Tulsi Manjari Remedies: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ತುಳಸಿ ಮಂಜರಿ ಪರಿಹಾರ ಮಾಡುವುದರಿಂದ ತಾಯಿ ಲಕ್ಷ್ಮಿ ಹಾಗೂ ಕುಬೇರನ ಕೃಪೆಗೆ ಪಾತ್ರರಾಗಬಹುದು ಎಂದು ಹೇಳಲಾಗುತ್ತದೆ.
Tulsi Manjari Remedies: ವೈದಿಕ ಜ್ಯೋತಿಷ್ಯ, ಹಿಂದೂ ಧರ್ಮದಲ್ಲಿ ತುಳಸಿ ಗಿಡವನ್ನು ಅತ್ಯಂತ ಪವಿತ್ರ ಸಸ್ಯವೆಂದು ಪರಿಗಣಿಸಲಾಗಿದೆ. ಧರ್ಮಗ್ರಂಥಗಳ ಪ್ರಕಾರ, ತುಳಸಿ ಗಿಡ ಇರುವ ಮನೆಯಲ್ಲಿ ಸಂಪತ್ತಿಗೆ ಎಂದಿಗೂ ಕೊರತೆ ಆಗುವುದಿಲ್ಲ. ಜೊತೆಗೆ ತುಳಸಿಗೆ ಸಂಬಂಧಿಸಿದ ಕೆಲವು ಪರಿಹಾರಗಳನ್ನು ಕೈಗೊಳ್ಳುವುದರಿಂದ ಅಂತಹ ಮನೆಯಲ್ಲಿ ಸಂತೋಷ, ಸಮೃದ್ಧಿ, ಸಂಪತ್ತಿಗೆ ಎಂದಿಗೂ ಕೊರತೆ ಆಗುವುದಿಲ್ಲ ಎಂದು ಹೇಳಲಾಗುತ್ತದೆ. ಅವುಗಳಲ್ಲಿ ತುಳಸಿ ಮಂಜರಿ ಪರಿಹಾರವೂ ಒಂದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ತುಳಸಿ ಮಂಜರಿ ಪರಿಹಾರ ಮಾಡುವುದರಿಂದ ತಾಯಿ ಲಕ್ಷ್ಮಿ ಹಾಗೂ ಕುಬೇರನ ಕೃಪೆಗೆ ಪಾತ್ರರಾಗಬಹುದು ಎಂದು ಹೇಳಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಮನೆಯಲ್ಲಿ ಜಗಳ ಜಂಜಾಟಗಳಿಂದ ಮುಕ್ತಿ ಪಡೆಯಲು ತುಳಸಿ ಪರಿಹಾರ: ಮನೆಯಲ್ಲಿ ಪ್ರತಿನಿತ್ಯ ಜಗಳ-ಜಂಜಾಟಗಳಿಂದ ತೊಂದರೆಯಿಂದ ಮನಸ್ಥಾಪ ಉಂಟಾಗುತ್ತಿದ್ದರೆ ಶುಭದಿನದಂದು ತುಳಸಿ ಎಲೆಗಳನ್ನು ಕಿತ್ತು ಗಂಗಾಜಲದಲ್ಲಿ ಹಾಕಿ, ನಂತರ ಆ ಜಲವನ್ನು ಇಡೀ ಮನೆಯಲ್ಲಿ ಪ್ರತಿದಿನ ಬೆಳಗ್ಗೆ ಪ್ರೋಕ್ಷಣೆ ಮಾಡಿ. ಇದರಿಂದ ಮನೆಯಲ್ಲಿ ಜಗಳ ಜಂಜಾಟಗಳಿಂದ ಮುಕ್ತಿ ದೊರೆಯಲಿದೆ.
ಹಣದ ಕೊರತೆ ನಿವಾರಿಸಲು ಪರಿಹಾರ : ತುಳಸಿ ಮಂಜರಿಯನ್ನು ಭಗವಾನ್ ವಿಷ್ಟು ಮತ್ತು ತಾಯಿ ಲಕ್ಷ್ಮಿಗೆ ಅರ್ಪಿಸಿ, ನಂತರ ಕೆಂಪು ಬಟ್ಟೆಯಲ್ಲಿ ಕಟ್ಟಿ ಅದನ್ನು ನಿಮ್ಮ ಮನೆಯಲ್ಲಿ ನೀವು ಹಣ ಇಡುವ ಜಾಗದಲ್ಲಿ ಇರಿಸಿ. ಇದರಿಂದ ವರ್ಷವಿಡೀ ಹಣಕ್ಕೆ ಕೊರತೆ ಆಗುವುದಿಲ್ಲ.
ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಪರಿಹಾರ : ಹೊಸ ವರ್ಷದ ಮೊದಲ ಶುಕ್ರವಾರದಂದು ಲಕ್ಷ್ಮಿ ದೇವಿಗೆ ತುಳಸಿ ಮಂಜರಿಯನ್ನು ಅರ್ಪಿಸಿ. ಇದರಿಂದ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಸಹಾಯಕವಾಗಲಿದೆ.
ಸುಖ ದಾಂಪತ್ಯ ಜೀವನಕ್ಕೆ ಪರಿಹಾರ: ಸುಖ ದಾಂಪತ್ಯ ಜೀವನಕ್ಕಾಗಿ ಹೊಸ ವರ್ಷದ ಮೊದಲ ದಿನದಂದು ಶಿವಲಿಂಗಕ್ಕೆ ತುಳಸಿ ಮಂಜರಿಯನ್ನು ಅರ್ಪಿಸಿ. ವಾಸ್ತವವಾಗಿ, ಗಣೇಶನಿಗೆ ಹಾಗೂ ಶಿವನಿಗೆ ತುಳಸಿಯನ್ನು ಅರ್ಪಿಸಲಾಗುವುದಿಲ್ಲ. ಆದರೆ, ತುಳಸಿ ಮಂಜರಿಯನ್ನು ಅರ್ಪಿಸುವುದು ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ.
ಪುರಾಣಗಳ ಪ್ರಕಾರ, ತುಳಸಿಯಲ್ಲಿ ಹೆಚ್ಚು ಮಂಜರಿ ಬರುತ್ತಿದೆ ಎಂದರೆ ಅದು ತುಳಸಿ ಮಾತೆಯ ಅತೃಪ್ತಿಯ ಸಂಕೇತ. ಅಷ್ಟೇ ಅಲ್ಲ ಇದನ್ನು ಶುಭ ಎಂದು ಪರಿಗಣಿಸಲಾಗುವುದಿಲ್ಲ. ಹಾಗಾಗಿ, ತುಳಸಿಯಲ್ಲಿ ಹೆಚ್ಚು ಮಂಜರಿ ಇದ್ದರೆ ಆಗಾಗ್ಗೆ ಅದನ್ನು ತೆಗೆಯುತ್ತಿರಿ. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.