತೆ ಪಾಳುದಾರನ್ನಾಗಿ ಮಾಡಿದ್ದಾರೆ ಎಂದು ಈ ಹಿಂದೆ ರಾಹುಲ್ ಗಾಂಧಿ ಟೀಕಿಸಿದ್ದರು.ಇಂದು ಸುದ್ದಿಗೋಷ್ಠಿ ನಡೆಸಿ ಮತ್ತೆ ಮೋದಿ ಸರ್ಕಾರದ ಮೇಲೆ ಕಿಡಿಕಾರಿರುವ ಅವರು " ನಾನು ಖಚಿತಪಡಿಸುತ್ತೇನೆ ಒಂದು ವೇಳೆ ಇದರ ಬಗ್ಗೆ ತನಿಖೆ ನಡೆಸಿದ್ದೆ ಆದಲ್ಲಿ ಮೋದಿಗೆ ಉಳಿಗಾಲವಿಲ್ಲ, ಏಕೆಂದರೆ ಮೊದಲನೆಯದಾಗಿ ಇದರಲ್ಲಿ ನಡೆದಿರುವ ಭ್ರಷ್ಟಾಚಾರ ಮತ್ತು ಎರಡನೇದಾಗಿ ಈ ನಿರ್ಣಯ ತಗೆದುಕೊಂಡಿರುವವರು ಯಾರು ಎನ್ನುವುದು ಸ್ಪಷ್ಟವಾಗಿದೆ. ಈ ಒಪ್ಪಂದ ನರೇಂದ್ರ ಮೋದಿ ಮೂಲಕ ಆಗಿರುವಂತದ್ದು. ಅವರು ಅನಿಲ್ ಅಂಬಾನಿಗೆ 30 ಸಾವಿರ ಕೋಟಿ ರೂಪಾಯಿಗಳನ್ನು ನೀಡಲು ಸಹಾಯ ಮಾಡಿದ್ದಾರೆ. ಆದ್ದರಿಂದ ಇದು ಪ್ರಧಾನಿ ಮೋದಿ ಮತ್ತು  ಅನಿಲ್ ಅಂಬಾನಿ ಸಹಯೋಗದೊಂದಿಗೆ ನಡೆದಿದೆ ಎಂದು ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.

ರಫೇಲ್ ಒಪ್ಪಂದವನ್ನು ರಿಲಯನ್ಸ್ ಡಿಫೆನ್ಸ್ ಜೊತೆ ಹಂಚಿಕೆ ಮಾಡಿಕೊಂಡಿರುವ ವಿಚಾರವಾಗಿ ಸಮರ್ಥನೆ ಕೊಟ್ಟಿರುವ ಡಾಸಾಲ್ಟ್ ಸಿಇಒ ಹೇಳಿಕೆಯನ್ನು ಪ್ರಸ್ತಾಪಿಸಿದ ರಾಹುಲ್ ಗಾಂಧಿ " ರಿಲಯನ್ಸ್ ಭೂಮಿಯನ್ನು ಖರೀಧಿಸಲು ಸ್ವತಃ ಡಸಾಲ್ಟ್ ಕಂಪನಿಯೇ ಹಣ ನೀಡಿದೆ ಎಂದು ಅವರು ಆರೋಪಿಸಿದರು.ಈ ಹಿಂದೆ ಡಸಾಲ್ಟ್ ಕಂಪನಿ ಹೆಚ್ಎಎಲ್ ಜೊತೆ ಒಪ್ಪಂದ ಮಾಡಿಕೊಳ್ಳದಿರುವುದಕ್ಕೆ ಅದರ ಬಳಿ ಭೂಮಿ ಇದ್ದಿರಲಿಲ್ಲ ಎಂದು ತಿಳಿಸಿತ್ತು.
 

Trending News