Weight Loss: ಸುಷ್ಮಿತಾ ಸೆನ್ ರಂತೆ ಫಿಗರ್ ಬೇಕಿದ್ರೆ ಈ ರೀತಿ ಕಾಫಿ ಸೇವಿಸಿ

Weight Loss Tips: ಕಾಫಿ ಬಗ್ಗೆ ಬಹುತಕ ಜನರು ತಪ್ಪು ತಿಳುವಳಿಕೆಯನ್ನು ಹೊಂದಿದ್ದಾರೆ. ಕಾಫಿ ಕುಡಿಯುವುದರಿಂದ ತೂಕ ಹೆಚ್ಚಾಗುತ್ತದೆ ಎಂದು ಹಲವರು ಭಾವಿಸುತ್ತಾರೆ, ಆದರೆ ನೀವು ಸರಿಯಾಗಿ ಕಾಫಿ ಕುಡಿದರೆ, ನೀವು ಸುಲಭವಾಗಿ ತೂಕವನ್ನು ಇಳಿಕೆ ಮಾಡಿಕೊಳ್ಳಬಹುದು.  

Written by - Nitin Tabib | Last Updated : Dec 18, 2022, 07:44 PM IST
  • ಅನೇಕ ಜನರು ಕಾಫಿ ಆರೋಗ್ಯಕ್ಕೆ ಉತ್ತಮವಲ್ಲ ಎಂದು ಪರಿಗಣಿಸುತ್ತಾರೆ,
  • ಆದರೆ ಕಾಫಿಯನ್ನು ಸರಿಯಾದ ರೀತಿಯಲ್ಲಿ ಮತ್ತು
  • ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ ಅದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.
Weight Loss: ಸುಷ್ಮಿತಾ ಸೆನ್ ರಂತೆ ಫಿಗರ್ ಬೇಕಿದ್ರೆ ಈ ರೀತಿ ಕಾಫಿ ಸೇವಿಸಿ      title=
Black Coffee Benefits

Black Coffee For Weight Loss: ಸ್ಥೂಲಕಾಯ ಯಾರಿಗೂ ಇಷ್ಟವಾಗುವುದಿಲ್ಲ. ಪ್ರತಿಯೊಬ್ಬರೂ ಉತ್ತಮ ಪರ್ಸನಾಲಿಟಿ ಹೊಂದಲು ಬಯಸುತ್ತಾರೆ. ತೂಕವನ್ನು ಇಳಿಕೆಗಾಗಿ ಜನರು ಅನೇಕ ಪಾಕವಿಧಾನಗಳನ್ನು ಕೂಡ ಅನುಸರುತ್ತಾರೆ. ಕೆಲವರು ಜಿಮ್‌ನಲ್ಲಿ ಬೆವರು ಸುರಿಸಿದರೆ, ಮತ್ತೆ ಕೆಲವರು ಕಟ್ಟುನಿಟ್ಟಾದ ಆಹಾರಕ್ರಮವನ್ನು ಅನುಸರಿಸುತ್ತಾರೆ. ಮನೆಯಲ್ಲಿ ಇರುವ ವಸ್ತುಗಳಿಂದ ನಾವು ಸುಲಭವಾಗಿ ತೂಕವನ್ನು ಇಳಿಕೆ ಮಾಡಿಕೊಳ್ಳಬಹುದು. ಕಪ್ಪು ಕಾಫಿ ಕುಡಿಯುವ ಮೂಲಕ ತೂಕವನ್ನು ಕಡಿಮೆ ಮಾಡಬಹುದು, ಅದನ್ನು ಕುಡಿಯುವ ವಿಧಾನ ಸರಿಯಾಗಿರಬೇಕು. ತೂಕ ಇಳಿಕೆಗಾಗಿ ಕಪ್ಪು ಕಾಫಿಯನ್ನು ಹೇಗೆ ಸೇವಿಸಬೇಕು ತಿಳಿದುಕೊಳ್ಳೋಣ ಬನ್ನಿ, 

ಕಪ್ಪು ಕಾಫಿಯಿಂದ ತೂಕ ಇಳಿಕೆ
ಕಪ್ಪು ಕಾಫಿಯಲ್ಲಿರುವ ಕೆಫೀನ್ ನಿಮಗೆ ತ್ವರಿತ ಶಕ್ತಿಯನ್ನು ನೀಡುತ್ತದೆ. ಇದನ್ನು ಕುಡಿಯುವುದರಿಂದ ಹಸಿವು ನಿಯಂತ್ರಣದಲ್ಲಿರುತ್ತದೆ. ಕಪ್ಪು ಕಾಫಿ ಚಯಾಪಚಯ ದರವನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ, ಇದು ಕ್ಯಾಲೊರಿಗಳನ್ನು ವೇಗವಾಗಿ ಸುಡುತ್ತದೆ. ತೂಕವನ್ನು ಇಳಿಸಿಕೊಳ್ಳಲು ನೀವು ದಿನಕ್ಕೆ 3-4 ಬಾರಿ ಕಪ್ಪು ಕಾಫಿ ಕುಡಿಯಬಹುದು.

ತೂಕ ಇಳಿಕೆಗೆ ಕಪ್ಪು ಕಾಫಿ
ಕಪ್ಪು ಕಾಫಿ ಕುಡಿಯುವುದು ತೂಕವನ್ನು ಇಳಿಕೆ ಮಾಡಿಕೊಳ್ಳಲು ತುಂಬಾ ಪ್ರಯೋಜನಕಾರಿಯಾಗಿದೆ. ತೂಕ ಇಳಿಕೆಗೆ, ಹಾಲು ಮತ್ತು ಸಕ್ಕರೆ ಸೇರಿಸದೆಯೇ ಕಾಫಿ ತಯಾರಿಸಬೇಕು. ಒಂದು ಕಪ್ ನೀರನ್ನು ಕುದಿಸಿ ಮತ್ತು ಅದಕ್ಕೆ ಕಾಫಿ ಪುಡಿಯನ್ನು ಬೆರೆಸಿ. ಈ ಕಾಫಿ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ, ಜೊತೆಗೆ ಇದು ದೇಹದ ಶಕ್ತಿ ಕಡಿಮೆಯಾಗಲು ಬಿಡುವುದಿಲ್ಲ. ಕಪ್ಪು ಕಾಫಿಯೊಂದಿಗೆ ಜೇನುತುಪ್ಪವನ್ನು ಬೆರೆಸಿ ಕುಡಿಯುವುದು ಸಹ ಪ್ರಯೋಜನಕಾರಿಯಾಗಿದೆ.

ಹೇಗೆ ಮತ್ತು ಯಾವಾಗ ಕುಡಿಯಬೇಕು?
ನೀವು ತೂಕ ಕಳೆದುಕೊಳ್ಳಲು ಬಯಸುತ್ತಿದ್ದರೆ,  ನೀವು ಬೆಳಗಿನ ಉಪಾಹಾರದೊಂದಿಗೆ ಕಪ್ಪು ಕಾಫಿಯನ್ನು ಕುಡಿಯಬೇಕು. ಖಾಲಿ ಹೊಟ್ಟೆಯಲ್ಲಿ ಕಪ್ಪು ಕಾಫಿ ಕುಡಿಯುವುದು ನಿಮ್ಮ ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ. ಖಾಲಿ ಹೊಟ್ಟೆಯಲ್ಲಿ ಕಪ್ಪು ಕಾಫಿ ಅಸಿಡಿಟಿಗೆ ಕಾರಣವಾಗಬಹುದು. ಕಪ್ಪು ಕಾಫಿ ಕ್ಯಾಲೊರಿಗಳನ್ನು ಸುಡಲು ಸಹಾಯ ಮಾಡುತ್ತದೆ, ಆದರೆ, ಇದೆ ವೇಳೆ ಕೆಲಸ ಮಾಡುವುದು ಸಹ ತುಂಬಾ ಮುಖ್ಯವಾಗಿದೆ. ಈ ರೀತಿಯಾಗಿ, ಕಪ್ಪು ಕಾಫಿ ಕುಡಿಯುವ ಮೂಲಕ ನಾವು ಸುಲಭವಾಗಿ ತೂಕವನ್ನು ಕಳೆದುಕೊಳ್ಳಬಹುದು.

ಇದನ್ನೂ ಓದಿ-Phone ಹಾಗೂ ಲ್ಯಾಪ್ ಟಾಪ್ ಮೇಲೆ ಜಾಸ್ತಿ ಕೆಲಸ ಮಾಡ್ತಿರಾ? ಹಾಗಾದ್ರೆ..20-20-20 ನಿಯಮ ಪಾಲಿಸಿ.. ಏನಿದು?

ಕಾಫಿಯಲ್ಲಿರುವ ಪೋಷಕಾಂಶಗಳು
ಅನೇಕ ಜನರು ಕಾಫಿ ಆರೋಗ್ಯಕ್ಕೆ ಉತ್ತಮವಲ್ಲ ಎಂದು ಪರಿಗಣಿಸುತ್ತಾರೆ, ಆದರೆ ಕಾಫಿಯನ್ನು ಸರಿಯಾದ ರೀತಿಯಲ್ಲಿ ಮತ್ತು ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ ಅದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಕೆಫೀನ್ ಹೊರತುಪಡಿಸಿ, ಪ್ರೋಟೀನ್, ವಿಟಮಿನ್ ಇ, ಮೆಗ್ನೀಸಿಯಮ್, ಸತು, ರಂಜಕ ಮತ್ತು ಕ್ಯಾಲ್ಸಿಯಂನಂತಹ ಪೋಷಕಾಂಶಗಳು ಇದರಲ್ಲಿವೆ, ಇದು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಸಾಬೀತಾಗಬಹುದು.

ಇದನ್ನೂ ಓದಿ-Coconut Tea: ತೆಂಗಿನ ಚಹಾ ಎಂದಾದ್ರೂ ಸೇವಿಸಿದ್ದೀರಾ? ಟ್ರೈ ಮಾಡಿ ನೋಡಿ.. ಹಲವು ಲಾಭಗಳಿವೆ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News