Relationship Tips: ಮದುವೆಗೂ ಮುನ್ನ ನಿಮ್ಮ ಭಾವಿ ಸಂಗಾತಿಗೆ ಈ 5 ಪ್ರಶ್ನೆಗಳನ್ನು ಕೇಳಲು ಮರೆಯಬೇಡಿ

Before Marriage Tips: ಮದುವೆಯಾಗಬೇಕಾದರೆ ತರಾತುರು ಸರಿಯಲ್ಲ, ಯಾವುದೇ ಸಂಬಂಧಕ್ಕೆ ಒಂದೇ ಬಾರಿಗೆ ಒಪ್ಪಿಗೆ ಸೂಚಿಸುವುದು ಸರಿಯಲ್ಲ. ಮದುವೆಗೆ ಮೊದಲು ಯಾವ ವಿಷಯಗಳನ್ನು ನಿಮ್ಮ ಭಾವಿ ಸಂಗಾತಿಯ ಜೊತೆಗೆ ಚರ್ಚಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ  

Written by - Nitin Tabib | Last Updated : Dec 12, 2022, 07:44 PM IST
  • ತರಾತುರಿಯಲ್ಲಿ ಮದುವೆಯಾಗುವುದು ಸರಿಯಲ್ಲ,
  • ಯಾವುದೇ ಸಂಬಂಧಕ್ಕೆ ಒಂದೇ ಬಾರಿಗೆ
  • ಯೆಸ್ ಎಂದು ಹೇಳುವುದು ಸರಿಯಲ್ಲ.
Relationship Tips: ಮದುವೆಗೂ ಮುನ್ನ ನಿಮ್ಮ ಭಾವಿ ಸಂಗಾತಿಗೆ ಈ 5 ಪ್ರಶ್ನೆಗಳನ್ನು ಕೇಳಲು ಮರೆಯಬೇಡಿ title=
Marriage Tips

Things To Discuss Before Marriage: ಸಾಮಾನ್ಯವಾಗಿ ನಮ್ಮ ಭಾರತದಂತಹ ದೇಶದಲ್ಲಿ ಮರುವೆಯನ್ನು ಒಂದು ಪವಿತ್ರ ಸಂಬಂಧವೆಂದು ಪರಿಗಣಿಸಲಾಗುತ್ತದೆ. ಅದು ಚಿರಕಾಲ ಉಳಿಯಬೇಕಾದ ಸಂಬಂಧ, ತರಾತುರಿಯಲ್ಲಿ ಮದುವೆಯಾಗುವುದು ಸರಿಯಲ್ಲ, ಯಾವುದೇ ಸಂಬಂಧಕ್ಕೆ ಒಂದೇ ಬಾರಿಗೆ ಯೆಸ್ ಎಂದು ಹೇಳುವುದು ಸರಿಯಲ್ಲ. ಮತ್ತೊಂದೆಡೆ, ಮದುವೆ ಅದು ಪ್ರೇಮ ವಿವಾಹವಾಗಿರಲಿ ಅಥವಾ ಅರೆಂಜ್ ಮ್ಯಾರೇಜ್ ಆಗಿರಲಿ, ನೀವು ನಿಮ್ಮ ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡಬೇಕು ಮತ್ತು ಮುಂಚಿತವಾಗಿ ಎಲ್ಲವನ್ನೂ ಚರ್ಚಿಸಬೇಕು. ಮದುವೆಗೆ ಮುನ್ನ ನೀವು ನಿಮ್ಮ ಭಾವಿ ಸಂಗಾತಿಯ ಜೊತೆಗೆ ಯಾವ ವಿಷಯಗಳ ಕುರಿತು ತಿಳಿದುಕೊಳ್ಳೋಣ ಬನ್ನಿ,

ಮದುವೆಯಾಗುವ ಮೊದಲು ನಿಮ್ಮ  ಭಾವಿ ಸಂಗಾತಿಗೆ ನೀವು ಕೇಳಲೇಬೇಕಾದ 5 ವಿಷಯಗಳು ಇಲ್ಲಿವೆ
ಸಂಪ್ರದಾಯದ ಬಗ್ಗೆ ಚರ್ಚಿಸಿ

ಪ್ರತಿಯೊಬ್ಬರಿಗೂ ತಮ್ಮದೇ ಆದ ಸಂಪ್ರದಾಯ ಮತ್ತು ಪದ್ಧತಿಗಳಿವೆ. ಆದರೆ ಮದುವೆಗೆ ಮೊದಲು ಇಬ್ಬರೂ ಪರಸ್ಪರರ ಮನೆಯ ಪದ್ಧತಿಗಳು ಮತ್ತು ಸಂಪ್ರದಾಯಗಳ ಬಗ್ಗೆ ಚರ್ಚಿಸಬೇಕು. ಏಕೆಂದರೆ, ಇಬ್ಬರೂ ಪರಸ್ಪರರ ಕುಟುಂಬದ ನಂಬಿಕೆಗಳನ್ನು ಅರ್ಥಮಾಡಿಕೊಳ್ಳುವುದು ತುಂಬಾ ಮುಖ್ಯ.

ವೃತ್ತಿ ಮತ್ತು ಹಣದ ಬಗ್ಗೆ ಚರ್ಚಿಸಿ
ನೀವು ಮದುವೆಯಾಗಲು ಯೋಚಿಸುತ್ತಿದ್ದರೆ, ಖಂಡಿತವಾಗಿಯೂ ಹಣಕಾಸಿನ ವಿಷಯಗಳ ಬಗ್ಗೆ ಮಾತನಾಡಿ. ಇದಲ್ಲದೆ, ವೃತ್ತಿಜೀವನದ ಬಗ್ಗೆ ನಿಮ್ಮ ಸಂಗಾತಿಯೊಂದಿಗೆ ಚರ್ಚಿಸಿ.

ಕುಟುಂಬ ಯೋಜನೆ ಕುರಿತು ಚರ್ಚಿಸಿ
ವಿವಾಹದ ಮೊದಲು ನಿಮ್ಮ ಸಂಗಾತಿಯೊಂದಿಗೆ ಕುಟುಂಬ ಯೋಜನೆಯ ಕುರಿತು  ಚರ್ಚಿಸುವುದು ತುಂಬಾ ಮುಖ್ಯ ಮತ್ತು ಇದು ನಾಚಿಕೆಪಟ್ಟುಕೊಳ್ಳುವ ವಿಷಯ ಅಲ್ಲ. ಎಷ್ಟು ಮಕ್ಕಳು ಬೇಕು, ಅವರನ್ನು ಹೇಗೆ ಬೆಳೆಸಬೇಕು, ಮಕ್ಕಳ ನಡುವೆ ಎಷ್ಟು ಅಂತರವಿರಬೇಕು ಇತ್ಯಾದಿಗಳನ್ನು ಚರ್ಚಿಸುವುದು ಯಾವುದಕ್ಕೂ ಉತ್ತಮ.

ಸ್ವಭಾವ-ಪ್ರಕೃತಿಯ ಬಗ್ಗೆ ಚರ್ಚಿಸಿ
ಮದುವೆಗೆ ಮೊದಲು ಪರಸ್ಪರರ ಪ್ರಕೃತಿ ಮತ್ತು ಸ್ವಭಾವದ ಬಗ್ಗೆ ಚರ್ಚೆ ನಡೆಯಬೇಕು. ಏಕೆಂದರೆ ಮದುವೆಯ ನಂತರ ಸಮಸ್ಯೆಗಳು ಎದುರಾಗಬಹುದು. ಹೀಗಾಗಿ ಸಂಗಾತಿಯ ಅಭ್ಯಾಸಗಳನ್ನು ನೀವು ತಿಳಿದಿದ್ದರೆ, ನಂತರ ಸಂಬಂಧವು ಉತ್ತಮವಾಗಿರುತ್ತದೆ.
ಕೆಲಸ ಮತ್ತು ಸಮಯದ ಬಗ್ಗೆ ಚರ್ಚಿಸಿ.

ಇದನ್ನೂ ಓದಿ-New Year 2023: ಹೊಸ ವರ್ಷದಲ್ಲಿ ಭಾರಿ ಯಶಸ್ಸಿಗಾಗಿ ಹಸಿರು ಏಲಕ್ಕಿಯ ಈ ತಂತ್ರಗಳನ್ನು ಅನುಸರಿಸಿ

ಮದುವೆಯ ನಂತರ ಉದ್ಯೋಗ ಮತ್ತು ಸಮಯದ ಸಮಸ್ಯೆ ಬಂದಾಗಲೆಲ್ಲಾ ಸಂಬಂಧದಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತದೆ. ಇದನ್ನು ತಪ್ಪಿಸಲು, ನಿಮ್ಮ ಭಾವಿ ಸಂಗಾತಿಯ ಕೆಲಸ, ಶಿಫ್ಟ್ ಮತ್ತು ಸಮಯದ ಬಗ್ಗೆ ಮುಂಚಿತವಾಗಿ ಚರ್ಚಿಸಿಕೊಳ್ಳುವುದು ಯಾವುದಕ್ಕೂ ಉತ್ತಮ.

ಇದನ್ನೂ ಓದಿ-Relationship Tips: ಒಂಟಿಯಾಗಿರುವುದು ಕೂಡ ನಮ್ಮ ಆರೋಗ್ಯಕ್ಕೆ ಹಾನಿಕಾರಕ ಗೊತ್ತಾ?

(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News