Astro Remedies For Navagraha: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಜಾತಕದಲ್ಲಿ 9 ಗ್ರಹಗಳು ಮತ್ತು 27 ನಕ್ಷತ್ರಗಳಿವೆ. ಈ ಗ್ರಹಗಳಲ್ಲಿ ಯಾವುದಾದರೂ ಒಂದು ಗ್ರಹವು ಮುನಿಸಿಕೊಂಡರೆ ಅಥವಾ ಅಶುಭ ಸ್ಥಿತಿಯಲ್ಲಿದ್ದರೆ, ವ್ಯಕ್ತಿಯ ಜೀವನದಲ್ಲಿ ಹಲವು ತೊಂದರೆಗಳು ಎದುರಾಗುತ್ತವೆ.
Astro Remedies For Navagraha: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಜಾತಕದಲ್ಲಿ 9 ಗ್ರಹಗಳು ಮತ್ತು 27 ನಕ್ಷತ್ರಗಳಿವೆ. ಈ ಗ್ರಹಗಳಲ್ಲಿ ಯಾವುದಾದರೂ ಒಂದು ಗ್ರಹವು ಮುನಿಸಿಕೊಂಡರೆ ಅಥವಾ ಅಶುಭ ಸ್ಥಿತಿಯಲ್ಲಿದ್ದರೆ, ವ್ಯಕ್ತಿಯ ಜೀವನದಲ್ಲಿ ಹಲವು ತೊಂದರೆಗಳು ಎದುರಾಗುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ಜಾತಕದಲ್ಲಿ ಎಲ್ಲಾ ಒಂಬತ್ತು ಗ್ರಹಗಳ ಸ್ಥಿತಿಯನ್ನು ಸುಧಾರಿಸಲು ಕೆಲವು ಮರಗಳು ಮತ್ತು ಸಸ್ಯಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ, ಈ ಗಿಡಮರಗಳು ಗ್ರಹ ದೋಷಗಳನ್ನು ತೊದೆದುಹಾಕುತ್ತವೆ ಮತ್ತು ಇದರಿಂದ ವ್ಯಕ್ತಿಯ ಭಾಗ್ಯವೂ ಕೂಡ ಬೆಳಗುತ್ತದೆ.
ಇದನ್ನೂ ಓದಿ-Weight Loss: ಸುಷ್ಮಿತಾ ಸೆನ್ ರಂತೆ ಫಿಗರ್ ಬೇಕಿದ್ರೆ ಈ ರೀತಿ ಕಾಫಿ ಸೇವಿಸಿ
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
1. ಜ್ಯೋತಿಷ್ಯ ಶಾಸ್ತ್ರದಲ್ಲಿ ಕೇತು ಗ್ರಹವನ್ನು ಛಾಯಾ ಗ್ರಹ ಎಂದು ಪರಿಗಣಿಸಲಾಗಿದೆ. ಹೀಗಿರುವಾಗ ಜಾತಕದಲ್ಲಿ ಕೇತುವಿನ ಕೆಟ್ಟ ಸ್ಥಾನವು ವ್ಯಕ್ತಿಯ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಉಂಟುಮಾಡುತ್ತದೆ. ಕೇತುವಿನ ಸ್ಥಿತಿಯನ್ನು ಸರಿಪಡಿಸಲು ಅಶ್ವಗಂಧ ಸಸ್ಯವನ್ನು ಪೂಜಿಸಬೇಕು. ಈ ಗಿಡವನ್ನು ಪೂಜಿಸುವುದರಿಂದ ವ್ಯಕ್ತಿಯ ಮಾನಸಿಕ ಸಮಸ್ಯೆಗಳು ದೂರಾಗುತ್ತವೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ, ಈ ಗಿಡವನ್ನು ಪೂಜಿಸುವುದರಿಂದ ಮನುಷ್ಯನ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ.
2. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಶಮಿ ಸಸ್ಯವು ಶನಿ ಗ್ರಹಕ್ಕೆ ಸಂಬಂಧಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಶನಿವಾರದಂದು ಶಮಿಯ ಗಿಡಕ್ಕೆ ನೀರು ಹಾಕಿ ಪೂಜಿಸುವುದರಿಂದ ಶನಿಯ ಅನುಗ್ರಹ ದೊರೆಯುತ್ತದೆ. ಹಾಗೆಯೇ ಜೀವನದಲ್ಲಿ ಬರುವ ಅಡೆತಡೆಗಳು ದೂರವಾಗುತ್ತವೆ.
3. ಯಾವುದೇ ವ್ಯಕ್ತಿಯ ಜಾತಕದಲ್ಲಿ ರಾಹು ಅಶುಭ ಫಲಿತಾಂಶಗಳನ್ನು ನೀಡುತ್ತಿದ್ದರೆ ಅಥವಾ ರಾಹು ಮುನಿಸಿಕೊಂಡಿದ್ದರೆ, ವ್ಯಕ್ತಿಯು ಜೀವನದಲ್ಲಿ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಈ ತೊಂದರೆಗಳನ್ನು ಹೋಗಲಾಡಿಸಲು ಶ್ರೀಗಂಧದ ಮರವನ್ನು ಪೂಜಿಸುವುದು ಶ್ರೇಯಸ್ಕರ.
4. ವಿಷ್ಣುವು ಅಶ್ವತ್ಥ ಮರದಲ್ಲಿ ನೆಲೆಸಿದ್ದಾನೆ ಎಂದು ಹೇಳಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಗುರು ಗ್ರಹದ ಶುಭ ಫಲಿತಾಂಶಗಳಿಗಾಗಿ ಅಶ್ವತ್ಥ ಮರಕ್ಕೆ ನಿಯಮಿತವಾಗಿ ನೀರನ್ನು ಅರ್ಪಿಸಬೇಕು. ಮತ್ತೊಂದೆಡೆ, ಗುರುವಾರದಂದು ಅಶ್ವತ್ಥ ಮರವನ್ನು ಪೂಜಿಸುವುದರಿಂದ, ಒಬ್ಬ ವ್ಯಕ್ತಿಯು ವಿಷ್ಣುವಿನ ಆಶೀರ್ವಾದವನ್ನು ಪಡೆಯುತ್ತಾನೆ.
5. ಜಾತಕದಲ್ಲಿ ಬುಧನ ಕೆಟ್ಟ ಸ್ಥಾನವನ್ನು ನಿವಾರಿಸಲು ಉತ್ತರಾಣಿ ಸಸ್ಯವನ್ನು ಪೂಜಿಸಬೇಕು. ಜಾತಕದಲ್ಲಿ ಬುಧನ ಕೆಟ್ಟ ಸ್ಥಾನವು ವ್ಯಕ್ತಿಯ ದೈಹಿಕ ಸಮಸ್ಯೆಗಳನ್ನು ಹೆಚ್ಚಿಸುತ್ತದೆ.ಉತ್ತರಾಣಿ ಸಸ್ಯವನ್ನು ಈ ರೀತಿ ಪೂಜಿಸುವುದರಿಂದ ಜಾತಕದಲ್ಲಿ ಬುಧ ಗ್ರಹವು ಶಾಂತವಾಗುತ್ತದೆ.
6. ಖದಿರ ಕಗ್ಗಲಿ ಗಿಡ ಮಂಗಳ ಗ್ರಹಕ್ಕೆ ಸಂಬಂಧಿಸಿದೆ. ಇದನ್ನು ಕಥಾ ಎಂದೂ ಕೂಡ ಕರೆಯುತ್ತಾರೆ. ನಿತ್ಯವೂ ಈ ಗಿಡವನ್ನು ಪೂಜಿಸುವುದರಿಂದ ರಕ್ತ ಸಂಬಂಧಿ ಕಾಯಿಲೆಗಳು, ಚರ್ಮ ಸಂಬಂಧಿ ಕಾಯಿಲೆಗಳು ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ. ವ್ಯಕ್ತಿಯ ಪ್ರತಿಷ್ಠೆ ಹೆಚ್ಚಾಗುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಮಂಗಳವನ್ನು ಶಾಂತಗೊಳಿಸಲು, ಈ ಸಸ್ಯದ ಪೂಜೆಯು ಮಂಗಳಕರ ಮತ್ತು ಫಲಪ್ರದವೆಂದು ಸಾಬೀತಾಗುತ್ತದೆ.
7. ಪಲಾಶ್ ಅಥವಾ ಮುತ್ತುಗದ ಗಿಡವನ್ನು ಸಸ್ಯವು ಚಂದ್ರ ಗ್ರಹಕ್ಕೆ ಸಂಬಂಧಿಸಿದೆ. ಚಂದ್ರನನ್ನು ಮನಸ್ಸಿನ ಮುಖ್ಯ ಕಾರಕ ಗ್ರಹ ಏನು ಪರಿಗಣಿಸಲಾಗಿದೆ. ಈ ಗಿಡವನ್ನು ಪೂಜಿಸುವುದರಿಂದ ಮನಸ್ಸು ಪ್ರಶಾಂತವಾಗುತ್ತದೆ ಎಂದು ಹೇಳಲಾಗುತ್ತದೆ. ಇದರೊಂದಿಗೆ, ವ್ಯಕ್ತಿಯು ಮಾನಸಿಕ ಅಸ್ವಸ್ಥತೆಯನ್ನು ಸಹ ತೊಡೆದುಹಾಕುತ್ತಾನೆ. ಈ ಸಸ್ಯದ ಎಲೆಗಳನ್ನು ಪೂಜಿಸುವುದರಿಂದ ವ್ಯಕ್ತಿಗೆ ಶುಭ ಫಲಿತಾಂಶಗಳು ಪ್ರಾಪ್ತಿಯಾಗುತ್ತವೆ.
8. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಎಕ್ಕದ ಗಿಡ ಅಥವಾ ಎಕ್ಕಿಗಿಡ ಸೂರ್ಯನಿಗೆ ಸಂಬಂಧಿಸಿದೆ. ಇದನ್ನು ಆಕ್ ಅಥವಾ ಆಕಂಡ್ ಸಸ್ಯ ಎಂದೂ ಕರೆಯುತ್ತಾರೆ. ಶಾಸ್ತ್ರಗಳ ಪ್ರಕಾರ, ಈ ಸಸ್ಯವನ್ನು ಪೂಜಿಸುವುದರಿಂದ ಇದು ವ್ಯಕ್ತಿಯ ಬೌದ್ಧಿಕ ಬೆಳವಣಿಗೆಗೆ ಕಾರಣವಾಗುತ್ತದೆ. ಜಾತಕದಲ್ಲಿ ಸೂರ್ಯನ ಸ್ಥಾನವು ಅನುಕೂಲಕರವಾಗಿರಲು, ಭಾನುವಾರದಂದು ಪೂಜೆ ಮಾಡಿ ಸೂರ್ಯನ ಕೃಪಾಕಟಾಕ್ಷಕ್ಕೆ ಪಾತ್ರರಾಗುವುದು ಉತ್ತಮ.